Homeಚಳವಳಿನಮಗೆ ನಾವೇ ಮಾಧ್ಯಮವಾಗಬೇಕಾದ ಹೊತ್ತಿದು : ನಜ್ಮಾ ನಜೀರ್

ನಮಗೆ ನಾವೇ ಮಾಧ್ಯಮವಾಗಬೇಕಾದ ಹೊತ್ತಿದು : ನಜ್ಮಾ ನಜೀರ್

- Advertisement -
- Advertisement -

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನಜ್ಮಾ ನಜೀರ್ ಚಿಕ್ಕನೇರಳೆ ಬೆಂಗಳೂರಿನಲ್ಲಿ ಎಲ್ಲರಿಗೂ ಪರಿಚಯವಾಗಿದ್ದು, ಸಾಮಾಜಿಕ ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಚುರುಕಾಗಿ ಓಡಾಡುವ ಚಿನಕುರಳಿಯಾಗಿ. ವೈದ್ಯಕೀಯ ವಿದ್ಯಾರ್ಥಿನಿಯಾದ ನಜ್ಮಾ ರೇಡಿಯೋ ಜಾಕಿಯಾಗಿ, ಕಂಠದಾನ ಕಲಾವಿದೆಯಾಗಿಯೂ ಕೆಲಸ ಮಾಡುತ್ತಾರೆ. ಆಕೆಯ ಪಿವೋಟ್ ಪದ್ಯಗಳು ಕೃತಿ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ.

ಮೊನ್ನೆ ನನ್ನ ಶಾಲಾದಿನಗಳ ಜೂನಿಯರ್ ಒಬ್ಬ ವಾಟ್ಸಾಪಿನಲ್ಲಿ ದನ ರಕ್ಷಣೆಯ ಬಗ್ಗೆ ಮೆಸೇಜೊಂದನ್ನ ಕಳುಹಿಸಿದ್ದ. ದನದ ಮಾಂಸ ತಿನ್ನುವವರೆಲ್ಲ ದೇಶದ್ರೋಹಿಗಳು ಎಂದು ನೇರವಾಗಿಯೆ ಬರೆದ ಮೆಸೇಜದು. ಇಂತಹುದ್ದೆ ಸ್ವರೂಪದ ಫ್ಯಾಸಿಸ್ಟ್ ಸಮರ್ಥನೆಯ ಮೆಸೇಜುಗಳನ್ನು ಕಳುಹಿಸಿದ್ದ ಹುಡುಗ ನಮ್ಮ ಮನೆಯಲ್ಲೆ ಅಡ್ಡಾಡಿಕೊಂಡು, ತಿಂದುಂಡುಕೊಂಡು ನಮ್ಮೊಟ್ಟಿಗೆಯೆ ಬೆಳೆದವನು. ಡಿಪ್ಲೊಮಾ ಮುಗಿಸಿ ಬೆಂಗಳೂರಿನ ಕಾರ್ಖಾನೆಯೊಂದರ ನೌಕರನಾಗಿದ್ದ ಆತನನ್ನು ಆರ್ಥಿಕ ಕುಸಿತದ ಕಾರಣ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಕೆಲಸದಿಂದ ತೆಗೆದಿದ್ದಾರೆ. ಕೆಲಸವಿಲ್ಲದ ಕಾರಣ ವಾಟ್ಸಾಪ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿ ಬಲ ಭಜನೆಯಲ್ಲಿ ಪ್ರತಿದಿನ ಮಿಂದೇಳುತ್ತಿದ್ದಾನೆ.

ಬಲಪಂಥೀಯ ಮೇನಿಯಾ ಈ ಮಟ್ಟಿಗೆ ಮಕ್ಕಳಿಂದ ಮುದಿಯರವರೆಗು ಹರಡಲು ಇವರು ಬಳಸಿಕೊಂಡ ಮುಖ್ಯವಾದ ಅಸ್ತ್ರ ‘ಧರ್ಮ’. ಭಾರತವಷ್ಟೆ ಅಲ್ಲ ಯುನೈಟೆಡ್ ಸ್ಟೇಟ್ಸ್‌ನ ಡೊನಾಲ್ಡ್ ಟ್ರಂಪ್‍ನಿಂದ ಹಿಡಿದು ಇಟಲಿಯ ಮ್ಯಾಟಿಯೊ ಸಾಲ್ವಿನಿ ಮತ್ತು ಬ್ರೆಜಿಲ್‍ನ ಜೈರ್ ಬೋಲ್ಸನಾರೊರವರೆಗೂ ಬಲಪಂಥೀಯವಾದಿಗಳು ಧರ್ಮ, ಏಕಸಂಸ್ಕೃತಿ, ಹುಸಿ ದೇಶಪ್ರೇಮದ ಸಿದ್ಧಾಂತಗಳನ್ನೆ ಪ್ರತಿಪಾದಿಸುತ್ತ ಜನರನ್ನು ಎಮೋಶನಲ್ ಬ್ಲಾಕ್‌ಮೇಲ್ ಮಾಡುತ್ತಲೆ ಎಂದಿಗಿಂತಲೂ ಉತ್ತಮವಾಗಿ ಚುನಾವಣಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೆ ಚಾಲಾಕಿತನದಿಂದ ಅಧಿಕಾರ ಪಡೆಯುತ್ತಿದ್ದಾರೆ. ಇಂತಹ ಈ ಸಂದರ್ಭದಲ್ಲಿ ಪ್ರಸಕ್ತ ಸರ್ಕಾರದ ಸ್ತುತಿಗೀತೆ ಹಾಡುತ್ತ ಕುಳಿತರೆ ಮಾತ್ರ ನೀವು ದೇಶದಲ್ಲಿ ಬದುಕಲು ಅರ್ಹ, ಒಂದೇ ಒಂದು ಮಾತು ತುಟಿಕ್‍ಪಿಟಿಕ್ ಎಂದರು ಸೆಕ್ಷನ್ ಮೇಲೆ ಸೆಕ್ಷನ್ ಹಾಕಿ ನಿಮ್ಮ ಅಭಿವ್ಯಕ್ತಿಯ ದಮನವನ್ನು ಮಾಡಲಾಗುತ್ತಿದೆ. ಹೆಚ್ಚು ಮಾತನಾಡಿದರೆ ಪ್ರಾಣ ತೆಗೆಯಲು ಸಿದ್ಧವಾಗಿ ಕುಂತಿದೆ ಬಲಪಂಥಿಯ ಫ್ಯಾಸಿಸ್ಟ್ ಶಕ್ತಿಗಳು.

ಗೋಲ್ವಾಲ್ಕರ್ ಮೊಘಲ್ ಆಳ್ವಿಕೆಯನ್ನು ಮುಸ್ಲಿಮ್ ಆಳ್ವಿಕೆಯೆಂದು ಪ್ರತಿಪಾದಿಸಿದ್ದ ಸಿದ್ಧಾಂತದ ಕಾಪಿ-ಪೇಸ್ಟ್ ಪ್ರಸಕ್ತ ಸರ್ಕಾರದ ಸಿದ್ಧಾಂತ. 2014ರ ಚುನಾವಣೆಯ ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ “ಸಾವಿರ ವರ್ಷಗಳ ಗುಲಾಮಗಿರಿಯಿಂದ ಭಾರತವನ್ನು ಸ್ವತಂತ್ರಗೊಳಿಸಿದ್ದೇನೆ” ಎಂದು ಹೇಳಿಕೆ ನೀಡಿದ್ದರು. ಮುಸಲ್ಮಾನರನ್ನು ಇಂದಿಗೂ ಪರಕೀಯರೆಂದೇ, ಆಕ್ರಮಣಕಾರರೆಂದೇ ಸರ್ಕಾರ ಬಿಂಬಿಸುತ್ತಿದೆ. ಮುಸಲ್ಮಾನರ ಆಡಳಿತವನ್ನು ದಬ್ಬಾಳಿಕೆಯ ಕಾಲವೆಂದೇ ನಂಬಿಸಲಾಗುತ್ತಿದೆ.

ಬಹುಸಂಖ್ಯಾತರ ನಡುವೆ ಬಲ ಸಿದ್ಧಾಂತವು ಮುಸಲ್ಮಾನರ ಬಗ್ಗೆ ಅಸಹನೆ ಬೆಳೆಸಿಕೊಳ್ಳುವಂತಹ ವಾತಾವರಣ ನಿರ್ಮಿಸಿದ್ದು, ಕೋಮುವಾದ ಸೃಷ್ಟಿಸಿದ ದ್ವೇಷಾಸೂಯೆ ಅಪಪ್ರಚಾರಗಳನ್ನು ತೀವ್ರರೀತಿಯಲ್ಲಿ ಮಾಡುತ್ತಿದೆ. ಇಂತಹುದರ ಫಲವಾಗಿಯೆ ಕಾಶ್ಮೀರದ ಆಸಿಫಾ ಅತ್ಯಾಚಾರ ಪ್ರಕರಣದಲ್ಲಿ ಶಾಸಕನೊಬ್ಬ ಜನರ ಹಿಂಡಿನೊಂದಿಗೆ ಆರೋಪಿಯ ಪರ ಬೀದಿಗಿಳಿದು ಹೋರಾಡುವ ಉದಾಹರಣೆಯನ್ನು ನಾವು ಕಣ್ಣಿಂದ ಕಾಣಬೇಕಾಯ್ತು.

ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷ ಹಿಂಸೆ ಅಪಪ್ರಚಾರದ ನಾನಾ ಸ್ವರೂಪಗಳು ಪ್ರಕಟವಾಗುತ್ತಿವೆ. ಇಷ್ಟಪಡುವ ಆಹಾರ ತಿನ್ನುವಂತಿಲ್ಲ, ಮಾತನಾಡುವ ಸ್ವಾತಂತ್ರ್ಯವಿಲ್ಲ, ಸಮಾನತೆಯೊಂದಿಗೆ ಶಿಕ್ಷಣವಿಲ್ಲ, ಉತ್ತಮ ಉದ್ಯೋಗವಿಲ್ಲ. ಕಷ್ಟಪಟ್ಟು ಬದುಕಬೇಕೆಂದು ಹೊರಟರೆ ನೆಮ್ಮದಿಯ ವಾತಾವರಣವಿಲ್ಲ, ರಕ್ಷಣೆಯೂ ಇಲ್ಲ. ಘನತೆಯ ಬದುಕೊಂದನ್ನ ಬದುಕುವ ಹಾಗೂ ಇಲ್ಲ ಎಂಬಂಥ ಪರಿಸ್ಥಿತಿ ಮುಸಲ್ಮಾನ, ದಲಿತ ಮತ್ತು ಹಿಂದುಳಿದ ಸಮುದಾಯಗಳದ್ದಾಗಿದೆ.

ಹಿಂದೆ ಜರ್ಮನಿಯಲ್ಲಿ ಯಹೂದಿಗಳ ಮೇಲಾದಂತೆಯೆ ಇಂದು ಭಾರತದಲ್ಲಿಯೂ ಅಲ್ಪಸಂಖ್ಯಾತರು, ತಳಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ದಹನ ನಡೆಯುತ್ತಿರುವ ಈ ಹೊತ್ತು ಬಹು ಕಠಿಣವಾದ ಕಾಲ. ಅನ್‌ಅಫಿಶಿಯಲಿ ಎಮರ್ಜೆನ್ಸಿ ಘೋಷಣೆಯಾಗಿರುವ ಕಾಲ.

ಈಗ ಪ್ರಗತಿಪರ ಜಾತ್ಯತೀತವಾದಿಗಳೆಲ್ಲ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ದೇಶವನ್ನು ಕಾಪಾಡಲು ಒಂದಾಗಲೇಬೇಕಾದ ಹೊತ್ತು. ಕಷ್ಟಪಟ್ಟು ಸಂಪಾದಿಸಿರುವ ಸ್ವಾತಂತ್ರ್ಯ ಸಂವಿಧಾನ, ಪ್ರಜಾಪ್ರಭುತ್ವ ಎಲ್ಲವೂ ಮಣ್ಣು ಪಾಲಾಗುವುದನ್ನು ತಪ್ಪಿಸಲು ಚಳವಳಿಗಳು ಮನೆಮನಗಳಿಗೆ ತಲುಪಬೇಕಾಗಿದೆ. ಮಾಧ್ಯಮಗಳು ಮಾರಾಟವಾಗಿರುವ ಈ ಕಾಲದಲ್ಲಿ ನಾವೇ ನಮಗೆ ಮಾಧ್ಯಮವಾಗಬೇಕಾಗಿರುವ ಕಾಲವೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...