ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ದಿನೇ-ದಿನೇ ಹೆಚ್ಚಾಗುತ್ತಿದ್ದು, ಇದಕ್ಕೆ ಪುಷ್ಟಿ ನೀಡುವ ಮತ್ತೊಂದು ಅಂಕಿಅಂಶ ಬಿಡುಗಡೆಯಾಗಿದೆ. 2015 ಮತ್ತು 2019ರ ನಡುವೆ ಮಹಿಳೆಯರ ಮೇಲಿನ ದೌರ್ಜನ್ಯವು ಶೇ 51ಕ್ಕೆ ಏರಿಕೆಯಾಗಿದೆ ಎಂದು ಹದಿಹರೆಯದವರನ್ನೊಳಗೊಂಡ ಹೊಸ ಅಧ್ಯಯನದ ವರದಿ ಹೇಳಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಕೊನೆಗೊಳಿಸುವ ಸಲುವಾಗಿ ಅಂತಾರಾಷ್ಟ್ರೀಯ ದಿನಾಚರಣೆಯ ಹಿಂದಿನ ದಿನ ಈ ಸಂಶೋಧನೆಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯಗಳಲ್ಲಿ 19% ಹೆಚ್ಚಳ!
ದೇಶದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕಾರಣ ಈ ರಾಜ್ಯವನ್ನು ಅಧ್ಯಯನಕ್ಕೆಂದು ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಪಾಪ್ಯುಲೇಶನ್ ಕೌನ್ಸಿಲ್ ಎನ್ನುವ ಸರ್ಕಾರೇತರ ಸಂಘಟನೆ ಹೇಳಿದೆ.
2015-16 ರಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ಸಂದರ್ಶಿಸಲಾಯಿತು. ನಂತರ ಅದೇ ಹದಿಹರೆಯದವರ ಗುಂಪನ್ನು 2018-19ರಲ್ಲಿ ಮರು ಸಂದರ್ಶಿಸಲಾಯಿತು.
ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ
ಈ ಎರಡು ಅಧ್ಯಯನಗಳ ಪ್ರಕಾರ, ದೈಹಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ ಎನ್ನುವ ವಿವಾಹಿತ ಮಹಿಳೆಯರ ಸಂಖ್ಯೆ ದ್ವಿಗುಣವಾಗಿದೆ ಎಂದು ತಿಳಿದುಬಂದಿದೆ.
“2015-16ರಲ್ಲಿ, ವಿವಾಹಿತ ಮಹಿಳೆಯರ ಮೇಲಿನ ದೈಹಿಕ ಹಿಂಸೆ (15-19 ವರ್ಷ) ಶೇ 23.5 ರಷ್ಟಿದ್ದು, ಇದು 2018-19ರಲ್ಲಿ ದ್ವಿಗುಣಗೊಂಡು, ಶೇ 51 ರಷ್ಟು ಹೆಚ್ಚಾಗಿದೆ. 2015-16ರಲ್ಲಿ ಲೈಂಗಿಕ ದೌರ್ಜನ್ಯ ಶೇ 30 ರಷ್ಟು ದಾಖಲಾಗಿತ್ತು. ಇದು ಶೇ 48 ಕ್ಕೆ ಹೆಚ್ಚಾಗಿದೆ. 2015-16ರಲ್ಲಿ ಭಾವನಾತ್ಮಕ ಹಿಂಸಾಚಾರವು ಶೇ 19 ರಷ್ಟಿದ್ದು, ಅದು 2018-19 ರಲ್ಲಿ ಶೇ 35 ಕ್ಕೆ ಏರಿದೆ” ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ: 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ, ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ..
ಈ ಅಧ್ಯಯನವು ಮೊಬೈಲ್-ಫೋನ್/ಇಂಟರ್ನೆಟ್ ಆಧಾರಿತ ಕಿರುಕುಳವನ್ನು ಸಹ ಒಳಗೊಂಡಿದೆ.
ಈ ಫಲಿತಾಂಶವು ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇದನ್ನೂ ಓದಿ: `ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವುದು ಪಕ್ಷ, ಪಂಥಗಳ ಪರ-ವಿರೋಧವಲ್ಲ; ಮಾನವೀಯತೆಯ ವಿಚಾರ’


