Homeಕೊರೊನಾಉತ್ತರಾಖಂಡ ಕೊರೊನಾ ಆತಂಕ: ಜ.16 ರ ವರೆಗೆ ರಾಜಕೀಯ ರ್‍ಯಾಲಿ, ಶಾಲೆಗಳು ಬಂದ್

ಉತ್ತರಾಖಂಡ ಕೊರೊನಾ ಆತಂಕ: ಜ.16 ರ ವರೆಗೆ ರಾಜಕೀಯ ರ್‍ಯಾಲಿ, ಶಾಲೆಗಳು ಬಂದ್

- Advertisement -
- Advertisement -

ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 7 ರ ಶುಕ್ರವಾರದಿಂದ ಉತ್ತರಾಖಂಡ ರಾಜ್ಯ ಸರ್ಕಾರವು ಜನವರಿ 16 ರ ವರೆಗೆ ರಾಜಕೀಯ ರ್‍ಯಾಲಿಗಳನ್ನು ನಿಷೇಧಿಸಲು ನಿರ್ಧರಿಸಿದೆ.

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ರ್‍ಯಾಲಿಗಳನ್ನು ಆಯೋಜಿಸುತ್ತಿವೆ. ಇದರಿಂದ ಕೊರೊನಾ ಪ್ರಕರಣಗಲು ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸಿದೆ.

ಶುಕ್ರವಾರ ತಡರಾತ್ರಿ ಬಿಡುಗಡೆಯಾದ ಹೊಸ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ಲಸಿಕೆಯ ಡಬಲ್ ಡೋಸ್ ತೆಗೆದುಕೊಳ್ಳದೆ ರಾಜ್ಯಕ್ಕೆ ಬರುವವರು 72 ಗಂಟೆಗಳ ಒಳಗಿನ RTPCR ವರದಿ ತರುವ ಅಗತ್ಯವಿದೆ ಎಂದು ಹೇಳಿದೆ.

ಜನವರಿ 16 ರವರೆಗೆ ಎಲ್ಲಾ ಶಾಲೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ರೆಸ್ಟೋರೆಂಟ್‌ಗಳು, ಜಿಮ್‌ಗಳು, ಕ್ರೀಡಾಂಗಣಗಳು, ಹೋಟೆಲ್‌ಗಳು ಕೇವಲ 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ: ಆರೋಗ್ಯ ಸಚಿವ ಕೆ.ಸುಧಾಕರ್‌

ಶುಕ್ರವಾರ ಉತ್ತರಾಖಂಡ ರಾಜ್ಯದಲ್ಲಿ 814 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 13 ಜಿಲ್ಲೆಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,022 ಕ್ಕೆ ತಲುಪಿದೆ. ಕೋವಿಡ್ ಸಂಬಂಧಿತ ಸಮಸ್ಯೆಗಳಿಂದ ಶುಕ್ರವಾರ ಯಾವುದೇ ಸಾವು ವರದಿಯಾಗಿಲ್ಲ.

ಕಳೆದ ಒಂದು ವಾರದಲ್ಲಿ, ಕೋವಿಡ್ ಪ್ರಕರಣಗಳು ಸುಮಾರು ಏಳು ಪಟ್ಟು ಏರಿಕೆಯಾಗಿದ್ದು ರಾಜ್ಯದಲ್ಲಿ ಆತಂಖಕ್ಕೆ ಕಾರಣವಾಗಿದೆ. ಜನವರಿ 1 ರಂದು ಒಟ್ಟು 118 ಪ್ರಕರಣಗಳು ವರದಿಯಾಗಿದ್ದರೇ ಜನವರಿ 7 ರಂದು 814 ಕ್ಕೆ ಏರಿಕೆಯಾಗಿದೆ.

ಇತ್ತ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,41,986 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 40,925 ಪ್ರಕರಣ ಪತ್ತೆಯಾಗಿವೆ. ನಿನ್ನೆಗಿಂತ ಶೇಕಡಾ 13 ರಷ್ಟು ಏರಿಕೆಯಾಗಿದ್ದು, ಈ ಪೈಕಿ 20,971 ಮುಂಬೈ ಒಂದರಲ್ಲೇ ವರದಿಯಾಗಿವೆ.

ಕರ್ನಾಟಕದಲ್ಲಿ ಒಂದೇ ದಿನ 8,449 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಶೇಕಡಾ 68 ರಷ್ಟು ಜಿಗಿತ ಕಂಡಿದೆ. ಬೆಂಗಳೂರಿನಲ್ಲೇ 6,812 ಪ್ರಕರಣಗಳು ದಾಖಲಾಗಿವೆ.


ಇದನ್ನೂ ಓದಿ: ವಿದೇಶದಿಂದ ಬಂದ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ: ಆರೋಗ್ಯ ಸಚಿವಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆ ಬಹಿಷ್ಕರಿಸಬೇಡಿ: ಜಮ್ಮು-ಕಾಶ್ಮೀರದ ಜನತೆಗೆ ಮೆಹಬೂಬಾ ಮುಫ್ತಿ ಮನವಿ

0
'ದಕ್ಷಿಣ ಕಾಶ್ಮೀರದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳನ್ನು ಬಂಧಿತ ಕಾರ್ಮಿಕರನ್ನಾಗಿ ಮಾಡಲು ಅನಾಮಧೇಯ ಶಕ್ತಿಗಳು ಪ್ರಯತ್ನಿಸುತ್ತಿವೆ' ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ರಜೌರಿ...