Homeಮುಖಪುಟಅಮೆರಿಕಾದ ಶೇ. 50ರಷ್ಟು ಸುಂಕದಿಂದ ಉಭಯ ದೇಶಗಳ ವ್ಯಾಪಾರಕ್ಕೆ ಹೊಡೆತ: ಬ್ರೆಜಿಲ್‌ನ ಭಾರತ ರಾಯಭಾರಿ

ಅಮೆರಿಕಾದ ಶೇ. 50ರಷ್ಟು ಸುಂಕದಿಂದ ಉಭಯ ದೇಶಗಳ ವ್ಯಾಪಾರಕ್ಕೆ ಹೊಡೆತ: ಬ್ರೆಜಿಲ್‌ನ ಭಾರತ ರಾಯಭಾರಿ

- Advertisement -
- Advertisement -

ನವದೆಹಲಿ: ಅಮೆರಿಕವು ಬ್ರೆಜಿಲ್ ಮತ್ತು ಭಾರತದಂತಹ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಶೇ. 50ರಷ್ಟು ಸುಂಕವನ್ನು ಹೇರಿದ ಬೆನ್ನಲ್ಲೇ, ಈ ಕ್ರಮಗಳು ಜಾಗತಿಕ ವ್ಯಾಪಾರಕ್ಕೆ ಗಂಭೀರ ಸವಾಲುಗಳನ್ನು ಒಡ್ಡಲಿವೆ ಎಂದು ಭಾರತದಲ್ಲಿನ ಬ್ರೆಜಿಲ್ ರಾಯಭಾರಿ ಕೆನೆತ್ ಫೆಲಿಕ್ಸ್ ಹಾಕ್ಝಿನ್ಸ್ಕಿ ಡಾ.ನೋಬ್ರೆಗಾ ಶನಿವಾರ ಎಚ್ಚರಿಸಿದ್ದಾರೆ. ಈ ಸುಂಕಗಳು ಬ್ರೆಜಿಲ್‌ನ ವ್ಯಾಪಾರದ ಮೇಲೆ “ಖಂಡಿತವಾಗಿ ಪರಿಣಾಮ ಬೀರುತ್ತವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರವು ಜಾಗತಿಕ ವ್ಯಾಪಾರ ಪರಿಸರದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಬ್ರೆಜಿಲ್‌ನೊಂದಿಗಿನ ಸುದೀರ್ಘ ಸಂಬಂಧದ ಬಗ್ಗೆ ಮಾತನಾಡಿದ ರಾಯಭಾರಿ, “ಅಮೆರಿಕದೊಂದಿಗಿನ ನಮ್ಮ 200 ವರ್ಷಗಳ ಹಳೆಯ ವ್ಯಾಪಾರ ಸಂಬಂಧಕ್ಕೆ ಈ ಸುಂಕಗಳು ಧಕ್ಕೆ ತರಲಿವೆ. ಆದರೆ, ನಮ್ಮ ಎರಡೂ ದೇಶಗಳ ಸಮಾಜಗಳ ನಡುವಿನ ಬಾಂಧವ್ಯವು ವ್ಯವಹಾರ, ಜನ ಮತ್ತು ಸಂಸ್ಕೃತಿಯ ಮೂಲಕ ಆಳವಾಗಿ ಬೇರೂರಿದೆ, ಮತ್ತು ಅದು ಮುಂದುವರಿಯುತ್ತದೆ,” ಎಂದು IANS ಜೊತೆಗಿನ ಸಂದರ್ಶನದಲ್ಲಿ ತಿಳಿಸಿದರು.

ಈ ಸುಂಕದ ಕುರಿತು ಭಾರತದ ಪರಿಸ್ಥಿತಿಯನ್ನೂ ಉಲ್ಲೇಖಿಸಿದ ಅವರು, ಅಮೆರಿಕವು ಭಾರತದ ಆಮದುಗಳ ಮೇಲೆ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸಿದ್ದು, ಒಟ್ಟು ಸುಂಕದ ಪ್ರಮಾಣ ಶೇ. 50ಕ್ಕೆ ಏರಿದೆ. ಇದು ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರ ಪೈಕಿ ಅತ್ಯಂತ ಹೆಚ್ಚಿನ ಸುಂಕವಾಗಿದೆ. ಭಾರತದ ವಿರುದ್ಧದ ಈ ಕ್ರಮಕ್ಕೆ ರಷ್ಯಾದಿಂದ ತೈಲ ಆಮದು ಮುಂದುವರೆಸಿರುವುದನ್ನು ಕಾರಣ ಎಂದು ಹೇಳಲಾಗಿದ್ದು, ಬ್ರೆಜಿಲ್ ಮೇಲಿನ ಸುಂಕಕ್ಕೆ ಅಲ್ಲಿನ ರಾಜಕೀಯ ಬೆಳವಣಿಗೆಗಳು ಕಾರಣ ಎಂದು ವರದಿಯಾಗಿದೆ. ಈ ಪರಿಸ್ಥಿತಿಯು ಜಾಗತಿಕ ವ್ಯಾಪಾರ ವ್ಯವಸ್ಥೆಗೆ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಬ್ರೆಜಿಲ್ ನಾಯಕರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ರಾಯಭಾರಿ ಹೇಳಿದರು.

ಬ್ರೆಜಿಲ್ ಅಧ್ಯಕ್ಷ ಲೂಲಾ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡುವಿನ ಇತ್ತೀಚಿನ ಮಾತುಕತೆಯನ್ನು ಡಾ ನೋಬ್ರೆಗಾ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. “ಅಧ್ಯಕ್ಷ ಲೂಲಾ ಅವರು ಪ್ರಧಾನಮಂತ್ರಿ ಮೋದಿಗೆ ಕರೆ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಬಗ್ಗೆ ಚರ್ಚಿಸಿದರು. ಇಂತಹ ಏಕಪಕ್ಷೀಯ ನಿರ್ಧಾರಗಳಿಂದಾಗಿ ಜಾಗತಿಕ ವ್ಯಾಪಾರ ಅನಿರೀಕ್ಷಿತವಾಗಿದೆ. ಈ ಸವಾಲುಗಳನ್ನು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಹೊಸ ಅವಕಾಶಗಳಾಗಿ ಪರಿವರ್ತಿಸುವುದು ಅವರ ಸಂಭಾಷಣೆಯ ಮುಖ್ಯ ಉದ್ದೇಶವಾಗಿತ್ತು,” ಎಂದು ಅವರು ವಿವರಿಸಿದರು. ಪ್ರಧಾನಿಯವರ ಇತ್ತೀಚಿನ ಬ್ರೆಜಿಲ್ ಭೇಟಿಯಲ್ಲಿ ಉಭಯ ನಾಯಕರು ಮುಂದಿನ ದಶಕದ ಆರ್ಥಿಕ ಸಂಬಂಧಗಳಿಗೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಿದ್ದಾರೆ ಎಂದು ಅವರು ತಿಳಿಸಿದರು.

ಅಮೆರಿಕದ ಸುಂಕಗಳಿಗೆ ಪ್ರತಿಕ್ರಿಯೆ ನೀಡುವ ವಿಷಯದಲ್ಲಿ, ಪ್ರತೀಕಾರದ ಕ್ರಮಗಳಿಗಿಂತ ಸಹಕಾರವೇ ಸೂಕ್ತ ಮಾರ್ಗ ಎಂದು ಡಾ ನೋಬ್ರೆಗಾ ಒತ್ತಿ ಹೇಳಿದರು. “ನಾವು ಯಾವುದೇ ದೇಶಕ್ಕೆ ಪ್ರತಿಕ್ರಿಯೆ ನೀಡುವ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಈ ಅನಿಶ್ಚಿತ ಭೌಗೋಳಿಕ-ರಾಜಕೀಯ ಸನ್ನಿವೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಬ್ರೆಜಿಲ್ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ನಾವು ಚರ್ಚಿಸಿದ್ದೇವೆ. ಇದು ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ವಿಷಯವಾಗಿದೆ,” ಎಂದು ಅವರು ಹೇಳಿದರು.

ಅಮೆರಿಕವು ಸುಂಕಗಳನ್ನು ಹಿಂಪಡೆಯಲು ಮುಂದಾಗದಿದ್ದರೆ ಬ್ರೆಜಿಲ್‌ನ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ರಾಯಭಾರಿ ಮಾತುಕತೆಗೆ ಬ್ರೆಜಿಲ್ ಸಿದ್ಧವಿದೆ ಎಂದು ದೃಢಪಡಿಸಿದರು, ಆದರೆ ಅದಕ್ಕೆ ಕೆಲವು ಮಿತಿಗಳಿವೆ ಎಂದು ಸ್ಪಷ್ಟಪಡಿಸಿದರು. “ನಾವು ಯಾವಾಗಲೂ ಮಾತುಕತೆಗೆ ಮುಕ್ತರಾಗಿದ್ದೇವೆ. ನಮ್ಮ ಸಾರ್ವಭೌಮತ್ವವು ಚರ್ಚೆಗೆ ಒಳಪಡುವುದಿಲ್ಲ. ಇದು ಬಹಳ ಸ್ಪಷ್ಟ. ಆದರೆ, ಅಮೆರಿಕದ ಆರ್ಥಿಕ ಕ್ರಮಗಳ ಬಗ್ಗೆ ನಾವು ಮುಕ್ತವಾಗಿ ಮಾತುಕತೆ ನಡೆಸುತ್ತೇವೆ. ಚರ್ಚಿಸಲಾಗದ ಕೆಲವು ವಿಷಯಗಳಿವೆ” ಎಂದು ಅವರು ಹೇಳಿದರು.

ಅಧ್ಯಕ್ಷ ಲೂಲಾ ಅವರು ವಿಶ್ವ ವ್ಯಾಪಾರ ಸಂಸ್ಥೆ (WTO) ಗೆ ಅಮೆರಿಕದ ಸುಂಕ ಕ್ರಮವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ ನೋಬ್ರೆಗಾ, ಬ್ರೆಜಿಲ್ ಅಂತರರಾಷ್ಟ್ರೀಯ ಕಾನೂನುಗಳಿಗೆ ಯಾವಾಗಲೂ ಬದ್ಧವಾಗಿದೆ ಎಂದು ತಿಳಿಸಿದರು. “WTO ಒಪ್ಪಂದಗಳು ಮತ್ತು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯು ನಮ್ಮ ಮೂಲಭೂತ ಚೌಕಟ್ಟಾಗಿದೆ. ಅಮೆರಿಕವು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ನಾವು ಅಧಿಕೃತ ಘೋಷಣೆಯನ್ನು ಸಲ್ಲಿಸಿದ್ದೇವೆ,” ಎಂದು ಅವರು ಹೇಳಿದರು.

ಅಂತಿಮವಾಗಿ, ಅಮೆರಿಕದ ನಿಲುವಿನ ಹಿಂದಿನ ಉದ್ದೇಶಗಳನ್ನು ಬ್ರೆಜಿಲ್ ಇನ್ನೂ ಪರಿಶೀಲನೆ ಮಾಡುತ್ತಿದೆ ಎಂದು ರಾಯಭಾರಿ ತಿಳಿಸಿದರು. “ನಾವು ಅಮೆರಿಕ ಸರ್ಕಾರದ ಈ ನಿಲುವಿನ ಹಿಂದಿನ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದೇವೆ. ನಮ್ಮ ಆರ್ಥಿಕತೆ ಮತ್ತು ಜಾಗತಿಕ ಸ್ಥಾನಮಾನದ ಮಹತ್ವವನ್ನು ಮಾತುಕತೆಯ ಸ್ವರ ಮತ್ತು ನಿಯಮಗಳು ಪ್ರತಿಬಿಂಬಿಸುವವರೆಗೆ, ನಾವು ಮಾತುಕತೆಗೆ ಮುಕ್ತರಾಗಿದ್ದೇವೆ,” ಎಂದು ಅವರು ತಮ್ಮ ಮಾತು ಮುಗಿಸಿದರು.

ಉತ್ತರಾಖಂಡ  ಮೇಘಸ್ಫೋಟಕ್ಕೆ ಧಾರ್ಮಿಕ ಅಸಹಿಷ್ಣುತೆಯೇ ಕಾರಣ?: ಮಾಜಿ ಸಂಸದ ಹಸನ್ ಹೇಳಿಕೆಗೆ ಭಾರಿ ವಿವಾದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...