Homeಚಳವಳಿಟ್ರಾಕ್ಟರ್‌‌ ರ್‍ಯಾಲಿಯಲ್ಲಿ ಅಹಿತಕರ ಘಟನೆ: ಹೋರಾಟದಿಂದ ಹೊರಬಂದ ಎರಡು ರೈತ ಸಂಘಗಳು

ಟ್ರಾಕ್ಟರ್‌‌ ರ್‍ಯಾಲಿಯಲ್ಲಿ ಅಹಿತಕರ ಘಟನೆ: ಹೋರಾಟದಿಂದ ಹೊರಬಂದ ಎರಡು ರೈತ ಸಂಘಗಳು

ದೆಹಲಿ ಪೊಲೀಸರು ರೈತ ಹೋರಾಟದ ಮುಂಚೂಣಿಯಲ್ಲಿರುವ ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್‌ ಸೇರಿದಂತೆ 32 ಮುಖಂಡರನ್ನು ಹೆಸರಿಸಿ ಎಫ್ಐಆರ್ ದಾಖಲಿಸಿದ್ದಾರೆ.

- Advertisement -

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಿಂದ ಎರಡು ರೈತ ಸಂಘಟನೆಗಳಾದ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಭನು) ಬುಧವಾರ ಹೊರಬಂದಿದೆ. ಮಂಗಳವಾರ ದೆಹಲಿಯ ರೈತ ಗಣರಾಜ್ಯೋತ್ಸವದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಸುಮಾರು 200 ಪ್ರತಿಭಟನಾಕಾರರನ್ನು ಬಂಧಿಸಿದ್ದು, ಈವರೆಗೆ 22 ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಹಿಟ್ಲರ್ ಆಡಳಿತವನ್ನು ನಿಲ್ಲಿಸಿ, ಇಲ್ಲದಿದ್ದರೆ ಅನುಭವಿಸುತ್ತೀರಿ: ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ

“ರೈತ ಚಳುವಳಿ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗುವವರೆಗೂ ಇರುತ್ತದೆ, ಆದರೆ ಅದು ಈ ರೀತಿಯಾಗಿಯಲ್ಲ. ನಾವಿಲ್ಲಿ ಜನರನ್ನು ಹುತಾತ್ಮರಾಗಿಸಲು ಮತ್ತು ಅವರಿಗೆ ಹೊಡೆತ ತಿನ್ನಿಸಲು ಬಂದಿಲ್ಲ. ಚಳುವಳಿಯನ್ನು ಬೇರೆ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುವ ಜನರೊಂದಿಗೆ ಮುಂದೆ ಸಾಗುವುದನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ” ಎಂದು ರಾಕೇಶ್ ಟಿಕಾಯತ್‌ ಅವರನ್ನು ಉಲ್ಲೇಖಿಸಿ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ನಾಯಕ ವಿ. ಎಂ. ಸಿಂಗ್ ಹೇಳಿದ್ದಾರೆ.

ದೆಹಲಿ ಪೊಲೀಸರು ರೈತ ಹೋರಾಟದ ಮುಂಚೂಣಿಯಲ್ಲಿರುವ, ದರ್ಶನ್ ಪಾಲ್, ರಾಜೀಂದರ್‌ ಸಿಂಗ್, ಬಲ್‌‌ಬೀರ್‌ ಸಿಂಗ್ ರಾಜೇವಾಲ್, ಬೂಟಾ ಸಿಂಗ್ ಬುರ್ಜ್‌ಗಿಲ್, ಜೋಗೀಂದರ್‌ ಸಿಂಗ್‌, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್‌ ಹಾಗೂ ರಾಕೇಶ್ ಟಿಕಾಯತ್‌ ಸೇರಿದಂತೆ ಇದುವರೆಗೂ 32 ಮುಖಂಡರನ್ನು ಹೆಸರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸುವಾಗ ಅಲ್ಲೇ ಇದ್ದ ದೀಪ್ ಸಿಧು ಅವರ ಮೇಲೆ ಯಾವುದೆ ಎಫ್‌ಐಆರ್‌ ದಾಖಲಾಗಿಲ್ಲ.

ಕೇಂದ್ರದ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ಎರಡು ತಿಂಗಳಿನಿಂದ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರು. ಕೇಂದ್ರ ಸರ್ಕಾರ ರೈತರೊಂದಿಗೆ ಇರುವರೆಗೂ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ ಇವೆಲ್ಲವೂ ಮುರಿದು ಬಿದ್ದಿದೆ.

ಇದನ್ನೂ ಓದಿ: TRP ಹಗರಣ: ’ಇಂಡಿಯನ್ ಎಕ್ಸ್‌ಪ್ರೆಸ್’‌ಗೆ ಕಾನೂನು ನೋಟಿಸ್ ಕಳುಹಿಸಿದ ರಿಪಬ್ಲಿಕ್ ಟಿವಿ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares