Homeಕರ್ನಾಟಕಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

ಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

- Advertisement -
- Advertisement -

ಉತ್ತರ ಕನ್ನಡದ ಕಾಂಗ್ರೆಸ್ ಪೊರೆ ಕಳಚಿಕೊಳ್ಳುತ್ತಿದೆ! ಮದವೇರಿದ ಮದ್ದಾನೆಗಳಂತಾಗಿ ದಶಕಗಟ್ಟಲೆ ಕಾಲ ಗುದ್ದಾಡಿ ಜಿಲ್ಲಾ ಕಾಂಗ್ರೆಸನ್ನು ನಜ್ಜುಗುಜ್ಜುಮಾಡಿದ್ದ ಮ್ಯಾಗಿಯಜ್ಜಿ ಮತ್ತು ದೇಶಜ್ಜ ರಾಜಿ ಸಂಕೇತ ಬಿತ್ತರಿಸುತ್ತಿದ್ದಾರೆ. ಪರಸ್ಪರ ಅಸ್ತಿತ್ವ ಉಳಿಸಿಕೊಳ್ಳಲು ಈ ಮುದಿಮಣಿಗಳು ಹೊಂದಾಣಿಕೆಯ ಅನಿವಾರ್ಯಕ್ಕೆ ಬಿದ್ದಿವೆ. ಬದ್ಧವೈರಿಗಳ ಈ ಮನಃಪರಿವರ್ತನೆ ಯಲ್ಲಾಪುರ ಬೈ-ಇಲೆಕ್ಷನ್ ಸೋಲಿನ ನೇರ ಪರಿಣಾಮ ಎಂತಲೇ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆಗಳು ನಡೆದಿದೆ.

ದೇಶಪಾಂಡೆ ತನ್ನ ಮೂರು ದಶಕದ ರಾಜಕೀಯದಲ್ಲಿ ಜನತಾ ಪರಿವಾರದಲ್ಲಿರಲಿ ಅಥವಾ ಕಾಂಗ್ರೆಸಿನಲ್ಲಿರಲಿ ಯಾರನ್ನೂ ಗೆಲ್ಲಿಸಲು ತ್ರಿಕರ್ಣಪೂರ್ವಕ ಪ್ರಯತ್ನ ಮಾಡಿದ ಕುರುಹುಗಳಿಲ್ಲ. ಹಾಗಂತ ಸೋಲಿಸಲು ಹಲವು ಸಲ ಹಠಹಿಡಿದು ಹಿಕಮತ್ತು ನಡೆಸಿದ ದಾಖಲೆಗಳಿವೆ. ಇಂಥ ಇತಿಹಾಸದ ದೇಶ್ ಕಳೆದ ಯಲ್ಲಾಪುರ ಬೈ-ಇಲೆಕ್ಷನ್‍ನಲ್ಲಿ ತನ್ನ ಚೇಲಾ ಭೀಮಣ್ಣ ನಾಯ್ಕನ ಗೆಲ್ಲಿಸಿ ವೈರಿ ಹೆಬ್ಬಾರ್ ಮೇಲಿನ ಸೇಡು ತೀರಿಸಿಕೊಳ್ಳಲು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದ್ದರು. ಆದರೆ ಸ್ವಯಂಕೃತಾಪರಾಧಗಳ ಸರಣಿಯಿಂದ ವರ್ಚಸ್ಸು ಕಳಕೊಂಡಿರುವ ದೇಶ್ ಮುಗ್ಗರಿಸಿ ಮಕಾಡೆ ಮಲಗಿಬಿಟ್ಟರು! ಕಂಗಾಲಾಗಿ ದೇಶಪಾಂಡೆ ಕೂತಿದ್ದ ಈ ಹೊತ್ತಿನಲ್ಲೇ ಬರೋಬ್ಬರಿ ಒಂದು ವರ್ಷದನಂತರ ಜಿಲ್ಲೆಗೆ ವಕ್ಕರಿಸಿದ ಇಲ್ಲಿಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಆಟ ಶುರುಹಚ್ಚಿಕೊಂಡಿದ್ದರು. ನೇರ ಮ್ಯಾಗಿಯ ಶಿರಸಿಯ ಮನೆಗೇ ಹೋದ ದೇಶ್ ಆಕೆಯ ಮುಂದೆ ನಿಂತು ಹೊಸ ನಂಟಿನ ಪ್ರಸ್ತಾಪ ಇಟ್ಟಿರುವುದು ಅನಿರೀಕ್ಷಿತ ಸಮೀಕರಣವನ್ನು ಜಿಲ್ಲಾ ರಾಜಕೀಯ ಭೂಮಿಕೆಯಲ್ಲಿ ಸೃಷ್ಟಿಸಿಬಿಟ್ಟಿದೆ.

ಮ್ಯಾಗಿ ಮತ್ತಾಕೆಯ ಮಗ ಆಳ್ವ ಫೌಂಡೇಶನ್ ಕಟ್ಟಿಕೊಂಡಿದ್ದರೆ, ದೇಶ್ ಮತ್ತವರ ಪುತ್ರ ಪ್ರಶಾಂತ ದೇಶಪಾಂಡೆ ಟ್ರಸ್ಟ್ ಸ್ಥಾಪಿಸಿಕೊಂಡಿದ್ದಾರೆ. ಎರಡೂ ಕುಟುಂಬಗಳು ಸಾಮಾಜಿಕ ಸೇವೆಯ ಹೆಸರಲ್ಲಿ ರಾಜಕೀಯ ಫಾಯ್ದೆಗೆ ಹವಣಿಸುತ್ತಿವೆ. ಮ್ಯಾಗಿಗೆ ತನ್ನ ಪೆದ್ದು ಕುಲೋದ್ಧಾರಕನನ್ನು ಶಿರಸಿಯ ಶಾಸಕನ ಮಾಡುವ ಕನಸು; ದೇಶ್‍ಗೆ ಮುಂಬೈನಲ್ಲಿ ವಕೀಲಿಕೆ ಮಾಡುವ ಅನಿವಾಸಿ ಉತ್ತರ ಕನ್ನಡಿಗ ಮಗ ಮಹಾರಾಯನ ಸಂಸದನ ಮಾಡುವ ಆಸೆ. ಇದೇ ಒಳಉದ್ದೇಶದಿಂದ ಮ್ಯಾಗಿ ಫೌಂಡೇಷನ್ ಕಾರ್ಯಕ್ರಮ ಹಾಕಿಕೊಂಡು ಈಗ ಜಿಲ್ಲೆಯಲ್ಲಿ ಅಂಡಲೆಯುತ್ತಿದ್ದಾರೆ. ಆಕೆ ಫಂಕ್ಷನ್ ಮುಗಿಸಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ದೇಶಪಾಂಡೆ ಮೊನ್ನೆ ಶನಿವಾರ ಭೇಟಿಯಾಗಿ ಗ್ಯಾಂಗ್‍ವಾರ್ ನಿಲ್ಲಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಎಬ್ಬಿಸಿರುವ ಬಡಿವಾರಕ್ಕೆ ಬೆದರಿರುವ ಮ್ಯಾಗಿ-ದೇಶ್ ನೈಚ್ಛಾನುಸಂಧಾನ ನಡೆಸಬೇಕಾಗಿ ಬಂದಿವೆ, ಪಾಪ!!

ಮ್ಯಾಗಿ-ದೇಶ್ ಅಕ್ಕ-ಪಕ್ಕ ಕುಳಿತು ಕಳೆದ ಅಸೆಂಬ್ಲಿ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಬಣ ಬಡಿದಾಟದಿಂದಾದ ಹಾನಿಯ ಲೆಕ್ಕ ತೆಗೆದಿದ್ದಾರೆ. ತಮ್ಮೊಳಗಿನ ದ್ವೇಷಾಸೂಯೆ ಮೇಲಾಟದಿಂದ ಗತಿಗೇಡಿ ಬಿಜೆಪಿ ಸೈತಾನನಂತೆ ಬೆಳೆದಿದೆ ಎಂದು ಪಾಪಪ್ರಜ್ಞೆಯಿಂದ ಮಾತಾಡಿಕೊಂಡಿದ್ದಾರೆ; ಈಗಿಂದಲೇ ತಳಮಟ್ಟದಿಂದ ಪಾರ್ಟಿಯನ್ನು ಕಟ್ಟದಿದ್ದರೆ ತಮ್ಮ ವಂಶದ ಉತ್ತರಾಧಿಕಾರಿಗಳಿಗೆ ಭವಿಷ್ಯವಿಲ್ಲ ಎಂಬುದು ಮನಗಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉದ್ಧಾರವಾಗಬೇಕಿದ್ದರೆ ಮೊದಲು ಹಾಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕನ ಉಚ್ಚಾಟಿಸಿ ಹೊಸ ಆಯ್ಕೆ ಮಾಡಬೇಕು; ಆನಂತರ ತಾವಿಬ್ಬರೂ ಒಟ್ಟಾಗಿ ಜಿಲ್ಲಾ ಟೂರ್ ಹೊಡೆದು ಪಕ್ಷಕ್ಕೆ ಜೀವ ತುಂಬಬೇಕೆಂದು ಮ್ಯಾಗಿ ಮನದಿಂಗಿತವನ್ನು ದೇಶ್ ಮುಂದೆ ಮಂಡಿಸಿದ್ದಾರೆ. ಇದನ್ನು ದೇಶಪಾಂಡೆಯೂ ಒಪ್ಪಿದ್ದಾರೆ.

ಬದಲಾದ ವರಸೆಯಲ್ಲಿ ಮ್ಯಾಗಿಗೆ ದೇಶಪಾಂಡೆಗಿಂತಲೂ ಹೆಚ್ಚು ಸಿಟ್ಟಿರುವುದು ಭೀಮಣ್ಣನ ಮೇಲೆ. ತನ್ನನ್ನು ಕೊನೆತನಕವೂ ಕಾಡಿದ ಮಾಜಿ ಸಿಎಂ ‘ಬಂ’ನ ಭಾಮೈದ ಈ ಭೀಮಣ್ಣನೆಂಬುದು ಮ್ಯಾಗಿಯ ಹಲವು ಅಸಮಾಧಾನದ ಕಾರಣಗಳಲ್ಲಿ ಒಂದು. ಈ ಭೀಮಣ್ಣ ನಾಯ್ಕನೂ ಅಷ್ಟೇ ಕಿತಾಪತಿಗಾರ. ಮ್ಯಾಗಿಗೆ ಆತ ಕೇರ್ ಮಾಡುತ್ತಿರಲಿಲ್ಲ. ಆಕೆಯ ನಿಷ್ಠಾವಂತ ಹಿಂಬಾಲಕರಾದ ವಿ.ಎನ್.ನಾಯ್ಕ್, ವಸಂತನಾಯ್ಕ್ ವಗೈರೆ ದೀವರ ಹುಡುಗರನ್ನು ಭೀಮಣ್ಣ ಹಣಿಯುತ್ತಲೇ ಬಂದಿದ್ದ. 2013ರ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಎದುರು ಮೂರು ಸಾವಿರ ಚಿಲ್ಲರೆ ಮತದ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ದಿವಂಗತ ದೀಪಕ್ ಹೊನ್ನಾವರ್ ಮ್ಯಾಗಿಯ ಪುಂಡ ಪಟ್ಟ ಶಿಷ್ಯನಾಗಿದ್ದ. ಆತ ಗೆಲುವಿನ ಹತ್ತಿರ ಬಂದು ಮುಗ್ಗರಿಸಲು ಭೀಮಣ್ಣ-ರವೀಂದ್ರನಾಥ್ ನಾಯ್ಕ ಜೋಡಿಯ ದ್ರೋಹವೇ ಅಂದು ಕಾರಣವಾಗಿತ್ತು. ಈ ಉರಿ ಮ್ಯಾಗಿಗಿನ್ನೂ ಕಡಿಮೆಯಾಗಿಲ್ಲ. ಒಂದು ಕಾಲದಲ್ಲಿ ರವಿ ಮ್ಯಾಗಿ ಶಿಷ್ಯನಾಗಿದ್ದವ. ಆಕೆಯಿಂದಲೇ ಶಿರಸಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದವ. ಆನಂತರ ಗುರುಮಾತೆಗೇ ತಿರುಗಿಬಿದ್ದಿದ್ದ ರವಿ ಜೆಡಿಎಸ್ ಪಾಲಾಗಿದ್ದ. ಮೊನ್ನೆಯ ಯಲ್ಲಾಪುರ ಉಪಚುನಾವಣೆ ಗಡಿಬಿಡಿಯಲ್ಲಿ ಈ ರವಿ, ದೇಶಪಾಂಡೆ ಜುಬ್ಬ ಹಿಡಿದುಕೊಂಡು ಕಾಂಗ್ರೆಸ್‍ಗೆ ನುಸುಳಿದ್ದಾನೆ.

ಇಂಥ ಭೀಮ-ರವಿಯಂಥವರ ದೂರವಿಟ್ಟರೆ ಮ್ಯಾಗಿ-ದೇಶ್‍ನಂಟು ಕುದುರುತ್ತದೆ. 2018ರ ಶಿರಸಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ್ತು ಮೊನ್ನೆಯ ಯಲ್ಲಾಪುರ ಉಪಚುನಾವಣೆಯಲ್ಲಿ ಹೇತ್ಲಾಂಡಿ ಭೀಮಣ್ಣನ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದೇ ತಪ್ಪು ಆಯ್ಕೆ ಎನ್ನುವ ಮ್ಯಾಗಿ ತನ್ನ ಮಗ ಶಿರಸಿಯಲ್ಲಿ “ರೈಟ್ ಕ್ಯಾಂಡಿಡೇಟ್” ಎನ್ನುವುದೇ ವಿಚಿತ್ರ. ಬಿಜೆಪಿ ಬೆಂಬಲಿಗರಾದ ಹವ್ಯಕ ಬ್ರಾಹ್ಮಣ ಬಾಹುಳ್ಯದ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ನಿವೇದಿತ್ ಆಳ್ವ ಗೆಲ್ಲುವುದು ಅಷ್ಟು ಸುಲಭವೇನಲ್ಲ. ಅಲ್ಪಸಂಖ್ಯಾತರ ದ್ವೇಷದ ಮೇಲೆಯೇ ಬಿಜೆಪಿಯನ್ನು ಕಟ್ಟಿರುವ ಕಾಗೇರಿ, ಅನಂತ್ಮಾಣಿಗಳ ತವರು ಶಿರಸಿಯಲ್ಲಿ ಕಾಂಗ್ರೆಸ್ ಹವ್ಯಕ ಮಾಣಿ/ಕೂಸು ನಿಲ್ಲಿಸಿದರಷ್ಟೇ ಅನುಕೂಲ. ಸದ್ಯ ಜೆಡಿಎಸ್‍ನಲ್ಲಿರುವ ದಿವಂಗತ ಮಾಜಿ ಸಿಎಂ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿ. ಕಾಂಗ್ರೆಸ್ ಸೇರುವ ಆಸೆ ಶಶಿಗಿದ್ದರೂ ಹೆಗಡೆಜೀಯ ದೊಡ್ಮನೆ ಫ್ಯಾಮಿಲಿ ಬಗ್ಗೆ ದೇಶಪಾಂಡೆಗಿರುವ ಪುರಾತನ ದ್ವೇಷಕ್ಕೆ ಹೆದರಿ ಆತ ಸುಮ್ಮನಿದ್ದಾರೆ.

ಗೆಲ್ಲಲು ಇರುವ ಇಂಥ ಸರಳ ಲೆಕ್ಕಾಚಾರಗಳು ಪುತ್ರ ವ್ಯಾಮೋಹದಲ್ಲಿ ಮಂಕಾಗಿರುವ ಮ್ಯಾಗಜ್ಜೀ-ದೇಶಜ್ಜನಿಗೆ ಅರ್ಥವಾಗೋದಿಲ್ಲ. ಔಟ್‍ಡೇಟೆಡ್ ದಿಗ್ಗಜರು ಹಳೆಯದನ್ನು ಮರೆತು ಒಂದಾಗಿ ಪಾರ್ಟಿ ಕಟ್ಟಬಹುದೆಂಬ ನಂಬಿಕೆ ನಿಷ್ಠಾವಂತ ಕಾಂಗ್ರೆಸಿಗರಿಗಂತೂ ಇಲ್ಲಾ. ಆದರೆ ಮಕ್ಕಳ ಭವಿಷ್ಯ ಬೆಳಗಲು ಅನಿವಾರ್ಯವಾಗಿ ಮ್ಯಾಗಿ-ದೇಶ್ ಹೊಸ ಹೊಂದಾಣಿಕೆಯ ಸ್ಕೆಚ್ ಹಾಕಿದ್ದಾರೆಂಬುದು ಕಾಂಗ್ರೆಸ್‍ನಲ್ಲಷ್ಟೇ ಅಲ್ಲ ವಿರೋಧಿ ಕೇಸರಿ ಪಾಳೆಯದಲ್ಲೂ ಸಣ್ಣದೊಂದು ತಲ್ಲಣ ಎಬ್ಬಿಸಿರುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...