ಪ್ರಪಂಚದೆಲ್ಲೆಡೆ ಕೊರೊನಾ ಹಬ್ಬುತ್ತಿದೆ. ಸಾವು ನೋವುಗಳು ದಿನೇ ದಿನೇ ಹೆಚ್ಚುತ್ತಿವೆ. ಇಡೀ ವೈದ್ಯಕೀಯ ಸಮೂಹ ಅದರ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಐಕ್ಯಮತ್ಯ ಸಾಧಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9 ನಿಮಿಷಗಳ ಕಾಲ ಲೈಟ್ ಬಂದ್ ಮಾಡಿ ದೀಪ ಹಚ್ಚಲು ಕರೆ ನೀಡಿದ್ದರು.
ಪ್ರಧಾನಿಗಳ ಕರೆ ಕೇಳಿಬರುತ್ತಿದ್ದಂತೆಯೇ ಅದಕ್ಕೆ ಮತ್ತಷ್ಟು ಸುಳ್ಳುಗಳು ಪೋಣಿಸಿಕೊಳ್ಳಲಾರಂಭಿಸಿದ್ದವು. ದೀಪದ ಬೆಳಕಿಗೆ ಕೊರೊನಾ ಸಾಯುತ್ತದೆ, ದೀಪದ ಶಾಖಕ್ಕೆ ಶಕ್ತಿ ಇದೆ ಎಂದೆಲ್ಲಾ ಜನ ನಂಬಲು ಆರಂಭಿಸಿದ್ದರು. ಅಷ್ಟರಲ್ಲಿ ಮೈಸೂರಿನ ಬಿಜೆಪಿ ಶಾಸಕ ರಾಮ್‌ದಾಸ್ “ದೀಪ ಹಚ್ಚಿದರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತದೆ” ಎಂದು ಹೇಳಿಕೆ ನೀಡಿ ತೀವ್ರ ಮುಜುಗರಕ್ಕೊಳಗಾಗಿದ್ದರು.
ಇದನ್ನೂ ಓದಿ: ದೀಪದ ಶಾಖಕ್ಕೆ ಕ್ರಿಮಿ ಸಾಯುತ್ತದೆ ಎಂದ ಬಿಜೆಪಿ ಶಾಸಕ ರಾಮದಾಸ್: ವ್ಯಾಪಕ ಟ್ರೋಲ್
ಇನ್ನೊಂದು ಕಡೆ ದೇಶದೆಲ್ಲೆಡೆ ಪ್ರಧಾನಿಗಳ ಮನವಿಗೆ ಜನ ಸ್ಪಂದಿಸಿದ್ದರು. ಕರ್ನಾಟಕದ ಮಾಜಿ ಸಚಿವ ಎಚ್.ಡಿ ರೇವಣ್ಣ ಸಹ ಮೋಂಬತ್ತಿ ಹಚ್ಚಿ ಪ್ರಧಾನಿಗಳ ಕರೆಗೆ ಓಗೊಟ್ಟಿದ್ದರು. ಆದರೆ ಆ ಫೋಟೊವನ್ನೇ ಬಳಸಿ ರೇವಣ್ಣನವರ ತೇಜೋವಧೆಗೆ ಮಾಡಲು ಮುಂದಾಗಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಮೇಲೆ ನೆಟ್ಟಿಗರು ಮುಗಿಬಿದ್ದಿದ್ದು ವ್ಯಾಪಕ ಟೀಕೆ-ನಿಂದನೆಗಳ ಸುರಿಮಳೆ ಸುರಿಸಿದ್ದಾರೆ.
ದೀಪ ಹಚ್ಚಿದರೆ ಅದರ ಶಾಖಕ್ಕೆ ಕರೋನಾವೈರಸ್ ಸತ್ತೋಗುತ್ತೆ ಅಂತ ಆ ರಾಮದಾಸ್ ಗೆ ಯಾರು ಹೇಳಿದರೋ ಗೊತ್ತಿಲ್ಲಾ. ಆದರೆ ಆ ಕರೋನಾವೈರಸ್ಸೇನಾದ್ರೂ ಈ ಗೆಟಪ್ಪು ನೋಡಿದ್ರೆ, ದೇವರಾಣೆ, ದೇಶ ಅಲ್ಲ , ಭೂಮಿಯಿಂದಲೇ ಓಡಿ ಹೋಗುತ್ತೆ.
(ವಿಶೇಷ ಸೂಚನೆ – ಕರೋನಾ ವೈರಸ್ ನೋಡೋ ತನಕ ಈ ಫೋಟೋವನ್ನು ಶೇರ್ ಮಾಡುವುದು ?????) pic.twitter.com/m45FXc5Dap
— Vishweshwar Bhat (@VishweshwarBhat) April 6, 2020
ಇವರು ಮೊಂ'ಬತ್ತಿ'ಯನ್ನು
ಹಚ್ಚಿದರೋ
ಅಥವಾ
ಇಟ್ಟರೋ ಗೊತ್ತಾಗಲಿಲ್ಲ ! pic.twitter.com/n1IDaKq1ZJ— Vishweshwar Bhat (@VishweshwarBhat) April 5, 2020
ಈ ರೀತಿಯಾಗಿ ಟ್ವಿಟ್ಟರ್‌ನಲ್ಲಿ ಎಚ್.ಡಿ ರೇವಣ್ಣನವರ ತೇಜೋವಧೆ ಮಾಡುವಂತಹ ಎರಡು ಪೋಸ್ಟ್‌ಗಳನ್ನು ವಿಶ್ವೇಶ್ವರ ಭಟ್ ಹಾಕಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನು ಕೆರಳಿಸಿದೆ. ಕೂಡಲೇ ವಿಶ್ವೇಶ್ವರ ಭಟ್ ಮೇಲೆ ಮುಗಿಬಿದ್ದ ಅವರು ವ್ಯಾಪಕ ಟೀಕೆ ಜೊತೆಗೆ ನಿಂದನೆಗಳ ಸುರಿಮಳೆ ಸುರಿಸಿದ್ದಾರೆ. ಕೆಲವು ಕೆಳಗಿನಂತಿವೆ ನೋಡಿ.
“ಹೌದು ನಿಮ್ಮ ಈ ಟ್ವೀಟ್ ನೋಡಿದ ಮೇಲೆ ಇಂತ ವಿಷ ಜಂತುಗಳ ಮದ್ಯೆ ನನಗೇನು ಕೆಲಸ ಅಂತ ಕೊರೊನಾ ಈ ದೇಶ ಬಿಟ್ಟು ಓಡಿ ಹೋದರು ಹೋಗಬಹುದು , atleast ನಿಮ್ಮ ಹೆಸರಿನ ಮುಂದೆ ಇರೋ ಪತ್ರಕರ್ತ ಅನ್ನೋ ಶಬ್ದಕ್ಕಾದರೂ ಬೆಲೆ ಕೊಡಿ ಭಟ್ರೆ” ಎಂದು ವಿನಾಯಕ್‌ನಾಯಕ್ ಟ್ವೀಟ್ ಮಾಡಿದ್ದಾರೆ.
“ವಿಶ್ವೇಶ್ವರ ಬಟ್ಟರೆ.. ನಾನು ನೀವೊಬ್ಬ ಪತ್ರಕರ್ತರೆಂದು ಭಾವಿಸಿ ನಿಮ್ಮನ್ನು follow ಮಾಡ್ತಿದ್ದೆ, ಆದರೆ ನೀವು ಈ ರೀತಿ ವೈಯಕ್ತಿಕವಾಗಿ ಗೌಡರ ಮನೆಯವರ ಮೇಲೆ ವ್ಯಂಗ್ಯವಾಡುವುದು ಅಸಯ್ಯದ ಸಂಗತಿ.. ನಿಮ್ಮ ಸ್ಥಾನಕ್ಕೆ ತಕ್ಕಾಗಿ ನೆಡೆದುಕೊಳ್ಳಿ.. ಮನೆಯಲ್ಲಿದ್ದಾಗ ಪಂಚೆ ಹಾಕಿಕೊಳ್ಳದೆ ಇನ್ನೇನು ಸೂಟ್, ಬೂಟ್ ಹಾಕಿಕೊಂಡು ಪೋಸ್ ಕೊಡಬೇಕೆ..” ಎಂದು ಶರತ್ ಕುಮಾರ್ ಜಿ.ಡಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸ್ವಲ್ಪ ಅತಿಯಾಯಿತು ಭಟ್ರೇ. ಅವರು ಆಚರಿಸಿದರೂ ಅಣಕಿಸುತ್ತೀರ, ಆಚರಿಸದಿದ್ದರೂ ಅಣಕಿಸುತ್ತೀರ.. ಎಂದು ರೋಹಿತ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
“ಭಟ್ರೇ ನಂಜು ಮೈ ಇಡೀ ತುಂಬಿದ ರೀತಿ ಕಾಣಿಸ್ತಾ ಇದೆ ನಿಮ್ಮ ಟ್ವೀಟ್ ನೋಡುವಾಗ. ಇಷ್ಟೊಂದು ವಿಷ ದೇಹದಲ್ಲಿ ಇಟ್ಕೊಂಡು ಹೇಗೆ ಜೀವಂತ ಇದ್ದೀರಿ?” ಎಂದು ಯಶ್ವಿನ್‌ಎಂಬುವವರು ಪ್ರಶ್ನಿಸಿದ್ದಾರೆ.
“ಒಂದು ಜನಾಂಗದ ಬಟ್ಟೆಯನ್ನು ಅಣುಕಿಸುವ ಮುಂಚೆ ನಿಮ್ಮ ಹಿರಿಯರ ಲಂಗೋಟಿ ಜ್ಞಾಪಸಿಕೋ” ಎಂದು ಮಂಜುನಾಥ್ ಜವರನಹಳ್ಳಿಯವರು ವ್ಯಂಗ್ಯವಾಡಿದ್ದಾರೆ.
Sir, ಪತ್ರಿಕೆಯೊಂದರ ಸಂಪಾದಕರಾಗಿ ನೀವು ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ. ಪ್ರಧಾನಿಯ ಕರೆಗೆ ಇವರು ಸ್ಪಂದಿಸಿದ್ದಾರೆ, ಅದೇ ದೊಡ್ಡ ವಿಷಯ. ಈ ರೀತಿ ಟ್ರೋಲ್ ಮಾಡುವಷ್ಟು ಸಣ್ಣ ಸ್ಥಾನದಲ್ಲಿ ನೀವು ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ದೀಪ ಹಚ್ಚಿದರೂ ಟೀಕೆ ಹಚ್ಚದಿದ್ದರೂ ಟೀಕೆ….. ವಾವ್…..ನಿಮ್ಮಂತ ನಿಷ್ಪ್ರಯೋಜಕರಿಂದ ದೇಶಕ್ಕೆ ಏನು ಪ್ರಯೋಜನವಿಲ್ಲ…ಹೊರಡು… ನೀವು 365 ದಿನ ಹಾಕೋದು ಇದೆ ಪಾಂಡಿತ್ಯದ ಬಟ್ಟೆ ಅಲ್ಲವಾ…..??? ಎಂದು ಮೋಹನ್ ಪ್ರಶ್ನಿಸಿದ್ದಾರೆ.
“ಪತ್ರಕರ್ತರೇನು ದೈವಪುತ್ರರಲ್ಲ ಸಲೀಸಾಗಿ ಇನ್ನೊಬ್ಬರ ತೇಜೋವಧೆ ಮಾಡಲು. ಅದು ಅವರ ಇಚ್ಛೆ. ಏಕವಚನದಿಂದ ಮಾತನಾಡುವುದನ್ನು ಬಿಡಿ. ಗೌರವ ಕೊಡಿ” ಎಂದು ದೀಪಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಟ್ಟರೆ ತಾವು ಒಂದು ಪತ್ರಿಕೆಯ ಸಂಪಾದಕರಾ ಇಲ್ಲ ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣ ಸಂಚಾಲಕರಾ ಅಂತ ನನಗೆ ಅನುಮಾನ ಬರತಾ ಇದೆ ಸದ್ಯಕ್ಕೆ ಯಾವುದೆ ನಾಮಕರಣಗಳು ಇಲ್ಲ ಸ್ವಲ್ಪ ತಡೆಯಿರಿ ಎಂದು ಪರಮ ಆತ್ಮ ಎಂಬುವವರು ಟೀಕಿಸಿದ್ದಾರೆ.
ಆ ಫೋಟೊದಲ್ಲಿ ತಪ್ಪೇನಿದೆ. ರಾಮದಾಸ್ ನ ಮೂರ್ಖ ಹೇಳಿಕೆನಾ ಖಂಡಿಸದ ನೀನು, ರೇವಣ್ಣನನ್ನು ಕಂಡರೆ ಯಾಕೆ ಉರಿ? ಥೂ ನೀನು ಒಬ್ಬ ಮನುಷ್ಯನಾ? ನಿನ್ನಂಥ ಜಾತಿವ್ಯಾದಿ ಕ್ರಿಮಿನಾ ನೋಡಿರಲಿಲ್ಲ.. ಥೂ ಅಯೋಗ್ಯ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.
ಈ ಟ್ವೀಟ್ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ. ಇದೇ ಭಟ್ಟರು ಸಹ ಅದೇ ರೀತಿಯಲ್ಲಿ ತಾವು ಕೂಡ ದೀಪ ಹಚ್ಚಿಕೊಂಡು ತಮ್ಮ ಮಗಳ ಜೊತೆ ನಿಂತಿರುವ ವಿಡಿಯೋವನ್ನು ಕೆಲವೇ ನಿಮಿಷಗಳ ಮುಂಚೆ ಷೇರ್ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರದ ಆರೋಪ ಹೊತ್ತಿರುವ ರಾಘವೇಶ್ವರ ಭಾರತಿ ಸ್ವಾಮಿಯವರು ದೀಪಹಿಡಿದಿರುವ ಫೋಟೊವನ್ನು ಸಹ ಅವರೇ ಷೇರ್ ಮಾಡಿದ್ದಾರೆ. ಆದರೆ ರೇವಣ್ಣನವರ ಮೇಲೆ ಮಾತ್ರ ಅಸೂಯೆ ವ್ಯಕ್ತಪಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.
In the time of Corona and lockdown, Diya Jalao campaign made all of us to feel that we are all united in this act across the country. #DiyaJalaoBharatJodo #DiyaJalaoCoronaBhagao
#9MinutesForIndia pic.twitter.com/HsSJZHB5Nv— Vishweshwar Bhat (@VishweshwarBhat) April 5, 2020
ವಿಶ್ವೇಶ್ವರ ಭಟ್ಟರು ಈ ರೀತಿ ವಯಕ್ತಿಕ ತೇಜೋವಧೇ ಮಾಡಲು ಹೋಗಿ ತಾವೇ ಮುಜುಗರಕ್ಕೊಳಗಾಗಿರುವುದು ಇದೇ ಮೊದಲನೇನಲ್ಲ. ಗೌರಿ ಲಂಕೇಶ್ ಹತ್ಯಾ ವಿರೋಧಿ ಕಾರ್ಯಕ್ರಮದಲ್ಲಿ ಜನರಿಲ್ಲ ಎಂದು ತೋರಿಸಲು ಹೋಗಿ ಟೀಕೆಗೆ ಒಳಗಾಗಿದ್ದರು. ಮಹಿಳೆಯರ ಒಳವಸ್ತ್ರಗಳ ಕುರಿತೆಲ್ಲಾ ತಮಾಷೆ ಮಾಡಲು ಹೋಗಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದರು.
ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ



Vishwanath bhatre, you showed your true colour. People like you are disgrace to the community. Instead of commenting on Revanna’s dress like an idiot, appreciate his concern about the society at this crucial stage. We need to be united at this stage. Shame on you.
ಇವನು ಆಯೋಗ್ಯ
Ivnu obba ganji kendrada giraki.. eno sarkarda mattinalli kelsa irbeku.. 90 % mediagalu, rajakaranigalu patrakartaru ovatu enadaru success agidare, adu e gowdara kutumba dinda, avra bhage olledo, kettado mstadidre success agtini anta e papi nu hage madidane..
Super sir
What Mr. Revanna has done, it is what PM Mr. Modi ji wanted from him as a citizen, of India and what Mr. BHATT has done is wrong and should apologize for his misdeed.