Homeಕರ್ನಾಟಕಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

ಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಮನಸ್ಸಿಗೆ ಅಂಟಿದ ಏಡ್ಸ್, ಕಾನ್ಸರ್‍ಗಿಂತಲೂ ಭೀಕರವಾದ ಜಾತಿಯತೆಯ ಭ್ರಮೆ ತೊಲಗುವ ಯಾವ ಲಕ್ಷಣಗಳು ನಮ್ಮ ನಾಗರಿಕ ಸಮಾಜದಲ್ಲಿ ಕಾಣುತ್ತಿಲ್ಲ. ವ್ಯಕ್ತಿಯ ಹುಟ್ಟಿನ ಮೂಲಕವೆ ಆತನ ಜಾತಿಯನ್ನು ನಿರ್ಧರಿಸುವ ಸಮಾಜವನ್ನು ಸ್ವಾಸ್ಥ್ಯ ಸಮಾಜವೆಂದು ಹೇಗೆ ಕರೆಯಬೇಕು? ವ್ಯಕ್ತಿಯ ಕೆಲಸಗಳಿಂದ ಆರಂಭವಾದ ಈ ಜಾತಿ ಪದ್ಧತಿ ಇಂದಿಗೂ ಮುಂದುವರೆದಿರುವುದು ದುರಂತವೆಂದೇ ಹೇಳಬೇಕಾಗಿದೆ. ಯಾವ ವ್ಯಕ್ತಿಯೂ ಹುಟ್ಟುವಾಗಲೆ ಕುರುಪಿ, ಕುಡಗೋಲು, ಸಲಿಕೆ, ಪುಟ್ಟಿಗಳನ್ನು ಜೊತೆಗೆ ತೆಗೆದುಕೊಂಡು ಹುಟ್ಟಿ ಬಂದಿಲ್ಲ. ಹಾಗೆಯೆ ಜನಿವಾರ, ನಾಮ, ವಿಭೂತಿ, ಇಷ್ಟಲಿಂಗ ಮುಂತಾದ ಲಾಂಛನಗಳನ್ನೂ ಹೊತ್ತು ಬಂದಿಲ್ಲ. ಆದರೂ ಜನ ಮಾನಸದಲ್ಲಿ ಜಾತಿಯ ಬೇರುಗಳು ಆಳಕ್ಕೆ ಇಳಿದು ಅವರೊಳಗಿನ ಮನುಷ್ಯತ್ವವನ್ನೆ ಕತ್ತರಿಸಿ ಹಾಕಿವೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷ ರೋಹ ಹರುಷ ವಿಷಯಾದಿಗಳೆಲ್ಲಾ ಒಂದೇ
ಏನನೋದಿ ಏನ ಕೇಳಿ ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಕಾಶಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾಣರ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೆ ಕುಲಜನು

ಜಾತಿಗಳಿಲ್ಲಿಯೇ ಶ್ರೇಷ್ಠ ಜಾತಿ ಎಂದು ಬೊಗಳೆ ಬಿಡುವ ಅಳಲೆಕಾಯಿ ಪಂಡಿತರು ಹುಟ್ಟಿದ್ದು ತಾಯಿಯ ಗರ್ಭದಲ್ಲಿಯೆ. ತಂದೆ ಮತ್ತು ತಾಯಿಗಳ ಮಿಲನದಿಂದ ಗರ್ಭಕಟ್ಟಿ ಮಗುವಾಗಿ ತಾಯಿಯ ಯೋನಿಯ ಮೂಲಕ ಹೊರಬಂದದ್ದು. ಈ ಸತ್ಯವನ್ನು ಅರಿತೂ ಅರಿಯದಂತೆ ನಡೆಸುವ ಮನುಷ್ಯ ತನ್ನೊಳಗೆ ದುಷ್ಟತನವನ್ನು ಸಾಕಿ ಸಲಹಿದ್ದಾನೆ. ಶುಕ್ಲ ಶೋಣಿತದ ಎಲ್ಲರ ಹುಟ್ಟು ಇದೆ. ವೇದ ಆಗಮ ಶಾಸ್ತ್ರ ಪುರಾಣ ಪುಣ್ಯ ಕತೆಗಳನ್ನು ಓದಿದ್ದೇವೆ ಎಂದು ಒಂದೆ ಸಮ ಅರಚುವ ಪಂಡಿತೋತ್ತಮರೂ ಸಹ ಜಾತಿಯ ಹೊಲಸಿನಲ್ಲಿ ಸಿಕ್ಕಿ ಬಿದಿದ್ದಾರೆ. ಜನತೆಯ ಮನಸ್ಸನ್ನು ಸರಿಯಾಗಿ ಗ್ರಹಿಸಿದ ಬಸವಣ್ಣನವರು ಆಶೆಯಾಮಿಷ ರೋಷ ಹರುಷಗಳು ಸಹ ಮನುಷ್ಯರಲ್ಲಿ ಒಂದೆ ಬಗೆಯಾಗಿರುತ್ತವೆ. ಜಾತಿ ಭಿನ್ನವಾದ ಮಾತ್ರಕ್ಕೆ ಅವರವರ ಮನಸ್ಥಿತಿಗಳು ಬದಲಾಗಲಾರವು ಎಂದಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಪ್ರತಿಭಟನೆ

ಮಾಡುವ ಕಾಯಕಗಳು ಹೇಗೆ ಜಾತಿಯಾದವು ? ಎಂಬುದನ್ನು ಮನಂಬುಗುವಂತೆ ವಚನದಲ್ಲಿ ವಿವರಿಸಿದ್ದಾರೆ. ಯಾರೂ ಕಿವಿಯಲ್ಲಿ ಹುಟ್ಟಲು ಸಾಧ್ಯವೆ ಇಲ್ಲ. ಲಿಂಗಸ್ಥಲದ ಅರಿವು ಅಂದರೆ ಅದು ವಾಸ್ತವದ ಅರಿವು. ಸತ್ಯದ ಅರಿವು. ವಿಜ್ಞಾನದ ಅರಿವು ಎಂದರ್ಥ. ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೊ ಆತನೆ ಶ್ರೇಷ್ಠ ಕುಲದವನು ಎಂಬ ವಾದ ಬಸವಣ್ಣನವರದು. ಕುಲಗಳು ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವಿರಾದರೆ ಹಿಂದೆ ಇದ್ದ ಮನು ಮುನಿಗಳು ಯಾರಿದ್ದರು ? ಎಂಬ ಇತಿಹಾಸದ ಪುಟವನ್ನು ಹೆಕ್ಕಿ ನೋಡಿದರೆ ಸತ್ಯ ಕಾಣುತ್ತದೆ.

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು, ಕುಲವನರಸದಿರಿಂ ಭೋ
ಕುಲದಿಂದ ಮುನ್ನೆನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ
ಕಶ್ಯಪ್ಪ ಕಮ್ಮಾರ, ಕೌಂಡಿನ್ಯನೆಂಬ ಖುಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲ ಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು , ಭಕ್ತನೆ ಕುಲಜಂ ಭೋ !

ರಾಮಾಯಣ ಮಹಾಕಾವ್ಯವನ್ನು ರಚಿಸಿ ಮಹಾಋಷಿ ಎನಿಸಿಕೊಂಡ ವ್ಯಾಸ ಬೋವಿತಿಯ ಮಗ. ಮಾರ್ಕಂಡೇಯ ಮಹರ್ಷಿ ಮಾತಂಗಿಯ ಮಗ. ಅಗಸ್ತ್ಯ ಮಹರ್ಷಿ ಕಬ್ಬಲಿಗ, ದುರ್ವಾಸ ಮುನಿ ಮಚ್ಚಿಗ, ಕೌಂಡಿನ್ಯ ಎಂಬ ಋಷಿ ನಾವಿದ. ಆದ್ದರಿಂದ ಯಾರೂ ಜಾತಿಯ ಮೂಲಕ ಶ್ರೇಷ್ಠ ಕನಿಷ್ಠರಾಗಲು ಸಾಧ್ಯವಿಲ್ಲ ಎಂಬುದು ಬಸವಣ್ಣನವರ ಖಚಿತವಾದ ನಿಲುವು. ಯಾರು ಕಾಯಕ ಜೀವಿಯಾಗಿರುತ್ತಾನೋ, ತನ್ನ ಪರಿಶ್ರಮದ ದುಡಿಮೆಯ ಮೂಲಕ ಬಂದ ಫಲದಲ್ಲಿ ಸತ್ಪಾತ್ರರಿಗೆ ದಾಸೋಹ ನಡೆಸುತ್ತಾನೋ ಆ ಭಕ್ತನೆ ಕುಲಜನು ಎಂಬುದು ಶರಣರ ಇಂಗಿತವಾಗಿದೆ.

ಅಂಬಿಗರಚೌಡಯ್ಯನೆಂಬ ಶರಣನಂತೂ ಜಾತಿಯನ್ನು ನೋಡಿ ವ್ಯವಹರಿಸುವವರ ಕಂಡರೆ ಕೆಂಡಾಮಂಡಲವಾಗುತ್ತಾನೆ.

ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ
ಯೋಗಿ ಅಂದರೆ ನಾಡು ಬಿಟ್ಟು ಕಾಡು ಸೇರುವವನಲ್ಲ. ಗಡ್ಡ ಬಿಟ್ಟು, ಹೆಂಡತಿ ಮಕ್ಕಳ ತೊರೆದು ಹೋಗುವಾತನಲ್ಲ. ಜಾತಿ ಭ್ರಮೆಂiÀiನ್ನು ಕಳೆಯುವವನೆ ಯೋಗಿ ಎಂದಿದ್ದಾರೆ. ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ ಎನ್ನುತ್ತಲೆ ಬಸವಣ್ಣನವರು ತಮ್ಮ ಮೇಲಿರಿಮೆಯ ಭ್ರಮೆಯನ್ನು ಕಳಚಿಕೊಂಡು ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಎಂದು ಹೇಳುವ ಮೂಲಕ ತಮ್ಮ ಮನಸ್ಸಿಗೆ ಅಂಟಿದ ಕೊಳೆಯನ್ನು ತೊಳಕೊಂಡರು. ಅಷ್ಟಕ್ಕೂ ಅವರಿಗೆ ಸಮಾಧಾನವಾಗಲಿಲ್ಲ. ಆಗ

ಚೆನ್ನಯ್ಯನ ಮನೆಯ ದಾಸಿನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬ್ಬರಿಗೂ ಹೊದಲು ಬೆರಣಿಗೆ ಹೋಗಿ
ಸಂಗವ ಮಾಡಿದರು ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗವದೇವ ಸಾಕ್ಷಿಯಾಗಿ

ಎನ್ನುವ ಮೂಲಕ ತಮ್ಮನ್ನು ಕೇವಲ ತಳವರ್ಗದ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಚೆನ್ನಯ್ಯ ಮತ್ತು ಕಕ್ಕಯ್ಯನೆಂದರೆ ಕೀಳು ಎಂದು ತಿಳಿದ ಆ ದಿನಗಳಲ್ಲಿ ಅವರ ಮನೆಯ ಆಳುಗಳು ಬೆರಣಿಯ ಆಯಲು ಹೋದಾಗ ಸಮಾಜದ ಒಪ್ಪಿಗೆಯೂ ಪಡೆಯದೆ ಸಂಗವ ಮಾಡಿದರು. ಅಂದರೆ ಅಕ್ಷರಶಃ ಅವರು ಹಾದಕ್ಕೆ ಒಳಗಾದಾಗ ಹುಟ್ಟಿದ ಕೂಸು ನಾನು ಎನ್ನುವ ಮೂಲಕ ತಮ್ಮೊಳಗಿನ ಜಾತಿಯ ತಿಮಿರವನ್ನು ಕಳೆದುಕೊಳ್ಳುತ್ತಾರೆ.

ಅಮ್ಮುಗೆಯ ದೇವಯ್ಯ ಎಂಬ ಶರಣ ಕೂಡ
ಕಕ್ಕಯ್ಯನ ಪ್ರಸಾದ ಕೊಂಡೆನ್ನ ಕುಲ ಸೂತಕ ಹೋಯಿತ್ತಯ್ಯಾ
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲ ಸೂತಕ ಹೋಯಿತ್ತಯ್ಯಾ
ದಾಸಯ್ಯನ ಪ್ರಸಾದವ ಕೊಂಡೆನ್ನ ತನು ಸೂತಕ ಹೋಯಿತ್ತಯ್ಯಾ
ಚಂದಯ್ಯನ ಪ್ರಸಾದವ ಕೊಂಡೆನ್ನ ಮನ ಸೂತಕ ಹೋಯಿತ್ತಯ್ಯಾ

ಅನುಭಾವಿ ಶರಣರ, ಸಂತರ ಸಂಗದಿಂದ ಮಾತ್ರ ನಮ್ಮ ಮನದಲ್ಲಿಯ ಜಾತಿ ಭ್ರಮೆ ಹೋಗಲು ಸಾಧ್ಯವಿದೆ. ಇಲ್ಲದೆ ಹೋದರೆ ಈ ಜಾತಿ ಚಕ್ರವ್ಯೂಹದಲ್ಲಿ ಸಿಲುಕಿದ ಮನುಷ್ಯ ಹೊರಬರುವುದು ತೀರಾ ಅಪರೂಪ.
ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳರಿಕ್ಕುವುದು
ಮನದ ಮೈಲಿಗೆ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವ ಮಾಡುವುದು
ಎಂದು ಹೇಳಿದ್ದಾರೆ ಚೆನ್ನಬಸವಣ್ಣನವರು .

ತಳ ಸಮೂಹದಲ್ಲಿ ಹುಟ್ಟಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಆ ಸಮೂಹವನ್ನು ಗುಡಿಯೊಳಗೆ ಬಿಟ್ಟುಕೊಳ್ಳದೆ ಇರುವುದು. ಅವರಿಂದ ಸಣ್ಣ ತಪ್ಪು ಘಟಿಸಿದರೂ ನೆಲ ಮುಗಿಲು ಒಂದಾಗುವಂತೆ ಮಾಡಿ ಮಾನವೀಯತೆ ಮರೆತು ಕ್ರೌರ್ಯದಿಂದ ವರ್ತಿಸುವುದು ನಾಗರಿಕ ಲಕ್ಷಣವಲ್ಲ. ಪಶು ಪಕ್ಷಿಗಳು ಸಹ ಹಿಂಡು ಹಿಂಡಾಗಿ ಸೌಹಾರ್ದತೆಯಿಂದ ವಾಸಿಸುತ್ತಿರುವಾಗ ಮನುಷ್ಯ ಮಾತ್ರ ಜಾತಿಯ ಕಾರಣಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ಏರಿ ಹೋಗಿ ಹಲ್ಲೆ ಮಾಡುವುದು ಯಾರೂ ಒಪ್ಪಲು ಸಾಧ್ಯವಿಲ್ಲ.

ಇಷ್ಟಕ್ಕೂ ಯಾವುದೆ ವ್ಯಕ್ತಿ ತಳ ಸಮುದಾಯದಲ್ಲಿ ಹುಟ್ಟಬೇಕೆಂದು ಮೊದಲೆ ಅಪ್ಲಿಕೇಷನ್ ಹಾಕಿಕೊಂಡಿಲ್ಲ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯ ವೀರನಪುರದಲ್ಲಿ ಇತ್ತೀಚೆಗೆ ನಡೆದ ದಲಿತ ದೌರ್ಜನ್ಯ ಘಟನೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಮಾಡಿದೆ. ಪ್ರಜ್ಞಾವಂತ ಮನುಷ್ಯ ಸಮಾಜ ಇದನ್ನು ಬಲವಾಗಿ ಖಂಡಿಸಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...