ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ವೇಳೆ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಪುತ್ರ ಭರತ್‌ಗೌಡ ಪಾಟೀಲ ಅವರು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆಂಬ ಆರೋಪ ಬಂದಿದೆ.
ತ್ರಿವರ್ಣ ಧ್ವಜವನ್ನು ಆನೆ ಮೇಲೆ ಹೊದಿಸಿ, ನಂತರ ಅದರ ಮೇಲೆ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಮತ್ತು ಅವರ ಪುತ್ರ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಕುರಿತು ಪತ್ರಕರ್ತ ಇಮ್ರಾನ್‌ಖಾನ್ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಭರತ್‌ಗೌಡ ಅವರು ಆನೆಯ ಮೇಲೆ ಕುಳಿತು, ಬಸವಣ್ಣವರ ಭಾವಚಿತ್ರಕ್ಕೆ ಹೂಗಳನ್ನು ಅರ್ಪಣೆ ಮಾಡುವುದನ್ನು ಕಾಣಬಹುದು. ಜೊತೆಗೆ ಕೇಸರಿ, ಬಿಳಿ, ಹಸಿರು ಬಣ್ಣದ ಭಾವುಟವನ್ನು ಆನೆಯ ಮೇಲೆ ಹೊದಿಸಲಾಗಿದ್ದು, ಭರತ್ ಅವರು ಕೇಸರಿ ಬಣ್ಣದ ಮೇಲೆ ಕುಳಿತಿರುವುದನ್ನು ವಿಡಿಯೊದಲ್ಲಿ ಗುರುತಿಸಬಹುದು. ಅನೇಕರು ಜೈಕಾರ ಕೂಗುವುದು ವಿಡಿಯೊದಲ್ಲಿ ದಾಖಲಾಗಿದೆ.
Video of #BJP MLA AS Patil Nadahalli's son Bharat riding an elephant draped with #Tricolor during #AzadiKaAmritMahotsav at #Muddebihala #Vijayapura dist has gone viral on social media. Many criticised the mla and his son for insulting national flag. #Karnataka #HarGharTiranga pic.twitter.com/3TvQEihQws
— Imran Khan (@KeypadGuerilla) August 14, 2022
ಈ ವಿಡಿಯೊವನ್ನು ‘ನಾನುಗೌರಿ.ಕಾಂ’ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಆದರೆ ‘ಎ.ಎಸ್.ಪಾಟೀಲ್ ನಡಹಳ್ಳಿ’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಭರತ್ ಪಾಟೀಲ್ ಅವರ ಸಮರ್ಥನೆಗಳಿರುವ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗಿದೆ.

‘ನನ್ನ ಪಾಲಿಗೆ ಹೆತ್ತ ತಾಯಿ, ಭಾರತ ಮಾತೆ ಇಬ್ಬರೂ ಒಂದೇ’ ಎಂಬ ಶೀರ್ಷಿಕೆಯಲ್ಲಿ ಪೋಸ್ಟರ್ ಮಾಡಿ ಹಂಚಿಕೊಂಡಿರುವುದನ್ನು ಗಮನಿಸಬಹುದು.
“ಮೊಸರಲ್ಲಿ ಕಲ್ಲು ಹುಡುಕುವವರನ್ನು ಎಂದಿಗೂ ಒಪ್ಪಿಸಲಾಗದು. ಏನೇ ಮಾಡಿದರು ತಪ್ಪು ಹುಡುಕಲೇ ಬೇಕೆಂದುಕೊಂಡವರನ್ನ ಮೆಚ್ಚಿಸಲು ಹೇಗೆ ಸಾಧ್ಯ? ದೇಶಪ್ರೇಮದಲ್ಲೂ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ತ್ರಿವರ್ಣವನ್ನು ಹೊದ್ದು ನಡೆಯುತ್ತಿದ್ದ ಐರಾವತದ ಮೇಲೆ ಕುಳಿತು, ಭಾರತದ ರಾಷ್ಟ್ರ ಧ್ವಜ ನಮ್ಮೆಲ್ಲರ ಹೆಮ್ಮೆ, ಗರ್ವ, ದೇಶಪ್ರೇಮ, ಭಾವೈಕ್ಯತೆ ಪ್ರತೀಕ ಎಂದು ಸಂದೇಶ ಸಾರಿದ್ದೇನೆ” ಎಂದು ಪೋಸ್ಟರ್‌ನಲ್ಲಿ ಸಮರ್ಥಿಸಿಕೊಳ್ಳಲಾಗಿದೆ.
ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ
“ಕೆಲವು ಕಿಡಿಗೇಡಿಗಳು ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ನನ್ನ ಪಾಲಿಗೆ ಹೆತ್ತತಾಯಿ, ಭಾರತ ಮಾತೆ ಇಬ್ಬರೂ ಒಂದೇ. ತಾಯಿಗೆ ಅವಮಾನ ಮಾಡುವಂತಹ ಕೆಲಸ ನನ್ನಿಂದ ಎಂದಿಗೂ ಆಗುವುದಿಲ್ಲ” ಎಂದು ತಿಳಿಸಿದ್ದಾರೆ.


