Homeಚಳವಳಿಪ್ರವಾದಿ ನಿಂದನೆ: ಪ್ರತಿಭಟನಾಕಾರರ ಮೇಲೆ ’ಬುಲ್ಡೋಜರ್’ ಪ್ರಭಾವ ತೋರಿದ ಯೋಗಿ ಸರ್ಕಾರ

ಪ್ರವಾದಿ ನಿಂದನೆ: ಪ್ರತಿಭಟನಾಕಾರರ ಮೇಲೆ ’ಬುಲ್ಡೋಜರ್’ ಪ್ರಭಾವ ತೋರಿದ ಯೋಗಿ ಸರ್ಕಾರ

- Advertisement -
- Advertisement -

ಪ್ರವಾದಿ ಮುಹಮ್ಮದ್ ಅವಹೇಳನಾಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳು ಜೋರಾದ ಬೆನ್ನಲ್ಲೇ ಸಹರಾನ್‌ಪುರ ಮತ್ತು ಕಾನ್ಪುರದ ಬೀದಿಗಳಲ್ಲಿ ಶನಿವಾರ ಬುಲ್ಡೋಜರ್‌ಗಳು ಕಾಣಿಸಿಕೊಂಡಿದ್ದು ಹಲವು ಮನೆಗಳನ್ನು ಧ್ವಂಸಗೊಳಿಸಿವೆ.

ಬಿಜೆಪಿ ಮುಖಂಡರು ಪ್ರವಾದಿ ನಿಂದನೆ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಹಲವೆಡೆ ಬೃಹತ್ ಪ್ರತಿಭಟನೆಗಳು ನಡೆದಿವೆ. ಈ ವೇಳೆ ಜಾರ್ಖಂಡ್‌ನ ರಾಂಚಿ ಸೇರಿದಂತೆ ಕೆಲವಡೆ ಹಿಂಸಾಚಾರ ನಡೆದಿದೆ. ಉತ್ತರ ಪ್ರದೇಶ ಸಹರಾನ್‌ಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡ ಬೆನ್ನಲ್ಲೆ ಪೊಲೀಸ್ ಅಧಿಕಾರಿಗಳು ಮುಸ್ಲಿಂ ಸಮುದಾಯದ ಮನೆಗಳ ಮೇಲೆ ಬುಲ್ಡೋಜರ್ ಹರಿಸುತ್ತಿದ್ದಾರೆ. ಈ ಕುರಿತು ಹಲವರು ತೀವ್ರ ವಿರೋಧ ದಾಖಲಿಸಿದ್ದು, ಯಾವ ಕಾನೂನಿನ ಆಧಾರದಲ್ಲಿ ಬುಲ್ಡೋಜರ್‌ಗಳಿಂದ ಮನೆ ಧ್ವಂಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರು ಮತ್ತು ಮುನ್ಸಿಪಲ್ ಅಧಿಕಾರಿಗಳು ಬುಲ್ಡೋಜರ್‌ ನಿಂದ ಕೆಡವುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ದೃಶ್ಯಗಳನ್ನು ಸ್ವತಃ ಪೊಲಿಸರೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.
ಸಹರಾನ್‌ಪುರದ ಪೊಲೀಸರು ಭಾರಿ ಪೊಲೀಸ್ ಭದ್ರತೆಯಲ್ಲಿ ಬುಲ್ಡೋಜರ್‌ಗಳೊಂದಿಗೆ, ಮುನ್ಸಿಪಲ್ ತಂಡಗಳೊಂದಿಗೆ ಬಂದು ಎರಡು ಮನೆಗಳನ್ನು ಧ್ವಂಸಗೊಳಿಸಿದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡಿದ್ದಕ್ಕಾಗಿ ಬಂಧಿಸಲಾದ ಇಬ್ಬರು ಆರೋಪಿಗಳ ಮನೆಗಳ ಭಾಗಗಳನ್ನು ಕೆಡವಿದ್ದಾರೆ. ಪ್ರತಿಭಟನೆ ಹಿನ್ನೆಲೆ ಸಹರಾನ್‌ಪುರದಲ್ಲಿ ಒಟ್ಟು 64 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿರುವ ದೃಶ್ಯಗಳಲ್ಲಿ ಆರೋಪಿ ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಅವರ ನಿವಾಸಗಳಲ್ಲಿ ಪೊಲೀಸರು ಮತ್ತು ಮುನ್ಸಿಪಲ್ ತಂಡಗಳು ಕಾಣಿಸಿಕೊಂಡಿವೆ. ಮನೆಗಳ ಗೇಟ್‌ಗಳು ಮತ್ತು ಹೊರಗಿನ ಗೋಡೆಗಳನ್ನು ಅಕ್ರಮ ನಿರ್ಮಾಣಗಳು ಎಂದು ಪೊಲೀಸರು ಹೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪ್ರವಾದಿ ನಿಂದನೆ: ಉತ್ತರ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, 200ಕ್ಕೂ ಹೆಚ್ಚು ಜನರ ಬಂಧನ

ಕಾನ್ಪುರದಲ್ಲಿ, ಹಿಂಸಾಚಾರದ ಪ್ರಮುಖ ಆರೋಪಿಯಾಗಿರುವ ಸ್ಥಳೀಯ ನಾಯಕ ಜಾಫರ್ ಹಯಾತ್ ಹಶ್ಮಿಗೆ ಸಂಬಂಧಿಸಿರುವ ಆಸ್ತಿಯನ್ನು ಪೊಲೀಸರು ಇಂದು ನೆಲಸಮಗೊಳಿಸಿ, ಭೂ ಮಾಫಿಯಾಕ್ಕೆ ಸಂಬಧಿಸಿರುವ ವ್ಯಕ್ತಿ ಎಂದು ಕರೆದಿದ್ದಾರೆ.

ಪ್ರಧಾನ ಆರೋಪಿ ಜಾಫರ್ ಹಯಾತ್ ಹಶ್ಮಿಯ ಹತ್ತಿರದ ಸಂಬಂಧಿ ಎನ್ನಲಾದ ಮೊಹಮ್ಮದ್ ಇಶ್ತಿಯಾಕ್ ಎಂಬಾತನ ಒಡೆತನದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಕಾನ್ಪುರ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಕೆಡವಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.

ಇನ್ನು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಅವರು ಶನಿವಾರ ಬೆಳಗ್ಗೆಯೇ ಎಚ್ಚರಿಕೆ ನೀಡಿ ತಮ್ಮ ಟ್ವಿಟರ್‌ನಲ್ಲಿ ಬುಲ್ಡೋಜರ್‌ನ ಫೋಟೋದೊಂದಿಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ‘ನೆನಪಿಡಿ, ಪ್ರತಿ ಶುಕ್ರವಾರದ ನಂತರ ಶನಿವಾರ ಬರುತ್ತದೆ’ ಎಂದಿದ್ದಾರೆ.

 

ಪ್ರಯಾಗ್‌ರಾಜ್, ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ರಾಂಪುರ ಮತ್ತು ಲಕ್ನೋದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಆರು ಜಿಲ್ಲೆಗಳಿಂದ 227 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ: ’ಬಿಜೆಪಿ ಮಾಡುವ ಪಾಪಗಳಿಗೆ ಜನರು ಏಕೆ ನರಳಬೇಕು?’: ಮಮತಾ ಬ್ಯಾನರ್ಜಿ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ದಂಡಂ ದಶಗುಣಂ ಬುಲ್ಡೆಜರ್ ಕಾನೂನಿಗೆ ನಮ್ಮ ಬೆಂಬಲ ಇದೆ,ಸಾರ್ವಜನಿಕರ ಆಸ್ತಿ ನಷ್ಟ ಮಾಡೋ ಪ್ರತಿಯೊಬ್ಬರಿಗೂ ದೇಶದಲ್ಲಿ ಈ ಕಾನೂನನ್ನು ಜಾರಿಗೆ ತರಬೇಕು,ಸಾರ್ವಜನಿಕರ ಆಸ್ತಿ ನಷ್ಟ ವನ್ನು ಅವರಿಂದಲೇ ವಸೂಲಿ ಮಾಡಿಸಬೇಕು ಜೈ ಯೋಗಿ ಸರ್ಕಾರ್

  2. ತಪ್ಪು ಮಾಡಿರೋ ಪ್ರತಿಯೊಬ್ಬನ ಮನೆ ಮೇಲೂ ಬುಲ್ದೊಜರ ಹತ್ತಿಸಬೇಕು ತಾಕತ್ತಿದ್ರೆ,, ಮಸೀದಿಗಳ ಮೇಲೆ ಹಲ್ಲೆ ಮಾಡಿರೋರೆಲ್ಲ ದೇಶ ಪ್ರೇಮಿಗಳು ತಮ್ಮ ಹಕ್ಕುಗಳಿಗೆ ಹೋರಾಟ ಮಾಡಿದ್ರೆ ದೇಶ ದ್ರೋಹಿಗಳ…? ಈ ದೇಶ ಯಾರಪ್ಪಂದು ಅಲ್ಲ ಇದು ಎಲ್ಲ ಭಾರತೀಯರಿಗೆ ಸೇರಿದ್ದು ಯಾವೋ 4 ಕೋಮು ಕ್ರಿಮಿಗಳಿಂದ ದೇಶ, ದೇಶದ ಮಾನ, ಹಾಳಾಗತಿದೆ. ಕೋಮುವಾದಿಗಳು ಎಂದೂ ದೇಶಪ್ರೇಮಿಗಳಾಗಲು ಸಧ್ಯವಿಲ್ಲ.. ಪುಟಗೋಸಿನು ಕದ್ದು ತೋಡೋ ಕೋಮುಕ್ರಿಮಿಗಳಿಗೇನು ಗೊತ್ತು ಸೌಹಾರ್ದತೆ, ಶಾಂತಿ, ಈ ದೇಶದ, ನೆಲ, ಜಲದ ಬೆಲೆ.

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...