ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಸ್ಪೃಶ್ಯತೆಯನ್ನು ಸಮರ್ಥಿಸುವ ರೀತಿಯಲ್ಲಿ ‘ಇಬ್ರಾಹಿಂ ಏಕೆ ಸಿಎಂ ಆಗಬಾರದು, ಅವರೇನು ಅಸ್ಪೃಶ್ಯರಲ್ಲ’ ಎಂದಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ದೂರು ದಾಖಲಾಗಿದೆ.
ಲಕ್ಷ್ಮೀಪತಿ, ರಾಜು ಸಣ್ಣಕ್ಕಿ, ಗೊಳ್ಯ ಹನುಮಣ್ಣ ಸೇರಿದಂತೆ ಹಲವು ಛಲವಾದಿ ಮಹಾಸಭಾ ಮತ್ತು ದಲಿತ ಸಂಘಟನೆಗಳ ಮುಖಂಡರು ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀಪತಿಯವರು, “ನವೆಂಬರ್ 27 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಸಿ.ಎಂ ಇಬ್ರಾಹಿಂ ಅಸ್ಪೃಶ್ಯರಲ್ಲ ಎಂಬ ಪದ ಬಳಕೆ ಮಾಡಿದ್ದಾರೆ. ಇದು ಅವಹೇಳನಕಾರಿ ಮತ್ತು ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ಇಂತಹ ಹೇಳಿಕೆ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ಸಾಬೀತು ಮಾಡಿದೆ. ಹಾಗಾಗಿ ಅವರು ದಲಿತ ಸಮುದಾಯದ ಎದುರು ಬೇಷರತ್ ಕ್ಷಮೆ ಕೇಳಬೇಕೆಂದು” ಆಗ್ರಹಿಸಿದರು.
ಜೆಡಿಎಸ್ ಪಕ್ಷವು ಜಾತ್ಯಾತೀತ ಎಂದು ಹೇಳಿಕೊಳ್ಳುತ್ತದೆ. ಆದರೆ ಜಾತೀಯತೆಯನ್ನು ಸಮರ್ಥಿಸುತ್ತದೆ. ಅದು ಜಾತಿವಾದಿ ಎಂದು ಹೆಸರು ಬದಲಿಸಿಕೊಂಡರೆ ಉತ್ತಮ ಎಂದು ಅವರು ಕಿಡಿಕಾರಿದರು.
ಕಳೆದ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ವ್ಯಕ್ತಿಯನ್ನು ಸಿಎಂ ಮಾಡುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳೀಕೆ ನೀಡಿದ್ದರು. ಈ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಕುಮಾರಸ್ವಾಮಿಯವರು “ನಾವು ಮುಸ್ಲಿಂ ಮತಗಳನ್ನು ಪಡೆಯುವುದಕ್ಕಾಗಿ ಮಾತನಾಡುತ್ತಿಲ್ಲ. ಇತ್ತೀಚೆಗೆ ನಮ್ಮ ಪಕ್ಷದ ಅಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು ಒಂದೆರೆಡು ವರ್ಷಗಳಲ್ಲಿ ಕುಮಾರಸ್ವಾಮಿಯವರು ಕೇಂದ್ರಕ್ಕೆ ತೆರಳಿದರೆ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ 5 ವರ್ಷ ನಾನು ನಮ್ಮ ಐದು ಅಂಶಗಳ ಕುರಿತು ಗಮನ ವಹಿಸುತ್ತೇವೆ. ಆದರೆ ಎರಡೂ ಮೂರು ವರ್ಷದಲ್ಲಿ ದೆಹಲಿಯ ನಮ್ಮ ಸ್ನೇಹಿತರು ಉನ್ನತ ಸ್ಥಾನಮಾನ ಕೊಡುವುದಾಗಿ ಕೇಂದ್ರಕ್ಕೆ ಕರೆದರೆ, ಅಂತ ಸಂದರ್ಭ ಬಂದರೆ ಹೋಗುತ್ತೇನೆ. ಅಂತ ಸಂದರ್ಭದಲ್ಲಿ ಇಬ್ರಾಹಿಂರವರು ಏಕೆ ಸಿಎಂ ಆಗಬಾರದು? ಅವರೇನು ಅಸ್ಪೃಶ್ಯರಲ್ಲ (He is not an Untouchable Man)” ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ತರಗತಿಯಲ್ಲಿ ಇಸ್ಲಾಮೋಫೋಬಿಯಾ ಹರಡಲು ಯತ್ನಿಸಿದ ಪ್ರಾಧ್ಯಾಪಕನಿಗೆ ಕ್ಲಾಸ್ ತೆಗೆದುಕೊಂಡ ವಿದ್ಯಾರ್ಥಿ



ಅಸ್ಪ್ರಶ್ಯ ಅಥವಾ ಅಸ್ಪ್ರಶ್ಯರಲ್ಲ ಎಂಬ ಶಬ್ದ ಯಾರಾದರೊಬ್ಬರು ಬಳಸಿದರೆ ಅದು ಹೇಗೆ ಯಾರಿಗಾದರೂ ಅಪಮಾನದ ವಿಷಯವಾಗಲು ಸಾಧ್ಯ. ಅಸ್ಪ್ರಶ್ಯತೆ ಯ ಆಚರಣೆ ಕಾನೂನು ಬಾಹಿರ ಹೊರತು, ಅಸ್ಪ್ರಶ್ಯ ಎಂಬ ಪದ ಅಲ್ಲ.
ಹಾಗಿದ್ದರೆ ದಲಿತರನ್ನು ಏಕೆ ಅಸ್ಪೃಶ್ಯರು ಅಂತ ಅನ್ನುತ್ತಾರೆ ಇಲ್ಲಿ ಇಬ್ರಾಹಿಮಿಗೆ ಅವರೇನು ಅಸ್ಪೃಶ್ಯ ಅಂತ ಹೇಳುವಾಗ ಅಲ್ಲಿ ಅಸ್ಪೃಶ್ಯ ಅಂದ್ರೆ ದಲಿತರು ಎಂಬ ಪದವನ್ನು ಅತಿರೇಕವಾಗಿ ಬಳಸಿದೆ ಎಂದರ್ಥ ಇದು ಅರ್ಥ ಮಾಡಿದವರಿಗೆ ಮಾತ್ರ ಗೊತ್ತಾಗುತ್ತೆ, ಸುಮ್ಸುಮ್ನೆ ಪ್ರಶ್ನೆ ಮಾಡುವವರಿಗೆ ಗೊತ್ತಾಗಲ್ಲ ದಲಿತರನ್ನು ಕೀಳಾಗಿ ಕಾಣುವಂತ ಇನ್ನೊಂದು ರೀತಿ ಪದೇ ಪದೇ ಅಸ್ಪೃಶ್ಯತೆ ಯನ್ನು ಬಳಸುವುದು
ದಲಿತ ವಿರೋಧಿಗಳಿಗೆ ಮತ ಹಾಕಬೇಡಿ ಮುಂದೆ ಇವರಿಂದ ತೊಂದರೆ ಇದೆ ಉತ್ತಮ ವ್ಯಕ್ತಿತ್ವ ಇರುವವರಿಗೆ ಮಾತ್ರ ಮತದಾನ ಮಾಡಿ.ಯೋಚಿಸಿ ನಾಯಕರನ್ನು ಆಯ್ಕೆ ಮಾಡಿ 🙏🙏🙏🙏