Homeಅಂತರಾಷ್ಟ್ರೀಯಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ...

ಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ ಮೋದಿ ಸರ್ಕಾರ ಮೌನ!

- Advertisement -
- Advertisement -

ಭಾರತದಿಂದ ಕೇವಲ 300 ಕಿಲೋ ಮೀಟರ್ ದೂರದಲ್ಲಿ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ‘ಐಆರ್‌ಐಎಸ್ ದೆನಾ’ ಮೇಲೆ ಅಮೆರಿಕ ಜಲಾಂತರ್ಗಾಮಿ ಬುಧವಾರ (ಮಾ.4) ಭೀಕರ ದಾಳಿ ನಡೆಸಿದೆ.

ಈ ಘಟನೆಯಲ್ಲಿ ಇರಾನ್‌ ನೌಕೆಯಲ್ಲಿದ್ದ 180 ಸಿಬ್ಬಂದಿಯ ಪೈಕಿ ಇದುವರೆಗೆ 87 ಮಂದಿಯ ಶವಗಳನ್ನು ಶ್ರೀಲಂಕಾದ ನೌಕಾಪಡೆಯು ಸಮುದ್ರದಿಂದ ಹೊರತೆಗೆದಿದೆ. 32 ಮಂದಿಯನ್ನು ಶ್ರೀಲಂಕಾ ನೌಕಾಪಡೆ ಯಶಸ್ವಿಯಾಗಿ ರಕ್ಷಿಸಿದ್ದು, ಅವರಿಗೆ ಗಾಲೆ ನಗರದ ಕಾರಪಿಟಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಸುಮಾರು 61 ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ.

ಶ್ರೀಲಂಕಾದ ದಕ್ಷಿಣ ಕರಾವಳಿಯ ಗಾಲೆ ನಗರದಿಂದ ಸುಮಾರು 40 ನಾಟಿಕಲ್ ಮೈಲಿ (ಸುಮಾರು 74 ಕಿ.ಮೀ.) ದೂರದಲ್ಲಿರುವ ಹಿಂದೂ ಮಹಾಸಾಗರದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಇದು ತಮಿಳುನಾಡಿನ ಕನ್ಯಾಕುಮಾರಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿದೆ ಎಂದು ವರದಿಯಾಗಿದೆ.

ಭಾರತದ ಆರ್ಥಿಕ ವಲಯದ (ಐಇಝೆಡ್‌) ಹೊರಗೆ ಈ ದಾಳಿ ನಡೆದಿದ್ದರೂ, ದೇಶದ ಅತ್ಯಂತ ಸಮೀಪದ ಜಲಪ್ರದೇಶದಲ್ಲಿ ಇಂತಹ ಸಂಘರ್ಷ ಸಂಭವಿಸಿರುವುದು ಭಾರತದ ಭದ್ರತಾ ದೃಷ್ಟಿಯಿಂದ ಕಳವಳಕಾರಿಯಾಗಿದೆ.

ಈ ದೊಡ್ಡ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ಮೌನ ಪಾಲಿಸಿದೆ. ಇದು ರಾಜಕೀಯ ನಾಯಕರು ಮತ್ತು ಸಾರ್ವಜನಿಕರ ತೀವ್ರ ಟೀಕೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೋದಿ ಸರ್ಕಾರದ ಮೌನದ ಬಗ್ಗೆ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು, “ಸಂಘರ್ಷ ಭಾರತದ ಹಿತ್ತಲಿಗೆ (ಹಿಂದೂ ಮಹಾಸಾಗರ) ಬಂದಿದ್ದರೂ ಪ್ರಧಾನಿ ಮೌನವಾಗಿರುವುದು ‘ಆಘಾತಕಾರಿ” ಎಂದಿದ್ದಾರೆ. “ಪ್ರಧಾನಿಯವರು ದೇಶದ ಕಾರ್ಯತಂತ್ರದ ಸ್ವಾಯತ್ತತೆಯನ್ನು ರಾಜಿ ಮಾಡಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

“ನಮ್ಮ ಮನೆಗೆ ಆಮಂತ್ರಿಸಿ ಕರೆದಿದ್ದ ಅತಿಥಿ ಹಡಗು ಹಿಂದಿರುಗುವಾಗ ಅದರ ಮೇಲೆ ದಾಳಿಯಾದರೂ ಮೋದಿ ಸರ್ಕಾರ ಮೌನವಾಗಿರುವುದು ರಾಷ್ಟ್ರೀಯ ಹಿತಾಸಕ್ತಿಯ ಅಧಃಪತನ” ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಅವರು, “ಇದು ಇತಿಹಾಸದಲ್ಲೇ ಅತ್ಯಂತ ‘ಹೇಡಿ ಮತ್ತು ಭಯಭೀತ’ ಸರ್ಕಾರ” ಎಂದಿದ್ದಾರೆ.

“ಭಾರತ ವಿದೇಶಿ ಶಕ್ತಿಗಳಿಗೆ ಗುಲಾಮನಂತಾಗಿದೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಈ ದಾಳಿಯಿಂದ ಗಲ್ಫ್ ವಲಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಭಾರತದ 40% ತೈಲ ಮತ್ತು ಅನಿಲ ಪೂರೈಕೆಗೆ ಧಕ್ಕೆಯಾಗುವ ಆತಂಕವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

ಇದು ಮಾತ್ರವಲ್ಲದೆ, ಕಳೆದ ವಾರ ನಡೆದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆಯ ಬಗ್ಗೆಯೂ ಭಾರತ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಏಕೆಂದರೆ, ಭಾರತ ಐತಿಹಾಸಿಕವಾಗಿ ಇರಾನ್ ಜೊತೆ ಉತ್ತಮ ಸಂಬಂಧವನ್ನು ಹೊಂದಿರುವ ರಾಷ್ಟ್ರವಾಗಿದೆ. ಒಂದು ರೀತಿಯಲ್ಲಿ ಭಾರತ ಮತ್ತು ಇರಾನ್ ಆಪ್ತ ಸ್ನೇಹಿತರು ಎಂದು ಹೇಳಬಹುದು. ಹೀಗಿರುವಾಗ ಕೇಂದ್ರದ ಮೌನ ಪ್ರಶ್ನಾರ್ಹವಾಗಿದೆ.

ಮೃತ ನೌಕಾ ಸಿಬ್ಬಂದಿ ಭಾರತದ ಅತಿಥಿಗಳು

ಅಮೆರಿಕ ದಾಳಿಯಿಂದ ಸಾವಿಗೀಡಾದ ಇರಾನ್‌ ನೌಕಾ ಸಿಬ್ಬಂದಿ ಭಾರತ ಅತಿಥಿಗಳು. ಆಂಧ್ರ ಪ್ರದೇಶ ವಿಶಾಖಪಟ್ಟಣಂನಲ್ಲಿ ನಡೆದ ಬಹುರಾಷ್ಟ್ರೀಯ ನೌಕಾಪಡೆಯ ಸಮರಭ್ಯಾಸದಲ್ಲಿ ಪಾಲ್ಗೊಳ್ಳಲು ಇವರು ಭಾರತಕ್ಕೆ ಆಗಮಿಸಿದ್ದರು.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು, ಐಆರ್‌ಐಎಸ್‌ ದೆನಾ ನೌಕೆಯು ಭಾರತೀಯ ನೌಕಾಪಡೆಯ ಅತಿಥಿಯಾಗಿ ವಿಶಾಖಪಟ್ಟಣಂನ ‘ಮಿಲನ್ 2026’ ಕವಾಯತಿನಲ್ಲಿ ಭಾಗವಹಿಸಿತ್ತು. ಇಂತಹ ಅತಿಥಿ ನೌಕೆಯ ಮೇಲೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ದಾಳಿ ಮಾಡಿರುವುದು ಅಮಾನವೀಯ ಎಂದು ಹೇಳಿದ್ದಾರೆ.

ಭಾರತ ಸರ್ಕಾರದ ಮೂಲಗಳ ಪ್ರಕಾರ, ಈ ನೌಕೆಯು ಫೆಬ್ರವರಿ 16 ರಿಂದ ಫೆಬ್ರವರಿ 25 ರವರೆಗೆ ಮಾತ್ರ ಭಾರತದ ಅಧಿಕೃತ ಅತಿಥಿಯಾಗಿತ್ತು. ಕವಾಯತು ಮುಗಿಸಿ ಫೆಬ್ರವರಿ 25 ರಂದೇ ಅದು ಭಾರತದ ಜಲಪ್ರದೇಶವನ್ನು ತೊರೆದಿದ್ದರಿಂದ, ದಾಳಿ ನಡೆದ ಸಮಯದಲ್ಲಿ (ಮಾರ್ಚ್ 4) ಅದು ತಾಂತ್ರಿಕವಾಗಿ ಭಾರತದ ಅತಿಥಿಯಾಗಿರಲಿಲ್ಲ ಎಂಬುದು ಸರ್ಕಾರದ ವಾದವಾಗಿದೆ ಎಂದು ವರದಿಯಾಗಿದೆ.

ಇಸ್ಲಾಮಿಕ್ ರೆವೆಲ್ಯೂಷನ್‌ ವರ್ಷಾಚರಣೆಗೆ ಶುಭಾಷಯ ತಿಳಿಸಿದ್ದ ಕೇಂದ್ರ ಈಗ ಮೌನ!

ಗಮನಾರ್ಹವಾಗಿ, ಇರಾನ್‌ನ ಇಸ್ಲಾಮಿಕ್ ರೆವೆಲ್ಯೂಷನ್‌ನ 47ನೇ ವರ್ಷಾಚರಣೆಯ ದಿನದಂದು, ಅಂದರೆ ಫೆಬ್ರವರಿ 11, 2026ರಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ಸರ್ಕಾರ ಮತ್ತು ಅಲ್ಲಿನ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದರು.

ಆದರೆ, ಇದೇ ಫೆಬ್ರವರಿ ಅಂತ್ಯಕ್ಕೆ ಅಂದರೆ 28ಕ್ಕೆ ನಡೆದ ಇರಾನ್ ಮೇಲಿನ ದಾಳಿ, ಮತ್ತು ಅಲ್ಲಿನ ಸರ್ವೋಚ್ಚ ನಾಯಕನ ಹತ್ಯೆ ಹಾಗೂ ಈಗ ಭಾರತದ ಕಾಲ ಬುಡದಲ್ಲೇ ನಡೆದಿರುವ ನೌಕೆ ಮೇಲಿನ ದಾಳಿಯ ಬಗ್ಗೆ ಭಾರತ ಮೌನ ವಹಿಸಿರುವುದು ಜನರನ್ನು ಆಶ್ಚರ್ಯಗೊಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಂಧ್ರ ಪ್ರದೇಶ | ಟಿಪ್ಪರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್ : 14 ಮಂದಿ ಸಜೀವ ದಹನ

ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ 14 ಜನರು ಸಜೀವ ದಹನವಾದ ಘಟನೆ ಆಂಧ್ರ ಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ (ಮಾ.26) ಸಂಭವಿಸಿದೆ ಎಂದು...

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...