Homeಅಂಕಣಗಳುಬೆಂಕಿ ಬರಹ-ಮಂದಿರವಲ್ಲೇ ಕಟ್ಟಿದೆವು...!

ಬೆಂಕಿ ಬರಹ-ಮಂದಿರವಲ್ಲೇ ಕಟ್ಟಿದೆವು…!

ಭೂಮಿಯಲ್ಲಿ ಜೈಶ್ರೀರಾಮ್ ಎಂದು ಕೂಗುತ್ತಾ ಹೊಡೆಯುತ್ತಿರುವ ಒಂದೊಂದು ಏಟಿಗೂ ಇಲ್ಲಿ ರಾಮನ ಮೈಮೇಲೆ ಬಾಸುಂಡೆ ಏಳುತ್ತಾ ಇದೆ.

- Advertisement -
- Advertisement -

“ಇಂಥ ಪರೀಕ್ಷೆ ಮಾಡ್ಲೇಬೇಕಿತ್ತಾ? ಬೆಂಕಿ ಸುಡದೇ ಇರಲು ಸಾಧ್ಯವಾ?” ಕೋಪ ಮತ್ತು ಬೇಸರದಿಂದ ಅಭಿಲಾಷ ಶೃತಿಯನ್ನು ಕೇಳಿದಳು. “ಏನ್ ಮಾಡೋಕೆ ಆಗುತ್ತೆ ನೀನೇ ಹೇಳು ಎಲ್ಲಾ ಆ ಅಗಸನಿಂದ ಆಗಿದ್ದು. ಅವನಿಗೆ ಇರುವಂತೆ ಬೇರೆಯವರಿಗೂ ಅನುಮಾನ ಇರುತ್ತೆ ಅಲ್ವ? ಹಾಗಾಗಿ ಈ ಅಗ್ನಿ ಪರೀಕ್ಷೆಯಂತೆ” ಉತ್ತರಿಸಿದಳು ಶೃತಿ.

ಸೀತೆಯ ಪಾವಿತ್ರತೆಯನ್ನು ಪರೀಕ್ಷೆ ಮಾಡಲು ಅಗ್ನಿಪರೀಕ್ಷೆಗೆ ಸಿದ್ಧತೆಗಳು ನಡೆದಿತ್ತು. ಊರಿನ ಜನರೆಲ್ಲಾ ಅಗ್ನಿ ಪರೀಕ್ಷೆ ನೋಡಲು ಸೇರಿದ್ದರು. ಅಭಿಲಾಷಳಿಗೆ ಕೋಪದಲ್ಲಿಯೇ ವಿಚಾರವೊಂದು ಹೊಳೆದಿತ್ತು, ಜನಜಾತ್ರೆಯ ಮಧ್ಯದಲ್ಲಿಯೇ ಕೂಗಿ ಹೇಳಿದಳು “ನಾನೇನು ಸೀತೆ ಅಲ್ಲ, ಎಲ್ಲಾನೂ ಒಪ್ಕಂಡು ಸುಮ್ನಿರೋಕೆ. ನನಗೂ ನನ್ನ ಗಂಡನ ಮೇಲೆ ಅನುಮಾನವಿದೆ. ಇದೇ ಅಗ್ನಿಯಲ್ಲಿ ನನ್ನ ಗಂಡನ ಪರೀಕ್ಷೆಯೂ ಆಗಲಿ” ಎಂದು ಕೂಗಿದಳು.

ಸುತ್ತ ನಿಂತಿದ್ದ ಮಹಿಳೆಯರ ಮುಖ ನೋಡುತ್ತಾ ನಿಮ್ಮಲ್ಲಿ ಯಾರಿಗೂ ನಿಮ್ಮ ಗಂಡನ ಮೇಲೆ ಅನುಮಾನವಿಲ್ಲವೇ? ಎಂದು ಪ್ರಶ್ನೆ ಎಸೆದಳು. ಹಲವರು ಗಾಬರಿಯಲ್ಲಿ ಅಭಿಲಾಷಳ ಮುಖ ನೋಡುತ್ತಾ ಮೌನವಾಗಿ ನಿಂತುಬಿಟ್ಟರು, ಇನ್ನು ಕೆಲವರು ಯೋಚಿಸುತ್ತಾ ಗೊಂದಲದಲ್ಲಿದ್ದರು. ಸ್ವಲ್ಪ ದೂರದಲ್ಲೇ ನಿಂತಿದ್ದ ಅಭಿಲಾಷಳ ಗಂಡ ಮತ್ತು ಇತರ ಗಂಡಸರ ಗುಂಪು ಭಯಬೀತರಾಗಿದ್ದರು. ಅಭಿಲಾಷಳ ಸುತ್ತ ನಿಂತವರಲ್ಲಿ ಕೆಲವರು ಅವಳ ಪ್ರಶ್ನೆಗೆ “ಹೌದು ನಮಗೂ ಅನುಮಾನವಿದೆ” ಎಂದು ಹೇಳುತ್ತಿದ್ದಂತೆಯೇ ಗಂಡಸರ ಗುಂಪು ಇವರ ದನಿ ಕೇಳಿಸದ ರೀತಿಯಲ್ಲಿ ಜೋರಾಗಿ “ಜೈ ಶ್ರೀರಾಮ್” ಎಂದು ಘೋಷಣೆ ಹಾಕಲು ಶುರು ಮಾಡಿದರು. ಜೈ ಶ್ರೀರಾಮ್ ಘೋಷಣೆಗೆ ದನಿಗೂಡಿಸುವ ಗಂಡಸರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಘೋಷಣೆ ಕೂಗಲು ಶುರು ಮಾಡಿ ಬರೀ ಎರಡು ನಿಮಿಷ ಮಾತ್ರವಾಗಿತ್ತು. ಒಂದು ಗುಂಪಿನಿಂದ ಶುರುವಾಗಿದ್ದು ಇದೀಗ ಸುಮಾರು ೧೫ ಬೇರೆ ಬೇರೆ ಗುಂಪುಗಳಾಗಿದೆ. ಹೋಟೆಲ್, ಅಂಗಡಿ, ಮನೆಗಳಿಗೆ ನುಗ್ಗಿ ಜೈ ಶ್ರೀರಾಮ್ ಎಂದು ಕೂಗಲು ಒತ್ತಾಯಿಸುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಘೋಷಣೆ ಕೂಗುತ್ತಿದ್ದವರ ಕೈಗಳಲ್ಲಿ ದೊಣ್ಣೆ, ಕಲ್ಲುಗಳು ಬಂದುಬಿಟ್ಟಿವೆ. ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸುವವರಿಗೆ ‘ಧರ್ಮ’ದೇಟು ಹಾಕುತ್ತಿದ್ದಾರೆ.

ಕ್ಷಣ ಮಾತ್ರದಲ್ಲಿ ಶುರುವಾಗಿದ್ದ ಈ ಗಲಭೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ಇದೇನಾಯಿತು ಎಂಬ ಅರಿವಿಲ್ಲದೆ ಆಘಾತಕ್ಕೊಳಗಾಗಿ ಏನು ಮಾಡುವುದೆಂದು ತಿಳಿಯದೆ ಎಲ್ಲವನ್ನೂ ನೋಡುತ್ತ ನಿಂತಿದ್ದ. ಈ ವ್ಯಕ್ತಿಯನ್ನು ಗಮನಿಸಿದ ಗುಂಪು ಈತನೆಡೆಗೆ ಓಡಿ ಬಂತು. “ಹೇಯ್ ಜೈ ಶ್ರೀರಾಮ್ ಹೇಳೋ” ಎಂದು ಗುಂಪಿನಿಂದ ಒಬ್ಬ ಗದರಿದ. ಗೊಂದಲಕ್ಕೊಳಗಾದ ಆ ವ್ಯಕ್ತಿ ಗುಂಪಿನಲ್ಲಿ ಒಬ್ಬಾತ ಹಿಡಿದಿದ್ದ ದೊಣ್ಣೆಯನ್ನೇ ನೋಡುತ್ತಾ ನಿಂತ. ಗುಂಪಿನಿಂದ ಮತ್ತೊಬ್ಬ ಏನೋ ಸುಮ್ನೆ ನಿಂತಿದ್ದೀಯಾ, ಎಷ್ಟೋ ಧೈರ್ಯ ನಿನಗೆ, ಜೈ ಶ್ರೀರಾಮ್ ಹೇಳು ಎಂದು ಮುಂದಕ್ಕೆ ಬಂದ. ವ್ಯಕ್ತಿ ಇನ್ನೂ ಸುಮ್ಮನೇ ನಿಂತಿದ್ದ.

”ಇವನ್ಯಾರೋ ಸಾಬನೇ ಇರಬೇಕು ಕಣ್ರೋ ಅದಕ್ಕೆ ಬಾಯಿ ಬಿಡ್ತಿಲ್ಲ” ಎಂದ ಇನ್ನೊಬ್ಬ “ಇಲ್ಲ, ಟೋಪಿ ಇಲ್ಲ ಗಡ್ಡ ಇಲ್ಲ, ಬಹುಶಃ ಬುದ್ದಿಜೀವಿಯೋ, ವಿಚಾರವಾದಿಯೋ ಇರಬೇಕು ಬಿಲ್ಲು ಬಾಣ ಬೇರೆ ಇಟ್ಕೊಂಡ್ ಬಂದಿದ್ದಾನೆ, ಇಲ್ಲಿ ನಡಿಯೋ ಪವಿತ್ರವಾದ ಅಗ್ನಿಪರೀಕ್ಷೆಯನ್ನ ಕೆಡಿಸೋಕೆ ಬಂದಿರಬೇಕು. ಬಡಿರೋ ಇವ್ನಿಗೆ” ಎಂದು ಮಗದೊಬ್ಬ ಹೇಳುತ್ತಿದ್ದಂತೆಯೇ ಇಡೀ ಗುಂಪು ಥಳಿಸಲು ಶುರು ಮಾಡಿದರು. ಕಲ್ಲು ದೊಣ್ಣೆಗಳಿಂದ ದಾಳಿ ಶುರುವಾಯಿತು. ದೊಡ್ಡ ಕಲ್ಲೊಂದು ಕಾಲಿನ ಮೇಲೆ ಎತ್ತಿ ಹಾಕಿದರು ಆ ವ್ಯಕ್ತಿಯ ಪಾದ ಜಜ್ಜಿಹೋಗಿತ್ತು.

ದೂರದಿಂದ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಗಲಾಟೆ ನಡೆಯುತ್ತಿದ್ದ ಗುಂಪಿನತ್ತ ಓಡಿ ಬಂದಳು. ಅಯ್ಯೋ ಇವರು ನನ್ನ ಗಂಡ ಬಿಟ್ಟುಬಿಡಿ ಎಂದು ಗೋಳಾಡಿದಳು. ಗುಂಪು ಮಾತ್ರ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಲೇ ಥಳಿಸುತ್ತಿದ್ದರು. ಆಗ ಆ ಮಹಿಳೆ “ಅಯ್ಯೋ ಇವರೇ ಶ್ರೀರಾಮ ನನ್ನ ಗಂಡ, ನಾನು ಸೀತೆ. ನಿಮ್ಮ ಕಾಲಿಗೆ ಬೀಳ್ತೀನಿ ನನ್ನ ಗಂಡ ರಾಮನನ್ನು ಬಿಟ್ಟುಬಿಡಿ” ಎಂದು ಕೂಗಿದಳು!.

ಹೌದು ಅವರು ರಾಮನನ್ನೇ ಬಡಿಯುತ್ತಿದ್ದರು! ಎಲ್ಲರೂ ಗಾಬರಿಯಾಗಿ ನಿಂತುಬಿಟ್ಟರು. ಒಬ್ಬ ಮಾತ್ರ ಮೈ ಮೇಲೆ ದೇವರು ಬಂದವರಂತೆ ಜೈ ಶ್ರೀರಾಮ ಎಂದು ಅರಚಿಕೊಳ್ಳುತ್ತಾ ದೊಣ್ಣೆಯಿಂದ ರಾಮನಿಗೆ ಹೊಡಿಯುತ್ತಲೇ ಇದ್ದ. ಗುಂಪಿನವರು ಅವನನ್ನು ಎಳೆದು ಇವರೇ ಶ್ರೀರಾಮ ಬಿಡು ಎಂದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವನನ್ನ ಎಲ್ಲರೂ ಸೇರಿ ಎತ್ತಿಕೊಂಡು ನಡೆದರು. ಅವನು ಹುಚ್ಚು ಹಿಡಿದವನಂತೆ ಜೈ ಶ್ರೀರಾಮ್ ಎಂದು ಅರಚಿಕೊಳ್ಳುತ್ತಲೇಯಿದ್ದ. ತನ್ನ ಗುಂಪಿನ ಸದಸ್ಯರ ಬಟ್ಟೆಗಳನ್ನೆಲ್ಲಾ ಹರಿದುಹಾಕುತ್ತಿದ್ದ.

ದಾರಿಹೋಕರ ಸಹಾಯದಿಂದ ಸೀತೆ ರಾಮನನ್ನು ಆಸ್ಪತ್ರೆಗೆ ಸೇರಿಸಿದಳು. ‘ಉಳಿಯುವುದು ಕಷ್ಟ, ಬಂಧುಗಳಿಗೆ ಹೇಳಿಬಿಡಿ’ ಎಂದರು ವೈದ್ಯರು. ಸೀತೆ ನೆನೆದೇ ನೆನೆದಳು. ರಾಮನನ್ನು ಹೊತ್ತು ಗಂಗೆಯ ಮೂಲವನ್ನು ಹುಡುಕುತ್ತಾ ಕೈಲಾಸಕ್ಕೆ ತಲುಪಿದಳು. ಅಲ್ಲೋ ಶಿವ ನರಳುತ್ತಿದ್ದಾನೆ ಹಸಿವೆಯಿಂದ. ‘ಅಲ್ಲಿ ಹಸಿವು ಹೆಚ್ಚಾದಂತೆಲ್ಲಾ ಇಲ್ಲಿ ಇವರ ಕಷ್ಟ ನೋಡಲಾಗದು’ ಎಂದು ಪಾರ್ವತಿ ಸೀತೆಯ ಬಳಿ ನಿಡುಸುಯ್ದಳು.

ರಾಮನ ಮೈಮೇಲೆ ಬಾಸುಂಡೆಗಳು ಒಂದಾದ ಮೇಲೆ ಒಂದು ಏಳತೊಡಗಿದವು. ಪಾರ್ವತಿ ತಂದ ಟ್ಯಾಬ್ ನೋಡಿ ಸೀತೆಗೆ ದಿಗ್ಬ್ರಾಂತಿಯಾಯಿತು. ಅಲ್ಲೆಲ್ಲೋ ಭೂಮಿಯಲ್ಲಿ ಜೈಶ್ರೀರಾಮ್ ಎಂದು ಕೂಗುತ್ತಾ ಹೊಡೆಯುತ್ತಿರುವ ಒಂದೊಂದು ಏಟಿಗೂ ಇಲ್ಲಿ ರಾಮನ ಮೈಮೇಲೆ ಬಾಸುಂಡೆ ಏಳುತ್ತಾ ಇದೆ. ಇನ್ನು ಬಾಸುಂಡೆ ಏಳಲು ಜಾಗವೇ ಇಲ್ಲ ಎನ್ನುವಷ್ಟು ಮಟ್ಟಿಗೆ ಚರ್ಮವೆಲ್ಲಾ ಕಿತ್ತುಹೋಗುವ ಹೊತ್ತಿಗೆ ಯಾರೋ ಕೂಗಿದ್ದು ಸೀತೆಗೆ ಕೇಳಿಸಿತು ‘ಮಂದಿರವಲ್ಲೇ ಕಟ್ಟಿದೆವು’. ರಾಮ ನೆಲದ ಮೇಲೆ ಬಿದ್ದಿದ್ದ.

-ಸರೋವರ್ ಬೆಂಕೀಕೆರೆ


ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಇದು ಬೆಂಕಿಕೆರೆಯಲ್ಲ ಬೆಂಕಿ ಹಚ್ಚುವ ಕೆರೆ. ಕಾಲ್ಪನಿಕವಾಗಿ ಏನನ್ನೂ ಬರೆಯಬಹುದು ಆದರೆ ಅದರ ನೆರಳಿನಲ್ಲಿ ವಾಸ್ತವಿಕತೆಯನ್ನು ಮುಚ್ಚಿಡುವುದು ಘೋರ ಅಪರಾಧವಷ್ಟೇ ಅಲ್ಲ ಇಷ್ಟು ದಿನದ ಸಹನೆಗೆ ಮಾಡಿದ ಘೋರ ಅವಮಾನ.
    ನಿಜವಾದ ಪ್ರಗತಿಪರ ಆಲೋಚನೆಯೇ ಆಗಿದ್ದಲ್ಲಿ
    ಅಲ್ಪಸಂಖ್ಯಾತರಿದ್ದಲ್ಲಿ ಸಹೋದರತ್ವ ಬಹುಸಂಖ್ಯಾತರಾಗಿದ್ದಲ್ಲಿ ದಬ್ಬಾಳಿಕೆ ತೋರುವ ಸಮುದಾಯದ ಗೋಸುಂಬೆತನದ ಬಗ್ಗೆ ವ್ಯಂಗ್ಯ ಪರಿಕಲ್ಪನೆಯನ್ನು ಹರಿಯಬಿಡುವ ಧೈರ್ಯ ಮಾಡಬೇಕು. ಹಾಗೆ ನೋಡಿದರೆ ಪ್ರಗತಿಪರರಿಗೆ ಇತಿಹಾಸ ಪ್ರಜ್ಞೆ ಇರುತ್ತದೆ, ಇರಬೇಕು. ಉದಾಹರಣೆಗೆ ಗೋಧ್ರಾ ಹತ್ಯಾಕಾಂಡದ ಕುರಿತು ಮೋದಿಯವರನ್ನು ತೆಗಳುವ ಈ ಗುಂಪು ಆ ಹತ್ಯಾಕಾಂಡದ ಹಿಂದಿನ ಕಾರಣವೇನು ಎಂಬ ಬಗ್ಗೆ ಬಾಯಿ ಹೊಲಿದುಕೊಂಡಿರುತ್ತದೆ. ಇಂಥ ಅನೇಕ ಉದಾಹರಣೆಗಳಿವೆ. ಆದರೆ ಇವರಿಗೆ ಕಾಣುವುದು ಕೇವಲ ಅಲ್ಪಸಂಖ್ಯಾತರು ಮಾತ್ರ ಆದರೆ ಅಲ್ಪಸಂಖ್ಯಾತರ ಹೆಸರಿನಲ್ಲಿ ಇಲ್ಲಿಯ ಅನ್ನ ತಿಂದು ಬೇರೆ ದೇಶಕ್ಕೆ ಜೈಕಾರ ಹಾಕುವವರ ಬಗ್ಗೆಯೂ ಇವರು ತುಟಿ ಬಿಚ್ಚುವುದಿಲ್ಲ.
    ಒಂದು ಧರ್ಮದ ಆರಾಧ್ಯ ದೈವದ ಮಂದಿರವನ್ನು ಯಾವನೋ ದುರುಳ ಕೆಡವಿದ ಬಗ್ಗೆ ಉತ್ಖನನದ ಪಳೆಯುಳಿಕೆಗಳು ಸಾರಿ ಸಾರಿ ಹೇಳಿವೆ. ಅವುಗಳ ಆಧಾರದ ಮೇಲೆ ಸುಪ್ರೀಮ್ ಕೋರ್ಟು ತೀರ್ಪು ನೀಡಿದೆ. ಮಾತೆತ್ತಿದರೆ ಸಂವಿಧಾನದ ರಕ್ಷಣೆಯ ಮಾತಾಡುವ ಜನರು ಈ ತೀರ್ಪನ್ನು ಮಾತ್ರ ಗೌರವಿಸಲಾರರು ! ಇದು ಸಂವಿಧಾನದ ವಿಡಂಬನೆಯಲ್ಲದೆ ಮತ್ತೇನು ? ನೂರಾರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಾಗ ಸಹಜವಾಗಿಯೇ ಭಕ್ತ ಆವೇಶಕ್ಕೊಳಗಾಗಿ ಜೈಕಾರ ಹಾಕುತ್ತಾನೆ. ಅದನ್ನು ಬೇರೊಬ್ಬರ ಮೇಲೆ ದಬ್ಬಾಳಿಕೆಯೆಂಬಂತೆ ಬಿಂಬಿಸಿ ವ್ಯಂಗ್ಯವಾಗಿ ಮಾತನಾಡುವ ಹುಕಿಯ ಹಿಂದಿನ ಪಿತೂರಿಯೇನು ? ಇಂಥದಕ್ಕೆಲ್ಲ ಒಂದೇ ಸಮುದಾಯ ಅದೂ ಬಹುಸಂಖ್ಯಾತ ಎಂದು ‘ ಕರೆಯಲ್ಪಟ್ಟರೂ ‘, ನಕಲಿ ಜಾತ್ಯತೀತರ ಕೆಂಗಣ್ಣಿಗೆ ಗುರಿಯಾಗಿರುವ ಹಿಂದೂ ಸಮುದಾಯವೇ ಗುರಿಯಾಗಿ, ಅಪಹಾಸ್ಯಕ್ಕೆ ಈಡಾಗುತ್ತಿರುವುದು ಯಾಕೆ ? ಹಿಂದೂಗಳ ಸಹನೀಯ ಗುಣವೇ ಕಾರಣವೇ ?

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...