Homeಅಂಕಣಗಳುಹನಿಮೂನ್ ಸಾಕು ತಗೋ ತಲಾಕು

ಹನಿಮೂನ್ ಸಾಕು ತಗೋ ತಲಾಕು

- Advertisement -
- Advertisement -

ಆಘಾತವಾಣಿ ವಾರ್ತೆಗಳು, ಕೇಳುಗರಿಗೆಲ್ಲ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಆಗಿದ್ದಾಗ್ಲಿ ಹೋಗಿದ್ದೋಗ್ಲಿ, ಆರು ಮೂರಾಗ್ಲಿ, ಮೂರು ಮುವ್ವತ್ತಾಗ್ಲಿ, ನಾನೂ ಕೆಲ್ಸ ಮಾಡಲ್ಲ, ಬೇರೇಯವ್ರಿಗೂ ಕೆಲ್ಸ ಮಾಡೋಕೆ ಬಿಡಲ್ಲ ಅಂತ ವೀರಪ್ರತಿಜ್ಞೆ ಮಾಡಿರೋ ಪಕೋಡೇಂದ್ರ ಕುಂಡಾಲಯ್ಯನ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ. ವರ್ಷಗಳ ಹಿಂದೆ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷದಿಂದ ಮಕಮೂತಿಗೆ ಇಕ್ಕಿಸಿಕೊಂಡು ಮಣ್ಣುಮುಕ್ಕಿದ್ದ ಪಕೋಡೇಂದ್ರರವರು ಕೇಜ್ರಿವಾಲ್ ತಲೆ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಶೋಕೇಸ್ ಪೀಸೊಂದನ್ನು ಕುಕ್ಕಿದ್ದನು. ಈ ಲಡಾಸಿ ಗೌರ್ನರ್ ದೆಹಲಿಯ ಐಎಎಸ್ ಅಧಿಕಾರಿಗಳ ತಲೆಸವರಿ ಒಳಕ್ಕೆಳೆದುಕೊಂಡು ತಾನಿರುವ ಸರ್ಕಾರದ ವಿರುದ್ಧವೇ ಸ್ಟ್ರೈಕು ಮಾಡಿಸಲು ಹಚ್ಚಿದ್ದಾರೆಂದು ಸುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ತಮ್ಮ ತಂಡದೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಕಚೇರಿಯೊಳಗೇ ಮೊಕ್ಕಾಂ ಹೂಡಿ ಧರಣಿ ಕೂತು ವಾರ ಕಳೆದರೂ ಚೇಂಬರಿನಿಂದ ಹೊರಬರದೆ ಟೇಬಲ್ ಕೆಳಗೆ ಅವಿತು ಕುಳಿತಿದ್ದ ಆತನು ದೆಹಲಿಯ ಜನರು ಕೈಗೆ ಪ್ಯಾರಗಾನ್ ಚಡಾವು ಕಳಚಿಕೊಳ್ಳುತ್ತಿದ್ದಂತೆ ಆಫೀಸಿಂದ ಈಚೆ ಬಂದು ಕೇಜ್ರಿವಾಲ್ ಬೇಡಿಕೆಗಳಿಗೆ ಸೈನ್ ಹಾಕಿ ಮತ್ತೆ ಹೋಗಿ ಟೇಬಲ್ ಕೆಳಗೆ ಅವಿತುಕೊಂಡಿದ್ದಾನೆಂದು ವರದಿಯಾಗಿದೆ.
****
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಮೂರು ಮುಕ್ಕಾಲು ಸೀಟು ಪಡೆದು ಕಾಶ್ಮೀರ ಪ್ರತ್ಯೇಕತಾವಾದಿ ಪಿಡಿಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸಿದ್ದ ಬ್ಲೂಜೆಪಿ ಪಕ್ಷದ ವತಿಯಿಂದ ಹೊಸ ನ್ಯೂಸೊಂದು ಎಗರಿ ಬಂದಿದೆ. ಪುಡಿಪುಕ್ಕ ಸೀಟುಗಳನ್ನು ಕಂಕುಳಿಗಿಟ್ಟುಕೊಂಡು “ ಪ್ರೀತ್ಸೇ ಪ್ರೀತ್ಸೇ, ಮೂರೂ ಬಿಟ್ಟು ನನ್ನೇ ಪ್ರೀತ್ಸೇ” ಅಂತ ಈ ಕಡೆಯಿಂದ ಪಿಡಿಪಿ ಪಕ್ಷದ ಸೊಂಟ ಗಿಲ್ಲಿದಾಗ, ಆ ಕಡೆಯಿಂದ “ ಆಜಾ ಮೆರಿ ಗಾಡಿ ಮೇ ಬೈಟ್ ಜಾ, ಆಜಾ ಮೆರಿ ಗಾಡಿ ಮೇ ಬೈಟ್ ಜಾ” ಅನ್ನೋ ರೆಸ್ಪಾನ್ಸ್ ಬಂದಿತ್ತು. ನಂತ್ರ ಇಬ್ಬರೂ ಸೇರಿ ಕಾಶ್ಮೀರದಲ್ಲಿ ಕಲಬೆರಕೆ ಸರ್ಕಾರ ರಚಿಸಿ ಒಬ್ಬರ ಸೊಂಟ ಒಬ್ಬರು ಹಿಡಿದು “ ಬೆರಕೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹೂ ಅಂತೀಯ, ಉಹೂ ಅಂತೀಯ” ಅಂತ ಡ್ಯಾನ್ಸ್ ಮಾಡ್ತಿದ್ದ ಎರಡೂ ಪಕ್ಷಗಳು ಈಗ ಮಕಮಕ ಪರಚಾಡಿಕೊಂಡು ದಿಢೀರ್ ಡೈವೋರ್ಸ್ ತಗೊಂಡಿವೆ.
****
ಈ ಢಮಾರ್ ಡೈವೋರ್ಸಿಗೆ ಕಾರಣಗಳೇನೆಂದು ಕೆದಕಿದಾಗ ಕುತೂಹಲಕಾರಿ ಕಿತಾಪತಿ ಮಾಹಿತಿಗಳು ನಮಗೆ ಲಭ್ಯವಾಗಿವೆ. ದೇಶದ ತುಂಬ ಕಾಶ್ಮೀರಿ ಟೆರರಿಸ್ಟ್‍ಗಳ ಬಗ್ಗೆ ಪುಯ್ಯೋ ಪುಯ್ಯೋ ಎಂದು ಪುಂಗಿ ಊದುವ ಬ್ಲೂಜೆಪಿ ಪಕ್ಷವು, ಈ ಪ್ರತ್ಯೇಕತಾವಾದಿಗಳ ಜೊತೆಗೆ ಕಾಶ್ಮೀರದಲ್ಲಿ ತಮ್ಮದೇ ಸರ್ಕಾರದಲ್ಲಿ ಕುಸುಕು ಮುಸುಕು ನಡೆಸುತ್ತಿದ್ದುದು ಎಲ್ಲರಿಗು ತಿಳಿದ ಸತ್ಯ. ಪೊಲೀಸರು-ಮಿಲಿಟರಿಯವರು ಅರೆಸ್ಟ್ ಮಾಡಿದ ಟೆರರಿಸ್ಟುಗಳ ಕೈಗೆ ಹೂಗುಚ್ಛ ಕೊಟ್ಟು ಜೈಲಿಂದ ಬಿಡಿಸಿ ಕಳಿಸುತ್ತಿದ್ದ ಇದೇ ಬೆರಕೆ ಪಕ್ಷದವರು ಬೇರೆ ರಾಜ್ಯಗಳಲ್ಲಿ ಇದಕ್ಕೆ ಉಲ್ಟಾ ಭಾಷಣಗಳನ್ನು ಬೊಗಳುತ್ತ ಚಿಲ್ರೆಕಾಸು ದುಡಿದು ಹೊಟ್ಟೆ ಹೊರೆಯುತ್ತಿದ್ದರು. ಅದೇನಾಯ್ತೋ ಏನೋ ಪಿಡಿಪಿ ಪಕ್ಷಕ್ಕೆ ಬ್ಲೂಜೆಪಿ ಜೊತೆಗಿನ ಕುಸುಕು ಮುಸುಕು ಪ್ರಣಯ ಸಾಕಾಗಿ ಬ್ಲೂಜೆಪಿಯನ್ನು ಸರ್ಕಾರದಿಂದ ಒದ್ದೋಡಿಸುವ ಪ್ರಯತ್ನದಲ್ಲಿತ್ತು. ಅಷ್ಟರಲ್ಲಿ ತನ್ನ ಲಂಗೋಟಿ-ಪುಟಗೋಸಿಯನ್ನು ಗಂಟು ಕಟ್ಟಿಕೊಂಡು ತಲೆ ಮೇಲೆ ಟವೆಲ್ಲು ಹಾಕಿಕೊಂಡ ಬ್ಲೂಜೆಪಿಯು ತಾನೇ ಸರ್ಕಾರದಿಂದ ಈಚೆಗೆ ಬರುತ್ತಿದ್ದೇನೆಂಬ ಡ್ರಾಮಾ ಆಡಿ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆಯೆಂದು ಬಲ್ಲ ಮೂಲಗಳು ಬೊಂಬಡ ಹೊಡೆಯುತ್ತ ತಿಳಿಸಿವೆ.
****
ಪ್ರಸ್ತುತ ಮಾಟ-ಮಂತ್ರ ಕವಡೆಶಾಸ್ತ್ರ ತಜ್ಞರ ರಾಜ್ಯಮಟ್ಟದ ಸಮ್ಮೇಳನದಂತೆ ಕಾಣುತ್ತಿರುವ ಕರ್ನಾಟಕದ ‘ಮಿಕ್ಸ್ ಮಸಾಲ ಸರ್ಕಾರ’ದ ಕಡೆಯಿಂದ ಹೊಸ “ಮಮ್ಮಿ ಮೆಟ್ಟು” ವರದಿಯೊಂದು ಕುಪ್ಪಳಿಸುತ್ತ ಬಂದಿದೆ. ಪ್ರೈಮರಿಶಾಲೆಯ ಮಂತ್ರಿಯೊಬ್ಬರು ಮದನಪಲ್ಲಿ ಮೂಲದ ರೇಪಿಸ್ಟನೊಬ್ಬನ ಪತ್ನಿ ಹಾಗೂ ಮಾಜಿಸುಂದರಿ ಮತ್ತು ಹಾಲಿ “ಮಮ್ಮಿ ಭಗವಾನ್” ದೇವಿಯ ಮರದ ಎಕ್ಕಡಗಳನ್ನು ಸ್ಲೋಮೋಷನ್ನಿನಲ್ಲಿ ಮೈಗೆಲ್ಲ ಚರಚರನೆ ಸವರಿಕೊಂಡು ಪಠಾಪಠಾ ಹೊಡೆದುಕೊಂಡು ಆಶೀರ್ವಾದ ತೆಗೆದುಕೊಂಡ ಹಾಸ್ಯಾಸ್ಪದ ಸುದ್ದಿಯೊಂದು ಲಭ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮಮ್ಮಿ ಭಗವಾನ್ ಭಕ್ತಮಂತ್ರಿಯ ಎಕ್ಕಡಸೇವೆಯ ವಿಡಿಯೋ ಕಡ್ಲೆಪುರಿಯಂತೆ ಖರ್ಚಾಗುತ್ತಿರುವುದು ರಾಜ್ಯದ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳಲ್ಲಿ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ನಿಮ್ಮ ಒಪಿನಿಯನ್ ಏನೆಂದು ಕೇಳಿದಾಗ “ಓಟಿಗೋಸ್ಕರ ಹಿಂಗೆಲ್ಲ ಕಂಡೋರ ಎಕ್ಕಡವನ್ನು ಮತದಾರರ ಇಚ್ಛೆಯಂತೆ ಮೈಗೆಲ್ಲ ಸವರಿಕೊಳ್ಳಬೇಕಾಗ್ತದೆ” ಎಂದು ಸದರೀ ಮಮ್ಮಿ ಭಗವಾನ್ ಭಕ್ತಮಂತ್ರಿಯು ಆಲಾಪಿಸಿದೆ. ಓಟು ಕೊಡೋರು “ನಮ್ಮನೆ ಎಮ್ಮೆಸೆಗಣಿ ತಿನ್ನಿ, ಮೇಲ್ಜಾತಿ ಜನರ ಬೀದಿಯ ಚರಂಡಿನೀರು ತಗೊಂಡು ತಲೆಗೆ ಚಿಮುಕಿಸ್ಕೊಳಿ” ಅಂದ್ರೆ ಅದನ್ನೂ ಮಾಡ್ತೀರ ಸ್ವಾಮಿ? ಎಂದು ಕೇಳಿದಾಗ.. ಕಂಗಾಲಾದ ಭಕ್ತಮಂತ್ರಿಯು ಮುಳುಮುಳನೆ ಗೋಳಾಡುತ್ತ ತನ್ನ ಭಜನೆಭಕ್ತರೊಡನೆ ಇನ್ನೊಂದು “ಡ್ಯಾಡಿ ಭಗವಾನ್” ಮಠದತ್ತ ಬರಿಗಾಲಲ್ಲಿ ಓಡಿಹೋದ ಘಟನೆ ತಡವಾಗಿ ವರದಿಯಾಗಿದೆ.
****
ಹೊಟ್ಟೆಪಾಡಿಗೊಂದು ಕೆಲಸವೂ ಇಲ್ಲದೆ ತೆಂಗಿನಚಿಪ್ಪೊಂದನ್ನು ತಲೇ ಮೇಲಿಟ್ಟುಕೊಂಡು ಊರೂರಲ್ಲಿ ತಿರುಪೆಯೆತ್ತಿಕೊಂಡು ಅಂಡಲೆಯುತ್ತಿರುವ ‘ಪ್ರಬೋದ್ ಮೂತ್ರಲೀಕ್’ ಎಂಬ ವಯೋವೃದ್ಧ ಗುಳ್ಳೆನರಿಯು ಈ ಜನ್ಮದಲ್ಲಿ ಉದ್ದಾರವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲವೆಂಬುದಕ್ಕೆ ಇತ್ತೀಚೆಗೆ ಮತ್ತೊಂದು ಸಾಕ್ಷಿ ದೊರಕಿದೆ. ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಡ್ರಾಮಾಮಾಸ್ಟರ್ ಕುಂಡಾಲೇಂದ್ರ ರೆಸ್ಪಾಂಡ್ ಮಾಡಬೇಕೆ? ಎಂದು ಈ ಕೆಟ್ಟಮುಸುಡಿ ಗುಳ್ಳೆನರಿಯು ಊಳಿಟ್ಟಿದೆ. ಈ ಸುದ್ದಿ ಕೇಳಿದ ಹುಬ್ಬಳ್ಳಿಯ ಪಾನ್ ಬೀಡಾ ಅಂಗಡಿ ಓನರ್ ಸಿದ್ದಪ್ಪಶೆಟ್ಟಿಯವರು, “ಇವನ ಮನೆ ಹಾಳಾಗ, ಇದೆಲ್ಲಾ ಕಿಸಲಗೇಡಿ ಮಾತಾಡೋ ಈ ಮೂತ್ರಲೀಕ್, ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ನನ್ನ ಬಳಿ 300 ರುಪಾಯಿ ತೆಗೆದುಕೊಂಡು ತಲೆಮರೆಸಿಕೊಂಡು ತಿರುಗುತ್ತಿದ್ದಾನೆ, ಇವನನ್ನು ಕಂಡವರು ಇವನ ಕೈಕಾಲು ಕಟ್ಟಿ ಹತ್ತಿರದ ಪಾಳುಬಾವಿಯೊಂದರೊಳಗೆ ಎತ್ತಿಹಾಕಿ, ನನಗೊಂದು ಮಿಸ್ ಕಾಲ್ ಕೊಟ್ರೆ ಓಡಿ ಬಂದು ಮೂತ್ರಲೀಕ್ ಬಿದ್ದಿರುವ ಪಾಳುಬಾವಿಗೆ ಮುವ್ವತ್ತು ಮಂಕರಿ ತಿಪ್ಪೆಗೊಬ್ಬರ ಸುರಿಯುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಕರ್ನಾಟಕ ಕಿಚಡಿ ಗೌರ್ಮೆಂಟಿನ ಚೀಫ್ ಮಂತ್ರಿಯಾಗಿರುವ ಕುಮಾರಣ್ಣನವರ ತಲೆ ಇತ್ತೀಚೆಗೆ ಕೆಟ್ಟು ಕೇಸರಿಬಾತ್ ಆಗಿರುವ ಲಕ್ಷಣಗಳು ಗೋಚರವಾಗುತ್ತಿವೆ. ಹಾವು ಮುಂಗುಸಿಗಳನ್ನು ಒಂದೇ ಮೂಟೆಯೊಳಗೆ ತುಂಬಿಟ್ಟಂತಾಗಿರುವ ಕಿಚಡಿ ಸರ್ಕಾರದಲ್ಲಿ ಕಂಡಕಂಡವರೆಲ್ಲ ಕುಮಾರಣ್ಣನ ನುಣುಪಾದ ತಲೆಗೆ ಟುಕು ಟುಕು ಕುಟ್ಟುತ್ತಿರುವುದರಿಂದ ರೋಸತ್ತು ಹೋಗಿರುವ ಮು.ಮಂ. ಅವರು ಇನ್ನುಮುಂದೆ ತಲೆಗೆ 25 ಕೇಜಿ ತೂಕದ ತಾಮ್ರದ ಹೆಲ್ಮೆಟ್ಟು ಧರಿಸಿಕೊಂಡು ಓಡಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅತ್ತ ನಿಂಬೆಹಣ್ ತಜ್ಞ ಲೇವಣ್ಣ, ಇತ್ತ ಹೋಮಹವನ ಪಂಡಿತ ಪಲಮೇಶ್ವರ್, ಆ ಕಡೆ ಹೆಡ್ ಮೇಸ್ಟ್ರು ದೊಡ್ಡಗೌಡ್ರು, ಈ ಕಡೆ 24/7 ಗಢಾರಿ ಹಿಡಿದುಕೊಂಡೇ ಓಡಾಡೋ ಎಂ.ಬಿ. ಘಾಟೀಲ್, ಮತ್ತೊಂದು ಕಡೆ ಉದುರೋ ಕಡ್ಲೆಬೀಜ ಫಾಲೋ ಮಾಡ್ಕೊಂಡು ಹಿಂದಿಂದೆಯೇ ಸುತ್ತುತ್ತಿರೋ ಧಡಿಯೂರಪ್ಪ, ಇನ್ನೊಂದ್ಕಡೆ ಈ ಗೌರ್ಮೆಂಟ್ ಅದುರಿ ಅಲ್ಲಾಡಿ, ನೆಗರಿ ನಿಗುರಾಡಿ ಸರ್ವನಾಶ ಆಗಲಿ ಅಂತ ದಿನಬೆಳಗಾದರೆ ಕಯ್ಯಯ್ಯೋ ಅನ್ನೋ ‘ಆಲ್‍ರೈಟ್ ರಂಗ’ ಅಂಡ್ ಪಟಾಲಂನ ರಕ್ತಬೇಧಿಯ ಕಾಟ ತಡೆಯಲಾರದೆ ಕುಮಾರಣ್ಣ ಕಕ್ಕಾಬಿಕ್ಕಿಯಾಗಿ, ತಲೆಗೇರಿಸಿಕೊಂಡ ತಾಮ್ರದ ಹೆಲ್ಮೆಟ್ಟನ್ನು ಮಲಗೋವಾಗಲು ಸಹ ತೆಗೆಯದೆ ಸೇಫ್ಟಿಯಾಗಿದ್ದಾರೆಂದು ಅವರ ಕಾರ್ ಡ್ರೈವರ್ ಎಣ್ಣೆ ಏಟಿನಲ್ಲಿ ಬಾರ್ ಸಪ್ಲೈಯರ್ ಜೊತೆಗೆ ಚರ್ಚೆ ನಡೆಸಿದ್ದಾರೆಂದು ಗುಪ್ತದಳದ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ. ನಮಸ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....