Homeಅಂತರಾಷ್ಟ್ರೀಯಚೀನಾವನ್ನು ಎದುರಿಸಲು ಯುರೋಪಿನಲ್ಲಿರುವ ತನ್ನ ಸೈನ್ಯವನ್ನು ಕಡಿಮೆ ಮಾಡುತ್ತಿದ್ದೇವೆ: ಅಮೆರಿಕಾ

ಚೀನಾವನ್ನು ಎದುರಿಸಲು ಯುರೋಪಿನಲ್ಲಿರುವ ತನ್ನ ಸೈನ್ಯವನ್ನು ಕಡಿಮೆ ಮಾಡುತ್ತಿದ್ದೇವೆ: ಅಮೆರಿಕಾ

- Advertisement -
- Advertisement -

ಭಾರತ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಂತಹ ಏಷ್ಯಾದ ದೇಶಗಳಿಗೆ ಚೀನಾ ಕಡೆಯಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅದನ್ನು ಎದುರಿಸಲು ಅಮೆರಿಕಾ ತನ್ನ ಜಾಗತಿಕ ಪಡೆಗಳ ನಿಯೋಜನೆಯನ್ನು ಪರಿಶೀಲಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ಜರ್ಮನ್ ಮಾರ್ಷಲ್ ಫಂಡ್‌ನ ವರ್ಚುವಲ್ ಬ್ರಸೆಲ್ಸ್ ಫೋರಂ 2020 ರ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಪೊಂಪಿಯೊ ಈ ಹೇಳಿಕೆಗಳನ್ನು ನೀಡಿದ್ದಾರೆ.

“ನಾವು ಪಿಎಲ್‌ಎಯನ್ನು ಎದುರಿಸಲು ಸೂಕ್ತವಾದ ಸ್ಥಿತಿಯಲ್ಲಿದ್ದೇವೆ ಎಂದು ಖಚಿತಪಡಿಸಿಕೊಳ್ಳಲಿದ್ದೇವೆ. ಇದು ನಮ್ಮ ಕಾಲದ ಸವಾಲು ಎಂದು ನಾವು ಭಾವಿಸುತ್ತೇವೆ. ಅದನ್ನು ಮಾಡಲು ನಮ್ಮಲ್ಲಿ ಸಂಪನ್ಮೂಲಗಳಿವೆ ಎಂದು ನಾವು ಖಚಿತಪಡಿಸಿಕೊಳ್ಳಲಿದ್ದೇವೆ” ಎಂದು ಪೊಂಪಿಯೊ ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಸೇನೆಯ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಇದರ ಭಾಗವಾಗಿ ಅಮೆರಿಕಾವು ಜರ್ಮನಿಯಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಸುಮಾರು 52,000 ದಿಂದ 25,000 ಕ್ಕೆ ಇಳಿಸುತ್ತಿದೆ ಎಂದು ಅವರು ಹೇಳಿದರು.

ಕೆಲವು ಪ್ರದೇಶಗಳಲ್ಲಿ ಅಮೆರಿಕಾದ ಕೆಲವು ಸಂಪನ್ಮೂಲಗಳು ಇರಲಿವೆ ಆದರೆ ಚೀನಾದ ಬೆದರಿಕೆಯ ಬಗ್ಗೆ ಮಾತನಾಡಬೇಕಾದರೆ ಭಾರತ, ವಿಯೇಟ್ನಾಂ, ಮಲೇಶ್ಯಾ, ಇಂಡೋನೇಷಿಯಾ ಹಾಗೂ ಪಿಲಿಫೈನ್ ನ ದಕ್ಷಿಣ ಚೀನಾ ಸಮುದ್ರಗಳ ಬಗೆಗಿನ ಸವಾಲುಗಳಿವೆ ಎಂದು ಹೇಳಿದ್ದಾರೆ.

“ಅಮರಿಕಾ ಮಾಡಲು ನಿರ್ಧರಿಸಿದ ವ್ಯತ್ಯಾಸವು ಕೆಲವು ಸ್ಥಳಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಇತರ ರಾಷ್ಟ್ರಗಳು ತಮ್ಮದೇ ಆದ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಬಹುದು. ಆದ್ದರಿಂದ, ನಾವು ಇದನ್ನು ಜಗತ್ತಿನ ಎಲ್ಲ ಪಾಲುದಾರರೊಂದಿಗೆ ಪೂರ್ಣ ಸಮಾಲೋಚನೆಯಲ್ಲಿ ಮಾಡಲು ಬಯಸುತ್ತೇವೆ, ಯುರೋಪಿಯನ್ ದೇಶಗಳೊಂದಿಗೆ ಖಂಡಿತವಾಗಿಯೂ” ಎಂದು ಪೊಂಪಿಯೊ ಹೇಳಿದ್ದಾರೆ.

ಮಿತ್ರರಾಷ್ಟ್ರಗಳು ಮತ್ತು ಸ್ನೇಹಿತರೊಂದಿಗೆ ಸಮಾಲೋಚಿಸಿ ಸೈನ್ಯದ ಸ್ಥಿತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಪೊಂಪಿಯೊ ಹೇಳಿದ್ದಾರೆ.

ಕಳೆದ ವಾರ ಪೊಂಪಿಯೊ ಚೀನಾದ ಸೈನ್ಯ ಭಾರತದೊಂದಿಗಿನ ಗಡಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣಗೊಳಿಸಿದೆ ಎಂದು ಟೀಕಿಸಿದ್ದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಮಿಲಿಟರಿ ಮತ್ತು ಆರ್ಥಿಕ ಪ್ರಭಾವವನ್ನು ವೇಗವಾಗಿ ವಿಸ್ತರಿಸುತ್ತಿರುವುದು ಅಮೆರಿಕಾದ ಕಳವಳಕ್ಕೆ ಕಾರಣವಾಗಿದೆ. ಚೀನಾವು ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಎರಡರಲ್ಲೂ ತೀವ್ರವಾಗಿ ಪ್ರಾದೇಶಿಕ ವಿವಾದಗಳಲ್ಲಿ ತೊಡಗಿದೆ. ಈ ಪ್ರದೇಶದಲ್ಲಿ ಅದು ಅನೇಕ ದ್ವೀಪಗಳನ್ನು ನಿಯಂತ್ರಿಸುತ್ತಿದೆ ಮತ್ತು ಮಿಲಿಟರಿಕರಣಗೊಳಿಸಿದೆ. ಎರಡೂ ಪ್ರದೇಶಗಳು ಖನಿಜಗಳು, ತೈಲ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ ಮತ್ತು ಜಾಗತಿಕ ವ್ಯಾಪಾರಕ್ಕೆ ಪ್ರಮುಖ ಸ್ಥಳವಾಗಿದೆ ಎಂದು ಹೇಳಲಾಗಿದೆ.


ಓದಿ: ಬಾಯ್‍ಕಾಟ್ ಚೈನಾ ಅಬ್ಬರದ ಕೂಗು ವಾಣಿಜ್ಯದಲ್ಲಿ ಕಾರ್ಯಗತ ಸಾಧ್ಯವೇ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...