Homeಮುಖಪುಟಯುಪಿ ವಿಧಾನಸಭೆ ಚುನಾವಣೆ-2022: 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ AIMIM

ಯುಪಿ ವಿಧಾನಸಭೆ ಚುನಾವಣೆ-2022: 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ AIMIM

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹೈದರಾಬಾದ್‌‌ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್‌ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್‌(ಎಐಎಂಐಎಂ) ಸ್ಪರ್ಧಿಸುತ್ತಿದ್ದು, ಪಕ್ಷದಿಂದ ಕಣಕ್ಕಿಳಿಸಲು ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಪ್ರಾರಂಭಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಕನಿಷ್ಠ 100 ಸ್ಥಾನಗಳಿಗೆ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ ಎಂದು ಅಸದುದ್ದೀನ್ ಒವೈಸಿ ಅವರು ಭಾನುವಾರ ಹೇಳಿದ್ದಾರೆ. ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ, ಪ್ರಮುಖ ಒಬಿಸಿ ಮುಖಂಡ ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಸಣ್ಣ ಪಕ್ಷಗಳ ಒಕ್ಕೂಟವಾದ ‘ಭಗಿದಾರಿ ಸಂಕಲ್ಪ ಮೋರ್ಚಾ’ದೊಂದಿಗೆ ಎಐಎಂಐಎಂ ಮೈತ್ರಿ ಮಾಡಿಕೊಂಡಿದೆ.

ಇದನ್ನೂ ಓದಿ: ಬಿಹಾರದಲ್ಲಿ ಅಸಾದುದ್ದೀನ್ ಓವೈಸಿಯವರ AIMIM ಪಕ್ಷ ಐದು ಸ್ಥಾನ ಗೆದ್ದಿದ್ದು ಹೇಗೆ?

ರಾಜ್‌ಭರ್‌‌ ಅವರ ‘ಭಗಿದಾರಿ ಸಂಕಲ್ಪ ಮೋರ್ಚಾ’ದೊಂದಿಗೆ ಎಐಎಂಐಎಂ ಮೈತ್ರಿ ಮಾಡಿಕೊಂಡಿದೆ ಎಂದು ಸ್ವತಃ ಒವೈಸಿ ಹೇಳಿದ್ದು, “ಮುಂಬರುವ ಯುಪಿ ಚುನಾವಣೆಯಲ್ಲಿ ನಾವು 100 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಪಕ್ಷವು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ” ಎಂದು ಅವರು ತಿಳಿಸಿದ್ದಾರೆ.

“ನಾವು ಓಂ ಪ್ರಕಾಶ್ ರಾಜ್‌ಭರ್‌‌ ಅವರ ‘ಭಗಿದಾರಿ ಸಂಕಲ್ಪ ಮೋರ್ಚಾ’ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಚುನಾವಣೆ ಅಥವಾ ಮೈತ್ರಿಗಳಿಗೆ ಸಂಬಂಧಿಸಿದಂತೆ ನಾವು ಬೇರೆ ಯಾವುದೆ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿಲ್ಲ” ಎಂದು ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

“ಪೂರ್ವಾಂಚಲ್ ಜಿಲ್ಲೆಯ ಬಹ್ರೇಚ್‌ನಲ್ಲಿ ಉತ್ತರ ಪ್ರದೇಶ ಚುನಾವಣಾ ಕ್ಯಾಂಪ್‌ ಕಚೇರಿ ಸಿದ್ದವಾಗಿದೆ. ಶೀಘ್ರದಲ್ಲೇ ಕಚೇರಿ ಉದ್ಘಾಟನೆಯಾಗಲಿದೆ” ಉತ್ತರ ಪ್ರದೇಶ ಎಐಎಂಐಎಂ ಅಧ್ಯಕ್ಷ ಶೌಕತ್‌ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಪಾಲಿಕೆ ಚುನಾವಣಾ ಪ್ರಚಾರಕ್ಕೂ ಪ್ರಧಾನಿ! ಬಿಜೆಪಿಯ ಈ ತಂತ್ರದ ವಾಸ್ತವವೇನು?

ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ, ಎಐಎಂಐಎಂ ಜೊತೆಗೆ, ‘ಭಗಿದಾರಿ ಸಂಕಲ್ಪ ಮೋರ್ಚಾ’ ಮೈತ್ರಿಯಲ್ಲಿ ಕೃಷ್ಣ ಪಟೇಲ್ ಅವರ ಅಪ್ನಾ ದಳ, ಜನ ಅಧಿಕಾರ ಪಕ್ಷ ಮತ್ತು ಚಂದ್ರಶೇಖರ್ ರಾವಣ್‌‌ ಅವರ ‘ಆಜಾದ್ ಸಮಾಜ ಪಕ್ಷ’ದಂತಹ ಎಂಟು ಪಕ್ಷಗಳಿವೆ.

ಕಳೆದ ವರ್ಷದ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಎಐಐಎಂಐಎಂ 20 ಸ್ಥಾನಗಳಲ್ಲಿ ಸ್ಪರ್ಧಿಸಿ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇವೆಲ್ಲವೂ ಪಶ್ಚಿಮ ಬಂಗಾಳದ ಗಡಿಯನ್ನು ಹಂಚಿಕೊಂಡಿರುವ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ್ ಪ್ರದೇಶದಲ್ಲಿದೆ.

ಆದರೆ ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಶೂನ್ಯ ಸಾಧನೆ ಮಾಡಿತ್ತು. ಅಲ್ಲಿ ಕ್ರಮವಾಗಿ ಏಳು ಮತ್ತು ಮೂರು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪಕ್ಷವು ಕಣಕ್ಕಿಳಿಸಿತ್ತು.

2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ: ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿದ್ದಾರೆಯೆ?: ಓವೈಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...