Homeಮುಖಪುಟಯುಪಿ ಚುನಾವಣೆ: BJP ಜೊತೆ ಮೈತ್ರಿ ವಿಫಲ; JDUನಲ್ಲಿ ಹೆಚ್ಚುತ್ತಿರುವ ಆಂತರಿಕ ಬಿರುಕು!

ಯುಪಿ ಚುನಾವಣೆ: BJP ಜೊತೆ ಮೈತ್ರಿ ವಿಫಲ; JDUನಲ್ಲಿ ಹೆಚ್ಚುತ್ತಿರುವ ಆಂತರಿಕ ಬಿರುಕು!

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ವಿಫಲವಾದ ನಂತರ, ಸಂಯುಕ್ತ ಜನತಾ ದಳ(ಜೆಡಿಯು)ನ ಉನ್ನತ ನಾಯಕತ್ವವು ಒಕ್ಕೂಟ ಸರ್ಕಾರದ ಸಚಿವ ಆರ್‌ಸಿಪಿ ಸಿಂಗ್‌ ಅವರನ್ನು ಗುರಿಯಾಗಿಸಲು ಪ್ರಾರಂಭಿಸಿದೆ. ಮೋದಿ ಸಂಪುಟದಲ್ಲಿ ಸಚಿವರಾಗಿರುವ ಆರ್‌ಸಿಪಿ ಸಿಂಗ್‌ ಅವರು ಜೆಡಿಯು ಕೋಟಾದ ಅಡಿಯಲ್ಲಿ ಒಕ್ಕೂಟ ಸರ್ಕಾರದಲ್ಲಿ ಸಚಿವರಾಗಿದ್ದರೂ ಬಿಜೆಪಿ ಉನ್ನತ ನಾಯಕತ್ವದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಯುಪಿ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪಕ್ಷವು ಅವರಿಗೆ ಜವಾಬ್ದಾರಿಯನ್ನು ನೀಡಿತ್ತು, ಆದರೆ ಅವರು ವಿಫಲರಾಗಿದ್ದಾರೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಉತ್ತರ ಪ್ರದೇಶ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಲು ಆರ್‌ಸಿಪಿ ಸಿಂಗ್ ಕಾರಣ ಎಂದು ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ: ಮೊದಲ ಹಂತದ ಸ್ಟಾರ್‌ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಕಳೆದೆರಡು ದಿನಗಳಿಂದ ಜೆಡಿಯುನ ಕಿರಿಯ ನಾಯಕರು ಆರ್‌ಸಿಪಿ ಸಿಂಗ್‌ ಪರ ವಕಾಲತ್ತು ವಹಿಸುತ್ತಿದ್ದಾರೆ. ಅವರು ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಆರ್‌ಸಿಪಿ ಸಿಂಗ್ ಅವರು ಉತ್ತರ ಪ್ರದೇಶದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದು, ಅಲ್ಲಿನ ತಳ ಮಟ್ಟದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಗಿ ಎಂದು ಅವರು ಹೇಳಿದ್ದಾರೆ.

“ಚುನಾವಣಾ ಪ್ರಚಾರದ ಸಮಯದಲ್ಲಿ ಆರ್‌ಸಿಪಿ ಸಿಂಗ್ ಅವರನ್ನು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ, ವಿಶೇಷವಾಗಿ ಪಿಎಂ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮುಖಾಮುಖಿ ಮಾಡುವ ಯೋಜನೆ ಇದೆ. ಇದು ಬಿಜೆಪಿ ನಾಯಕತ್ವದೊಂದಿಗೆ ಆರ್‌ಸಿಪಿ ಸಿಂಗ್ ಅವರ ಸಂಬಂಧವನ್ನು ಹದಗೆಡಿಸುತ್ತದೆ” ಎಂದು ಆರ್‌ಜೆಡಿ ನಾಯಕರೊಬ್ಬರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.

ಇದನ್ನೂ ಓದಿ: ಕೊಲ್ಕತ್ತಾ: ಗಣರಾಜ್ಯೋತ್ಸವ ಪೂರ್ವಾಭ್ಯಾಸದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ಪ್ರದರ್ಶನ

ಬಿಹಾರ ಸಿಎಂ ನಿತೀಶ್ ಕುಮಾರ್ ಆರ್‌ಸಿಪಿ ಸಿಂಗ್‌‌ ಅವರಿಗೆ ಜವಾಬ್ದಾರಿ ನೀಡಿದ್ದರು. ಕಳೆದ ವರ್ಷ ನರೇಂದ್ರ ಮೋದಿ ಸರ್ಕಾರದ ಎರಡನೇ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಆರ್‌ಸಿಪಿ ಸಿಂಗ್ ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ JDU ಪಕ್ಷದಿಂದ ಒಕ್ಕೂಟ ಸರ್ಕಾರದಲ್ಲಿ ಎರಡು ಸಂಪುಟ ದರ್ಜೆಯ ಮಂತ್ರಿಗಳು ಮತ್ತು ಇಬ್ಬರು ರಾಜ್ಯ ಖಾತೆ ಮಂತ್ರಿಗಳನ್ನು ಮಾಡುವಂತೆ ಬಯಸಿತ್ತು. ಆದರೆ JDU ಕೋಟಾದ ಅಡಿಯಲ್ಲಿ ಆರ್‌ಸಿಪಿ ಸಿಂಗ್ ಅವರಿಗೆ ಮಾತ್ರ ಸಂಪುಟ ಸಚಿವ ಸ್ಥಾನ ಪಡೆದು, ಲಾಲನ್ ಸಿಂಗ್, ಉಪೇಂದ್ರ ಕುಶ್ವಾಹಾ ಮತ್ತು ಇತರರ ಶ್ರೇಣಿಯ ನಾಯಕರಿಗೆ ಸಚಿವ ಸ್ಥಾನ ನಿರಾಕರಿಸಲಾಗಿತ್ತು.

ಜೆಡಿಯು ಉತ್ತರ ಪ್ರದೇಶ ಚುನಾವಣೆಗೆ 51 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ 26 ಅಭ್ಯರ್ಥಿಗಳನ್ನು ಇದುವರೆಗೆ ಘೋಷಿಸಲಾಗಿದೆ. ಈ 26 ಅಭ್ಯರ್ಥಿಗಳು ಬಿಜೆಪಿ ಪ್ರಬಲ ಹಿಡಿತ ಹೊಂದಿರುವ ಅಥವಾ ಹಾಲಿ ಶಾಸಕರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೆಷಾ ಮಲಿಕ್ ನೇಮಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...