Homeಮುಖಪುಟಉನ್ನಾವೊ ಘಟನೆ: ಬಿಜೆಪಿಯ ಉಚ್ಛಾಟಿತ ಶಾಸಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಉನ್ನಾವೊ ಘಟನೆ: ಬಿಜೆಪಿಯ ಉಚ್ಛಾಟಿತ ಶಾಸಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

- Advertisement -
- Advertisement -

2017 ರ ಉನ್ನಾವೊದಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ಬಿಜೆಪಿಯಿಂದ ಹೊರಹಾಕಲ್ಪಟ್ಟ ಶಾಸಕ ಕುಲದೀಪ್ ಸೆಂಗಾರ್ ವಿರುದ್ಧ ದೆಹಲಿ ನ್ಯಾಯಾಲಯವು ಶುಕ್ರವಾರ ಪೋಕ್ಸೋ ಕಾಯ್ದೆಯಡಿ ಅಪಹರಣ ಮತ್ತು ಅತ್ಯಾಚಾರದ ಆರೋಪಗಳನ್ನು ಹೊರಿಸಿದೆ.

ಮೂವರು ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಇತರ ಐದು ಜನರೊಂದಿಗೆ ಸೆಂಗಾರ್ ಮತ್ತು ಆತನ ಸಹೋದರ ಸಂತ್ರಸ್ತ ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಬಂಧಿಸಿದ್ದಾರೆ ಎಂದು ಸಿಬಿಐ ಗುರುವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಉನ್ನಾವ್ ಅತ್ಯಾಚಾರದ ಸಂತ್ರಸ್ತೆ ಕಾರು ಅಪಘಾತದಿಂದ ತೀವ್ರವಾದ ರಕ್ತ ಸೋಂಕಿನಿಂದ ಜೀವನ್ಮರನದ ನಡುವೆ ಹೋರಾಡುತ್ತಿದ್ದಾಳೆ. ಸದ್ಯಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು ಆಕೆಗೆ ನೀಡಲಾಗುವ ಏಳು ಪ್ರತಿಜೀವಕಗಳಲ್ಲಿ ಆರು ನಿಷ್ಪರಿಣಾಮಕಾರಿಯಾಗಿವೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಬಾಲಕಿಯ ಬ್ಲಡ್ ಕಲ್ಚರ್ ಪರೀಕ್ಷೆಯ ವರದಿಯಲ್ಲಿ ಆಕೆಯ ರಕ್ತದಲ್ಲಿ ಗಂಭೀರ ಸೋಂಕು ಇದೆ ಎಂದು ತಿಳಿದುಬಂದಿದೆ. ಆಗಸ್ಟ್ 6 ರಂದು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ (ಕೆಜಿಎಂಯು) ದೆಹಲಿಯ ಏಮ್ಸ್ ಗೆ ಸ್ಥಳಾಂತರಗೊಂಡ ನಂತರ ಈ ವರದಿ ಬಂದಿದೆ.

ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ಸಂತ್ರಸ್ತೆಯ ಕುಟುಂಬದ ಮನವಿಯ ನಂತರ ರದ್ದುಪಡಿಸಲಾಗಿದೆ. ಈ ನಡುವೆ ಉನ್ನಾವ್ ಅತ್ಯಾಚಾರ ಆರೋಪಿ ಕುಲದೀಪ್ ಸಿಂಗ್ ಸೆಂಗರ್ ಅವರ ಸಂಬಂಧಿ ನಿಪೇಂದರ್ ಸಿಂಗ್ ಅವರು ಸತ್ಯದ ಬಗ್ಗೆ ತಿಳಿಯಲು ಪಾಲಿಗ್ರಾಫ್ ಮತ್ತು ನಾರ್ಕೊ-ಅನಾಲಿಸಿಸ್ ಪರೀಕ್ಷೆಗಳನ್ನು ನಡೆಸಬೇಕೆಂದು ಒತ್ತಾಯಿಸಿದರು.

“ಕುಲದೀಪ್ ಸಿಂಗ್ ಸೆಂಗರ್ ನಿರಪರಾಧಿ. ನಾವು ಅವರ ವರ್ತನೆ ನೋಡಿದ್ದೇವೆ. ಅವರು ಏನಾದರೂ ತಪ್ಪು ಮಾಡಿದ್ದರೆ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಬೇಕು. ಪಾಲಿಗ್ರಾಫ್ ಪರೀಕ್ಷೆ ನಡೆಸಬೇಕು. ಸಂತ್ರಸ್ತೆ ಐದು ತಿಂಗಳ ನಂತರ ಘಟನೆಯ ಬಗ್ಗೆ ವರದಿ ಮಾಡಿದ್ದಾರೆ. ಆದ್ದರಿಂದ, ಡಿಎನ್‌ಎ ಪರೀಕ್ಷೆ ಈಗ ಸಾಧ್ಯವಿಲ್ಲ. ಪಾಲಿಗ್ರಾಫ್ ಅಥವಾ ನಾರ್ಕೊ ಪರೀಕ್ಷೆಯನ್ನು ಮಾತ್ರ ಈಗ ನಡೆಸಬಹುದು. ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ನಾವು ತೀರ್ಪಿಗೆ ಬರಬೇಕು “ಎಂದು ನಿಪೇಂದರ್ ಎಎನ್‌ಐಗೆ ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಾಕ್ಷಿಗಳನ್ನು ಕೊಂದ ನಂತರ ಇನ್ಯಾವ ಸಾಕ್ಷಿ.
    ಅವಳು ಬದುಕಲಿ ಅಪರಾದಿಗೆ ಸಾವು ಶಿಕ್ಷೆಯಾಗಲಿ.

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...