Homeಕರ್ನಾಟಕವಿಜಯಪುರ: 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯ; ಬಿಜೆಪಿ, ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಗೆಲುವು

ವಿಜಯಪುರ: 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯ; ಬಿಜೆಪಿ, ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಗೆಲುವು

- Advertisement -
- Advertisement -

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಕಾಂಗ್ರೆಸ್‌ ಪಕ್ಷ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಲಾ ಒಂದೊಂದು ಸ್ಥಾನದಲ್ಲಿ ಗೆಲುವು ಕಂಡಿದೆ.

ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ವಿಜಯಪುರ ನಗರ

ಕಾಂಗ್ರೆಸ್- ಅಮಿತ್ ಮುಶ್ರಫ್- ಸೋಲು

ಬಿಜೆಪಿ- ಬಸನಗೌಡ ಪಾಟೀಲ್ ಯತ್ನಾಳ- ಗೆಲುವು

ಜೆಡಿಎಸ್- ಬಂದೇನವಾಜ್-ಸೋಲು

ಹಿನ್ನೆಲೆ:- 2018ರಲ್ಲಿ ಬಿಜೆಪಿಯು ಕಾಂಗ್ರೆಸಿನಿಂದ ಗೆಲುವು ಕಸಿದುಕೊಂಡಿತು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‌, ಕಾಂಗ್ರೆಸ್ಸಿನ ಅಬ್ದುಲ್ ಹಮೀದ್ ಮುಶ್ರಿಫ್‌ರನ್ನು 6,413 ಮತಗಳಿಂದ ಮಣಿಸಿದರು.

******

ಬಬಲೇಶ್ವರ

ಕಾಂಗ್ರೆಸ್- ಎಂಬಿ ಪಾಟೀಲ್-ಗೆಲುವು

ಬಿಜೆಪಿ- ವಿಜುಗೌಡ ಪಾಟೀಲ್-ಸೋಲು

ಜೆಡಿಎಸ್- ಬಸವರಾಜ್ ಹೊನೆವಾಡ-ಸೋಲು

ಹಿನ್ನೆಲೆ:- 2004ರಲ್ಲಿ ಹಾಗೂ 2008ರಲ್ಲಿ ಕ್ಷೇತ್ರದ ಮರುವಿಂಗಡನೆಯ ವೇಳೆ ಬದಲಾದ ಬಬಲೇಶ್ವರ ವಿಧಾನಸಭೆಯಿಂದ, 2013 ಹಾಗೂ 2018ರಿಂದ ಸತತ ಮೂರು ಬಾರಿ ಎಂ ಬಿ ಪಾಟೀಲ್ ಹ್ಯಾಟ್ರಿಕ್ಗೆಲುವು ಸಾಧಿಸಿದ್ದಾರೆ.

******

ಮುದ್ದೇಬಿಹಾಳ

ಕಾಂಗ್ರೆಸ್- ಅಪ್ಪಾಜಿ ನಾಡಗೌಡ- ಗೆಲುವು

ಬಿಜೆಪಿ- ಎಎಸ್ ಪಾಟೀಲ್ ನಡಹಳ್ಳಿ- ಸೋಲು

ಜೆಡಿಎಸ್- ಬಸವರಾಜ ಭಜಂತ್ರಿ- ಸೋಲು

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಸಿ ಎಸ್ ನಾಡಗೌಡ ಅವರು, ಬಿಜೆಪಿಯ ಬಿರಾದಾರ್ ಮಂಗಳಾ ಶಾಂತಗೌಡ್ರು ಅವರನ್ನು 2403 ಕಡಿಮೆ ಮತಗಳ ಅಂತರದಿಂದ ಸೋಲಿಸಿ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಐದನೇ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವೆ ವಿಮಲಾಬಾಯಿ ಜಗದೇವರಾವ್ ದೇಶಮುಖ ಅವರನ್ನು 12202 ಮತಗಳ ಅಂತರದಿಂದ ಮಣಿಸಿದರು.

2018ರಲ್ಲಿ ಐದನೆ ಬಾರಿ ಶಾಸಕರಾಗಿ ಆಯ್ಕೆಯಾಗುವ ಕಾಂಗ್ರೆಸ್‌ನ ಸಿ ಎಸ್ ನಾಡಗೌಡ ಅವರ ಕನಸು ಕೈಗೂಡಲಿಲ್ಲ. ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಅಮೀನಪ್ಪ ಗೌಡ ಪಾಟೀಲ್ 8633 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

******

ದೇವರ ಹಿಪ್ಪರಗಿ

ಕಾಂಗ್ರೆಸ್- ಶರಣಪ್ಪ ಟಿ ಸುಣಗಾರ- ಸೋಲು

ಬಿಜೆಪಿ- ಸೋಮನಗೌಡ ಪಾಟೀಲ್- ಸೋಲು

ಜೆಡಿಎಸ್- ರಾಜುಗೌಡ ಪಾಟೀಲ್- ಗೆಲುವು

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಎ ಎಸ್ ಪಾಟೀಲ್ ನಡಹಳ್ಳಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 30,893 ಮತಗಳ ಭಾರಿ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.

2013ರಲ್ಲಿ ಎ ಎಸ್ ಪಾಟೀಲ್ ನಡಹಳ್ಳಿಗೆ ಬಿಜೆಪಿಯ ಸೋಮನಗೌಡ ಪಾಟೀಲ್ ತೀವ್ರ ಪೈಪೋಟಿ ನೀಡಿದರೂ 8,096 ಮತಗಳ ಅಂತರದಲ್ಲಿ ಸೋತರು.

2018ರಲ್ಲಿ ಬಿಜೆಪಿಯ ಸೋಮನಗೌಡ ಪಾಟೀಲ್ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರಿಗೆ ತೀವ್ರ ಪೈಪೋಟಿ ನೀಡಿ ಕೇವಲ 3,353 ಮತಗಳ ಅಂತರದಲ್ಲಿ ದೇವರ ಹಿಪ್ಪರಿಗಿಯಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದರು.

ಎ ಎಸ್ ಪಾಟೀಲ ನಡಹಳ್ಳಿ ಕೂಡ ಕಾಂಗ್ರೆಸ್‌ನಿಂದ 2008 ಮತ್ತು 2013ರಲ್ಲಿ ಈ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದಾರೆ.

*******

ಬಸವನ ಬಾಗೇವಾಡಿ

ಕಾಂಗ್ರೆಸ್- ಶಿವಾನಂದ ಪಾಟೀಲ್- ಗೆಲುವು

ಬಿಜೆಪಿ- ಎಸ್‌ಕೆ ಬೆಳ್ಳುಬ್ಬಿ- ಸೋಲು

ಜೆಡಿಎಸ್- ಸೋಮನಗೌಡ ಪಾಟೀಲ್- ಸೋಲು

ಹಿನ್ನೆಲೆ:- 2018ರಲ್ಲಿ ಜೆಡಿಎಸ್‌ನ ಅಪ್ಪುಗೌಡ ತೀವ್ರ ಪೈಪೋಟಿಯ ನಡುವೆಯೂ 3,186 ಮತಗಳ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲರು ಗೆಲುವು ಸಾಧಿಸುವ ಮೂಲಕ ಬಸವನ ಬಾಗೇವಾಡಿಯಿಂದ ಮೂರನೇ ಬಾರಿ ಶಾಸಕರಾದರು. 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಶಿವಾನಂದ ಪಾಟೀಲರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ 2018ರ ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.

*******

ನಾಗಠಾಣ (ಎಸ್‌ಸಿ ಮೀಸಲು)

ಕಾಂಗ್ರೆಸ್- ವಿಠಲ ಕಟಕದೊಂಡ-ಕಾಂಗ್ರೆಸ್

ಬಿಜೆಪಿ- ಸಂಜೀವ್ ಐಹೊಳೆ-ಹಿನ್ನಡೆ

ಜೆಡಿಎಸ್- ದೇವಾನಂದ ಚವ್ಹಾಣ-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ನಾಗಠಾಣದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಯಿಂದ ವಿಠಲ ಧೋಂಡಿಬಾ ಕಟಕದೊಂಡ ಶಾಸಕರಾದರು. 2013ರಲ್ಲಿ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರನ್ನು ಕೇವಲ 667 ಮತಗಳಿಂದ ಮಣಿಸಿ ಎರಡನೇ ಬಾರಿಗೆ ಕಾಂಗ್ರೆಸ್‌ನ ರಾಜು ಅಲಗೂರ ಗೆಲುವು ಸಾಧಿಸಿದರು. 2018ರಲ್ಲಿ ಕಾಂಗ್ರೆಸ್‌ನ ವಿಠಲ ಧೋಂಡಿಬಾ ಕಟಕದೊಂಡ ಅವರ ವಿರುದ್ಧ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರು 4207 ಮತಗಳ ಅಂತರದಿಂದ ಗೆಲುವು ಕಂಡರು.

*******

ಇಂಡಿ

ಕಾಂಗ್ರೆಸ್- ಯಶವಂತರಾಯಗೌಡ ಪಾಟೀಲ್-ಗೆಲುವು

ಬಿಜೆಪಿ- ಕಾಸುಗೌಡ ಬಿರಾದಾರ್-ಸೋಲು

ಜೆಡಿಎಸ್- ಬಿಡಿ ಪಾಟೀಲ್-ಸೋಲು

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಅಂದಿನ ಚುನಾವಣೆಯಲ್ಲಿ ಡಾ ಸಾರ್ವಭೌಮ ಬಗಲಿಯವರು ಬಿಜೆಪಿಯಿಂದ ಜಯಗಳಿಸಿದ್ದರು. ಬಿಜೆಪಿಗೆ ಇದೊಂದೇ ಬಾರಿ ಇಲ್ಲಿ ಮತದಾರರು ಗೆಲುವು ನೀಡಿದ್ದರು. ನಂತರ ನಡೆದ 2013 ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿದ್ದ ರವಿಕಾಂತ್ ಪಾಟೀಲರನ್ನು ಕಾಂಗ್ರೆಸ್‌ನ ಯಶವಂತರಾಯ ಗೌಡ ವಿಟಾಲ ಗೌಡ ಪಾಟೀಲ್ ಅವರು 33,302 ಮತಗಳ ಭಾರಿ ಅಂತರದಿಂದ ಸೋಲಿಸಿ ಗೆಲುವು ಕಂಡಿದ್ದರು. 2018ರಲ್ಲಿ ಜೆಡಿಎಸ್‌ನ ಬಿ ಡಿ ಪಾಟೀಲ್ ಅವರನ್ನು 9,938 ಮತಗಳ ಅಂತರದಿಂದ ಮಣಿಸಿ ಕಾಂಗ್ರೆಸ್‌ನ ಯಶವಂತರಾಯ ಗೌಡ ವಿಟಾಲ ಗೌಡ ಪಾಟೀಲ್ ಅವರು ಪುನರಾಯ್ಕೆಯಾದರು.

*******

ಸಿಂದಗಿ

ಕಾಂಗ್ರೆಸ್- ಅಶೋಕ ಮನಗೂಳಿ-ಗೆಲುವು

ಬಿಜೆಪಿ- ರಮೇಶ ಭೂಸನೂರ-ಸೋಲು

ಜೆಡಿಎಸ್- ವಿಜಯಶ್ರೀ ಪಾಟೀಲ್-ಸೋಲು

ಹಿನ್ನೆಲೆ:- ಸಿಂದಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ 1962 ಹಾಗೂ 1967ರಲ್ಲಿ ಸತತ ಎರಡು ಬಾರಿ ಗೆಲುವು ಕಂಡಿದ್ದ ಸಿ ಎಂ ದೇಸಾಯಿ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಅಭ್ಯರ್ಥಿಯು ಸತತವಾಗಿ ಜಯ ಗಳಿಸಿರಲಿಲ್ಲ. 2008 ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಭೂಸನೂರ ಎರಡೂ ಬಾರಿಯೂ ಗೆಲುವು ಪಡೆದು ಕಮಲ ಪಕ್ಷಕ್ಕೆ ಹ್ಯಾಟ್ರಿಕ್‌ ಜಯ ಕರುಣಿಸಿದರು.

2013ರಲ್ಲಿ ಎಂ ಸಿ ಮನಗೊಳಿ ತೀವ್ರ ಪೈಪೋಟಿ ನೀಡಿದರೂ 752 ಮತಗಳಿಂದ ಸಿ ಎಂ ದೇಸಾಯಿ ಶಾಸಕರಾಗಿ ಆಯ್ಕೆಯಾದರು.

1994ರಲ್ಲಿ ಗೆದ್ದಿದ್ದು ಬಿಟ್ಟರೆ, 1999ರಿಂದ ಸತತ ನಾಲ್ಕು ಬಾರಿ ಸೋತಿದ್ದ ಜೆಡಿಎಸ್‌ನ ಎಂ ಸಿ ಮನಗೊಳಿ 2018ರಲ್ಲಿ ಬಿಜೆಪಿಯ ರಮೇಶ್ ಭೂಸನೂರ ವಿರುದ್ಧ 9305 ಮತಗಳ ಅಂತರದಲ್ಲಿ ಎರಡನೇ ಬಾರಿಗೆ ಜಯ ದಾಖಲಿಸಿದರು. ಮನಗೂಳಿಯವರು ಒಟ್ಟು ಏಳು ಬಾರಿ ಸ್ಪರ್ಧಿಸಿದ್ದು, ಐದು ಬಾರಿ ಸೋತು ಎರಡು ಬಾರಿ ಗೆಲುವು ಪಡೆದಿರುವುದು ವಿಶೇಷ.

*******

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...