ಮಧ್ಯಪ್ರದೇಶದಲ್ಲಿ ನಡೆದಿದ್ದ ವ್ಯಾಪಂ ಹಗರಣದ ಪ್ರಮುಖ ಅಪರಾಧಿಗೆ ಹತ್ತು ವರ್ಷ ಜೈಲು ಮತ್ತು ಉಳಿದ 30 ಮಂದಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ವೃತ್ತಿಪರ ಪರೀಕ್ಷಾ ಮಂಡಳಿ ಆಯೋಗದ ಪರೀಕ್ಷೆ ನಡೆಸಿತ್ತು. ಇದರಲ್ಲಿ ವ್ಯಾಪಕ ಅಕ್ರಮ ನಡೆದಿತ್ತು. ಇದನ್ನು ವ್ಯವಸಾಯಿಕ್ ಪರೀಕ್ಷಾ ಮಂಡಳಿ ಅಥವಾ ವ್ಯಾಪಂ ಹಗರಣವೆಂದೇ ಹೆಸರಾಗಿತ್ತು.
ವೃತ್ತಿಪರ ಕೋರ್ಸ್ ಗಳ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ರಾಜ್ಯ ಸೇವೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣದ ಬಗ್ಗೆ ಮಾಹಿತ ಪಡೆಯಲು ಮತ್ತು ತನಿಖೆ ಮಾಡಲೊರಟ ಹಲವಾರು ಜನ ಕೊಲೆಯಾಗಿದ್ದರು. ಹಾಗಾಗಿ ಈ ಹಗರಣ ವ್ಯಾಪಕ ಚರ್ಚೆಗೊಳಗಾಗಿತ್ತು.
ಇದನ್ನೂ ಓದಿ: ಅಜಿತ್ ಪವಾರ್ ಮೇಲಿನ ಕುಖ್ಯಾತ ವಿದರ್ಭ ನೀರಾವರಿ ಹಗರಣದ ಕೇಸ್ ವಾಪಸ್!
ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಆಯಾಲಯ ನ್ಯಾಯಾಧೀಶ ಎಸ್.ಬಿ.ಸಾಹು, ಅಪರಾಧಿ ಪ್ರದೀಪ್ ಗ್ಯಾಂಗಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಅಪರಾಧಿ ಮಾಡಿರುವ ಕೃತ್ಯ ಸಾಬೀತಾಗಿದೆ.
ಪ್ರಮುಖ ಅಪರಾಧಿಯ ಜೊತೆ ಕೈಜೋಡಿಸಿದ್ದ ಇತರೆ 30 ಮಂದಿ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷಯೆ ಜೊತೆಗೆ ತಲಾ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
2013ರಲ್ಲಿ ನಡೆದ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಆ ಸಂದರ್ಭದಲ್ಲಿ ವಂಚನೆ, ಪೋರ್ಜರಿ ಸೇರಿದಂತೆ ಹಲವು ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಆಕ್ರಮ ನಡೆದಿರುವುದು ಸಾಬೀತಾಗಿದ್ದು ಅಪರಾಧಿಗಳಿಗೆ ಶಿಕ್ಷೆಯಾಗಿದೆ.


