Homeಮುಖಪುಟಸಾರ್ವಜನಿಕ ಅಸಹಿಷ್ಣುತೆಯಿಂದಾಗಿ 'ಕರ್ವಾ ಚೌತ್‌' ಜಾಹೀರಾತು ಹಿಂಪಡೆಯಬೇಕಾಯಿತು: ನ್ಯಾ. ಡಿ.ವೈ. ಚಂದ್ರಚೂಡ್‌

ಸಾರ್ವಜನಿಕ ಅಸಹಿಷ್ಣುತೆಯಿಂದಾಗಿ ‘ಕರ್ವಾ ಚೌತ್‌’ ಜಾಹೀರಾತು ಹಿಂಪಡೆಯಬೇಕಾಯಿತು: ನ್ಯಾ. ಡಿ.ವೈ. ಚಂದ್ರಚೂಡ್‌

ಯುವ ಪೀಳಿಗೆಯ ಪುರುಷರಲ್ಲಿ ಜಾಗೃತಿ ಮೂಡಿಸಿದರೆ ಮಹಿಳೆಯರ ಹಕ್ಕುಗಳ ಬಗ್ಗೆ ಅರಿವೂ ನಿಜವಾಗಿಯೂ ಅರ್ಥಪೂರ್ಣವಾಗಿರುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

- Advertisement -
- Advertisement -

‘ಸಾರ್ವಜನಿಕ ಅಸಹಿಷ್ಣುತೆ’ಯಿಂದಾಗಿ ಸಲಿಂಗ ದಂಪತಿಗಳನ್ನು ಒಳಗೊಂಡಿದ್ದ ಡಾಬರ್‌ ಕಂಪನಿಯ ಕರ್ವಾ ಚೌತ್‌ ಜಾಹೀರಾತನ್ನು ಹಿಂತೆಗೆದುಹಾಕಬೇಕಾಯಿತು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಮಾಜಿಕ ಅಸಮಾನತೆಗಳನ್ನು ತೆಗೆದುಹಾಕುವ ಉದ್ದೇಶದಿಂದ ರಚಿತವಾದ ಕಾನೂನುಗಳಿಗೂ ಮತ್ತು ಈ ನೆಲದ ವಾಸ್ತವತೆಗೂ ಬಹಳಷ್ಟು ಅಂತರ ಇರುವುದರ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಮಹಿಳೆಯರಿಗೆ ಕಾನೂನು ಅರಿವು’ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್‌, ‘ಕಾನೂನಿನ ಆದರ್ಶಗಳು ಮತ್ತು ಇಂದಿನ ಸಮಾಜದ ನೈಜ ಸ್ಥಿತಿಯ ನಡುವೆ ದೊಡ್ಡ ಅಂತರವಿದೆ ಎಂದು ತೋರಿಸುವ ನೈಜ ಜೀವನದ ಸನ್ನಿವೇಶಗಳು ಜರುಗುತ್ತಿವೆ’ ಎಂದು ತಿಳಿಸಿದರು.

ಕಳೆದ ವಾರವಷ್ಟೆ ಬಂದಿದ್ದ, ಇಬ್ಬರು ಮಹಿಳೆಯರು ಒಟ್ಟಾಗಿ ಕರ್ವಾ ಚೌತ್‌ ಅನ್ನು ಆಚರಿಸುತ್ತಿರುವ ಜಾಹೀರಾತಿಗೆ ಸಾರ್ವಜನಿಕರಿಂದ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದವು. ನವ ವಿವಾಹಿತ ಲೆಸ್ಬಿಯನ್‌‌ ಜೋಡಿ ತಮ್ಮ ಮೊದಲ ‘ಕರ್ವಾ ಚೌತ್‌’ ಹಬ್ಬವನ್ನು ಆಚರಿಸುವ ಜಾಹಿರಾತನ್ನು ಡಾಬರ್‌ ಒಡೆತನದ ಖ್ಯಾತ ಸೌಂದರ್ಯ ವರ್ಧಕ ‘ಫೆಮ್ ಸ್ಕಿನ್‌ಕೇರ್‌’ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿತ್ತು. ಅನೇಕ ಪ್ರಗತಿಪರರು ಈ ಜಾಹೀರಾತನ್ನು ಸ್ವಾಗತಿಸಿದ್ದರೆ, ‌ಒಂದು ವಿಭಾಗ ಜಾಹೀರಾತನ್ನು ಟೀಕಿಸಿತ್ತು. ಬಲಪಂಥೀಯರಲ್ಲಿ ಈ ಜಾಹೀರಾತಿನ ಬಗ್ಗೆ ಕರುಣೆಯಿಲ್ಲದ ರೀತಿಯಲ್ಲಿ ಟ್ರೋಲಿಂಗ್‌ ಮತ್ತು ಬೆದರಿಕೆ ನಡೆದಿತ್ತು. ಇದೆಲ್ಲದರಿಂದಾಗಿ ಡಾಬರ್‌ ಈ ಜಾಹೀರಾತನ್ನು ಹಿಂತೆಗೆದುಕೊಂಡಿದ್ದಲ್ಲದೇ, ಕ್ಷಮೆಯಾಚಿಸಿತ್ತು.

‘ಎರಡು ದಿನಗಳ ಹಿಂದೆ, ಕಂಪನಿಯೊಂದು ‘ಸಲಿಂಗ ದಂಪತಿಗಳ ಕರ್ವಾ ಚೌತ್‌’ ಜಾಹೀರಾತನ್ನು ಹಿಂತೆಗೆದುಕೊಂಡಿದ್ದು ನಿಮ್ಮೆಲ್ಲರಿಗೂ ತಿಳಿದಿರಬಹುದು.  ‘ಸಾರ್ವಜನಿಕ ಅಸಹಿಷ್ಣುತೆ’ಯ ಕಾರಣದಿಂದ ಅದನ್ನು ಹಿಂತೆಗೆದುಕೊಳ್ಳಬೇಕಾಯಿತು’ ಎಂದು ಅವರು ವಿವರಿಸಿದರು.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರ ಅವರು ಇತ್ತೀಚಿನ ವಾರಗಳಲ್ಲಿ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ‘ಆಕ್ಷೇಪಾರ್ಹ’ ವಿಷಯಗಳು ಕಂಡುಬರುತ್ತಿದ್ದು, ಅಂತಹವುಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎನ್ನುವ ಮೂಲಕ ಡಾಬರ್‌ ಕಂಪನಿಗೆ ಬೆದರಿಕೆ ಹಾಕಿದ್ದರು.

ಪ್ರತಿದಿನ ಮಹಿಳೆಯರ ಮೇಲೆ ಅನ್ಯಾಯ ನಡೆಯುತ್ತಿರುವುದಕ್ಕೆ ಉದಾಹರಣೆಗಳಿವೆ ಎಂದ ಅವರು, ‘ಭಾರತದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆಗಳು ಮತ್ತು ಪುರುಷಾಧಿಪತ್ಯಕ್ಕೆ ಸಂವಿಧಾನವು ಪರಿಹಾರಗಳನ್ನು ಹೊಂದಿದೆ. ಯುವ ಪೀಳಿಗೆಯ ಪುರುಷರಲ್ಲಿ ಜಾಗೃತಿ ಮೂಡಿಸಿದರೆ ಮಹಿಳೆಯರ ಹಕ್ಕುಗಳ ಬಗ್ಗೆ ಅರಿವೂ ನಿಜವಾಗಿಯೂ ಅರ್ಥಪೂರ್ಣವಾಗಿರುತ್ತದೆ’ ಎಂದು ಹೇಳಿದರು.

‘ನಮ್ಮ ಸಂವಿಧಾನವು ಪುರುಷಾಧಿಪತ್ಯದಲ್ಲಿ ಬೇರೂರಿರುವ ರಚನಾತ್ಮಕ ಅಸಮಾನತೆಗಳನ್ನು ನಿವಾರಿಸಲು ಪ್ರಯತ್ನಿಸುವ ದಾಖಲೆಯಾಗಿದೆ. ಇದು ಮಹಿಳೆಯರು ಸಮಾನತೆ ಮತ್ತು ಘನತೆಯಿಂದ ಸಾರ್ವಜನಿಕವಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಪ್ರಬಲ ಸಾಧನವಾಗಿದೆ. ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ಈಡೇರಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ, ಕೌಟುಂಬಿಕ ಹಿಂಸಾಚಾರ ಕಾಯ್ದೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ತಡೆ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಹೀಗಿದ್ದರೂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನಾವು ನಮ್ಮ ಜೀವನದಲ್ಲಿ ಪ್ರತಿದಿನ ಮಹಿಳೆಯರ ವಿರುದ್ಧ ಅನ್ಯಾಯವನ್ನು ಎದುರಿಸುತ್ತೇವೆ’ ಎಂದು ಹಿರಿಯ ನ್ಯಾಯಾಧೀಶರು ಹೇಳಿದ್ದಾರೆ.


ಇದನ್ನೂ ಓದಿ: ಲೆಸ್ಬಿಯನ್ ಜೋಡಿ ‘ಕರ್ವಾ ಚೌತ್‌’ ಆಚರಿಸುವ ಜಾಹೀರಾತು ಹಿಂಪಡೆದ ಡಾಬರ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...