ಲಖಿಂಪುರ ಖೇರಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಅವಧೇಶ್ ಸಿಂಗ್ ಮತ್ತು ಅವರ ಪತ್ನಿ, ಮಾಜಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷೆಯೂ ಆಗಿರುವ ಪುಷ್ಪಾ ಸಿಂಗ್ ವಿರುದ್ಧ ಬಿಜೆಪಿ ಶಾಸಕ ಯೋಗೇಶ್ ವರ್ಮಾ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಉತ್ತರ ಪ್ರದೇಶ
ಅವಧೇಶ್ ಸಿಂಗ್ ಅವರ ಇಬ್ಬರು ಸಹಚರರಾದ ಸಂಗ್ರಾಮ್ ಸಿಂಗ್ ಮತ್ತು ನೀರಜ್ ಸಿಂಗ್ ಮತ್ತು ಮೂರು ಡಜನ್ ಗೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಸಹ ಈ ಘಟನೆಗೆ ಸಂಬಂಧಿಸಿದಂತೆ ಅರ್ಬನ್ ಕೋಆಪರೇಟಿವ್ ಬ್ಯಾಂಕ್ (ಯುಸಿಬಿ) ಬೋರ್ಡ್ ಚುನಾವಣೆಗೆ ಅದರ ಪ್ರಧಾನ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಂಗಳವಾರ ರಾತ್ರಿ ಕೊತ್ವಾಲಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಖೇರಿ ಕೊತ್ವಾಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಲಖಿಂಪುರಿ ಖೇರಿಯ ಬಿಜೆಪಿ ಶಾಸಕ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪಕ್ಷದ ಸದಸ್ಯರಾಗಿದ್ದ ಅವಧೇಶ್ ಸಿಂಗ್ ಮತ್ತು ಅವರ ಸಹಚರರನ್ನು ಬಿಜೆಪಿ ಅಮಾನತುಗೊಳಿಸಿದ ಐದು ದಿನಗಳ ನಂತರ ಈ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಚುನಾವಣಾ ಪೂರ್ವ ‘ಉಚಿತ ಭರವಸೆ’ ಪ್ರಶ್ನಿಸಿ ಅರ್ಜಿ | ಕೇಂದ್ರ ಸರ್ಕಾರ, ಚು. ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಅಕ್ಟೋಬರ್ 9 ರಂದು ಯುಸಿಬಿ ಬೋರ್ಡ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಅವಧೇಶ್ ಸಿಂಗ್ ಮತ್ತು ಪುಷ್ಪಾ ಸಿಂಗ್ ಅವರು ಬಿಜೆಪಿ ವ್ಯಾಪಾರಿ ಮಂಡಲ್ ಸೆಲ್‌ನ ಜಿಲ್ಲಾ ಸಂಚಾಲಕ ರಾಜು ಅಗರವಾಲ್ ಅವರ ನಾಮಪತ್ರವನ್ನು ಕಸಿದುಕೊಂಡಿದ್ದರು. ಈ ವೇಳೆ ಶಾಸಕನ ಮೇಲೆ ಕೂಡಾ ಹಲ್ಲೆ ನಡೆಸಿದ್ದಾರೆ ಎಂದು ದೂರು ಆರೋಪಿಸಿದೆ. ಅದೇ ವೇಳೆ ಅವರ ಚಿನ್ನದ ಸರವನ್ನೂ ಕಿತ್ತುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ.
ಅವಧೇಶ್ ಸಿಂಗ್ ಮತ್ತು ಅವರ ಪತ್ನಿ ತಮ್ಮ 30 ರಿಂದ 40 ಸಹಚರರೊಂದಿಗೆ ಸೇರಿ ಹಲವು ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಕಸಿದುಕೊಂಡಿದ್ದರು. ಈ ಬಗ್ಗೆ ಏನಾಯಿತು ಎಂದು ತಿಳಿದು ಪ್ರತಿಭಟಿಸಲು ತಾನು ಸ್ಥಳಕ್ಕೆ ತಲುಪಿದಾಗ, ಅವಧೇಶ್ ಸಿಂಗ್ ತನ್ನ ಮೇಲೆ ಹಲ್ಲೆ ನಡೆಸಿದ್ದು, ಅವರ ಸಹಚರರಾದ ಸಂಗ್ರಾಮ್ ಸಿಂಗ್ ಮತ್ತು ನೀರಜ್ ಸಿಂಗ್ ಅವರಿಗೆ ಹಿಂದಿನಿಂದ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರು ಮತ್ತು ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಇದೆಲ್ಲ ನಡೆದಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್ ನಾರಾಯಣ್ ಶುಕ್ಲಾ ಅವರು ಅವಧೇಶ್ ಸಿಂಗ್, ಪುಷ್ಪಾ ಸಿಂಗ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಯಾದವ್ ಮತ್ತು ಬಿಜೆಪಿ ಕಾರ್ಯಕರ್ತ ಜ್ಯೋತಿ ಶುಕ್ಲಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ವರ್ಮಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅವರಿಂದ ವಿವರಣೆ ಕೇಳಿದ್ದಾರೆ. ಭಾನುವಾರ ನಾಲ್ವರನ್ನು ಅಶಿಸ್ತು ಆರೋಪದ ಮೇಲೆ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.
ಇದನ್ನೂ ಓದಿ: ಇಶಾ ಫೌಂಡೇಶನ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಕಾನೂನನ್ನು ಜಾರಿಗೊಳಿಸುವಂತೆ ಕೋರಿ ಸುಪ್ರೀಂಕೋಟ್‌ಗೆ ಅರ್ಜಿ


