ರಾಜ್ಯದಲ್ಲಿ ನಡೆಯುತ್ತಿರುವ ಎರಡನೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಯ ಮಿತಿಯೊಳಗೆ ಪೂರ್ಣಗೊಳಿಸುವುದರೊಂದಿಗೆ ಸಮರ್ಪಕವಾಗಿ ನಡೆಸಬೇಕು ಎಂದು ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ, ಶೋಷಿತ ಸಮುದಾಯಗಳ ಒಕ್ಕೂಟ, ಜಾಗೃತ ಕರ್ನಾಟಕ ಮತ್ತು ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಬುಧವಾರ (ಸೆ.10) ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ್ ಅವರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್ ರಮೇಶ್, ಹಿಂದುಳಿದ ವರ್ಗಗಳ ಮುಖಂಡ ಸಣ್ಣಭತ್ತಪ್ಪ, ಪತ್ರಕರ್ತ ಧರಣೀಶ್ ಬೂಕನಕೆರೆ, ಜಾಗೃತ ಕರ್ನಾಟಕದ ಮುಖಂಡರಾದ ವಿನೋದ್ ಕುಮಾರ್ ಇಟಗಿ, ಅನಿಲ್ ಕುಮಾರ್ ಚಿಕ್ಕದಾಳವಟ್ಟ ಅವರು ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ್ದಾರೆ.
2015ರ ಮೊದಲ️ ಸಮೀಕ್ಷೆ ಬಗ್ಗೆ ಹಲ️ವಾರು ಆಕ್ಷೇಪಗಳು ವ್ಯಕ್ತವಾಗಿ ಕೊನೆಗೆ ಅದರ ಫಲಿತಾಂಶವನ್ನು ಸರ್ಕಾರ ಅಂಗೀಕರಿಸದೆ ಕೈಬಿ️ಟ್ಟಿರುವುದು ದುರ್ಬಲ️ ಸಮುದಾಯಗಳಿಗೆ ಅಪಾರವಾದ ನಿರಾಶೆ ಮೂಡಿಸಿದೆ. ರಾಜಕೀಯ ಪ್ರೇರಿತ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ. ಹಾಗಂತ ವಸ್ತುನಿಷ್ಠವಾದ ಆಕ್ಷೇಪಗಳನ್ನು ಉಪೇಕ್ಷಿಸುವುದು ಸರಿಯಾದ ಕ್ರಮವಾಗುವುದಿಲ್ಲ. ಎರಡನೆಯ ಸಮೀಕ್ಷೆ ವೇಳೆ ಇಂತಹ ಲೋಪಗಳಾಗದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಮುಖಂಡರು ಸಲ️ಹೆ ನೀಡಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮತ್ತು ಸರಿಯಾದ ಮಾಹಿತಿಯನ್ನು ಒದಗಿಸಲು ಎಲ್ಲಾ ಸಮುದಾಯಗಳಿಗೆ ಅರಿವು ಮೂಡಿಸುವ ಕೆಲ️ಸವನ್ನು ಸಮೀಕ್ಷೆಗೆ ಪೂರ್ವಭಾವಿಯಾಗಿ ನಡೆಸುವುದು ತುಂಬಾ ಅಗತ್ಯ. ಈ ಕುರಿತು ಆಯೋಗದ ಕಡೆಯಿಂದ ನಡೆದಿರುವ ಪ್ರಯತ್ನಗಳು ಕಾಣಿಸುತ್ತಿಲ್ಲ. ವಿವಿಧ ಸಂಘಟನೆಗಳು ಅವುಗಳಿಗೆ ತಿಳಿದಹಾಗೆ ಅರಿವು ಮೂಡಿಸಲು ಪ್ರಾರಂಭಿಸಿವೆ. ಆದರೆ, ಹಿಂದುಳಿದ, ತೀರಾ ಹಿಂದುಳಿದ, ಸಣ್ಣ, ಅತಿಸಣ್ಣ ಸಮುದಾಯಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಆಯೋಗವು ಸಮುದಾಯಗಳನ್ನು ಸಮಾಲೋಚನೆಗೆ ಆಹ್ವಾನಿಸಬೇಕು ಎಂದು ಮನವಿ ಮಾಡಿದ್ದಾರೆ.
ಆಯೋಗ ನಡೆಸುತ್ತಿರುವ ಎರಡನೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುವುದು ತಲೆ ಎಣಿಕೆ ಅಲ್ಲ. ರಾಜ್ಯದ ಏಳು ಕೋಟಿಗೂ ಹೆಚ್ಚು ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅರಿಯುವ ಸಮಗ್ರವಾದ ಕೆಲ️ಸ. ಕೇಂದ್ರ ಸರ್ಕಾರ ಮಾಡುತ್ತಿರುವುದು ಗಣತಿ, ರಾಜ್ಯ ಸರ್ಕಾರ ಮಾಡುತ್ತಿರುವುದು ಸಮೀಕ್ಷೆ ಎನ್ನುವುದನ್ನು ಜನರಿಗೆ ತಿಳಿಸಬೇಕಾಗಿದೆ. ಜನರು ಸಮೀಕ್ಷೆಗೆ ಮುಕ್ತವಾಗಿ ಸ್ಪಂದಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆಯೋಗವು ವ್ಯಾಪಕ ಪ್ರಚಾರ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಮೊದಲ️ ಸಮೀಕ್ಷೆ ಸಂದರ್ಭದಲ್ಲಿ ದ್ವಿತೀಯ ಮೂಲ️ದ ಮಾಹಿತಿ ಸಂಗ್ರಹಿಸುವ ಕೆಲ️ಸ ಮಾಡಿರಲಿಲ್ಲ. ಮೊದಲ️ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾರಿಯಾಗದಿರಲು ಸರ್ಕಾರಗಳ ಇಚ್ಚಾಶಕ್ತಿಯ ಕೊರತೆ ಕಾರಣವಾಗಿತ್ತೇ, ವಿನಃ ಆಯೋಗ ಅಲ್ಲ. ಆದರೂ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಪಾಡಿಕೊಳ್ಳದೆ ಪ್ರಮಾದ ಎಸಗಲಾಗಿತ್ತು. ಅದಕ್ಕಾಗಿ ಎರಡನೇ ಸಮೀಕ್ಷೆ ವೇಳೆ ಇಡೀ ಪ್ರಕ್ರಿಯೆ ಪಾರದರ್ಶವಾಗಿರಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಡಿಜಿಟಲ್ ಅರೆಸ್ಟ್: ಔರಾದ್ ಮಾಜಿ ಶಾಸಕ ಗುಂಡಪ್ಪ ವಕೀಲ್‌ಗೆ ರೂ. 31 ಲಕ್ಷ ವಂಚನೆ


