ಈ ಹಿಂದೆ ಉನ್ನಾವ್ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದೆಲ್ಲಾ ಗಮನದಲ್ಲಿಟ್ಟುಕೊಂಡು ಉನ್ನಾವ್ ಅತ್ಯಾಚಾರದ ಸಂತ್ರಸ್ತೆ ಬೆಂಕಿಗೆ ಆಹುತಿಯಾಗುವಾಗ ಏಕೆ ಭದ್ರತೆ ನೀಡಲಿಲ್ಲ ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಹಿಳೆಯ ಎಫ್‌ಐಆರ್ ನೋಂದಾಯಿಸಲು ನಿರಾಕರಿಸಿದ ಅಧಿಕಾರಿಯ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ? ಯುಪಿಯಲ್ಲಿ ಪ್ರತಿದಿನ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಸರ್ಕಾರ ಏನು ಮಾಡುತ್ತಿದೆ? ಎಂದು ಅವರು ಕಿಡಿಕಾರಿದ್ದಾರೆ.
उन्नाव की पिछली घटना को ध्यान में रखते हुए सरकार को तत्काल पीड़िता को सुरक्षा क्यों नहीं दी गई? जिस अधिकारी ने उसका FIR दर्ज करने से मना किया उस पर क्या कार्रवाई हुई? उप्र में रोज रोज महिलाओं पर जो अत्याचार हो रहा है, उसको रोकने के लिए सरकार क्या कर रही है ?
— Priyanka Gandhi Vadra (@priyankagandhi) December 7, 2019
ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಆರೋಪಿಯಾಗಿರುವ ಕೇಸಿನಲ್ಲಿ ಉನ್ನಾವ್ ಸಂತ್ರಸ್ತೆಯ ತಂದೆಯನ್ನು ಅಕ್ರಮ ಸಶಸ್ತ್ರ ಕಾಯ್ದೆಯಡಿ ಬಂಧಿಸಿ ಲಾಕಪ್‌ನಲ್ಲಿಯೇ ಅವರು ಮರಣ ಹೊಂದಿದ್ದರು. ನಂತರ ಸಂತ್ರಸ್ತೆ ಕೋರ್ಟಿಗೆ ಹೋಗುವಾಗ ಆಕೆಯ ಕಾರಿನ ಮೇಲೆ ಲಾರಿ ಹರಿಸಿ ಕೊಲ್ಲಲ್ಲು ಯತ್ನಿಸಿದ್ದು ಆಕೆ ಸಹ ಆಸ್ಪತ್ರೆಯಲ್ಲಿದ್ದಾಳೆ. ಇಷ್ಟೆಲ್ಲಾ ನಡೆದಿದ್ದರೂ ಸರ್ಕಾರ ಏಕೆ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಉನ್ನಾವ್‌ನಲ್ಲಿ ಮಹಿಳೆಯರು ಮನೆಯಿಂದ ಹೊರಬರುವುದಕ್ಕೆ ಹೆದರುವಂಥ ಪರಿಸ್ಥಿತಿ ಇದೆ. ಆದರೂ ಸರ್ಕಾರ ರಕ್ಷಣೆ ನೀಡಲು ಮುಂದಾಗುತ್ತಿಲ್ಲ. ಅಂದರೆ ಇದು ಮಹಿಳೆಯರ ಪರವಿರುವ ಸರ್ಕಾರವೋ ಅಥವಾ ಅತ್ಯಾಚಾರಿಗಳ ಪರವಿರುವ ಸರ್ಕಾರವೋ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಂಕಿಗೆ ಆಹುತಿಯಾಗಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಾವು: ತ್ವರಿತ ವಿಚಾರಣೆಗೆ ಸಿಎಂ ಆದೇಶ
ಬೆಂಕಿಗೆ ಆಹುತಿಯಾಗಿ ಸಾವನಪ್ಪಿದ ಕುಟುಂಬದವರನ್ನು ಮಾತನಾಡಿಸಲು ಲಕ್ನೋದಿಂದ ಉನ್ನಾವ್‌ಗೆ ತೆಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.


