Homeಮುಖಪುಟಜಾಹೀರಾತಿನಲ್ಲಿ ತಪ್ಪು ಸಂದೇಶದ ಆರೋಪ: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ

ಜಾಹೀರಾತಿನಲ್ಲಿ ತಪ್ಪು ಸಂದೇಶದ ಆರೋಪ: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ

- Advertisement -
- Advertisement -

ಪುಷ್ಪಾ ಚಿತ್ರದ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ತೆಲುಗು ನಟ ಅಲ್ಲು ಅರ್ಜುನ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಾರಿ ತಪ್ಪಿಸುವ ತಪ್ಪು ಸಂದೇಶ ಒದಗಿಸಿರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ತೆಲಂಗಾಣದ ಸಾಮಾಜಿಕ ಕಾರ್ಯಕರ್ತ ಕೋತಾ ಉಪೇಂದರ್ ರೆಡ್ಡಿ ಅವರು ಅಲ್ಲು ಅರ್ಜುನ್ ವಿರುದ್ಧ ಹೈದರಾಬಾದ್‌ನ ಅಂಬರ್‌ಪೆಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟನನ್ನು ಒಳಗೊಂಡಿರುವ ನಿರ್ದಿಷ್ಟ ಜಾಹೀರಾತು ಮೋಸದಾಯಕ ಮತ್ತು ತಪ್ಪು ಮಾಹಿತಿಯನ್ನು ಒದಗಿಸಿದೆ ಎಂದು ಆರೋಪಿಸಿದ್ದಾರೆ.

ಇಂತಹ ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸಾಮಾಜಿಕ ಹೋರಾಟಗಾರ, ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಲ್ಲು ಅರ್ಜುನ್ ವಿರುದ್ಧ ಮತ್ತು ಅಂಕಿ ಅಂಶಗಳನ್ನು ತಪ್ಪು ತಪ್ಪಾಗಿ ನಕಲಿ ಮಾಹಿತಿ ನೀಡಿದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ವಿರುದ್ಧ ಅಂಬರ್‌ಪೆಟ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನು, ಅಲ್ಲು ಅರ್ಜುನ್ ಈಗಾಗಲೇ ಆಹಾರ ವಿತರಣಾ ಅಪ್ಲಿಕೇಶನ್ ಅನ್ನು ಮಾರ್ಕೆಟಿಂಗ್ ಮಾಡಿದ್ದಕ್ಕಾಗಿ ಮತ್ತು ಸರ್ಕಾರಿ ಸಾರಿಗೆ ಸೇವೆಗಳನ್ನು ಅವಹೇಳನ ಮಾಡುವ ಮೂಲಕ ಬೈಕ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದು ಅವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.


ಇದನ್ನೂ ಓದಿ: ಜನಪ್ರಿಯ ಸಿನಿಮಾಗಳ ಗುಣಮಟ್ಟದ ಜೊತೆಗೇ ಪಾತಾಳಕ್ಕೆ ಕುಸಿದ ಸಿನಿಮಾ ಬರೆಹಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -