ವಿಶ್ವದಾದ್ಯಂತ ಹರಡುತ್ತಿರುವ ಒಮೈಕ್ರಾನ್ ರೂಪಾಂತರವು ಕೊರೊನಾದ ಕೊನೆಯ ರೂಪಾಂತರ ಎಂದು ಭಾವಿಸುವುದು ಮತ್ತು ಕೊರೊನಾ ಸಾಂಕ್ರಾಮಿಕ ಕೊನೆಯಾಗುತ್ತಿದೆ ಎಂದು ಭಾವಿಸುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥರು ಸೋಮವಾರ ಹೇಳಿದ್ದಾರೆ.
ಅದಾಗ್ಯೂ, ಪರೀಕ್ಷೆ ಮತ್ತು ಲಸಿಕೆಗಳಂತಹ ತಂತ್ರಗಳು ಹಾಗೂ ಸಂಪನ್ಮೂಲಗಳನ್ನು ಸಮಗ್ರ ರೀತಿಯಲ್ಲಿ ಬಳಸಿದರೆ, ಕೊರೊನಾದ ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ತೀವ್ರ ಹಂತದಿಂದ ಈ ವರ್ಷ ನಿರ್ಗಮಿಸಲು ಸಾಧ್ಯ ಎಂದು ಟೆಡ್ರೊಸ್ ಅಧಾನೊಮ್ ಗೆಬ್ರಿಯೆಸಸ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಅಭಿವೃದ್ಧಿಗೆ ಒಂದು ಪೈಸೆಯು ಕೊಡದ ಪಿಎಂ ಕೇರ್!
ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಟೆಡ್ರೊಸ್, “ಒಮೈಕ್ರಾನ್ ಅನ್ನು 2020 ಒಂಬತ್ತು ವಾರಗಳ ಹಿಂದೆ ಮೊದಲ ಬಾರಿಗೆ ಗುರುತಿಸಿದ್ದರಿಂದ, 80 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು WHO ಗೆ ವರದಿಯಾಗಿದೆ, ಇದು ಇಡೀ 2020 ರಲ್ಲಿ ವರದಿಯಾದ ಪ್ರಕರಣಗಳಿಂತಲೂ ಹೆಚ್ಚು” ಎಂದು ಅವರು ಹೇಳಿದ್ದಾರೆ.
“ಪ್ರಸ್ತುತ ಪರಿಸ್ಥಿತಿಯು ಇನ್ನೂ ಹೆಚ್ಚು ರೂಪಾಂತರಗಳು ಹೊರಹೊಮ್ಮಲು ಸೂಕ್ತವಾಗಿವೆ” ಎಂದು ಅವರು ಸೂಚಿಸಿದ್ದಾರೆ.
ಸೋಮವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ ಕೊನೆಗೊಂಡ 24 ಗಂಟೆಗಳಲ್ಲಿ ಭಾರತದಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. 439 ಸೋಂಕಿತರು ಮೃತಪಟ್ಟಿದ್ದಾಗಿ ವರದಿಯಾಗಿವೆ. ಭಾನುವಾರದಂದು 3.33 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿತ್ತು. ಇದಕ್ಕೆ ಹೋಲಿಸಿದರೆ ಸೋಮವಾರದಂದು ದೈನಂದಿನ ಪ್ರಕರಣಗಳು ಕುಸಿದಿದ್ದರೂ, ಪಾಸಿಟಿವಿಟಿ ಪ್ರಮಾಣವು 20.75% ಕ್ಕೆ ಏರಿದೆ.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಾದರೂ, ಲಸಿಕೆ ಕಾರಣಕ್ಕೆ ಸಾವು ನೋವು ಕಡಿಮೆಯಾಗಿದೆ: ICMR ಮುಖ್ಯಸ್ಥ