Homeಮುಖಪುಟಗುಜ್ಜರ್‌ ಸಮುದಾಯಕ್ಕೆ ಅವಮಾನ ಆರೋಪ: ಗೋ ಬ್ಯಾಕ್ ಯೋಗಿ ಟ್ವಿಟರ್‌ ಟ್ರೆಂಡ್

ಗುಜ್ಜರ್‌ ಸಮುದಾಯಕ್ಕೆ ಅವಮಾನ ಆರೋಪ: ಗೋ ಬ್ಯಾಕ್ ಯೋಗಿ ಟ್ವಿಟರ್‌ ಟ್ರೆಂಡ್

- Advertisement -
- Advertisement -

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಜೇವಾರ್ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದ ನಡುವೆಯೇ ಟ್ವಿಟರ್‌ನಲ್ಲಿ ಗೋ ಬ್ಯಾಕ್ ಯೋಗಿ (#GoBackYogi) ಟ್ರೆಂಡಿಂಗ್ ಆಗಿದೆ. ಗುಜ್ಜರ್‌ ಸಮುದಾಯದ ಜನರು ಜೇವರ್ ವಿಮಾನ ನಿಲ್ದಾಣವನ್ನು ಸಾಮ್ರಾಟ್ ಮಿಹಿರ್ ಭೋಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಸಲು ಒತ್ತಾಯಿಸುತ್ತಿದ್ದಾರೆ.

ಚಕ್ರವರ್ತಿ ಮಿಹಿರ್ ಭೋಜ್ ಹೆಸರಿನಲ್ಲಿ ‘ಗುಜ್ಜರ್‌’ ಅನ್ನು ತೆಗೆದು ಹಾಕಿದರ ಬಗ್ಗೆ ಗಲಾಟೆ ನಡೆದಿತ್ತು. ಅಷ್ಟೇ ಅಲ್ಲ, ಗುಜ್ಜರ್ ಸಮುದಾಯವು ಪ್ರಧಾನಿ ಮೋದಿಯವರ ಶಿಲಾನ್ಯಾಸ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು.

ಗುರುವಾರ ಬೆಳಗ್ಗೆ 9 ಗಂಟೆಯಿಂದ ಶುರುವಾದ #GoBackYogi ಟ್ವಿಟರ್‌ ಟ್ರೆಂಡ್ ಅಭಿಯಾನದಲ್ಲಿ ಇಲ್ಲಿಯವರೆಗೆ 32 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಉತ್ತಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಏಕೆ ಬೇಕು ಎಂಬುದಕ್ಕೆ ಯೋಗಿ ಆದಿತ್ಯನಾಥ್ ಸಾಕ್ಷಿ: ಒವೈಸಿ ವ್ಯಂಗ್ಯ

ಗುಜ್ಜರ್‌ ಏಕ್ತಾ ಟೀಮ್ ಟ್ವೀಟ್ ಮಾಡಿ, ಬ್ರಾಹ್ಮಣ, ದಲಿತ, ಗುಜ್ಜರ್‌, ಯಾದವ್ ಒಟ್ಟಾಗಿ ಹಿಂದೂ ಎಂಬ ಹೆಸರಿನಲ್ಲಿ ಯೋಗಿ ಆದಿತ್ಯನಾಥ್‌ಗೆ ಮತ ನೀಡಿದೆವು ಆದರೆ ಕೊನೆಗೆ ಗೆದ್ದದ್ದು ಠಾಕೂರಿಸಂ. ಯೋಗಿ ನಿಮ್ಮ ಸರ್ವಾಧಿಕಾರ ಇನ್ನು ಮುಂದೆ ನಡೆಯುವುದಿಲ್ಲ ಎಂದಿದೆ.

ಢೋಂಗಿ ಬಾಬಾ ಕ್ಷಮೆ ಯಾಚಿಸಿ ಇಲ್ಲದಿದ್ದರೆ ವಾಪಸ್ ಹೋಗಿ, ಗುಜ್ಜರ್‌ ಏಕ್ತಾ ಆವಾಜ್ ತಂಡ ಇಂತಹ ಜಾತಿವಾದಿ ಬೂಟಾಟಿಕೆಗಳನ್ನು ಬಲವಾಗಿ ವಿರೋಧಿಸುತ್ತದೆ ಎಂದು ಗುಜ್ಜರ್‌ ಸಂಘಟನೆ ಟ್ವೀಟ್ ಮಾಡಿದೆ.

ಟ್ವಿಟರ್‌ ಅಭಿಯಾನ ಏಕೆ ನಡೆಯುತ್ತಿದೆ?

ಸೆಪ್ಟೆಂಬರ್ 22 ರಂದು ದಾದ್ರಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಚಕ್ರವರ್ತಿ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದರ ರಾಕ್‌ಬೋರ್ಡ್‌ನಲ್ಲಿ ಬರೆದಿದ್ದ ಗುಜ್ಜರ್‌ ಎಂಬ ಪದದ ಮೇಲೆ ಕಪ್ಪು ಬಣ್ಣ ಬಳಿಯಲಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಅಖಿಲ ಭಾರತೀಯ ಗುಜ್ಜರ್‌ ಪರಿಷತ್ ಸಂಘಟನೆ ಈ ಕುರಿತು ಸಿಎಂ ಯೋಗಿ ಕ್ಷಮೆ ಯಾಚಿಸಬೇಕು ಎಂದು ಸಾರ್ವಜನಿಕವಾಗಿ ಆಗ್ರಹಿಸಿತ್ತು. ಕ್ಷಮೆ ಕೇಳದಿದ್ದರೇ ನವೆಂಬರ್ 25 ರಂದು ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಪ್ಪು ಬಾವುಟಗಳನ್ನು ಪ್ರದರ್ಶಿಸಲಾಗುವುದು ಎಂದು ಘೋಷಿಸಿದ್ದರು.

ಪ್ರತಿಮೆಯಲ್ಲಿ ಗುಜ್ಜರ್‌ ಹೆಸರಿಗೆ ಕಪ್ಪು ಬಣ್ಣ ಬಳಿದಿರುವುದು‍

————–

ಇದನ್ನೂ ಓದಿ: ಸಿಎಂ ಯೋಗಿ, ಪಿಎಂ ಮೋದಿ ಗಹನ ಚಿಂತನೆಯ ಫೋಟೋ: ವ್ಯತ್ಯಾಸ ಗುರುತಿಸಿದ ನೆಟ್ಟಿಗರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...