Homeರಾಷ್ಟ್ರೀಯನಾವೀಗ ಸ್ವತಂತ್ರರಾಗಿದ್ದು, ನಮ್ಮ ಇತಿಹಾಸ ಬರೆಯುವ ಸಮಯ ಬಂದಿದೆ: ಅಮಿತ್ ಶಾ

ನಾವೀಗ ಸ್ವತಂತ್ರರಾಗಿದ್ದು, ನಮ್ಮ ಇತಿಹಾಸ ಬರೆಯುವ ಸಮಯ ಬಂದಿದೆ: ಅಮಿತ್ ಶಾ

ಸಮುದ್ರ ಗುಪ್ತನು ಮೊದಲ ಬಾರಿಗೆ ಅಖಂಡ ಭಾರತವನ್ನು ಒಟ್ಟುಗೂಡಿಸಿ ಸಾಮ್ರಾಜ್ಯವನ್ನು ಸ್ಥಾಪಿಸಿದ್ದನು, ಆದರೆ ಈ ಬಗ್ಗೆ ಯಾವುದೇ ಉಲ್ಲೇಖವಿರುವ ಪುಸ್ತಕ ಇಲ್ಲ ಎಂದು ಅವರು ಹೇಳಿದ್ದಾರೆ

- Advertisement -
- Advertisement -

ಭಾರತದ ಹೆಚ್ಚಿನ ಇತಿಹಾಸಕಾರರು ಪಾಂಡ್ಯರು ಮತ್ತು ಚೋಳರಂತಹ ಅನೇಕ ಸಾಮ್ರಾಜ್ಯಗಳ ವೈಭವದ ಆಡಳಿತಗಳನ್ನು ನಿರ್ಲಕ್ಷಿಸಿ ಮೊಘಲರ ಇತಿಹಾಸವನ್ನು ಮಾತ್ರ ದಾಖಲಿಸಲು ಪ್ರಾಮುಖ್ಯತೆ ನೀಡಿದ್ದಾರೆ ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಆರೋಪಿಸಿದ್ದು, “ಈಗ ನಾವು ಸ್ವತಂತ್ರರಾಗಿರುವುದರಿಂದ, ಇತಿಹಾಸ ಬರೆಯುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

‘‘ಮಹಾರಾಣಾ: ಸಹಸ್ತ್ರ ವರ್ಷ ಕಾ ಧರ್ಮ ಯುದ್ಧ” ಎಂಬ ಪುಸ್ತಕವನ್ನು ಬಿಡುಗಡೆ ಮಾಡುತ್ತಾ ಮಾತನಾಡಿದ ಅಮಿತ್‌ ಶಾ, ಗತಕಾಲದ ವೈಭವವನ್ನು ವರ್ತಮಾನಕ್ಕೆ ಪುನರುಜ್ಜೀವನಗೊಳಿಸುವಂತೆ ಇತಿಹಾಸಕಾರರನ್ನು ಕೋರಿದ್ದಾರೆ. “ಇತಿಹಾಸವನ್ನು ಸರ್ಕಾರಗಳು ಮತ್ತು ಇತರ ಪುಸ್ತಕಗಳ ಆಜ್ಞೆಯ ಮೇರೆಗೆ ಬರೆಯುವುದಲ್ಲ, ವಾಸ್ತವಿಕ ಘಟನೆಗಳ ಆಧಾರದ ಮೇಲೆ ಬರೆಯಬೇಕು” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಅನೇಕ ಭಾರತೀಯ ರಾಜರು ಆಕ್ರಮಣಕಾರರ ವಿರುದ್ಧ ಹೋರಾಡಿದ್ದು, ಅವರನ್ನು ಧೈರ್ಯದಿಂದ ಸೋಲಿಸುವ ಮೂಲಕ ತಮ್ಮ ಪ್ರದೇಶಗಳನ್ನು ರಕ್ಷಿಸಿದ್ದಾರೆ. ಆದರೆ ದುರದೃಷ್ಟವಶಾತ್ ಇದುವರೆಗಿನ ಇತಿಹಾಸದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳು ಸ್ಥಾನ ಪಡೆದಿಲ್ಲ” ಎಂದು ಅಮಿತ್‌ ಶಾ ಹೇಳಿದ್ದಾರೆ.

ಇದನ್ನೂ ಓದಿ: ಪ್ರವಾದಿ ನಿಂದನೆ: ಪ್ರತಿಭಟನಾಕಾರರ ಮೇಲೆ ’ಬುಲ್ಡೋಜರ್’ ಪ್ರಭಾವ ತೋರಿದ ಯೋಗಿ ಸರ್ಕಾರ

“1,000 ವರ್ಷಗಳಿಂದ ಸಂಸ್ಕೃತಿ, ಭಾಷೆ ಮತ್ತು ಧರ್ಮದ ರಕ್ಷಣೆಗಾಗಿ ನಡೆಸಿದ ಹೋರಾಟವು ವ್ಯರ್ಥವಾಗಲಿಲ್ಲ. ಭಾರತವು ಈಗ ಪ್ರಪಂಚದ ಮುಂದೆ ಮತ್ತೆ ಗೌರವದಿಂದ ನಿಂತಿದೆ. ದೇಶದ ಕೀರ್ತಿಯನ್ನು ಗುರುತಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

“ನಾನು ಇತಿಹಾಸಕಾರರಿಗೆ ಹೇಳಲು ಬಯಸುವುದೇನೆಂದರೆ, ನಾವು ಅನೇಕ ಸಾಮ್ರಾಜ್ಯಗಳನ್ನು ಹೊಂದಿದ್ದೆವು. ಆದರೆ ಇತಿಹಾಸಕಾರರು ಮೊಘಲರ ಮೇಲೆ ಮಾತ್ರ ಕೇಂದ್ರೀಕರಿಸಿದ್ದಾರೆ ಮತ್ತು ಅವರ ಬಗ್ಗೆ ಹೆಚ್ಚಾಗಿ ಬರೆದಿದ್ದಾರೆ. ಪಾಂಡ್ಯ ಸಾಮ್ರಾಜ್ಯವು 800 ವರ್ಷಗಳ ಕಾಲ ಆಳಿತು. ಅಹೋಮ್ ಸಾಮ್ರಾಜ್ಯವು ಅಸ್ಸಾಂ ಅನ್ನು 650 ವರ್ಷಗಳ ಕಾಲ ಆಳಿತು. ಅಹೋಮರು ಭಕ್ತಿಯಾರ್ ಖಿಲ್ಜಿ, ಔರಂಗಜೇಬ್ ಅವರನ್ನು ಸೋಲಿಸಿ ಅಸ್ಸಾಂನ ಸಾರ್ವಭೌಮತ್ವವನ್ನು ಉಳಿಸಿಕೊಂಡಿದ್ದರು. ಪಲ್ಲವ ಸಾಮ್ರಾಜ್ಯವು 600 ವರ್ಷಗಳ ಕಾಲ ಆಳಿತು. ಚೋಳರು 600 ವರ್ಷಗಳ ಕಾಲ ಆಳಿದರು”

“ಮೌರ್ಯರು ಇಡೀ ದೇಶವನ್ನು – ಅಫ್ಘಾನಿಸ್ತಾನದಿಂದ ಲಂಕಾದವರೆಗೆ 550 ವರ್ಷಗಳ ಕಾಲ ಆಳಿದರು. ಸಾತವಾಹನರು 500 ವರ್ಷಗಳ ಕಾಲ ಆಳಿದರು. ಗುಪ್ತರು 400 ವರ್ಷಗಳ ಕಾಲ ಆಳಿದರು ಮತ್ತು ಗುಪ್ತ ಚಕ್ರವರ್ತಿ ಸಮುದ್ರ ಗುಪ್ತನು ಮೊದಲ ಬಾರಿಗೆ ಅಖಂಡ ಭಾರತವನ್ನು ಒಟ್ಟುಗೂಡಿಸಿ ಇಡೀ ದೇಶದೊಂದಿಗೆ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆದರೆ ಅವರ ಬಗ್ಗೆ ಯಾವುದೇ ಉಲ್ಲೇಖವಿರುವ ಪುಸ್ತಕ ಇಲ್ಲ” ಎಂದು ಅಮಿತ್‌ ಶಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಸ್ವಚ್ಛ ಭಾರತ ಅಭಿಯಾನ’ದ ನಡುವೆಯೂ, ವಿಶ್ವದ ಅತ್ಯಂತ ಕೆಟ್ಟ ಪರಿಸರ ಆರೋಗ್ಯ ಹೊಂದಿರುವ ದೇಶವಾಗಿ ಭಾರತ!

“ನಾವೀಗ ಸ್ವತಂತ್ರರಾಗಿದ್ದು, ಸತ್ಯವನ್ನು ಬರೆಯುವುದನ್ನು ಯಾರೂ ತಡೆಯಲಾರರು. ನಮ್ಮ ಇತಿಹಾಸವನ್ನು ನಾವೇ ಬರೆಯಬಹುದು” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಕಾಲ್ಪನಿಕ ಕಥೆಗಳ ಹರಿಕಾರರು… ಬೊಡ ಬರ್ಕೊ ಆದ್ರೆ ಮಕ್ಕಳಿಗೆ ಓಡಿಸೋಕೆ ಶಾಲೆಗಳ ಮೇಲೆ ಬಲವಂತವಾಗಿ ಹೇರಬೇಡ…. ಇಲ್ಲ ಅಂದ್ರೆ ಚರಂಡಿಗೆ ಪೈಪ್ ಹಾಕಿ ಗ್ಯಾಸ್ ಮಾಡಿ ಸ್ಟೋವ್ ಊರಿಸಬಹುದು ಅಂತ ಬುರುಡೆ ಬಿಡ್ತಾರೆ… ಹುಷಾರ್…..

  2. ನೀನಾಗಲಿ ನಿನ್ನ ಪಕ್ಷ, ಪಕ್ಷದಲ್ಲಿರೋ ಡೋಂಗಿಗಳೇ ಒಂದು ಇತಿಹಾಸ ಆಗತೀರ ಹೊರತು ನಿಮ್ಮಿಂದ ಯಾವ ಇತಿಹಾಸ ಬರೆಯೋಕು ಆಗಲ್ಲ,, ದೇಶದ ಮಾನ ಮರ್ಯಾದೆ ತೆಗದಿದ್ದು ಸಾಕು ಎಲ್ಲ ರಾಜೀನಾಮೆ ಕೊಟ್ಟು ತೊಲಗಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...