Homeಮುಖಪುಟಯುಪಿ ಚುನಾವಣೆ: ಮೊದಲ ಹಂತದ ಸ್ಟಾರ್‌ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಯುಪಿ ಚುನಾವಣೆ: ಮೊದಲ ಹಂತದ ಸ್ಟಾರ್‌ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಸೋನಿಯಾ ಗಾಂಧಿ, ಮನಮೋಹನ್ ಸಿಂಗ್‌, ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಕನ್ಹಯ್ಯ ಕುಮಾರ್‌ ಸೇರಿದಂತೆ 30 ಜನರನ್ನು ಹೆಸರಿಸಲಾಗಿದೆ

- Advertisement -
- Advertisement -

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಸಂಸದ ರಾಹುಲ್ ಗಾಂಧಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರ ನಾಯಕರು ಪಕ್ಷದ ಪರ ಚುನಾವಣಾ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಯುಎಸ್‌ಯು) ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ಯುಪಿ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅವರು ಪಕ್ಷದ ಪರವಾಗಿ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಉತ್ತರ ಪ್ರದೇಶ: ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕಿ, ಸ್ವ ಕ್ಷೇತ್ರದಿಂದ ವಾಪಸ್ ಕಳುಹಿಸಿದ ಮಹಿಳೆಯರು

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸಿದ್ದಾರೆ.

ಪತ್ರದಲ್ಲಿ, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಈ ಕೆಳಗಿನ ನಾಯಕರು, 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 77 (1) ರ ಪ್ರಕಾರ 10ನೇ ಫೆಬ್ರವರಿ 2022 ರಂದು ನಡೆಯಲಿರುವ ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗಾಗಿ ಪ್ರಚಾರ ನಡೆಸಲಿದ್ದಾರೆ” ಎಂದು ತಿಳಿಸಿದ್ದಾರೆ.

30 ಜನರ ಪಟ್ಟಿ ಇಲ್ಲಿದೆ:

1. ಸೋನಿಯಾ ಗಾಂಧಿ

2. ಮನಮೋಹನ್ ಸಿಂಗ್

3. ರಾಹುಲ್ ಗಾಂಧಿ

4. ಪ್ರಿಯಾಂಕಾ ಗಾಂಧಿ ವಾದ್ರಾ

5. ಅಜಯ್ ಕುಮಾರ್ ಲಲ್ಲು

6. ಆರಾಧನಾ ಮಿಶ್ರಾ ‘ಮೋನಾ’

7. ಗುಲಾಂ ನಬಿ ಆಜಾದ್

8. ಅಶೋಕ್ ಗೆಹ್ಲೋಟ್

9. ಭೂಪಿಂದರ್ ಸಿಂಗ್ ಹೂಡಾ

10. ಭೂಪೇಶ್ ಬಘೇಲ್

11. ಸಲ್ಮಾನ್ ಖುರ್ಷಿದ್

12. ರಾಜ್ ಬಬ್ಬರ್

13. ಪ್ರಮೋದ್ ತಿವಾರಿ

14. ಪಿಎಲ್ ಪುನಿಯಾ

15. ಆರ್‌ಪಿಎನ್ ಸಿಂಗ್

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ

16. ಸಚಿನ್ ಪೈಲಟ್

17. ಪ್ರದೀಪ್ ಜೈನ್ ಆದಿತ್ಯ

18. ನಸೀಮುದ್ದೀನ್ ಸಿದ್ದಿಕಿ

19. ಆಚಾರ್ಯ ಪ್ರಮೋದ್ ಕೃಷ್ಣಂ

20. ದೀಪರ್ ಸಿಂಗ್ ಹೂಡಾ

21. ವರ್ಷಾ ಗಾಯಕ್ವಾಡ್

22. ಹಾರ್ದಿಕ್ ಪಟೇಲ್

23. ಫೂಲೋ ದೇವಿ ನೇತಮ್

24. ಸುಪ್ರಿಯಾ ಶ್ರಿನೇಟ್

25. ಇಮ್ರಾನ್ ಪ್ರತಾಪಗರ್ಹಿ

26. ಕನ್ಹಯ್ಯಾ ಕುಮಾರ್

27. ಪ್ರಣಿತಿ ಶಿಂಧೆ

28. ಧೀರಜ್ ಗುಜ್ಜರ್

29. ರೋಹಿತ್ ಚೌಧರಿ

30. ತೌಕೀರ್ ಆಲಂ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದ್ದು, ಫೆಬ್ರವರಿ 10 ರಿಂದ ಪ್ರಾರಂಭವಾಗಿ 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಕೊನೆಗೊಳ್ಳಲಿದೆ.

ಕಳೆದ ವಾರವಷ್ಟೇ, ಬಿಜೆಪಿಯು ಯುಪಿ ವಿಧಾನಸಭಾ ಚುನಾವಣೆಗೆ ತನ್ನ 30 ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರಂತಹ ಅನೇಕ ಸ್ಟಾರ್ ಪ್ರಚಾರಕರು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೆ. ಪಕ್ಷದ ಸಂಸದರಾಗಿರುವ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿಯನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಇದನ್ನೂ ಓದಿ: ಯುಪಿ ಚುನಾವಣೆ: ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...