Homeಮುಖಪುಟತೆಲಂಗಾಣ ಉಪಚುನಾವಣೆ: ಪೊಲೀಸರು ವಶಪಡಿಸಿಕೊಂಡ ಹಣ ಕಸಿದು ದುರ್ವರ್ತನೆ ತೋರಿದ ಬಿಜೆಪಿ ಕಾರ್ಯಕರ್ತರು!

ತೆಲಂಗಾಣ ಉಪಚುನಾವಣೆ: ಪೊಲೀಸರು ವಶಪಡಿಸಿಕೊಂಡ ಹಣ ಕಸಿದು ದುರ್ವರ್ತನೆ ತೋರಿದ ಬಿಜೆಪಿ ಕಾರ್ಯಕರ್ತರು!

ಚುನಾವಣೆಗಾಗಿ ಹಂಚುತ್ತಿದ್ದ 5.87 ಲಕ್ಷ ರೂ.ಗಳನ್ನು ನಾವು ವಶಪಡಿಸಿಕೊಂಡೆವು. ನಂತರ ಬಿಜೆಪಿ ಕಾರ್ಯಕರ್ತರು ಅದನ್ನು ಕಸಿದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
- Advertisement -

ತೆಲಂಗಾಣದ ದುಬ್ಬಾಕ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ರಘುನಂದನ್ ರಾವ್ ಸಂಬಂಧಿ ಎಸ್.ಅಂಜನ್ ರಾವ್ ಮನೆಯಿಂದ ಪೊಲೀಸರು ವಶಪಡಿಸಿಕೊಂಡ ಸುಮಾರು 18.67 ಲಕ್ಷ ರೂ. ಹಣವನ್ನು ಬಿಜೆಪಿಯ ಕಾರ್ಯಕರ್ತರು ಪೊಲೀಸರಿಂದ ಕಸಿದುಕೊಂಡಿದ್ದರಿಂದ ಸಿದ್ದಿಪೇಟೆಯ ಉಪನ್ಯಾಸಕರ ಕಾಲೋನಿಯಲ್ಲಿ ಸೋಮವಾರ ಉದ್ವಿಗ್ನತೆ ಉಂಟಾಯಿತು.

ಈ ಘಟನೆ ನವಂಬರ್ 3 ರಂದು ನಡೆಯುವ ಉಪಚುನಾವಣೆಗೆ ಸಂಬಂಧಿಸಿದಂತೆ, ಮತದಾರರನ್ನು ಸೆಳೆಯಲು ಈ ಹಣವನ್ನು ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಹಣವನ್ನು ವಶಪಡಿಸಿಕೊಂಡು ಹೊರಡುತ್ತಿರುವಾಗ ಅಲ್ಲಿಗೆ ತನ್ನ ಅನುಯಾಯಿಗಳೊಂದಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ರಘುನಂದನ್ ರಾವ್ ಕೋಲಾಹಲವನ್ನು ಸೃಷ್ಟಿಸಿದರು. ಇದರಿಂದ ಪೊಲೀಸರು ಮತ್ತು ಬಿಜೆಪಿ ನಾಯಕನ ಅನುಯಾಯಿಗಳ ನಡುವೆ ಜಗಳ ನಡೆದು, ಅನುಯಾಯಿಗಳು ಕಾನ್ಸ್ಟೇಬಲ್‌ನನ್ನು ಹಿಡಿದು ಅವರ ಕೈಯಲ್ಲಿದ್ದ ಹಣದ ಚೀಲವನ್ನು ಕಿತ್ತುಕೊಂಡನಂತರ, “ಮತದಾರರ ಮೇಲೆ ಪ್ರಭಾವ ಬೀರಲು ಹಣವನ್ನು ಬಳಸಿದ್ದಾರೆಂದು ಸುಳ್ಳು ಆರೋಪಗಳನ್ನು ಮಾಡಿ ಈ ಹಣವನ್ನು ಪೊಲೀಸರೇ ಅವರ ಮನೆಯಲ್ಲಿಟ್ಟಿದ್ದಾರೆ” ಎಂದು ಅವರು ಆರೋಪಿಸಿದರು.

ಮಾರನೆ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್‌ಕುಮಾರ್ ರಘುನಂದನ್ ರಾವ್‌ಗೆ ಬೆಂಬಲ ನೀಡುವ ಸಲುವಾಗಿ ಸಿದ್ದಿಪೇಟೆಗೆ ಬಂದಾಗ ಅವರನ್ನೂ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಚಕಮಕಿಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ?

ಇದರ ನಂತರ ಸಿದ್ದಿಪೇಟೆಗೆ ಆಗಮಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, “ರಾಜ್ಯದ ಬಿಜೆಪಿ ಮುಖ್ಯಸ್ಥರ ಮೇಲೆ ಕ್ರೂರ ಹಲ್ಲೆ ಮಾಡಿ ಬಂಧಿಸಿರುವುದು ನ್ಯಾಯಸಮ್ಮತವಲ್ಲ. ಇದು ಪ್ರಜಾಪ್ರಭುತ್ವದ ನಾಚಿಕೆಗೇಡಿತನ ಕೆಲಸ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಾರುತಿ ಮಾನ್ಪಡೆಯವರ ಸಾವಿಗೆ ಸರ್ಕಾರವೇ ನೇರ ಹೊಣೆ: ಐಕ್ಯ ಹೋರಾಟ ಸಮಿತಿ

ಇದರ ನಡುವೆ, ಸಿದ್ದಿಪೇಟೆ ಪೊಲೀಸ್ ಆಯುಕ್ತ ಜೋಯಲ್ ಡೇವಿಸ್, “ದುಬ್ಬಾಕ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಣ ನೀಡಲಾಗುತ್ತಿದೆ ಎಂಬ ಸುಳಿವಿನ ಆಧಾರದ ಮೇಲೆ 3 ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಸಿದ್ದಿಪೇಟೆ ಪುರಸಭೆ ಅಧ್ಯಕ್ಷ ಕೆ.ರಾಜನರಸು, ರಘುನಂದನ್ ರಾವ್ ಅವರ ಮಾವ ಎಸ್.ರಾಮ್ ಗೋಪಾಲ್ ರಾವ್ ಮತ್ತು ಅವರ ಸಂಬಂಧಿಕರಾದ ಎಸ್ ಅಂಜನ್ ರಾವ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಮತದಾರರಿಗೆ ಹಣ ಹಂಚುವ ಸಲುವಾಗಿ ರಘುನಂದನ್ ರಾವ್ ಅವರ ಸಂಬಂಧಿ ಜಿತೇಂದರ್ ರಾವ್ ತಮ್ಮ ಡ್ರೈವರ್ ಮೂಲಕ ಹಣವನ್ನು ಕಳುಹಿಸಿದ್ದು ಸಣ್ಣ ಪ್ರಮಾಣದಲ್ಲಿ ವಿತರಿಸುವಂತೆ ಹೇಳಿದ್ದರು. ನಾವು ಈ ಹಣವನ್ನು ವಶಪಡಿಸಿಕೊಂಡ ನಂತರ ಬಿಜೆಪಿ ಅಭ್ಯರ್ಥಿ ರಘುನಂದನ್ ರಾವ್ 200 ಸದಸ್ಯರೊಂದಿಗೆ ಬಂದು, 20-30 ಸದಸ್ಯರು ತಕ್ಷಣ ಒಳಗೆ ಹೋಗಿ 5.87 ಲಕ್ಷ ರೂ.ಗಳನ್ನು ಕಸಿದುಕೊಂಡರು. ಎಲ್ಲವೂ ದಾಖಲಾಗಿದೆ. ಅಪರಾಧಿಗಳನ್ನು ಗುರುತಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಗಳನ್ನು ದಾಖಲಿಸಲಾಗುವುದು” ಎಂದು ಆಯುಕ್ತರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಾಯಕನ ಸಂಬಂಧಿಯಾದ ರಾಮಗೋಪಾಲ್ ರಾವ್ ಮಾತನಾಡಿ, “ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದು, ಅನುಚಿತವಾಗಿ ವರ್ತಿಸಿದ್ದಾರೆ. ನಮ್ಮ ಕುಟುಂಬದ ಸದಸ್ಯರಿಂದ ಮೊಬೈಲ್‌ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ” ಎಂದು ಆರೋಪಿಸಿದರು.

ಈ ಬೆಳವಣಿಗೆಯಲ್ಲಿ ಬಿಜೆಪಿ ನಾಯಕರಾದ ಜಿ.ವಿವೇಕ್ ಮತ್ತು ಜಿತೇಂದರ್ ರೆಡ್ಡಿ ಅವರನ್ನು ಬಂಧಿಸಿ ಮತ್ತೆ ಹೈದರಾಬಾದ್‌ಗೆ ಕಳುಹಿಸಲಾಗಿದೆ.


ಇದನ್ನೂ ಓದಿ: ಮನುಸ್ಮೃತಿ ಬಗ್ಗೆ ಟೀಕೆ: ಪ್ರತಿಭಟನೆಗೆ ತೆರಳುತ್ತಿದ್ದ ನಟಿ ಖುಷ್ಬೂ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...