ದಲಿತ ಬಾಲಕಿಗೆ ಶಿಕ್ಷಣ ನೀಡಲು ಶಿಕ್ಷಕಿಯೇ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ದಲಿತ (ಪರಿಶಿಷ್ಟ ಜಾತಿ) ಬಾಲಕಿ ಸೋನಿಯಾ ಈ ಆರೋಪ ಮಾಡಿದ್ದು, “ನನ್ನ ಶಿಕ್ಷಕಿ ಪೂಜಾ ಸಿಂಗ್ ನನಗೆ ಕಲಿಸಲು ನಿರಾಕರಿಸುತ್ತಾರೆ” ಎಂದು ತಿಳಿಸಿದ್ದಾರೆ.
ಶಾಲೆಗೆ ಹೋದಾಗಲೆಲ್ಲಾ ಶಿಕ್ಷಕಿ ಪೂಜಾ ಸಿಂಗ್ ನನ್ನನ್ನು ಶಾಲೆಯಿಂದ ಹೊರಹಾಕುತ್ತಿದ್ದಾರೆ. ಇದು ಜುಲೈನಿಂದಲೂ ನಡೆಯುತ್ತಿದೆ. ಯಾವುದೇ ಚಮ್ಮಾರ್ ಅಥವಾ ಇತರೆ ಕೆಳಜಾತಿಯವರಿಗೆ ಪಾಠ ಮಾಡುವುದಿಲ್ಲ ಎಂದು ಪೂಜಾ ಸಿಂಗ್ ಹೇಳುತ್ತಿರುವುದಾಗಿ ದೂರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಾಲಕಿ ಸೋನಿಯಾ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೇ ವೇಳೆ ಸೋನಿಯಾ ಅವರ ತಂದೆ ಭಗವಾನ್ ಪ್ರಸಾದ್ ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
सोनिया की टीचर उसे रोज़ाना स्कूल से इसलिए भगा देती हैं क्योंकि वह दलित है. टीचर कहती है कि वह चमार और छोटी जाति के बच्चों को नहीं पढ़ाएगी.. सोनिया के साथ ये सिलसिला 3 महिनों से चल रहा है. मामला कर्नलगंज के टेंगनहा प्राइमरी स्कूल का है. #dalitinup pic.twitter.com/iXklANn5vn
— Dalit Times | दलित टाइम्स (@DalitTime) September 23, 2022
“ಎಷ್ಟೋ ಬಾರಿ ಶಾಲೆಗೆ ಹೋಗಿದ್ದರೂ ಶಿಕ್ಷಕಿ ಪೂಜಾ ಸಿಂಗ್ ನಮ್ಮ ಮಾತನ್ನು ಕೇಳುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮ ಮಗಳನ್ನು ತರಗತಿಯಲ್ಲಿ ಕುಳಿತುಕೊಳ್ಳಲು ನಾನು ಬಿಡುವುದಿಲ್ಲ” ಎಂದು ಸಂತ್ರಸ್ತ ಬಾಲಕಿಯ ತಂದೆ ಹೇಳಿದ್ದಾರೆ ಎಂದು ‘ದಲಿತ್ ಟೈಮ್ಸ್’ ವರದಿ ಮಾಡಿದೆ.
ಈ ಸಂಬಂಧ ಮೂಲ ಶಿಕ್ಷಣಾಧಿಕಾರಿಗೆ ಪತ್ರವನ್ನೂ ಬರೆಯಲಾಗಿದೆ. ಸಂತ್ರಸ್ತ ಪೋಷಕರು ಈ ಕುರಿತು ಪ್ರತಿಕ್ರಿಯಿಸಿ, “ನಿಮ್ಮ ಮಗಳೊಂದಿಗೆ ಶಾಲೆಗೆ ಹೋಗಿ ಎಂದು ಅಧಿಕಾರಿ ಹೇಳಿದ್ದರು. ಪೂಜಾ ಸಿಂಗ್ ಅಧಿಕಾರಿಗಳ ಜೊತೆ ಮಾತನಾಡಲಿಲ್ಲ” ಎಂದಿದ್ದಾರೆ.
“ದಲಿತ ಪೋಷಕರಾದ ಭಗವಾನ್ ಪ್ರಸಾದ್ ಮತ್ತು ಗಿಯಾನಾ ದೇವಿ ಅವರಿಗೂ ಜಾತಿ ನಿಂದನೆ ಮಾಡಿ ಪೂಜಾ ಸಿಂಗ್ ಶಾಲೆಯಿಂದ ಹೊರಹಾಕಿದ್ದಾರೆ” ಎಂದು ‘ದಲಿತ್ ಟೈಮ್ಸ್’ ವರದಿ ಮಾಡಿದೆ.
ನಂತರದಲ್ಲಿ ಅಧಿಕಾರಿಯು ಶಿಕ್ಷಕಿಗೆ ನೋಟೀಸ್ ನೀಡಿದ್ದಾರೆ. ತನಿಖೆಗಾಗಿ ಅಧಿಕಾರಿಗಳ ತಂಡವನ್ನೂ ರಚಿಸಲಾಗಿದೆ.
ಆರೋಪಗಳನ್ನು ನಿರಾಕರಿಸಿರುವ ಶಿಕ್ಷಕಿ ಪೂಜಾ, “ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇನೆ. ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು” ಎಂದು ವಾದಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು ಟ್ವೀಟ್ ಮಾಡಿದೆ. ಮಾಧ್ಯಮವೊಂದು ಪ್ರಸಾರ ಮಾಡಿದ ಸುದ್ದಿಯ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, “ಯೋಗಿಜೀ, ನಿಮಗೆ ಮದರಸಾಗಳ ಸಮೀಕ್ಷೆಯಲ್ಲಿ ಸಮಯ ಸಿಕ್ಕಿದ್ದರೆ, ಜಾತಿ ದಬ್ಬಾಳಿಕೆಯ ಈ ಅನಿಷ್ಟ ಪದ್ಧತಿಯ ಬಗ್ಗೆಯೂ ಗಮನ ಕೊಡಿ” ಎಂದು ಆಗ್ರಹಿಸಿದೆ.
योगी जी !
अगर मदरसों के सर्वे से फुर्सत मिल गई हो तो अपने शर्मनाक और कलंकित कार्यकाल में शुरू हुई इस जातीय उत्पीड़न/भेदभाव की कुप्रथा पर भी ध्यान दे दीजिए जिस जातिवादी कुप्रथा को बढ़ावा देने के लिए आप कुख्यात हो चुके हैं ,योगी सरकार में विद्यालयों में पैर पसारती शर्मनाक प्रथा👇 pic.twitter.com/CdBUVQQxbT
— SamajwadiPartyMedia (@MediaCellSP) September 22, 2022



ಈ ಮನುವಾದಿ ಶಿಕ್ಷಕಿಯ ವಿರುದ್ಧ ಕಟಿಣ ಕಾನೂನು ಕ್ರಮ ಜರುಗಿಸಬೇಕು.