ಖಾರಿಫ್ ಭತ್ತ ಖರೀದಿ ಪ್ರಕ್ರಿಯೆಯನ್ನು ಮುಂದೂಡಿದ್ದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಹರಿಯಾಣ ಮತ್ತು ಪಂಜಾಬ್ ರೈತರು ನಡೆಸಿದ ತೀವ್ರ ಹೋರಾಟಕ್ಕೆ ಜಯ ದೊರಕಿದೆ. ನಾಳೆಯಿಂದಲೇ (ಅಕ್ಟೋಬರ್ 03) ಭತ್ತ ಖರೀದಿ ಮಾಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.
The procurement (of Kharif crops) will start from tomorrow in Haryana as well as Punjab: Ashwini Kumar Choubey, MoS, Consumer Affairs, Food & Public Distribution in Delhi pic.twitter.com/8rS3t765lF
— ANI (@ANI) October 2, 2021
ಕೇಂದ್ರವು ಅಕ್ಟೋಬರ್ 1 ರಿಂದ ಭತ್ತ ಕೊಳ್ಳಬೇಕಿತ್ತು. ಆದರೆ ಅದನ್ನು ಅಕ್ಟೋಬರ್ 11 ಕ್ಕೆ ಮುಂದೂಡಿತ್ತು. ಇದರಿಂದ ಕೆರಳಿದ ರೈತರು ಕಳೆದೆರೆಡು ದಿನಗಳಿಂದ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ತೀವ್ರಥರದ ಪ್ರತಿಭಟನೆ ನಡೆಸಿದ್ದರು.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಲಾ ವಿರುದ್ಧ ಘೇರಾವ್ ಹಾಕಿ ಪ್ರತಿಭಟಿಸಿದ್ದರು. ಹಲವೆಡೆ ರೈತರ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಸಿಡಿಸಲಾಗಿತ್ತು. ಹರಿಯಾಣದ ಜಜ್ಜಾರ್‌ನಲ್ಲಿ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರ ಕಾರ್ಯಕ್ರಮದ ವಿರುದ್ಧ ರೈತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ರೈತರನ್ನು ತಡೆಯಲು ಭದ್ರತಾ ಸಿಬ್ಬಂದಿ ಜಲ ಫಿರಂಗಿ ಬಳಸಲಾಗಿತ್ತು.
ಕೇಂದ್ರದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಇತರ ರಾಜ್ಯ ಏಜೆನ್ಸಿಗಳು ಭತ್ತ ಕೊಳ್ಳುತ್ತವೆ. ಈಗಾಗಲೇ ಅತಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಬೆಳೆಗೆ ಹಾನಿಯಾಗುತ್ತಿದ್ದು, ಕೇಂದ್ರವು ಖಾರೀಫ್ ಭತ್ತ ಕೊಳ್ಳುವುದನ್ನು ತ್ವರಿತಗೊಳಿಸಬೇಕೆಂದು ರೈತರು ಒತ್ತಾಯಿಸಿ ಹೋರಾಟಕ್ಕಿಳಿದಿದ್ದರು. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಬಹುಪಾಲು ಭತ್ತ ಬೆಳೆಯುವುದರಿಂದ ಅಲ್ಲಿನ ಚಳವಳಿ ತೀವ್ರ ರೂಪ ಪಡೆದುಕೊಂಡಿತ್ತು. ಅದಕ್ಕೆ ಮಣಿದ ಸರ್ಕಾರ ನಾಳೆಯಿಂದಲೇ ಭತ್ತ ಖರೀದಿಗೆ ಮುಂದಾಗಿದೆ.
“ಇದು ರೈತರಿಗೆ ಸಂದ ದೊಡ್ಡ ಗೆಲುವು. ನಾಳೆಯಿಂದ ಹರಿಯಾಣ ಮತ್ತು ಪಂಜಾಬ್ ನಲ್ಲಿ ಖಾರಿಫ್ ಖರೀದಿ ಆರಂಭವಾಗಲಿದೆ. ರೈತರು ಸೇರಿದಂತೆ ಅವರ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ನಾಗರಿಕರಿಗೆ ಅಭಿನಂದನೆಗಳು” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಟ್ವಿಟರ್ ಹ್ಯಾಂಡಲ್ ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
किसानों की बड़ी जीत। कल से ही हरियाणा और पंजाब में शुरू हो जाएगी खरीफ की खरीद। किसानों समेत सभी नागरिकों को संघर्ष करने पर बधाई।
Big victory for farmers. Kharif procurement in Haryana and Punjab will begin from tomorrow only.#KisanMajdoorEktaZindabaad https://t.co/3ONiffLIlK
— Kisan Ekta Morcha (@Kisanektamorcha) October 2, 2021
ಮತ್ತೊಮ್ಮೆ ರೈತ ಚಳುವಳಿ ಗೆದ್ದಿದೆ! ನಾಳೆ ಬೆಳಿಗ್ಗೆಯಿಂದ ಕೇಂದ್ರ ಸರ್ಕಾರ ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಸಂಗ್ರಹವನ್ನು ಆರಂಭಿಸಲಿದೆ ಎಂದು ರೈತ ಹೋರಾಟಗಾರ ದೀಪಕ್ ಲಂಬಾ ತಿಳಿಸಿದ್ದಾರೆ.
एक बार फिर किसान आंदोलन की जीत हुई!
केंद्र सरकार कल सुबह से पंजाब और हरियाणा में धान की खरीद शुरू करेगी। #FarmersProtest pic.twitter.com/u5x2zz3CTD
— Deepak Lamba (@dlambahry) October 2, 2021
ಪಂಜಾಬ್‌ನ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿಯವರು ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ವೇಳೆ ಭತ್ತ ಖರೀದಿ ಪ್ರಕ್ರಿಯೆ ಮುಂದೂಡಿರುವುದನ್ನು ರದ್ದುಗೊಳಿಸಿ ಕೂಡಲೇ ಭತ್ತ ಖರೀದಿ ಮಾಡಬೇಕೆಂದು ಒತ್ತಾಯಿಸಿದ್ದರು. ಪಂಜಾಬ್ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿದ್ದು ಕೇಂದ್ರದ ಕ್ರಮದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಚನ್ನಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಪಿಎಂ ಭೇಟಿಯಾದ ಪಂಜಾಬ್ ನೂತನ ಸಿಎಂ ಚನ್ನಿ: ಕೃಷಿ ಕಾಯ್ದೆಗಳನ್ನು ಕೈಬಿಡಲು ಮನವಿ


