ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರರ ಇತ್ತೀಚಿನ ಹೇಳಿಕೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಉತ್ತರ ಪ್ರದೇಶ ಸರ್ಕಾರ ಪ್ರತಿಭಟನಾಕಾರರ ಮನೆಗಳ ಮೇಲೆ ಬುಲ್ಡೋಜರ್ ದಾಳಿ ನಡೆಸುತ್ತಿದೆ. ಇದು ಎರಡನೇ ದಿನವೂ ಮುಂದುವರೆದಿದೆ.
ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರದಲ್ಲಿ ತೊಡಗಿದ್ದರು ಎನ್ನಲಾದ ಇಬ್ಬರು ಆರೋಪಿಗಳ ಮನೆಗಳನ್ನು ಸಹರಾನ್‌ಪುರದಲ್ಲಿ ಧ್ವಂಸಗೊಳಿಸಿದ ನಂತರ, ಇಂದು ಭಾರೀ ಪೊಲೀಸ್ ಉಪಸ್ಥಿತಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಆರೋಪಿ ರಾಜಕಾರಣಿಯ ಮನೆಯನ್ನು ಬುಲ್ಡೋಜರ್‌ಗಳು ನೆಲಸಮ ಮಾಡಿವೆ.
ಶುಕ್ರವಾರ ನಡೆದ ಹಿಂಸಾಚಾರದ ಹಿಂದಿನ “ಮಾಸ್ಟರ್‌ಮೈಂಡ್‌ಗಳಲ್ಲಿ” ಒಬ್ಬರು ಎಂದು ಪೊಲೀಸರು ಹೇಳಿಕೊಂಡಿರುವ ಪ್ರಯಾಗರಾಜ್ ಮೂಲದ ರಾಜಕಾರಣಿ, ಆರೋಪಿ ಜಾವೇದ್ ಮೊಹಮ್ಮದ್ ಅವರ ಮನೆಯ ಗೇಟ್‌ಗಳು ಮತ್ತು ಹೊರಗಿನ ಗೋಡೆಗಳನ್ನು ಬುಲ್ಡೋಜರ್‌ಗಳು ಧ್ವಂಸಗೊಳಿಸಿವೆ.
ಇದನ್ನೂ ಓದಿ: ತೆಲಂಗಾಣ: ಅವಹೇಳನಕಾರಿ ಪೋಸ್ಟ್ ವಿರುದ್ಧ ಭಾರೀ ಪ್ರತಿಭಟನೆ; ಲಾಠಿಚಾರ್ಜ್
#WATCH | Uttar Pradesh: Demolition drive at the "illegally constructed" residence of Prayagraj violence accused Javed Ahmed continues in Prayagraj. pic.twitter.com/s4etc8Vz25
— ANI UP/Uttarakhand (@ANINewsUP) June 12, 2022
ಪ್ರಯಾಗರಾಜ್ ಮೂಲದ ರಾಜಕಾರಣಿ, ಆರೋಪಿ ಜಾವೇದ್ ಅವರ ನಿವಾಸದ ಹೊರಗಿನ ಮನೆಯ ನೆಲ ಮತ್ತು ಮೊದಲ ಮಹಡಿಗಳಲ್ಲಿ ಅಕ್ರಮ ನಿರ್ಮಾಣದ ಕುರಿತು ಸೂಚನೆ ನೀಡಿದ ಕೆಲವೇ ಗಂಟೆಗಳ ಒಳಗೆ ಪುರಸಭೆಯ ಅಧಿಕಾರಿಗಳು ಕಟ್ಟಡ ಕೆಡವಲಾಗಿದೆ.
ನಿನ್ನೆ ತಡರಾತ್ರಿ ರಾಜಕಾರಣಿಯ ಮನೆಯ ಹೊರಗೆ ಹಾಕಲಾದ ನೋಟಿಸ್‌ನಲ್ಲಿ ಜಾವೇದ್ ಅವರು ಈ ವರ್ಷದ ಮೇ ತಿಂಗಳಲ್ಲಿ ನೀಡಲಾಗಿದ್ದ ನೋಟಿಸ್‌ಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ. ಆ ನೋಟಿಸ್ ಪ್ರಕಾರ, ಜೂನ್ 9 ರೊಳಗೆ ಅಕ್ರಮ ನಿರ್ಮಾಣವನ್ನು ನೆಲಸಮಗೊಳಿಸುವಂತೆ ಜಾವೇದ್‌ಗೆ ತಿಳಿಸಲಾಯಿತು, ವಿಫಲವಾದರೆ ಜೂನ್ 12 ರಂದು ಬೆಳಿಗ್ಗೆ 11 ಗಂಟೆಯೊಳಗೆ ಮನೆಯನ್ನು ಖಾಲಿ ಮಾಡುವಂತೆ ಅಂತಿಮ ಸೂಚನೆಯನ್ನು ಕಳುಹಿಸಲಾಗಿದೆ.
ಶನಿವಾರ ಆರೋಪಿ ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಅವರ ನಿವಾಸಗಳಲ್ಲಿ ಪೊಲೀಸರು ಮತ್ತು ಮುನ್ಸಿಪಲ್ ತಂಡಗಳು ಕಾಣಿಸಿಕೊಂಡು, ಅವರ ಮನೆಗಳ ಗೇಟ್‌ಗಳು ಮತ್ತು ಹೊರಗಿನ ಗೋಡೆಗಳನ್ನು ಅಕ್ರಮ ನಿರ್ಮಾಣಗಳು ಎಂದು ಹೇಳಿ ಮನೆಗಳ ಭಾಗಗಳನ್ನು ಕೆಡವಿದ್ದರು.
ಇದನ್ನೂ ಓದಿ: ಪ್ರವಾದಿ ನಿಂದನೆ: ಪ್ರತಿಭಟನಾಕಾರರ ಮೇಲೆ ’ಬುಲ್ಡೋಜರ್’ ಪ್ರಭಾವ ತೋರಿದ ಯೋಗಿ ಸರ್ಕಾರ



ಕಟ್ಡಡಗಳನ್ನು ಹೊಡೆದುಹಾಕುವುದರಿಂದ ಅಪಾರ ಸೊತ್ತು ಹಾಳಾಗುತ್ತದೆ. ಇಂತ ಕಟ್ಟಡಗಳನ್ನು ಆಳ್ವಿಕೆ ತನ್ನ ತೆಕ್ಕೆಗೆ ಪಡೆಯಬಹುದಾದ ಬಗೆಗೆ ಹೆಜ್ಜೆಇಡಲಿ.