Homeರಾಷ್ಟ್ರೀಯ‘ಸ್ವಚ್ಛ ಭಾರತ ಅಭಿಯಾನ’ದ ನಡುವೆಯೂ, ವಿಶ್ವದ ಅತ್ಯಂತ ಕೆಟ್ಟ ಪರಿಸರ ಆರೋಗ್ಯ ಹೊಂದಿರುವ ದೇಶವಾಗಿ ಭಾರತ!

‘ಸ್ವಚ್ಛ ಭಾರತ ಅಭಿಯಾನ’ದ ನಡುವೆಯೂ, ವಿಶ್ವದ ಅತ್ಯಂತ ಕೆಟ್ಟ ಪರಿಸರ ಆರೋಗ್ಯ ಹೊಂದಿರುವ ದೇಶವಾಗಿ ಭಾರತ!

ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕೊನೆಯ 180 ನೇ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ವರದಿ ಸೂಚಿಸಿದೆ

- Advertisement -
- Advertisement -

ಬಿಜೆಪಿಯ ಮೋದಿ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ನಡುವೆಯೂ, ಭಾರತವು ವಿಶ್ವದ ಅತ್ಯಂತ ಕೆಟ್ಟ ಪರಿಸರ ಆರೋಗ್ಯವನ್ನು ಹೊಂದಿರುವ ದೇಶವಾಗಿದೆ ಹೊರಹೊಮ್ಮಿದೆ. ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ‘ಪರಿಸರ ಕಾರ್ಯಕ್ಷಮತೆ ಸೂಚ್ಯಂಕ-2022’ರ ವರದಿಯು, ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕೊನೆಯ 180 ನೇ ಸ್ಥಾನದಲ್ಲಿದೆ ಎಂದು ಸೂಚಿಸಿದೆ.

ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ ಮತ್ತು ವಿಯೆಟ್ನಾಂ ಕೂಡ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿದೆ. ಭ್ರಷ್ಟಾಚಾರ ನಿಯಂತ್ರಣ, ಕಾನೂನಿನ ನಿಯಮ ಮತ್ತು ಸರ್ಕಾರದ ಪರಿಣಾಮಕಾರಿತ್ವದಂತಹ ವಿವಿಧ ಕ್ರಮಗಳಲ್ಲಿ ಕೂಡಾ ಭಾರತವು ಕಳಪೆ ಅಂಕಗಳನ್ನು ಗಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡೆನ್ಮಾರ್ಕ್ ದೇಶವೂ ಸುಸ್ಥಿರತೆ ಮತ್ತು ಪರಿಸರ ಆರೋಗ್ಯ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಯುಕೆ, ಫಿನ್‌ಲ್ಯಾಂಡ್‌, ಮಾಲ್ಟಾ, ಸ್ವೀಡನ್‌ ದೇಶಗಳು ನಂತರದ ಸ್ಥಾನಗಳನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ: ಪ್ರಧಾನಿಯೊಂದಿಗಿನ ಮಾತುಕತೆಗಳಲ್ಲಿ ಪ್ರವಾದಿ ನಿಂದನೆ ಬಗ್ಗೆ ಇರಾನ್‌ ಉಲ್ಲೇಖಿಸಿಲ್ಲ: ಭಾರತ

ಭಾರತದ ನೆರೆಯ ದೇಶಗಳಾದ ಚೀನಾ ಈ ಪಟ್ಟಿಯಲ್ಲಿ 160 ನೇ ಸ್ಥಾನದಲ್ಲಿದ್ದು, ನೇಪಾಳ 162ನೇ ಸ್ಥಾನದಲ್ಲಿದೆ. ಭೂತಾನ್ 85 ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ 176, ಮಯನ್ಮಾರ್‌ 179, ಮಾಲ್ಡೀವ್ 113, ಶ್ರೀಲಂಕಾ 132, ಬಾಂಗ್ಲಾದೇಶ 177 ಮತ್ತು ಅಫ್ಘಾನಿಸ್ಥಾನ 81ನೇ ಸ್ಥಾನದಲ್ಲಿದೆ.

ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತ ಮತ್ತು ನೆರೆಯ ರಾಷ್ಟ್ರಗಳ ಸ್ಥಾನ (ಆಧಾರ 2022 EPI Results)

‘ಪರಿಸರ ಕಾರ್ಯಕ್ಷಮತೆ ಸೂಚ್ಯಂಕ-2020’ ರಲ್ಲಿ ಭಾರತವು 180 ದೇಶಗಳಲ್ಲಿ 168 ನೇ ಸ್ಥಾನದಲ್ಲಿತ್ತು. ಈ ವರ್ಷದ ಪಟ್ಟಿಯಲ್ಲಿ ದೇಶದ ಪರಿಸರ ಆರೋಗ್ಯ ಅವನತಿಯತ್ತ ಸಾಗಿದೆ ಎಂದು ಸೂಚಿಸಿದೆ.

ಪರಿಸರ ಕಾರ್ಯಕ್ಷಮತೆ ಸೂಚ್ಯಂಕವನ್ನು ಮೊದಲ ಬಾರಿಗೆ 2002 ರಲ್ಲಿ ವಿವಿಧ ದೇಶಗಳ ಪರಿಸರ ಸಮರ್ಥನೀಯತೆಯನ್ನು ಅಳೆಯುವ ಸೂಚ್ಯಂಕವಾಗಿ ಸ್ಥಾಪಿಸಲಾಯಿತು. ಇದನ್ನು ವಿಶ್ವ ಆರ್ಥಿಕ ವೇದಿಕೆ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು.

ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

“ಪರಿಸರ ಕಾರ್ಯಕ್ಷಮತೆ ಸೂಚ್ಯಂಕ ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ, ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಚೈತನ್ಯದ ಮೇಲೆ 180 ದೇಶಗಳಿಗೆ ಶ್ರೇಯಾಂಕ ನೀಡಿದೆ. ಈ ಸೂಚಕಗಳು ಸ್ಥಾಪಿತ ಪರಿಸರ ನೀತಿ ಗುರಿಗಳಿಗೆ ದೇಶಗಳು ಎಷ್ಟು ನಿಕಟವಾಗಿವೆ ಎಂಬುದಕ್ಕೆ ರಾಷ್ಟ್ರೀಯ ಪ್ರಮಾಣದಲ್ಲಿ ಪ್ರಮಾಣವನ್ನು ಒದಗಿಸುತ್ತವೆ” ಎಂದು ವರದಿ ಹೇಳುತ್ತದೆ.

ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತ ಮತ್ತು ಇತರ ದೇಶಗಳ ಕಡಿಮೆ ಅಂಕಗಳು ಹವಾಮಾನ ಬದಲಾವಣೆ, ಗಾಳಿ ಮತ್ತು ನೀರಿನ ಗುಣಮಟ್ಟದಂತಹ ವಿವಿಧ ಸಮರ್ಥನೀಯ ಕ್ರಮಗಳ ಮೇಲೆ ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ವರದಿಯು ಸೂಚಿಸುತ್ತವೆ.

ಆದರೆ ಈ ವಿಶ್ವ ಬ್ಯಾಂಕಿನ ವರದಿಗೆ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಪರಿಸರ ಸಚಿವಾಲಯವು, ‘ಪರಿಸರ ಕಾರ್ಯಕ್ಷಮತೆ ಸೂಚ್ಯಂಕ ವಿಶ್ಲೇಷಣೆಯನ್ನು ಸ್ವೀಕರಿಸುವುದಿಲ್ಲ’ ಎಂದು ಹೇಳಿದೆ.

ಇದನ್ನೂ ಓದಿ: ಪ್ರವಾದಿಯನ್ನು ಅವಹೇಳನ ಮಾಡಿದ ಬಿಜೆಪಿಯ ತಪ್ಪಿಗೆ ಭಾರತ ಯಾಕೆ ಕ್ಷಮೆ ಕೇಳಬೇಕು?: ಮೋದಿಗೆ ಕೆಟಿಆ‌‌ರ್‌ ಪ್ರಶ್ನೆ

“ವರದಿಯ ಲೇಖಕರು ತಪ್ಪಾಗಿ ವಿಶ್ಲೇಷಿಸಿದ್ದಾರೆ. ಪಕ್ಷಪಾತದ ಮಾಪನಗಳು ಮತ್ತು ಪಕ್ಷಪಾತದ ಲೆಕ್ಕಾಚಾಗಳ ಬಳಕೆಯಿಂದಾಗಿ ಭಾರತವು ಅತ್ಯಂತ ಕೆಳಗಿನ ಶ್ರೇಣಿಗೆ ಹೋಗುವಂತಾಯಿತು ಎಂದು ಸಚಿವಾಲಯ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...