‘ನನ್ನ ಮೊಮ್ಮಗನಿಗೆ ಹೇಗೆ ಅಡುಗೆ ಮಾಡಬೇಕು ಅನ್ನೋದನ್ನು ಕಲಿಸಿದ್ದೇನೆ; ನೀನು ಅವನಿಗೆ ಯಾಕೆ ಅಡುಗೆ ಮಾಡಬೇಕು ಅನ್ನೋದನ್ನು ಕಲಿಸಿಕೊಡು’. ಇದು ಮಲೆಯಾಳಂನ ಖ್ಯಾತ ಸಿನೆಮಾ ಉಸ್ತಾದ್ ಹೋಟೆಲ್ ನಲ್ಲಿ ಬರುವ ಸಂಭಾಷಣೆ… ಜಗತ್ತಿನಲ್ಲಿ ಇಂದಿಗೂ ಲಕ್ಷಾಂತರ ಜನ ಹಸಿವಿನಿಂದ ಸಾಯುತ್ತಿರುವಾಗ ಈ ಸಂಭಾಷಣೆಗೆ ತನ್ನದೇ ಆದ ಮಹತ್ವವಿದೆ.
ನಿಜ ಜೀವನದಲ್ಲಿ ಹೇಗೆ ಅಡುಗೆ ಮಾಡಬೇಕು ಎಂಬುದರ ಜೊತೆಗೆ ಏಕೆ ಅಡುಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟವರು ಭಾರತದ ಪ್ರಖ್ಯಾತ ಬಾಣಸಿಗರಾದ ವಿಕಾಸ್ ಖನ್ನಾರವರು.
ಅನಿರೀಕ್ಷಿತವಾಗಿ ಎರಗಿದ ಲಾಕ್‌ಡೌನ್ ವೇಳೆ ತುತ್ತು ಊಟಕ್ಕಾಗಿ ಪರದಾಡುತ್ತಿದ್ದ ಲಕ್ಷಾಂತರ ಜನರ ಪಾಲಿಗೆ ವಿಕಾಸ್ ಖನ್ನಾ ಆಪತ್ಬಾಂಧವರಾಗಿದ್ದಾರೆ. ಭಾರತದ ಪ್ರಖ್ಯಾತ ಬಾಣಸಿಗರಾದ ಅವರು ತಮ್ಮ ಎಲ್ಲಾ ಖ್ಯಾತಿ ಪ್ರತಿಷ್ಠೆಗಳನ್ನು ಬದಿಗೊತ್ತಿ ತಮ್ಮ ‘ಫೀಡ್ ಇಂಡಿಯಾ ಇನಿಷಿಯೇಟಿವ್’ ಮೂಲಕ 2 ಕೋಟಿ ಜನರಿಗೆ ಆಹಾರವನ್ನು ಇದುವರೆಗೂ ಹಂಚಿದ್ದಾರೆ.
#FeedIndia soon crosses 21 Million Meals.
??????
Our 21 Millionth Meal is dedicated to one of the most important people of my life.
Zach Taylor, Uday Ahlawat, Robert Cohen & his daughter Audra (who inspired me write “Friends of Ganesha”)#Gratitude pic.twitter.com/kEtRZS7U07— Vikas Khanna (@TheVikasKhanna) July 18, 2020
ಬಾಲಿವುಡ್ ನಟ ಸೋನು ಸೂದ್ ಲಾಕ್‌ಡೌನ್ ಸಮಯದಲ್ಲಿ ಸಿಕ್ಕಿಕೊಂಡ ಹತ್ತಾರು ಸಾವಿರ ಜನರನ್ನು ತಮ್ಮ ಊರುಗಳಿಗೆ ಕಳಿಸಿಕೊಡುವಲ್ಲಿ ಯಶಸ್ವಿಯಾದಂತೆಯೇ ವಿಕಾಸ್ ಖನ್ನಾ ಬಹಲಷ್ಟು ಜನರಿಗೆ ಆಹಾರ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಮಾನವೀಯ ಕೃತ್ಯಗಳಿಗಾಗಿ ಹಾರ್ಮನಿ ಫೌಂಡೇಶನ್ ಅವರನ್ನು ಗೌರವಿಸಿದೆ.
ವಿಕಾಸ್ ಖನ್ನಾ ಪಂಜಾಬ್ ಮೂಲದವರು. ನವೆಂಬರ್ 14, 1971ರಲ್ಲಿ ಅಮೃತ್‌ಸರದಲ್ಲಿ ಜನಿಸಿದ ಅವರು, 17ನೇ ವಯಸ್ಸಿನಿಂದಲೇ ಸ್ವಂತ ಕಂಪನಿ ಆರಂಭಿಸಿದರು. ಸದ್ಯಕ್ಕೆ ಅಮೇರಿಕಾ ಹಾಟೆಸ್ಟ್ ಶೆಫ್ ಎಂದು ಕರೆಸಿಕೊಳ್ಳುವ ಅವರು ಹಲವು ಹೋಟೆಲ್‌ಗಳ ಮಾಲೀಕರಾಗಿದ್ದಾರೆ. ಪ್ರಪಂಚದ ಅತ್ಯುತ್ತಮ ಶೆಫ್‌ಗಳಲ್ಲಿ ಒಬ್ಬರಾಗಿದ್ದಾರೆ. ಪಂಜಾಬ್‌ನಲ್ಲಿ ಲಂಗರ್‌ಗಳನ್ನು (ಉಚಿತ ಸಾಮುದಾಯಿಕ ಅಡುಗೆ ಕೇಂದ್ರ) ನಡೆಸಲಾಗುತ್ತದೆ. ಆ ಮೂಲಕ ಹಸಿದವರಿಗೆ ಉಚಿತ ಊಟ ಒದಗಿಸುವುದು ಅವರ ಕಾಯಕ. ಆ ಹಿನ್ನೆಲೆಯಲ್ಲಿ ಬೆಳೆದುಬಂದ ವಿಕಾಸ್ ಇಂದು ಭಾರತದ ಬಹುಜನರಿಗೆ ಊಟ ಹಾಕುತ್ತಿದ್ದಾರೆ.
ಅಮೃತಸರದ ಲಂಗಾರ್‌ಗಳ ಪ್ರಭಾವದಿಂದ ಮತ್ತು ಅವರ ತಾಯಿಯಿಂದ ಪ್ರಭಾವಿತವಾಗಿದ್ದ ವಿಕಾಸ್ ಸಮಾಜಕ್ಕೆ ಮರಳಿ ನೀಡುವ ನೀತಿಯನ್ನು ಅನುಸರಿಸಿ ಫೀಡ್ ಇಂಡಿಯಾ ಇನಿಷಿಯೇಟಿವ್ ಆರಂಭಿಸಿದ್ದಾರೆ.
ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕುಷ್ಠರೋಗ ಕೇಂದ್ರಗಳಿಗೆ ಪಡಿತರವನ್ನು ಒದಗಿಸುವ ಮೂಲಕ ಫೀಡ್‌ಇಂಡಿಯಾ ಇನಿಶಿಯೇಟಿವ್ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತು. ಅಂತಿಮವಾಗಿ, ಹೆದ್ದಾರಿಗಳು, ರೈಲು ನಿಲ್ದಾಣಗಳು ಮತ್ತು ಇತರ ಸ್ಥಳಗಳಲ್ಲಿ ಬೇಯಿಸಿದ ಊಟವನ್ನು ಒದಗಿಸುವ ಮೂಲಕ ದೊಡ್ಡದಾಗಿ ಬೆಳೆಯಿತು. ಇಂದು ಅವರು ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಆಹಾರ ಒದಗಿಸಲು ವಿವಿಧ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ವಾಲಂಟೀಯರ್ ಆಗಿರುವ ಅವರು ಇದುವರೆಗೂ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ 70 ಲಕ್ಷ ಪ್ಯಾಕೆಟ್ ಪಡಿತರ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಸುಮಾರು ಒಂದೂವರೆ ಕೋಟಿ ಜನರಿಗೆ ಬೇಯಿಸಿದ ಆಹಾರ ವಿತರಿಸಿದ್ದಾರೆ.
ನಾನು ಹುಟ್ಟಿ ಬೆಳೆದಿದ್ದು ಭಾರತದಲ್ಲಿಯೇ ಆದರೂ ನನಗೆ ಹಸಿವಿನ ಪರಿಚಯವಾದುದ್ದು ನ್ಯೂಯಾರ್ಕ್‌ನಲ್ಲಿ ಎಂದು ಇತ್ತೀಚೆಗೆ ವಿಕಾಸ್ ಖನ್ನಾ ಹೇಳಿದ್ದ ಮಾತುಗಳು ವೈರಲ್ ಆಗಿದ್ದವು. ಅಷ್ಟೇ ಅಲ್ಲದೇ ಆಂಧ್ರಪ್ರದೇಶದ ಜನಪ್ರಿಯ ತಿನಿಸಾದ ದಿಬ್ಬಾ ರೊಟ್ಟಿ ಮಾಡುವುದನ್ನು ಯೂಟ್ಯೂಬ್ ನಿಂದ ನೋಡಿ ಕಲಿತ ಅವರು, ಅದಕ್ಕಾಗಿ ಅದನ್ನು ಕಲಿಸಿದ ಗುರುಗಳಿಗೆ ಗುರುದಕ್ಷಿಣೆ ಸಲ್ಲಿಸುವ ಮೂಲಕವೂ ಸುದ್ದಿಯಾಗಿದ್ದರು.
URGENT- Plz Share-Andhra Pradesh
ThankU @street_byte 4 introducing me 2 MasterChef Satyam?
I learnt technique of Dibba Roti by watching him years ago
Plz help me reach out to him asap
This is the true heritage of our country and we have to protect these treasures. #GuruDakshinā pic.twitter.com/rlmZrfFolo— Vikas Khanna (@TheVikasKhanna) May 11, 2020
2020 ರಲ್ಲಿ ಏಷ್ಯಾದ ಅತ್ಯಂತ ಪ್ರಭಾವಶಾಲಿ 100 ಜನರಲ್ಲಿ ಒಬ್ಬರಾಗಿ ವಿಕಾಸ್ ಖನ್ನಾ ಆಯ್ಕೆಯಾಗಿದ್ದಾರೆ. ಅವರ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರವರು ಬರೆದ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹಳಷ್ಟು ಜನ ವಿಕಾಸ್ ಖನ್ನಾರವರ ನಿಸ್ವಾರ್ಥ ಕಾಳಜಿಗೆ ಧನ್ಯವಾದ ಸಲ್ಲಿಸಿದ್ದಾರೆ.
Chef Vikas Khanna serves 14 million meals! @sifydotcom cartoon #VikasKhanna #CoronaLockdown pic.twitter.com/4zJWOvkueV
— Satish Acharya (@satishacharya) July 19, 2020
ಕೊರೊನಾ ಸಾಂಕ್ರಾಮಿಕವು ಜನರಲ್ಲಿ ಭೀತಿ ಹುಟ್ಟಿಸಿ ದಿನೇ ದಿನೇ ಉಲ್ಭಣಿಸುತ್ತಿರುವಾಗ ಸೋನು ಸೂದ್, ವಿಕಾಸ್ ಖನ್ನಾ ಥರಹದ ಜನರ ದಿಟ್ಟ ಪ್ರಯತ್ನಗಳು ಭರವಸೆ ಮೂಡಿಸುತ್ತಿವೆ. ಅವರಿಗೆ ನಮ್ಮದೊಂದು ಸಲಾಂ ಇರಲಿ.
ಇದನ್ನೂ ಓದಿ: ಸೋನು ಸೂದ್ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್


