Homeಮುಖಪುಟ2 ಕೋಟಿ ಜನಕ್ಕೆ ಆಹಾರ ಹಂಚಿದ ವಿಕಾಸ್ ಖನ್ನಾ: ಸೆಲ್ಯೂಟ್ ಎಂದ ನೆಟ್ಟಿಗರು

2 ಕೋಟಿ ಜನಕ್ಕೆ ಆಹಾರ ಹಂಚಿದ ವಿಕಾಸ್ ಖನ್ನಾ: ಸೆಲ್ಯೂಟ್ ಎಂದ ನೆಟ್ಟಿಗರು

ಕೊರೊನಾ ಸಾಂಕ್ರಾಮಿಕವು ಜನರಲ್ಲಿ ಭೀತಿ ಹುಟ್ಟಿಸಿ ದಿನೇ ದಿನೇ ಉಲ್ಭಣಿಸುತ್ತಿರುವಾಗ ಸೋನು ಸೂದ್, ವಿಕಾಸ್ ಖನ್ನಾ ಥರಹದ ಜನರ ದಿಟ್ಟ ಪ್ರಯತ್ನಗಳು ಭರವಸೆ ಮೂಡಿಸುತ್ತಿವೆ. ಅವರಿಗೆ ನಮ್ಮದೊಂದು ಸಲಾಂ ಇರಲಿ.

- Advertisement -
- Advertisement -

‘ನನ್ನ ಮೊಮ್ಮಗನಿಗೆ ಹೇಗೆ ಅಡುಗೆ ಮಾಡಬೇಕು ಅನ್ನೋದನ್ನು ಕಲಿಸಿದ್ದೇನೆ; ನೀನು ಅವನಿಗೆ ಯಾಕೆ ಅಡುಗೆ ಮಾಡಬೇಕು ಅನ್ನೋದನ್ನು ಕಲಿಸಿಕೊಡು’. ಇದು ಮಲೆಯಾಳಂನ ಖ್ಯಾತ ಸಿನೆಮಾ ಉಸ್ತಾದ್ ಹೋಟೆಲ್ ನಲ್ಲಿ ಬರುವ ಸಂಭಾಷಣೆ… ಜಗತ್ತಿನಲ್ಲಿ ಇಂದಿಗೂ ಲಕ್ಷಾಂತರ ಜನ ಹಸಿವಿನಿಂದ ಸಾಯುತ್ತಿರುವಾಗ ಈ ಸಂಭಾಷಣೆಗೆ ತನ್ನದೇ ಆದ ಮಹತ್ವವಿದೆ.

ನಿಜ ಜೀವನದಲ್ಲಿ ಹೇಗೆ ಅಡುಗೆ ಮಾಡಬೇಕು ಎಂಬುದರ ಜೊತೆಗೆ ಏಕೆ ಅಡುಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟವರು ಭಾರತದ ಪ್ರಖ್ಯಾತ ಬಾಣಸಿಗರಾದ ವಿಕಾಸ್‌ ಖನ್ನಾರವರು.

ಅನಿರೀಕ್ಷಿತವಾಗಿ ಎರಗಿದ ಲಾಕ್‌ಡೌನ್‌ ವೇಳೆ ತುತ್ತು ಊಟಕ್ಕಾಗಿ ಪರದಾಡುತ್ತಿದ್ದ ಲಕ್ಷಾಂತರ ಜನರ ಪಾಲಿಗೆ ವಿಕಾಸ್ ಖನ್ನಾ ಆಪತ್ಬಾಂಧವರಾಗಿದ್ದಾರೆ. ಭಾರತದ ಪ್ರಖ್ಯಾತ ಬಾಣಸಿಗರಾದ ಅವರು ತಮ್ಮ ಎಲ್ಲಾ ಖ್ಯಾತಿ ಪ್ರತಿಷ್ಠೆಗಳನ್ನು ಬದಿಗೊತ್ತಿ ತಮ್ಮ ‘ಫೀಡ್ ಇಂಡಿಯಾ ಇನಿಷಿಯೇಟಿವ್’ ಮೂಲಕ 2 ಕೋಟಿ ಜನರಿಗೆ ಆಹಾರವನ್ನು ಇದುವರೆಗೂ ಹಂಚಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಲಾಕ್‌ಡೌನ್ ಸಮಯದಲ್ಲಿ ಸಿಕ್ಕಿಕೊಂಡ ಹತ್ತಾರು ಸಾವಿರ ಜನರನ್ನು ತಮ್ಮ ಊರುಗಳಿಗೆ ಕಳಿಸಿಕೊಡುವಲ್ಲಿ ಯಶಸ್ವಿಯಾದಂತೆಯೇ ವಿಕಾಸ್ ಖನ್ನಾ ಬಹಲಷ್ಟು ಜನರಿಗೆ ಆಹಾರ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಮಾನವೀಯ ಕೃತ್ಯಗಳಿಗಾಗಿ ಹಾರ್ಮನಿ ಫೌಂಡೇಶನ್ ಅವರನ್ನು ಗೌರವಿಸಿದೆ.

ವಿಕಾಸ್ ಖನ್ನಾ ಪಂಜಾಬ್ ಮೂಲದವರು. ನವೆಂಬರ್ 14, 1971ರಲ್ಲಿ ಅಮೃತ್‌ಸರದಲ್ಲಿ ಜನಿಸಿದ ಅವರು, 17ನೇ ವಯಸ್ಸಿನಿಂದಲೇ ಸ್ವಂತ ಕಂಪನಿ ಆರಂಭಿಸಿದರು. ಸದ್ಯಕ್ಕೆ ಅಮೇರಿಕಾ ಹಾಟೆಸ್ಟ್ ಶೆಫ್ ಎಂದು ಕರೆಸಿಕೊಳ್ಳುವ ಅವರು ಹಲವು ಹೋಟೆಲ್‌ಗಳ ಮಾಲೀಕರಾಗಿದ್ದಾರೆ. ಪ್ರಪಂಚದ ಅತ್ಯುತ್ತಮ ಶೆಫ್‌ಗಳಲ್ಲಿ ಒಬ್ಬರಾಗಿದ್ದಾರೆ. ಪಂಜಾಬ್‌ನಲ್ಲಿ ಲಂಗರ್‌ಗಳನ್ನು (ಉಚಿತ ಸಾಮುದಾಯಿಕ ಅಡುಗೆ ಕೇಂದ್ರ) ನಡೆಸಲಾಗುತ್ತದೆ. ಆ ಮೂಲಕ ಹಸಿದವರಿಗೆ ಉಚಿತ ಊಟ ಒದಗಿಸುವುದು ಅವರ ಕಾಯಕ. ಆ ಹಿನ್ನೆಲೆಯಲ್ಲಿ ಬೆಳೆದುಬಂದ ವಿಕಾಸ್ ಇಂದು ಭಾರತದ ಬಹುಜನರಿಗೆ ಊಟ ಹಾಕುತ್ತಿದ್ದಾರೆ.

ಅಮೃತಸರದ ಲಂಗಾರ್‌ಗಳ ಪ್ರಭಾವದಿಂದ ಮತ್ತು ಅವರ ತಾಯಿಯಿಂದ ಪ್ರಭಾವಿತವಾಗಿದ್ದ ವಿಕಾಸ್ ಸಮಾಜಕ್ಕೆ ಮರಳಿ ನೀಡುವ ನೀತಿಯನ್ನು ಅನುಸರಿಸಿ ಫೀಡ್ ಇಂಡಿಯಾ ಇನಿಷಿಯೇಟಿವ್ ಆರಂಭಿಸಿದ್ದಾರೆ.

ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕುಷ್ಠರೋಗ ಕೇಂದ್ರಗಳಿಗೆ ಪಡಿತರವನ್ನು ಒದಗಿಸುವ ಮೂಲಕ ಫೀಡ್‌ಇಂಡಿಯಾ ಇನಿಶಿಯೇಟಿವ್ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತು. ಅಂತಿಮವಾಗಿ, ಹೆದ್ದಾರಿಗಳು, ರೈಲು ನಿಲ್ದಾಣಗಳು ಮತ್ತು ಇತರ ಸ್ಥಳಗಳಲ್ಲಿ ಬೇಯಿಸಿದ ಊಟವನ್ನು ಒದಗಿಸುವ ಮೂಲಕ ದೊಡ್ಡದಾಗಿ ಬೆಳೆಯಿತು. ಇಂದು ಅವರು ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಆಹಾರ ಒದಗಿಸಲು ವಿವಿಧ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ವಾಲಂಟೀಯರ್ ಆಗಿರುವ ಅವರು ಇದುವರೆಗೂ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ 70 ಲಕ್ಷ ಪ್ಯಾಕೆಟ್ ಪಡಿತರ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಸುಮಾರು ಒಂದೂವರೆ ಕೋಟಿ ಜನರಿಗೆ ಬೇಯಿಸಿದ ಆಹಾರ ವಿತರಿಸಿದ್ದಾರೆ.

ನಾನು ಹುಟ್ಟಿ ಬೆಳೆದಿದ್ದು ಭಾರತದಲ್ಲಿಯೇ ಆದರೂ ನನಗೆ ಹಸಿವಿನ ಪರಿಚಯವಾದುದ್ದು ನ್ಯೂಯಾರ್ಕ್‌ನಲ್ಲಿ ಎಂದು ಇತ್ತೀಚೆಗೆ ವಿಕಾಸ್ ಖನ್ನಾ ಹೇಳಿದ್ದ ಮಾತುಗಳು ವೈರಲ್ ಆಗಿದ್ದವು. ಅಷ್ಟೇ ಅಲ್ಲದೇ ಆಂಧ್ರಪ್ರದೇಶದ ಜನಪ್ರಿಯ ತಿನಿಸಾದ ದಿಬ್ಬಾ ರೊಟ್ಟಿ ಮಾಡುವುದನ್ನು ಯೂಟ್ಯೂಬ್ ನಿಂದ ನೋಡಿ ಕಲಿತ ಅವರು, ಅದಕ್ಕಾಗಿ ಅದನ್ನು ಕಲಿಸಿದ ಗುರುಗಳಿಗೆ ಗುರುದಕ್ಷಿಣೆ ಸಲ್ಲಿಸುವ ಮೂಲಕವೂ ಸುದ್ದಿಯಾಗಿದ್ದರು.

2020 ರಲ್ಲಿ ಏಷ್ಯಾದ  ಅತ್ಯಂತ ಪ್ರಭಾವಶಾಲಿ 100 ಜನರಲ್ಲಿ ಒಬ್ಬರಾಗಿ ವಿಕಾಸ್ ಖನ್ನಾ ಆಯ್ಕೆಯಾಗಿದ್ದಾರೆ. ಅವರ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರವರು ಬರೆದ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹಳಷ್ಟು ಜನ ವಿಕಾಸ್ ಖನ್ನಾರವರ ನಿಸ್ವಾರ್ಥ ಕಾಳಜಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕವು ಜನರಲ್ಲಿ ಭೀತಿ ಹುಟ್ಟಿಸಿ ದಿನೇ ದಿನೇ ಉಲ್ಭಣಿಸುತ್ತಿರುವಾಗ ಸೋನು ಸೂದ್, ವಿಕಾಸ್ ಖನ್ನಾ ಥರಹದ ಜನರ ದಿಟ್ಟ ಪ್ರಯತ್ನಗಳು ಭರವಸೆ ಮೂಡಿಸುತ್ತಿವೆ. ಅವರಿಗೆ ನಮ್ಮದೊಂದು ಸಲಾಂ ಇರಲಿ.


ಇದನ್ನೂ ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...