ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿನ್ನಲೆಯಲ್ಲಿ ದೆಹಲಿ ಬಿಜೆಪಿಯ ಮಾಜಿ ಶಾಸಕರೊಬ್ಬರು ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಅವರ ಪಕ್ಷದ ಪರವಾಗಿರುವ ರಿಪಬ್ಲಿಕನ್ ಹಿಂದೂ ಒಕ್ಕೂಟದೊಂದಿಗೆ ಆನ್‌ಲೈನ್ ಕಾರ್ಯಕ್ರಮ ಆಯೋಜಿಸಿದ್ದು ವಿವಾದವಾಗಿದೆ. ಅದಾಗ್ಯೂ ಬಿಜೆಪಿ ಇದರಿಂದ ಅಂತರ ಕಾಪಾಡಿಕೊಂಡಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ ಎಂದು ಹೇಳಿದೆ. ಟ್ರಂಪ್ ಪರವಾಗಿ ಸಭೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನವೆಂಬರ್ 5 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದರೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ವಿವಾದಿತ ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ರಿಪಬ್ಲಿಕನ್ ಹಿಂದೂ ಒಕ್ಕೂಟವನ್ನು 2015 ರಲ್ಲಿ ಹಿಂದೂ-ಅಮೇರಿಕನ್ ಸಮುದಾಯ ಮತ್ತು ರಿಪಬ್ಲಿಕನ್ ಪ್ರತಿನಿಧಿಗಳ ನಡುವಿನ “ವಿಶಿಷ್ಟ ಸೇತುವೆ” ಎಂದು ಸ್ಥಾಪಿಸಲಾಯಿತು.
ರಿಪಬ್ಲಿಕನ್ ಹಿಂದೂ ಒಕ್ಕೂಟದ ಅಧ್ಯಕ್ಷ ಶಲಭ್ ಕುಮಾರ್ ಅವರೊಂದಿಗೆ ದೆಹಲಿಯ ಮಾಜಿ ಶಾಸಕ ವಿಜಯ್ ಜಾಲಿ ಅವರು ಆಯೋಜಿಸುತ್ತಿರುವ ಆನ್‌ಲೈನ್ ಸಭೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಘಟಕದ ಮುಖ್ಯಸ್ಥ ವಿಜಯ್ ಚೌತೈವಾಲೆ ಬುಧವಾರ ಹೇಳಿದ್ದಾರೆ. ಟ್ರಂಪ್ ಪರವಾಗಿ ಸಭೆ
“ಬಿಜೆಪಿಯ ಹಿರಿಯ ನಾಯಕ ಎಂದು ಘೋಷಿತವಾಗಿರುವ ವಿಜಯ್ ಜಾಲಿ ಅವರು ಅಮೆರಿಕ ಚುನಾವಣೆಯ ಇಬ್ಬರು ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಬೆಂಬಲಿಸುವ ಆನ್‌ಲೈನ್ ಸಭೆಯನ್ನು ಆಯೋಜಿಸುತ್ತಿದ್ದಾರೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.” ಎಂದು ಚೌತೈವಾಲೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳು ಅಲ್ಲಿನ ಆಂತರಿಕ ವಿಷಯ ಎಂಬ ವಿಚಾರದಲ್ಲಿ ಬಿಜೆಪಿಗೆ “ಬಹಳ ಸ್ಪಷ್ಟ” ನಿಲುವಿದೆ. ಬಿಜೆಪಿ ಆ ದೇಶದಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ ಎಂದು ಚೌತೈವಾಲೆ ಅವರು ಹೇಳಿದ್ದಾರೆ.
ಇದನ್ನೂಓದಿ: ರಾಜ್ಯದ ಸ್ಥಾನಮಾನಕ್ಕೆ ಆಗ್ರಹಿಸುವುದು ನಮ್ಮ ಸಂಪುಟದ ಮೊದಲ ನಿರ್ಣಯ : ಉಮರ್ ಅಬ್ದುಲ್ಲಾ
ದೆಹಲಿಯ ಸಾಕೇತ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಜಾಲಿ ಅವರು ದ್ವಿಪಕ್ಷೀಯ ವೇದಿಕೆಯಾದ ದೆಹಲಿ ಸ್ಟಡಿ ಸರ್ಕಲ್‌ನ ಆಶ್ರಯದಲ್ಲಿ ಸಭೆಯನ್ನು ಆಯೋಜಿಸುತ್ತಿದ್ದಾರೆ ಎಂದು ದಿ ಹಿಂದೂಗೆ ತಿಳಿಸಿದ್ದಾರೆ. ಹೀಗಾಗಿ ಬಿಜೆಪಿಗೂ ಅಥವಾ ಅಮೆರಿಕದ ಯಾವುದೇ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.
“ಇದಲ್ಲದೆ, ಶಲಭ್ ಕುಮಾರ್ ಅವರು ದೀರ್ಘಕಾಲದವರೆಗೆ ಬಿಜೆಪಿಗೆ ಪರಿಚಿತರಾಗಿದ್ದಾರೆ. ಅವರು ಅಮೆರಿಕಾದಲ್ಲಿ ಗುಜರಾತ್‌ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಾಲ್ವರು ರಿಪಬ್ಲಿಕನ್ ಸಂಸದರ ಭೇಟಿಯನ್ನು ಏರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು” ಅವರು ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
“ಆ ಸಮಯದಲ್ಲಿ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ತೆಗೆದುಕೊಂಡ ಧೋರಣೆ ಹೊರತಾಗಿಯೂ ಈ ರಿಪಬ್ಲಿಕನ್ ಸಂಸದರು ಮೋದಿ ಅವರಿಗೆ ಆಹ್ವಾನವನ್ನು ನೀಡಿದ್ದರು.” ಎಂದು ಅವರು ಹೇಳಿದ್ದಾರೆ. 2002ರ ಗುಜರಾತ್ ಗಲಭೆಯ ಕಾರಣಕ್ಕೆ 2005 ರಲ್ಲಿ, ಅಮೆರಿಕಾ ಸರ್ಕಾರವು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ರಾಜತಾಂತ್ರಿಕ ವೀಸಾವನ್ನು ನಿರಾಕರಿಸಿತ್ತು.
ವಿಡಿಯೊನೋಡಿ: ‘ರಾಷ್ಟ್ರೀಯ ವಿಜ್ಞಾನ ದಿನ’ ಪ್ರಯುಕ್ತ ವಿಚಾರ ಕ್ರಾಂತಿ-ರಾಜ್ಯಮಟ್ಟದ ಸಮಾವೇಶ


