Homeಕರ್ನಾಟಕ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

- Advertisement -
- Advertisement -

ಕನ್ನಡ ನೆಲದಲ್ಲಿ ನಡೆದ ಭಕ್ತಿ ಪಂಥ ಚಳವಳಿಯಲ್ಲಿ ದಾಸವರೇಣ್ಯರ ಕೊಡುಗೆಯನ್ನೂ ಯಾರೂ ಅಲ್ಲಗಳೆಯಲಾರರು. ಆದರೆ ಚಕ್ರತೀರ್ಥ ಪುಸ್ತಕ ಪರಿಶೀಲನಾ ಸಮಿತಿಯು 9ನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ನೀಡಿರುವ ‘ಭಕ್ತಪಂಥ’ ಪಾಠದಲ್ಲಿ ದಾಸವರೇಣ್ಯರ ವ್ಯಕ್ತಿಚಿತ್ರಣವನ್ನು ಕಿತ್ತು ಬಿಸಾಡಿದೆ.

ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಶಿಶುನಾಳ ಷರೀಫರ ವ್ಯಕ್ತಿಚಿತ್ರಣವನ್ನು ಪರಿಚಯಿಸಲಾಗಿತ್ತು. ಸಮಾಜದ ಮೇಲೆ ಅವರು ಬೀರಿದ ಪ್ರಭಾವವನ್ನು ತಿಳಿಸಲಾಗಿತ್ತು. ಆದರೆ ಈ ವಿವರಗಳನ್ನು ತೆರವು ಮಾಡಿರುವ ಚಕ್ರತೀರ್ಥ ಸಮಿತಿಯು, ಕರ್ನಾಟಕದಲ್ಲಿ ಭಕ್ತಿಪಂಥ ಚಳಿವಳಿಕಾರರ ಇತಿಹಾಸವನ್ನು ಎರಡು ವಾಕ್ಯಗಳಿಗೆ ಸೀಮಿತ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾಠದಲ್ಲಿ ಆರಂಭದಲ್ಲಿ- ‘ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ’ ಎಂದು ಪ್ರಸ್ತಾಪಿಸುತ್ತಾ “ರಮಾನಂದ, ಚೈತನ್ಯ, ಗುರುನಾನಕ್‌ರ ಬಗ್ಗೆ, ಕರ್ನಾಟಕದಲ್ಲಿ ಭಕ್ತಿ ಪಂಥ, ಭಕ್ತಿ ಪಂಥದ ಪರಿಣಾಮಗಳು, ಭಕ್ತಿಪಂಥದ ಪ್ರಮುಖ ಅಂಶಗಳು” ಈ ವಿಚಾರಗಳನ್ನು ತಿಳಿಯುತ್ತೇವೆ ಎಂದು ಸೂಚಿಸಲಾಗಿದೆ. ಆದರೆ ಬರಗೂರರ ಸಮಿತಿ ರೂಪಿಸದ ಪಠ್ಯದಲ್ಲಿಯೇ ಈ ಅಂಶಗಳನ್ನು ನಮೂದಿಸಲಾಗಿತ್ತು. ಅವುಗಳನ್ನು ಯಥಾವತ್ತು ಉಳಿಸಿಕೊಂಡಿರುವ ಚಕ್ರತೀರ್ಥ ಸಮಿತಿ, ಕರ್ನಾಟಕದ ಭಕ್ತಿಪಂಥ ಚಳವಳಿಯ ಬಗ್ಗೆ ವಿವರಣೆಯನ್ನೇ ನೀಡಿಲ್ಲ! ‘ಸೂಫಿಸಂ’ ಬಗ್ಗೆ ಒಂದು ಪ್ಯಾರಾ ಪಾಠವಿದ್ದರೂ ಅದು ಕರ್ನಾಟಕ್ಕಷ್ಟೇ ಸೀಮಿತವಾಗಿ ನಿಲ್ಲುವುದಿಲ್ಲ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ಹೊಸದಾಗಿ ಸೇರಿಸಲಾಗಿದೆ. ದಾಸವರೇಣ್ಯರ ವಿವರ ಕೈಬಿಡಲಾಗಿದೆ. ಅಲ್ಲದೆ ಗುರುನಾನಕರ್‌ರ ಪಾಠದಲ್ಲೂ ಕತ್ತರಿ ಪ್ರಯೋಗ ನಡೆದಿದೆ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ರೋಹಿತ್ ಚಕ್ರತೀರ್ಥ ಸಮಿತಿ ಹೊಸದಾಗಿ ಸೇರಿಸಿದೆ.

ಇದನ್ನೂ ಓದಿರಿ: ಚಕ್ರತೀರ್ಥ ಸಮಿತಿಯ ಅಧ್ವಾನಗಳು: ಅಕ್ಷರದವ್ವನಿಗೆ ‘ಅವಳು’, ‘ಇವಳು’ ಪದಬಳಕೆ

ಮೀರಾಬಾಯಿಯವರ ಕುರಿತು ಇರುವ ಭಾಗದಲ್ಲಿಯೇ ಕರ್ನಾಟಕದಲ್ಲಿ ಭಕ್ತಿಪಂಥ ಚಳವಳಿ ಬೀರಿದ ಪ್ರಭಾವದ ಕುರಿತು ಎರಡು ವಾಕ್ಯಗಳನ್ನು ತುರುಕಲಾಗಿದೆ. “ಪುರಂದರದಾಸರು ಮತ್ತು ಕನಕದಾಸರು ಕರ್ನಾಟಕದ ಭಕ್ತಿ ಚಳವಳಿಯ ಪ್ರಮುಖರಾಗಿದ್ದರು. ಪುರಂದರದಾಸರು ‘ಕೀರ್ತನೆ’ಗಳನ್ನು ರಚಿಸಿದರೆ, ಕನಕದಾಸರು, ‘ಮೋಹನ ತರಂಗಿಣಿ’ ಎಂಬ ಕಾವ್ಯವನ್ನು ಮತ್ತು ಕೀರ್ತನೆಗಳನ್ನು ಕನ್ನಡದಲ್ಲಿ ರಚನೆ ಮಾಡಿದರು”- ಇದಿಷ್ಟೇ ಮಾಹಿತಿ!

ಶಿಶುನಾಳ ಶರೀಫರು, ಕನಕ ಹಾಗೂ ಪುರಂದರದಾಸರ ವ್ಯಕ್ತಿ ಚಿತ್ರಣವನ್ನು ಬರಗೂರು ನೇತೃತ್ವದ ಸಮಿತಿ ನೀಡಿತ್ತು.


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವಕ್ರತೀರ್ತನ ಗ್ಯಾಂಗು ಮಾಡಿರುವ ಪರಿಷ್ಕರಣೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...