Homeಕರ್ನಾಟಕವಿಡಿಯೊ ವರದಿ: ಬ್ಯಾಲಹಳ್ಳಿ ದಲಿತರಿಂದ ದೇವಾಲಯ ಪ್ರವೇಶ; ಸವರ್ಣೀಯರ ಅಸಹನೆ

ವಿಡಿಯೊ ವರದಿ: ಬ್ಯಾಲಹಳ್ಳಿ ದಲಿತರಿಂದ ದೇವಾಲಯ ಪ್ರವೇಶ; ಸವರ್ಣೀಯರ ಅಸಹನೆ

- Advertisement -
- Advertisement -

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿ ವ್ಯಾಪ್ತಿಗೆ ಸೇರಿದ ಬ್ಯಾಲಹಳ್ಳಿಯಲ್ಲಿ ಸವರ್ಣೀಯರ ವಿರೋಧದ ನಡುವೆಯೇ ದಲಿತರು ದೇವಾಲಯ ಪ್ರವೇಶಿಸುವ ಕಾರ್ಯಕ್ರಮ ನಡೆಯಿತು.

ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ತೊಳಸಮ್ಮ ದೇವಾಲಯವಿದ್ದು, ಈವರೆಗೆ ದಲಿತರ ಪ್ರವೇಶವಾಗಿರಲಿಲ್ಲ. ಅಲ್ಲದೇ ದೇವಾಲಯದ ಗೋಡೆಗೆ ಮುಜರಾಯಿ ಇಲಾಖೆ ಅಂಟಿಸಿದ್ದ ಸೂಚನಾ ಫಲಕ ಅಳಿಸಿ ಹಾಕುವ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿದ್ದರು.

“ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮ ಬೇಧವಿಲ್ಲದೆ ಪ್ರವೇಶಿಸಲು ಅವಕಾಶ ನೀಡಲಾಗಿದೆ” ಎಂದು ಹಾಕಲಾಗಿದ್ದ ಸೂಚನಾ ಫಲಕದಲ್ಲಿ ‘ಜಾತಿ, ಜನಾಂಗ’ ಇತ್ಯಾದಿ ಪದಗಳನ್ನು ಅಳಿಸಿ ಹಾಕಲಾಗಿತ್ತು.

ಈ ಕುರಿತು ‘ನಾನುಗೌರಿ.ಕಾಂ’ ವರದಿ ಮಾಡಿದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರು. ಸೋಮವಾರ ಗ್ರಾಮಕ್ಕೆ ಭೇಟಿ ನೀಡಿರುವ ಕಂದಾಯ ನಿರೀಕ್ಷಕ ನಾಗಭೂಷಣ, ಗ್ರಾಮ ಲೆಕ್ಕಾಧಿಕಾರಿ ಶಶಿ ಕುಮಾರ್‌ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಆದರೆ ದಲಿತರು ದೇವಾಲಯ ಪ್ರವೇಶಿಸುವುದನ್ನು ತಡೆಯಲು ಸವರ್ಣೀಯ ಯುವಕರು ಯತ್ನಿಸಿದರು. ಇದರಿಂದ ಹೆದರಿದ ದಲಿತರು, ದೇವಾಲಯ ಪ್ರವೇಶಿಸಲು ಹಿಂದೇಟು ಹಾಕಿದರು. ಆದರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ ಒಬ್ಬರೇ ದೇವಾಲಯ ಪ್ರವೇಶಿಸುವ ಧೈರ್ಯ ತೋರಿದರು.

ದೇವಾಲಯ ಪ್ರವೇಶ ಸಂದರ್ಭದಲ್ಲಿ ಸೆರೆಹಿಡಿಯಲಾಗಿರುವ ವಿಡಿಯೋ ‘ನಾನುಗೌರಿ.ಕಾಂ’ಗೆ ಲಭ್ಯವಾಗಿದ್ದು, ಯಥಾಸ್ಥಿತಿಯನ್ನೇ ಮುಂದುವರಿಸಬೇಕೆಂದು ಸವರ್ಣೀಯರು ಪ್ರತಿಪಾದಿಸುತ್ತಿರುವುದನ್ನು ಕಾಣಬಹುದು.

“ಇವರಿಗೆ ಯಾವತ್ತಾದರೂ ಪ್ರಸಾದ ಕೊಡುವುದಿಲ್ಲ ಎಂದು ಹೇಳಿದ್ದೇವೆಯೇ? ನಮ್ಮ ಜೊತೆಯಲ್ಲೇ ಕುಳಿತು ನಮ್ಮ ಜನದಂತೆಯೇ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ” ಎಂದು ಸರ್ವಣೀಯ ಯುವಕರು ಹೇಳುವುದನ್ನು ಕೇಳಬಹುದು.

ಅದಕ್ಕೆ ರೇಣುಕಪ್ಪ ಅವರು, “ಪಂಕ್ತಿಯಿಂದ ಎದ್ದು ಬಂದಿದ್ದೇನೆ” ಎಂದು ಹೇಳುತ್ತಾ ತಮಗಾಗಿರುವ ಜಾತಿ ತಾರತಮ್ಯವನ್ನು ಖಂಡಿಸಿರುವುದನ್ನು ಕಾಣಬಹುದು.

“ಬೋರ್ಡ್‌ ಬರೆಸುತ್ತೇವೆ ಬಿಡಪ್ಪ” ಎಂದು ಕಂದಾಯ ಅಧಿಕಾರಿ ಹೇಳುತ್ತಾರೆ. “ಸರ್‌, ಬೋರ್ಡ್ ಬರೆಸುವುದಷ್ಟೇ ಅಲ್ಲ, ದೇವಾಲಯದೊಳಗೆ ಪ್ರವೇಶವನ್ನೂ ಕೊಡಿಸಬೇಕು” ಎಂದು ಆಗ್ರಹಿಸುತ್ತಾರೆ.

ಸಿಟ್ಟಿಗೆದ್ದ ಸವರ್ಣೀಯರು ತಿರಸ್ಕಾರದಿಂದಲೇ, “ಹೋಗೋ ಪ್ರವೇಶ ಮಾಡು” ಎನ್ನುತ್ತಾರೆ. ರೇಣುಕಪ್ಪ ದೇವಾಲಯ ಪ್ರವೇಶಿಸಿದ್ದಾರೆ. ಅದನ್ನು ಸಹಿಸದ ಸವರ್ಣೀಯ ಯುವಕನೊಬ್ಬ, “ದೇವರು ಶಕ್ತಿ ಇದ್ದರೆ ನಿನ್ನನ್ನು ನೋಡಿಕೊಳ್ಳುತ್ತಾಳೆ” ಎಂದಿದ್ದಾನೆ.

ಬ್ಯಾಲಹಳ್ಳಿಯ ಹಾಲು ಉತ್ಪಾದಕರ ಸಂಘದಲ್ಲಿ ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡುತ್ತಿರಲಿಲ್ಲ. ಹಾಲು ನೀಡಲು ನಿರಾಕರಣೆ ಹಾಗೂ ದೇವಾಲಯದ ಬೋರ್ಡ್ ಅಳಿಸಿ ಹಾಕಿರುವ ಕುರಿತು ನಾನೂಗೌರಿ.ಕಾಂನಲ್ಲಿ ವರದಿ ಮಾಡಲಾಗಿತ್ತು. ಹಾಲಿನ ವಿಚಾರವನ್ನು ದಲಿತ ಮುಖಂಡ ಸಿದ್ದಲಿಂಗಯ್ಯ ಪ್ರಸ್ತಾಪಿಸಿರುವುದನ್ನು ಕಾಣಬಹುದು. “ದೇವಾಲಯ ಪ್ರವೇಶಿಸಿ ನಮಗೇನು ಕೋಟಿ ಎಂಬತ್ತು ಲಕ್ಷ ಬರುವುದಿಲ್ಲ. ಹಾಲನ್ನು ಕೊಡಲು ವ್ಯವಸ್ಥೆ ಮಾಡಿ” ಎಂದು ಸಿದ್ದಲಿಂಗಯ್ಯ ಅಧಿಕಾರಿಗೆ ಆಗ್ರಹಿಸುತ್ತಾರೆ.

“ನಾವು ಪೂಜೆ ಸಾಮಾನು ತಂದಾಗ ಎಲ್ಲರಿಗೂ ಪೂಜೆ ಮಾಡಿಕೊಟ್ಟಂತೆ ನಮಗೂ ಮಾಡಿಕೊಡಬೇಕು” ಎಂದು ರೇಣುಕಪ್ಪ ಆಗ್ರಹಿಸಿದಾಗ, “ಮಾಡಿಕೊಡುತ್ತೇವೆ” ಎಂದು ತಿರಸ್ಕಾರದಿಂದಲೇ ಸವರ್ಣೀಯರು ಒಪ್ಪಿಕೊಂಡಿದ್ದಾರೆ.

ಹಾಲು ಖರೀದಿಗೆ ಅವಕಾಶ: ಕಂದಾಯ ನಿರೀಕ್ಷಕರು ಹಾಲಿನ ಡೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. “ಮಂಗಳವಾರದಿಂದ ದಲಿತರು ಹಾಲು ಖರೀದಿಸಲು ಅವಕಾಶ ನೀಡಿರುವುದು ಕೊಂಚ ಸಮಾಧಾನ ತಂದಿದೆ” ಎಂದು ದಲಿತರು ತಿಳಿಸಿದ್ದಾರೆ.

ಇದನ್ನೂ ಓದಿರಿ: ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...