Homeಅಂತರಾಷ್ಟ್ರೀಯಗಾಝಾ ನರಮೇಧ : ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್‌ ಪರ ಅಮೆರಿಕ ವಕಾಲತ್ತು

ಗಾಝಾ ನರಮೇಧ : ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್‌ ಪರ ಅಮೆರಿಕ ವಕಾಲತ್ತು

- Advertisement -
- Advertisement -

ಗಾಝಾ ನರಮೇಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾ ಹೂಡಿರುವ ಪ್ರಕರಣದಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಧ್ಯ ಪ್ರವೇಶಿಸಿದ್ದು, ಇಸ್ರೇಲ್ ಪರ ವಕಾಲತ್ತು ವಹಿಸಲು ಮುಂದಾಗಿವೆ ಎಂದು ವರದಿಯಾಗಿದೆ.

ದಿ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಮಾರ್ಚ್ 13ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ನಮೀಬಿಯಾ, ಯುನೈಟೆಡ್ ಸ್ಟೇಟ್ಸ್, ಹಂಗೇರಿ ಮತ್ತು ಫಿಜಿ ದೇಶಗಳು ನ್ಯಾಯಾಲಯದ ಶಾಸನದ 63 ನೇ ವಿಧಿಯ ಅಡಿಯಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶದ ಅರ್ಜಿಗಳನ್ನು ಸಲ್ಲಿಸಿವೆ.

ನೆದರ್ಲ್ಯಾಂಡ್ಸ್ ಮತ್ತು ಐಸ್‌ಲ್ಯಾಂಡ್ ರಾಷ್ಟ್ರಗಳು ನ್ಯಾಯಾಲಯದ ಶಾಸನದ 63ನೇ ವಿಧಿಯ ಅಡಿಯಲ್ಲಿ ಮಧ್ಯಪ್ರವೇಶದ ಅರ್ಜಿಗಳನ್ನು ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ಪ್ರಕರಣವನ್ನು ಅಧಿಕೃತವಾಗಿ ‘ಗಾಝಾ ಪಟ್ಟಿಯಲ್ಲಿ ಹತ್ಯಾಕಾಂಡದ ತಡೆಗಟ್ಟುವಿಕೆ ಮತ್ತು ಶಿಕ್ಷೆ’ (ದಕ್ಷಿಣ ಆಫ್ರಿಕಾ vs ಇಸ್ರೇಲ್) ಎಂದು ಕರೆಯಲಾಗುತ್ತದೆ. ದಕ್ಷಿಣ ಆಫ್ರಿಕಾ 2023ರ ಡಿಸೆಂಬರ್‌ನಲ್ಲಿ ಇಸ್ರೇಲ್ ವಿರುದ್ಧ ಈ ದೂರನ್ನು ದಾಖಲಿಸಿದೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವು ಅಲ್ಲಿನ ಫ್ಯಾಲೆಸ್ತೀನಿಯರ ಹತ್ಯಾಕಾಂಡಕ್ಕೆ ಕಾರಣವಾಗುತ್ತಿದೆ ಎಂಬುವುದು ದಕ್ಷಿಣ ಆಫ್ರಿಕಾದ ಮುಖ್ಯ ಆರೋಪವಾಗಿದೆ.

ನರಮೇಧ ಆರೋಪ ಅಲ್ಲಗಳೆದ ಅಮೆರಿಕ

ತನ್ನ ಮಧ್ಯ ಪ್ರವೇಶದ ಅರ್ಜಿಯಲ್ಲಿ ಇಸ್ರೇಲನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅಮೆರಿಕ, ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸಿದೆ ಎಂಬ ಆರೋಪಗಳನ್ನು ಆಧಾರರಹಿತ ಎಂದು ತಿರಸ್ಕರಿಸಿದೆ. ಇಸ್ರೇಲ್ ವಿರುದ್ಧದ ನರಮೇಧದ ಆರೋಪಗಳು ಸುಳ್ಳು ಎಂದಿರುವ ಅಮೆರಿಕ, ಇಸ್ರೇಲ್ ದೇಶದ ಕಾನೂನುಬದ್ಧತೆಯನ್ನು ಹಾಳುಮಾಡುವ ಪ್ರಯತ್ನದ ಭಾಗವಾಗಿ ಇಂತಹ ಆರೋಪಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಮಾಡಲಾಗುತ್ತದೆ ಎಂದು ಹೇಳಿದೆ.

ಅಮೆರಿಕ ಇಸ್ರೇಲ್ ಪರ ವಕಾಲತ್ತು ವಹಿಸಿದರೂ, ವಿಶ್ವಸಂಸ್ಥೆಯ ತಜ್ಞರು ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಇಸ್ರೇಲ್ ಮೇಲೆ ನರಮೇಧದ ಆರೋಪ ಹೊರಿಸಿವೆ. ಗಾಝಾದಲ್ಲಿ ಕನಿಷ್ಠ 72,000 ಪ್ಯಾಲೆಸ್ತೀನಿಯರ ಹತ್ಯೆ ಮಾಡಲಾಗಿದೆ ಮತ್ತು ಅಲ್ಲಿನ ಬಹುತೇಕ ಸಂಪೂರ್ಣ ಜನಸಂಖ್ಯೆಯನ್ನು ಸ್ಥಳಾಂತರಗೊಳ್ಳುವಂತೆ ಅಥವಾ ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ಈ ಗುಂಪುಗಳು ದೂರಿವೆ.

ಇಸ್ರೇಲ್ ಪರ ವಕಾಲತ್ತು ವಹಿಸಿರುವ ಅಮೆರಿಕ, ಯಾವುದನ್ನಾದರೂ ನರಮೇಧ ಎಂದು ಕರೆಯಬೇಕಾದರೆ, ಒಂದು ನಿರ್ದಿಷ್ಟ ಗುಂಪಿನ ಜನರನ್ನು ಪೂರ್ತಿಯಾಗಿ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ನಾಶಪಡಿಸುವ ಉದ್ದೇಶ ಇತ್ತು ಎಂಬುವುದು ಸಾಬೀತಾಗಬೇಕು ಎಂದಿದೆ.

ಯುದ್ಧದ ಸಮಯದಲ್ಲಿ ಸಾಮಾನ್ಯ ಜನರು ಸಾವನ್ನಪ್ಪುವುದು ಸಹಜ. ಅಂತಹ ಸಾವುಗಳು ಸಂಭವಿಸಿದ ತಕ್ಷಣ ಅದನ್ನು ನರಮೇಧ ಎನ್ನಲು ಬರುವುದಿಲ್ಲ ಎಂದು ಪ್ರತಿಪಾದಿಸಿದೆ.

ಜನರನ್ನು ಕೊಲ್ಲುವುದು ಇಸ್ರೇಲ್‌ನ ಮುಖ್ಯ ಗುರಿಯಾಗಿತ್ತು ಎಂದು ಖಚಿತವಾಗಿ ಸಾಬೀತುಪಡಿಸದ ಹೊರತು, ಅದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬುವುದು ಅಮೆರಿಕದ ವಾದವಾಗಿದೆ.

ನರಮೇಧದಂತಹ ದೊಡ್ಡ ಆರೋಪ ಮಾಡುವಾಗ ನ್ಯಾಯಾಲಯವು ಸಾಧಾರಣ ಸಾಕ್ಷ್ಯಗಳನ್ನು ನಂಬಬಾರದು, ಬದಲಿಗೆ ಅತ್ಯಂತ ಪ್ರಬಲವಾದ ಮತ್ತು ಕಟ್ಟುನಿಟ್ಟಾದ ಸಾಕ್ಷ್ಯಗಳನ್ನು ಕೇಳಬೇಕು. ಒಂದು ದೇಶದ ನಡವಳಿಕೆಯನ್ನು ನೋಡಿದಾಗ, ‘ಇವರು ಜನರನ್ನು ನಾಶಪಡಿಸಲೆಂದೇ ಹೀಗೆ ಮಾಡುತ್ತಿದ್ದಾರೆ’ ಎಂಬ ತೀರ್ಮಾನಕ್ಕೆ ಬರಲು ಬೇರೆ ಯಾವುದೇ ಕಾರಣಗಳು ಇಲ್ಲದಿದ್ದಾಗ ಮಾತ್ರ ಅದನ್ನು ನರಮೇಧ ಎಂದು ಕರೆಯಬೇಕು. ಇಸ್ರೇಲ್‌ನ ಕ್ರಮಗಳು ಕೇವಲ ಯುದ್ಧದ ಭಾಗವಾಗಿರದೆ, ಒಂದು ಜನಾಂಗವನ್ನು ಮುಗಿಸುವ ಸಂಚು ಎಂಬುವುದು ಪಕ್ಕಾ ಸಾಬೀತಾಗಬೇಕು ಎಂದು ಅಮೆರಿಕದ ಹೇಳಿದೆ.

ನರಮೇಧದ ಆರೋಪಗಳನ್ನು ಪರಿಶೀಲಿಸುವಾಗ, ಅಲ್ಲಿ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅಮೆರಿಕ ಒತ್ತಿ ಹೇಳಿದೆ. ನಗರಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಯುದ್ಧ ನಡೆಯುವಾಗ ನಾಗರಿಕರಿಗೆ ಹಾನಿಯಾಗುವುದು ಸಹಜ. ಅಂತಹ ಸಾವುಗಳು ಸಂಭವಿಸಿದ ತಕ್ಷಣ ಅದನ್ನು ನರಮೇಧ ಮಾಡುವ ಉದ್ದೇಶ ಎಂದು ಕರೆಯಲು ಬರುವುದಿಲ್ಲ. ಯುದ್ಧದಲ್ಲಿ ‘ಪಕ್ಷಪಾತವಿಲ್ಲದ ದಾಳಿ’ ಮತ್ತು ‘ಅಗತ್ಯಕ್ಕೆ ತಕ್ಕಷ್ಟು ಬಲಪ್ರಯೋಗ’ ಎಂಬ ನಿಯಮಗಳಿವೆ. ಇಸ್ರೇಲ್ ಈ ನಿಯಮಗಳ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ ಹೊರತು, ಜನರನ್ನು ನಾಶಪಡಿಸುವ ಉದ್ದೇಶದಿಂದಲ್ಲ ಎಂದು ಅಮೆರಿಕ ವಾದಿಸಿದೆ.

ನರಮೇಧ ಆರೋಪದ ಪ್ರಮುಖ ನಿಯಮಗಳನ್ನು (ವಿಧಿ 1, 2 ಮತ್ತು 3) ನ್ಯಾಯಾಲಯವು ಹೇಗೆ ಅರ್ಥೈಸಬೇಕು ಎಂಬುವುದರ ಮೇಲೆ ಪ್ರಭಾವ ಬೀರಲು ಅಮೆರಿಕ ಪ್ರಯತ್ನಿಸುತ್ತಿದೆ. ನರಮೇಧ ಎಂದರೇನು? ಅದನ್ನು ಹೇಗೆ ನಿರ್ಧರಿಸಬೇಕು? ಮತ್ತು ಅದಕ್ಕೆ ಯಾವ ಪುರಾವೆಗಳು ಬೇಕು? ಎಂಬ ವಿಷಯಗಳಲ್ಲಿ ಇಸ್ರೇಲ್‌ಗೆ ಅನುಕೂಲವಾಗುವಂತೆ ಕಾನೂನು ವಿವರಣೆ ನೀಡಲು ಅಮೆರಿಕ ಮುಂದಾಗಿದೆ. ನರಮೇಧವನ್ನು ಅಪರಾಧ ಎಂದು ಪರಿಗಣಿಸುವ ಮಾನದಂಡಗಳನ್ನು ಹೆಚ್ಚು ಕಠಿಣಗೊಳಿಸುವುದು ಅಮೆರಿಕದ ಉದ್ದೇಶವಾಗಿದೆ, ಇದರಿಂದ ಇಸ್ರೇಲ್ ಮೇಲಿನ ಆರೋಪಗಳು ಸಾಬೀತಾಗುವುದು ಕಷ್ಟವಾಗುತ್ತದೆ.

ಪ್ರಕರಣದಲ್ಲಿ ಜಾಗತಿಕ ಪಾಲ್ಗೊಳ್ಳುವಿಕೆ

ಈ ಪ್ರಕರಣವು ಎಷ್ಟು ಮುಖ್ಯವಾಗಿದೆಯೆಂದರೆ, ವಿಶ್ವದ ಅನೇಕ ದೇಶಗಳು ಇದರಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿವೆ. ಕೊಲಂಬಿಯಾ, ಮೆಕ್ಸಿಕೋ, ಟರ್ಕಿ, ಸ್ಪೇನ್, ಐರ್ಲೆಂಡ್, ಬ್ರೆಝಿಲ್ ಮತ್ತು ಬೆಲ್ಜಿಯಂ ಸೇರಿದಂತೆ ಹಲವಾರು ರಾಷ್ಟ್ರಗಳು ಈಗಾಗಲೇ ಮಧ್ಯಪ್ರವೇಶದ ಅರ್ಜಿಗಳನ್ನು ಸಲ್ಲಿಸಿವೆ.

ಕಳೆದ ಕೆಲವು ತಿಂಗಳುಗಳಲ್ಲಿ ಈ ದೇಶಗಳು ತಮ್ಮ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಿವೆ. ಇದು ಕೇವಲ ಎರಡು ದೇಶಗಳ ನಡುವಿನ ಸಮಸ್ಯೆಯಾಗಿ ಉಳಿಯದೆ, ಇಡೀ ವಿಶ್ವದ ಗಮನ ಸೆಳೆದಿರುವ ಪ್ರಕರಣವಾಗಿದೆ.

ನ್ಯಾಯಾಲಯದ ನಿಯಮಗಳ ಪ್ರಕಾರ, ಹೊಸದಾಗಿ ಸಲ್ಲಿಕೆಯಾಗಿರುವ ಈ ಮಧ್ಯಪ್ರವೇಶದ ಅರ್ಜಿಗಳ ಕುರಿತು ತಮ್ಮ ಲಿಖಿತ ಅಭಿಪ್ರಾಯವನ್ನು ಸಲ್ಲಿಸುವಂತೆ ಇಸ್ರೇಲ್ ಮತ್ತು ದಕ್ಷಿಣ ಆಫ್ರಿಕಾ ಎರಡೂ ದೇಶಗಳಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಸೂಚಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆದೇಶಗಳನ್ನು ನೀಡಿದೆ.

ಜನವರಿ 2024ರಂದು ನರಮೇಧ ಎಂದು ಪರಿಗಣಿಸುವ ಯಾವುದೇ ಕೃತ್ಯಗಳು ನಡೆಯದಂತೆ ತಡೆಯಲು ಇಸ್ರೇಲ್‌ಗೆ ನ್ಯಾಯಾಲಯ ಸೂಚಿಸಿತ್ತು. ಗಾಝಾದ ಜನರಿಗೆ ತುರ್ತಾಗಿ ಅಗತ್ಯವಿರುವ ಮೂಲಭೂತ ಸೇವೆಗಳು ಮತ್ತು ಮಾನವೀಯ ಸಹಾಯವನ್ನು ಒದಗಿಸಲು ಇಸ್ರೇಲ್ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ಅಥವಾ ಸಾಕ್ಷ್ಯಗಳು ನಾಶವಾಗದಂತೆ ನೋಡಿಕೊಳ್ಳಲು ಮತ್ತು ಅವುಗಳನ್ನು ಸಂರಕ್ಷಿಸಲು ಸೂಚಿಸಿತ್ತು. ಈ ಆದೇಶಗಳನ್ನು ಜಾರಿಗೆ ತರಲು ತಾನು ಕೈಗೊಂಡ ಕ್ರಮಗಳ ಬಗ್ಗೆ ಒಂದು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಇಸ್ರೇಲ್‌ಗೆ ತಿಳಿಸಿತ್ತು.

ಇನ್ನು, ಇದು ಅತ್ಯಂತ ಸಂಕೀರ್ಣವಾದ ಪ್ರಕರಣವಾಗಿದ್ದು, ಅಂತಿಮ ತೀರ್ಪು ಹೊರಬರಲು ಹಲವು ವರ್ಷಗಳು (ಬಹುಶಃ 2028ರವರೆಗೆ) ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...