ಜನವರಿ 09ರಂದು ನಡೆದ ಆನೆಗುಂದಿ ಉತ್ಸವದಲ್ಲಿ ಕವಿತೆಯನ್ನು ವಾಚನ ಮಾಡಿದ
ಕವಿ ಸಿರಾಜ್ ಬಿಸ್ರಳ್ಳಿ ಎಂಬುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹಲವು ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿ.ಎಸ್ ದ್ವಾಕರನಾಥ್, ಬಿ.ಟಿ ವೆಂಕಟೇಶ್, ಬಾಲನ್, ಆರ್. ಜಗನ್ನಾಥ್, ಪ್ರಸನ್ನ ಆರ್, ಕಾಶೀನಾಥ್, ಶ್ರೀನಿವಾಸ್ ಕುಮಾರ್ ಮುಂತಾದ ವಕೀಲರು ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದು ತಾವೆಲ್ಲರೂ ಕವಿಯ ಪರವಾಗಿ ಮಾಡುವುದಾಗಿ ಘೋಷಿಸಿದ್ದಾರೆ.

ಕವಿತೆಯನ್ನು ವಾಚನ ಮಾಡಿದ ಕವಿ ಸಿರಾಜ್ ಅವರ ಮೇಲೆ ಕೈಂ. ನಂ. 23/2020 ರಲ್ಲಿ
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 5045052
ರಡಿಯಲ್ಲಿ ಪ್ರಕರಣ ದಾಖಲಿಸುವುದು ದುರದೃಷ್ಟಕರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕವಿತೆಯಂಥಹ ಸಾಹಿತ್ಯ ವಿಚಾರವನ್ನು ಕ್ರಿಮಿನಲ್ ಪ್ರಕರಣದ ಮೂಲಕ ನಿಯಂತ್ರಿಸಲು
ಹೋಗುತ್ತಿರುವ ಕರ್ನಾಟಕ ಸರ್ಕಾರದ ಕ್ರಮ ಅಪ್ರಜಾತಂತ್ರಿಕವಾಗಿದ್ದು, ವಕೀಲರಾದ ನಾವು ಸದರಿ
ವಿಚಾರದಲ್ಲಿ ನ್ಯಾಯಾಲಯದಲ್ಲಿ ಕವಿ ಮತ್ತು ಕವಿತೆ ಪರವಾಗಿ ಕಾನೂನು ಸಂಘರ್ಷ ನಡೆಸಲು
ಬದ್ದರಿರುತ್ತೇವೆ ಎಂದು ಅವರು ಘೋಷಿಸಿದ್ದಾರೆ.
ಇದೇ ವಕೀಲರು ತಂಡವು ಈ ಹಿಂದೆ ಫ್ರಿ ಕಾಶ್ಮೀರ್ ವಿಷಯವಾಗಿ ಮೈಸೂರಿನ ನಳಿನಿ ಬಾಲಕುಮಾರ್‌ಗೆ ವಕಾಲತ್ತು ವಹಿಸಿ ಜಾಮೀನು ದೊರಕಿಸಿಕೊಟ್ಟಿರುವುದನ್ನು ಈ ಸಮಯದಲ್ಲಿ ನೆನೆಯಬಹುದಾಗಿದೆ.


