Homeಚಳವಳಿಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು

ಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು

ಎರಡು ವರ್ಷದ ಕೆಳಗೆ ಅಲುಗಾಡದೆ ಧೈರ್ಯದಿಂದ ಪೋಲಿಸರ ಜೊತೆ ನಡೆದು ಹೋಗಿಬಿಟ್ಟ ವರವರರಾವ್‌ರನ್ನು ತಿರುಗಿ ಹಾಗೇಯೇ ನೋಡುತ್ತೇವಾ?

- Advertisement -
- Advertisement -

ವಿಸ್ಮೃತಿ ಒಂದು ಖಾಯಿಲೆ. ವಯೋಭಾರ ಅದಕ್ಕೆ ಕಾರಣವಿರಬಹುದು. ಜನಮಾನಸದಲ್ಲಿ ಮುಳುಗೇಳುವ ಮನುಷ್ಯ ಏಕಾಂಗಿ ಆದಾಗ, ಖಿನ್ನತೆ ಜೊತೆಯಾಗುತ್ತದೆ. ವಿಸ್ಮೃತಿಗೆ ಪ್ರೇರಣೆ ಆಗುತ್ತದೆ. ತಾನು ಓದಿದ, ತಿಳಿದುಕೊಂಡ, ಭಾಗವಾದ, ಬರೆದ ಚರಿತ್ರೆಯನ್ನು ವರವರರಾವು ಮರೆತು ಹೋಗಬಹುದೆಂದು ಯಾರಾದರೂ ಅಂದುಕೊಂಡಿದ್ದೇವ? ಮಾತು ಸ್ಪಷ್ಟವಾಗಿ, ಸರಿಯಾಗಿ ಇಲ್ಲದ ವರವರರಾವರನ್ನು ಯಾರಾದರೂ ಊಹಿಸಬಲ್ಲರ? ಎಷ್ಟು ಕೃಶವಾಗಿದ್ಧಾರೆ! ಎರಡು ವರ್ಷದ ಕೆಳಗೆ ಅಲುಗಾಡದೆ ಧೈರ್ಯದಿಂದ ಪೋಲಿಸರ ಜೊತೆ ನಡೆದು ಹೋಗಿಬಿಟ್ಟ ವರವರರಾವ್‌ರನ್ನು ತಿರುಗಿ ಹಾಗೇಯೇ ನೋಡುತ್ತೇವಾ?

ಬರಹ: ಕೆ.ಶ್ರೀನಿವಾಸ್ (ಸಂಪಾದಕರು ಆಂಧ್ರಜ್ಯೋತಿ ತೆಲುಗು ದಿನಪತ್ರಿಕೆ)
ಅನುವಾದ: ಅನಿಲ್ ಕುಮಾರ್‌ ಚಿಕ್ಕದಳವಟ್ಟ

ವರವರರಾವ್ ಆರೋಗ್ಯದ ಬಗ್ಗೆ ಕಳವಳ, ಅವರನ್ನು ಬಿಡುಗಡೆ ಮಾಡಬೇಕೆಂಬ ಬಯಕೆ ತೆಲುಗು ಸಮಾಜದಲ್ಲೇ ಅಲ್ಲ, ದೇಶ ವಿದೇಶಗಳಲ್ಲಿಯೂ ಬಲವಾಗುತ್ತಿದೆ. ಪ್ರತಿ ಪ್ರತಿರೋಧ, ಪ್ರತಿಭಟನೆಗೂ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪ್ರತಿನಿಧಿಗಳಾಗಿ ಕೇಳಿಬರುವ ಹೆಸರುಗಳೆಲ್ಲ ಅವರಿಗಾಗಿ ರೂಪುಗೊಳ್ಳುತ್ತಿರುವ ಹೇಳಿಕೆಗಳಲ್ಲಿ, ಮನವಿಗಳಲ್ಲಿ ಕಾಣಿಸುತ್ತಿವೆ.

ಕೆಲವು ಚಿಂತನೆಗಳ ವಿಷಯಗಳಲ್ಲಿ, ಆ ಚಿಂತನೆಗಳ ಸಾಧಕರ ವಿಷಯದಲ್ಲಿ ತಾವು ಕಠಿಣವಾಗಿಯೂ, ಧೃಢವಾಗಿಯೂ ಇರಬೇಕೆಂದುಕೊಂಡಿದ್ದೇವೆ ಎಂದು ಭಾರತದ ಪ್ರಭುತ್ವವನ್ನು ನಿರ್ವಹಿಸುತ್ತಿರುವ ರಾಜಕೀಯ ನಾಯಕತ್ವ ಭಾವಿಸುತ್ತಲಿರಬಹುದು, ಆ ವೈಖರಿ ಎಲ್ಲಾ ಅವಧಿಗಳನ್ನು ದಾಟಿ ಕ್ರೂರವಾಗಿ, ಅಮಾನವೀಯವಾಗಿ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ, ಇತರೆ ಸಂಧರ್ಭಗಳಲ್ಲಿಯೂ ಇಂತಹ ಬಂಧಗಳ ಕುರಿತು ಮಾತನಾಡದ ವ್ಯಕ್ತಿಗಳು ಸಹ ಬಾಯಿ ಬಿಡುತ್ತಿದ್ದಾರೆ.


ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.


ಈ ಬಂಧನಗಳು ಇಪ್ಪತ್ತೆರಡು ತಿಂಗಳುಗಳಿಂದ ಸಾಗುತ್ತಿದ್ದರೂ, ಇನ್ನು ಇದರ ಕುರಿತು  ಮಾತನಾಡದಿದ್ದರೆ ಆತ್ಮಸಾಕ್ಷಿ ಒಪ್ಪಿಕೊಳ್ಳಲಾರದ ಸ್ಥಿತಿಯನನ್ನು ಮತ್ತೊಂದಷ್ಟು ಜನ  ಈಗೀಗ ಗುರುತಿಸುತ್ತಿದ್ದಾರೆ. ಕಬ್ಬಿಣ ಸಹ ಕರಗುತ್ತಿದೆ. ‘ಉಪಾ’ವನ್ನು ಎತ್ತಿ ಹಿಡಿದು, ಹೊಸ ಉಡುಗೆ ತೊಡಗಿಸಿದ ಚಿದಂಬರಮ್ ಕೂಡ ವರವರರಾವ್ ಬಿಡುಗಡೆಯನ್ನು  ಕೋರುತ್ತಿದ್ದಾರೆ.

ಬಂಧನ ಅನ್ಯಾಯವೆಂದು, ಅಕ್ರಮವೆಂದು ಪ್ರತಿಭಟಿಸುವುದರಿಂದ ಹಿಡಿದು ಅನಾರೋಗ್ಯವನ್ನು ವೃಧ್ಯಾಪ್ಯವನ್ನು ನೋಡಿಯಾದರೂ ಸ್ಫಂಧಿಸಬೇಕೆಂದು ಕೇಳುವವರೆಗೂ ನಾಗರೀಕ ಸಮಾಜ ಬಂದಿದೆ. ಕಲ್ಲುಬಂಡೆ ಪ್ರಭುತ್ವಗಳ ಸ್ಪಂಧನರಾಹಿತ್ಯವನ್ನ, ನ್ಯಾಯವನ್ನ ರಕ್ಷಿಸಬೇಕಾದ ವ್ಯವಸ್ಥೆಯ ವೈಪಲ್ಯವನ್ನು, ಜನ ಹೋರಾಟಗಳ ನಿಸ್ಸಾಯಕತೆಯನ್ನು ಈ ಅವರೋಹಣ ತಿಳಿಸುತ್ತದೆ.

ಪ್ರಜಾಪ್ರಭುತ್ವ ಮೌಲ್ಯಗಳು, ಸಹಜ ನ್ಯಾಯದಂತಹ ನಾಗರೀಕ ಅಂಶಗಳೇನು ಚಲಾವಣೆ ಆಗದಿದ್ದಾಗ, ಕನಿಷ್ಟ ಮಾನವೀಯತಯ ಪ್ರತಿಪಾಧನೆಯ ಮೇಲೆಯೇ ಕೇಳಿಕೊಳ್ಳಬೇಕಾಗುತ್ತದೆ. ಅಲ್ಲಿಯೂ ಸಹ ಬಾಗಿಲು ಮುಚ್ಚಿರುವಾಗ, ಶಿಲಾಸದೃಷ ಮೌನ   ಎದುರಾದಾಗ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲದಂತಾಗುತ್ತದೆ. 90% ರಷ್ಟು ಅಂಗವಿಕಲರಾದ ಸಾಯಿಬಾಬರನ್ನು, ವ್ಯವಸ್ಥೆಗೆ ಅತ್ಯಂತ ಅಪಾಯಕರಿ ಎಂದೂ ಏಕಾಂಗಿಯಾಗಿ ಕಾರಾಗೃಹದಲ್ಲಿ ಬಂಧಿಸಿದಾಗ, ವ್ಯವಸ್ಥೆಯು ವಿವೇಚನೆಯ ಅಂಗವೈಕಲ್ಯದ  ಕಟಕಟೆಯಲ್ಲಿ ನಿಲ್ಲುತ್ತದೆ.

ಅಸಹನೆ, ಕೂಗಾಟ ಯಾವ ಕಾಲಕ್ಕೆ ಒಂದು ಸ್ಪಷ್ಟ ರಾಜಕೀಯ ನಿರಾಕಾರಣೆಯಾಗಿ ಬದಲಾಗುತ್ತದೋ, ಯಾವಾಗ ಆಚರಣೆಯಾಗಿ ಪರಿಣಮಿಸುತ್ತದೋ ಎಂದು ಹೇಳಲಾಗುವುದಿಲ್ಲವಾದರೂ, ಪರಿಣಾಮಗಳು ಮಾತ್ರ ಇರುತ್ತವೆ. ಅಪನಂಬಿಕೆಗಳು, ಭಿನ್ನಾಭಿಪ್ರಯಗಳು, ಅಸಹಾಕರಗಳು, ಆಚರಣೆಗಳು ಎಲ್ಲವನ್ನೂ ನಿರ್ಭಂಧದಿಂದಲೇ ವ್ಯವಹರಿಸಬಹುದೆಂದು ಆಳುವವರು ಅಂದುಕೊಂಡರೆ, ನಡೆಯಲಿರುವ ಚರಿತ್ರೆಯನ್ನು ಕುತೂಹದಿಂದ , ಕಳವಳದಿಂದ ನೋಡಬೇಕಷ್ಟೆ.

ಮುಂಬರುವ ದಿನಗಳು ಅಷ್ಟೇನು ಆಶಾದಾಯಕವಾಗಿಲ್ಲ, ಜನರು ತಾವಿರುವ ಪ್ರಮಾದದ ಪ್ರಮಾಣವನ್ನು, ತಾವು ಬೆಳೆಸಿ ಪೋಷಿಸುತ್ತಿರುವ ಉಪದ್ರವಗಳನ್ನು ತಿಳಿದುಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಅವರ ಬುದ್ದಿವಂತಿಕೆ, ಸ್ಪಂಧನೆಗಳು, ಉದ್ವೇಗಗಳು ಪ್ರೋಗ್ರಾಮಿಂಗ್ ಮಾಡಿ, ನಡೆಸುವಂತಹ ಶಕ್ತಿಗಳು ಬಲವಾಗಿವೆ ಹಾಗೂ ಇನ್ನು ಬಲಗೊಳ್ಳುತ್ತಿವೆ. ಅವರು ತಮಗೆ ಇರುವ ದೀರ್ಘಕಾಲಿಕ ಪ್ರಣಾಳಿಕೆಯ ಪ್ರಕಾರ ಒಂದೊಂದೆ ಹೆಜ್ಜೆ ಹಾಕುತ್ತಿದ್ದಾರೆ.


ಓದಿ: ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?


ಶತಮಾನಗಳ ಕಾಲದಿಂದ, ವಸಹಾತುಶಾಹಿ ವಿರುದ್ಧದ ರಾಷ್ಟ್ರೀಯ ಹೋರಾಟದಿಂದ ಹಿಡಿದು ಅನೇಕ ಸಾಮಾಜಿಕ ಹೋರಾಟ, ರಾಜಕೀಯ ಹೋರಾಟ, ಹೀಗೆ ಅನೇಕ ಹೋರಾಟಗಳಿಂದ ಈ ದೇಶ ಪಡೆದುಕೊಂಡ ಆದರ್ಶಗಳನ್ನು, ಹೊಸ ಮೌಲ್ಯಗಳನ್ನು, ಮಾನವೀಯತೆಯನ್ನು–ಎಲ್ಲವನ್ನು ಧ್ವಂಸ ಮಾಡುವ ಪ್ರಕ್ರಿಯೆ ಮುಂದುವರೆಯುತ್ತಿದೆ.

ಪ್ರಜಾಪ್ರಭುತ್ವ ಮೂಲ ತತ್ವಗಳನ್ನು, ಸಾಮೂಹಿಕ ಸದ್ಬಾವನೆ, ಪರಿವರ್ತನೆಯ ಅಡಿಪಾಯವನ್ನು ಅಳಿಸಿಹಾಕದ ಹೊರತು, ಏರ್ಪಟ್ಟಂತಹ ಆಧಾರ ತಲೆಕೆಳಗಾಗಿಸದೆ ಈ ದೇಶದಲ್ಲಿ ಅವರು ಅಂದುಕೊಳ್ಳುವ ರೀತಿಯ ಸಮಾಜ, ದೇಶ ನಿರ್ಮಾಣವಾಗುವುದಿಲ್ಲ.  ಅದಕ್ಕಾಗಿಯೇ ಒಂದು ಶುದ್ಧೀಕರಣ ಅವಶ್ಯಕವಾಗಿದೆ. ಬೇರೆ ಬೇರೆ ಸ್ಥಾಯಿಯಲ್ಲಿ, ಬೇರೆ ಬೇರೆ ಹಂತದಲ್ಲಿ ವಿಧವಿಧವಾದ ನಿರ್ಮೂಲನೆ ಬೇಕಾಗಿದೆ. ಈ ಕ್ರಿಯೆ  ಕಾಣಿಸುತ್ತಲೇ ಇದೆ. ಕೆಲವರು ಮಾತ್ರ ಇದನ್ನು ಕಾಣುತ್ತಿದ್ದಾರೆ.

ಪರಿಸ್ಥಿತಿ ಇಷ್ಟು ಹದಗೆಡಲು ಎಡಪಂಥ, ಪ್ರಜಾಪ್ರಭುತ್ವ ಪರ ರಾಜಕೀಯ ಜವಾಬ್ದಾರಿ ಕೂಡ ಇದೆ. ವರವರರಾವು ಪ್ರತಿನಿಧಿಸುವ ರಾಜಕೀಯಗಳ ಪಾಲು ಸಹ ಕಡಿಮೆ ಏನಲ್ಲ. ಮಧ್ಯಮ ರಾಜಕಾರಣಗಳ ವೈಫಲ್ಯ, ಭಾರತದೇಶ ನಿರ್ಧಿಷ್ಟ ಪರಿಸ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಸಿದ್ದಾಂತಗಳಿಗೆ ಅನ್ವಯಿಸುವುದರಲ್ಲಿ, ಅಚರಣೆಯಲ್ಲಿ ಇಡುವುದರಲ್ಲಿ ದೊಡ್ಡ ದೊಡ್ಡ ತಪ್ಪುಗಳೇ ನಡೆದವು. ಇದನ್ನು ಗುರುತಿಸಿದ ನಂತರವು ತಿದ್ದಿ ನಡೆಯುವುದು ವಿಳಂಬವಾಯಿತು. ನೋಡ ನೋಡುತ್ತಿಂದಂತೆಯೇ  ಭಯಪಡುವಷ್ಟು ಸಂಭವಿಸಿತು.

ಪ್ರಗತಿಯಪರ ಎಂದು ಹತ್ತಿರದಿಂದ ಮುಗಿಸುವ ಯಜ್ಞ ಆರಂಭವಾಗಿದೆ. ವರವರರಾವು ಅಂತಹವರ ಬಂಧನವೇ ಅಲ್ಲ, ಈ ಬಂಧನಗಳಿಗೆ ಪರಿಸ್ಥಿತಿಗಳಿಗೆ ಸಮಾಜದಲ್ಲಿ ಲಭಿಸುತ್ತಿರುವ ಮೌನ, ಕ್ರೀಯಾಶೀಲ ಮತೋನ್ಮಾಧವನ್ನು ಬೆಳೆಸುವ ಉದ್ರೇಕದ ಕಾರ್ಯಕ್ರಮಗಳ ಜೊತೆಗೆ, ಲೌಕಿಕ, ಉದಾರ ಭಾವನೆಗಳ ಮೇಲೆ ತೀವ್ರ ಯುದ್ದವು ಸಹ ಮುಂದವರೆಯುತ್ತದೆ ಇದರ ಭಾಗವೇ ವರವರರಾವ್ ಅವರ ನಿರ್ಧಾಕ್ಷಿಣ್ಯ ಬಂಧನ.


ಓದಿ: ಅಂಬೇಡ್ಕರ್‍ರ ಕನಸನ್ನು ತನ್ನದೇ ರೀತಿಯಲ್ಲಿ ನನಸಾಗಿಸಲು ದುಡಿಯುತ್ತಿರುವ ಅನೂಪ್ ಕುಮಾರ್‍


ಕಾಶ್ಮೀರ್ ನಂತಹ ವಿಷಯಗಳಲ್ಲಿ ಏನು ಮಾಡುವುದಕ್ಕಾದರೂ ಸರಿ ರಾಷ್ಟ್ರೀಯತೆ ಆಯುಧವಾಗಿಯು, ಕವಚವಾಗಿಯೂ ಉಪಯೋಗಕ್ಕೆ ಬರುತ್ತದೆ. ಪೌರತ್ವ ಕಾಯ್ದೆಯನ್ನು ವಿರೋಧಿಸಿದವರ ಮೇಲೆ ಸಾಲು ಸಾಲು ಕೇಸ್ಗಳನ್ನು ಹಾಕಲು ಬಹುಸಂಖ್ಯವಾದ ಛತ್ರಿಯಾಗುತ್ತದೆ. ಈ ಹಿಂದೆಯೇ ಹುಟ್ಟುಹಾಕಿದ ಕೆಡಕುಗಳಿಗೆ ಇರುವ ಅವಕಾಶಗಳು, ಸಮಾಜದಲ್ಲಿನ ತಳ ಸಮುದಾಯಗಳ ಏಳಿಗೆಗಾಗಿ ಕೆಲಸ ಮಾಡಿದ, ಹೋರಾಟಗಾರರ ಹಕ್ಕುಗಳಿಗಾಗಿ ಹೋರಾಡುವ ಪ್ರಜಾಪ್ರಭುತ್ವಾವಾದಿಗಳ ವಿಷಯದಲ್ಲಿ ಇರುವುದಿಲ್ಲ. ಬಹುಸಾಂಖ್ಯಾತರ ಭಾವನೆಗಳೊಂದಿಗೆ ಅವರ ಮೇಲೆ ವಿರೋಧವನ್ನು ವಿಶಾಲವಾಧ ತಾಲಳಹದಿಯಲ್ಲಿ ಹುಟ್ಟುಹಾಕಲು ಸಾಧ್ಯವಾಗುತ್ತಿಲ್ಲ.

ಈ  ಪ್ರಜಾಪ್ರಭುತ್ವದ ಹೋರಾಟಗಾರರ ಸ್ವಾರ್ಥರಾಹಿತ್ಯ, ವ್ಯಕ್ತಿಗತ ನೈತಿಕತೆ, ಬದ್ದತೆ, ಪ್ರಜಾ ತಳಹದಿ ಅವರಿಗೆ ರಕ್ಷೆಯಾಗಿ ಇರತ್ತವೆ. ಬಂಧನದ ವಾತವಾರಣದ ನೆಪಥ್ಯದಲ್ಲಿ, ಕಠಿಣ ಕಾಯ್ದೆಗಳ ಅಮಾನವೀಯ ಜಾರಿ ಮೂಲಕ ಮಾತ್ರವೇ, ಪಜಾಪ್ರಭುತ್ವ ವಾದಿಗಳನ್ನು ಬಂಧಿಸಿ ಇಡುವರು. ಇದಕ್ಕೆ ಜನರ ಪ್ರತಿಕ್ರಿಯೆ, ನಾಗರೀಕ ಸಮಾಜದ ಸ್ಫಂದನೆ ಹೇಗೆ ಇರುತ್ತದೆ ಎನ್ನುವ ಅನುಮಾನ ಪ್ರಭುತ್ವಗಳಿಗೆ ಇರುತ್ತದೆ.

ಈ ದೇಶ ಪರೋಪಕಾರಗಳಿಗೆ, ಸಾಹಸಗಳಿಗೆ, ತ್ಯಾಗಗಳಿಗೆ ಕಡಿಮೆ ಏನಿಲ್ಲ. ಅಂತಹ ವಿಶಿಷ್ಟ, ಪ್ರತ್ಯೇಕ ಸಮೂಹದಿಂದ ಹತ್ತು ಜನರನ್ನು ಅಥವಾ ಇಪ್ಪತ್ತು  ಜನರನ್ನು ಮಾತ್ರ ಮಾದರಿಯಾಗಿ ತೆಗೆದುಕೊಂಡು ಭಾರತದ ಜನರ ಪ್ರಜಾಸ್ವಾಮ್ಯದ ಸ್ಪಂದನೆಗಳನ್ನು ಪ್ರಭುತ್ವ ಪರಿಶೀಲಿಸುತ್ತಿದೆ. ಇದೊಂದು ರೀತಿಯ ನಕಾರಾತ್ಮಕ ಕ್ಲಿನಿಕಲ್ ಟ್ರಯಲ್. ಸ್ಫಂದನೆ ಇದಿಯೋ ಇಲ್ಲವೋ, ಮಂದವಾಗಿದೀಯೊ ಆಪರೇಷನ್ ಸಕ್ಸಸ್. ಬಂಧನಗಳಿಗೆ ಮತ್ತೊಂದು ಸಾಲು ಸಿದ್ಧ ಮಾಡಿಕೊಳ್ಳಬಹುದು. ಈಗ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರಧ್ವಾಜ್, ಷೋಮಾಸೇನ್, ಅಖಿಲ್ ಗೋಗಾಯಿ, ಗೌತಮ್ ನವಲಖರಂತಹವರೇ ಮೊದಲ ಸಾಲಿನ ಪರೀಕ್ಷೆಯಲ್ಲಿ ಇರಬಹುದು.

ಇನ್ನೂ ಕೆಲವು ದಿನಗಳಿಗೆ ಸೀತರಾಂ ಯೇಚೂರಿ, ಬೃಂದಾ ಕಾರಟ್, ಸುರವರಂ ಸುಧಾಕರ್ ರೆಡ್ಡಿ, ಕಂಕಣಾಲ ನಾರಾಯಣ, ಕೊನೆಗೆ ಫೆಡರಲಿಜಂ ಬಗ್ಗೆ ಮಾತನಾಡುವ ಕೆಸಿಆರ್, ಇನ್ನೂ ಹಳೇಯ ವಾಸನೆ ಇರುವ ಕಾಂಗ್ರೇಸ್ ಯೋಧರು – ಎಲ್ಲರೂ ಸಾಲಿನಲ್ಲಿ ನಿಲ್ಲಲೇಬೇಕಾಗುತ್ತದೆ. ನೆಹುರುರನ್ನೇ ಮತ್ತೆ ಸಾಯಿಸುತ್ತಿರುವವನಿಗೆ ರಾಹುಲ್ ಗಾಂಧಿ ಒಂದು ಲೆಕ್ಕಾನ? ದೇವರನ್ನ ತಲೆಯ ಮೇಲೆ ಎತ್ತಿಕೊಂಡರೂ, ಕಲಕತ್ತಾ ಕಾಳಿಗೆ ಕೈ ಮುಗಿದರು, ನರೇಂದ್ರ ಮೋದಿಗೆ ಜೈಕಾರ ಹಾಕಿದರೂ ಉಪಯೋಗವೇನು ಇರುವುದಿಲ್ಲ. ಸರ್ವಧರ್ಮಗಳನ್ನು ಪರಿತ್ಯಜಿಸಿ, ಅವರೆ ದಿಕ್ಕೆಂದು ಶರಣು ಬೇಡಿಕೊಳ್ಳಬೇಕು. ರಾಡಿಕಲ್ ಶಕ್ತಿಗಳ ಮೇಲೆ ಮಾತ್ರವೇ ಅಸ್ತ್ರಗಳು ಗುರಿಯಿಟ್ಟಿವೆ ಎಂದುಕೊಂಡರೆ ಅದು ಭ್ರಮೆ.


ಓದಿ:  ಸನಾತನ ಸಂಸ್ಥೆಯೋ? ಸೈತಾನ ಪಡೆಯೋ??


ಪ್ರಜೆಗಳು, ಕಲ್ಯಾಣ, ಸಂಕ್ಷೇಮ, ಶ್ರಮಜೀವಿಗಳು, ಸಮಾನತೆ, ಹಕ್ಕುಗಳು, ಪ್ರಾದೆಶಿಕ ನ್ಯಾಯ ಎನ್ನುವಂತಹ ಮಾತುಗಳನ್ನು ಉಪಯೋಗಿಸುವ ಎಲ್ಲರೂ ಸಾಲಿನಲ್ಲಿ ನಿಲ್ಲಲೇಬೇಕು. ಸರತಿ ನಮ್ಮವರೆಗೂ ಬರಬಾರದೆಂದರೆ, ಭಾರತದ ಪ್ರಜಾಸ್ವಾಮ್ಯದ ವೈಶಿಷ್ಟ್ಯಕ್ಕೆ ಸಂಕೇತವಾಗಿ, ರಕ್ಷಣೆಗೆ ಮೊದಲ ಸಾಲಿನಲ್ಲಿ ಗೋಡೆಯಾಗಿ ನಿಂತ ವರವರರಾವು ಅಂತಹವರನ್ನು ರಕ್ಷಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ವಿರೋಧಿಗಳ ಪ್ರಯತ್ನಗಳು ಸೋತು ಹೋಗಬೇಕು.

ಸರ್ಕಾರ ವರವರರಾವ್ ಬಂಧನವನ್ನು ಮುಂದುವರೆಸುತ್ತಾ, ನೈತಿಕತೆಯನ್ನು ಕಳೆದುಕೊಂಡ ಸ್ಥಿತಿಗೆ ಜಾರಿದೆ. ಈ ಅನೈತಿಕತೆ ಕೇವಲ ದುರ್ಬಲ ಸ್ಥಿತಿಯಲ್ಲಿ ಇರುವ ವ್ಯಕ್ತಿಯನ್ನು ಬಂಧಿಸುವುದರಿಂದ ಏರ್ಪಟ್ಟಿರುವುದಷ್ಟೇ ಅಲ್ಲಾ. ವರವರರಾವ್ ಎಂಬ ಒಬ್ಬ ವ್ಯಕ್ತಿಯ ಐವತ್ತು ವರ್ಷದ ಕ್ರೀಯಾಶೀಲ ಸಾರ್ವನಿಕ ಜೀವನ ಈ  ಸಂದರ್ಭದಲ್ಲಿ ಚರ್ಚೆಗೆ ಬರುತ್ತಿದೆ.

ಸಮಕಾಲೀನದಲ್ಲಿ ಅವರನ್ನು ವಿರೋಧಿಸಿದ, ಅವರ ಜೊತೆ ಭಿನ್ನಭಿಪ್ರಾಯವಿದ್ದವರೂ ಸಹ ಅವರದು ಉತ್ತಮ ಸಾರ್ವಜನಿಕ ವ್ಯಕ್ತಿತ್ವ ಎಂದು ಗುರುತಿಸುತ್ತಿದ್ದಾರೆ. ಕವಿ ಮಾತ್ರವಲ್ಲ ಕವಿಯಾಗಿ ಶಿಖರ, ವ್ಯಕ್ತಿಯಾಗಿ ಅಸಾಮಾನ್ಯ, ಅಸಾಧಣ ವ್ಯಕ್ತಿ. ತೆಲಂಗಾಣವನ್ನು ಹೋರಾಟದ ಸಮುದಾಯವೆಂದು ಭಾವಿಸಿದರೆ, ಅದರ ಕೈಯಲ್ಲಿ ವ್ಯಕ್ತಿತ್ವವನ್ನು ರೂಪಸಿಕೊಂಡು, ತಿರುಗಿ ಅದನ್ನು ರೂಪಿಸಿದವರು. ಪ್ರತ್ಯೇಕ ರಾಜ್ಯವಾಗಿ ಉಗಮಿಸಿದ ತೆಲಂಗಾಣ ಹೋರಾಟದಲ್ಲಿ ಅವರೊಂದು ಜಲಪಾತ. ಅವರ ರಾಜಕೀಯ ನಂಬಿಕೆಗಳನ್ನು ಎಷ್ಟಾದರೂ ವಿಮರ್ಶಿಸಬಹುದು. ಆದರೆ ಅವರ ಕನಸನ್ನು ಹಂಚಿಕೊಳ್ಳದೇ ಇರಲಾರೆವು.

ವಿಸ್ಮೃತಿ ಒಂದು ಖಾಯಿಲೆ. ವಯೋಭಾರ ಅದಕ್ಕೆ ಕಾರಣವಿರಬಹುದು. ಜನಮಾನಸದಲ್ಲಿ ಮುಳುಗೇಳುವ ಮನುಷ್ಯ ಏಕಾಂಗಿ ಆದಾಗ, ಖಿನ್ನತೆ ಜೊತೆಯಾಗುತ್ತದೆ. ವಿಸ್ಮೃತಿಗೆ ಪ್ರೇರಣೆ ಆಗುತ್ತದೆ. ತಾನು ಓದಿದ, ತಿಳಿದುಕೊಂಡ, ಭಾಗವಾದ, ಬರೆದ ಚರಿತ್ರೆಯನ್ನು ವರವರರಾವು ಮರೆತು ಹೋಗಬಹುದೆಂದು ಯಾರಾದರೂ ಅಂದುಕೊಂಡಿದ್ದೇವ? ಮಾತು ಸ್ಪಷ್ಟವಾಗಿ, ಸರಿಯಾಗಿ ಇಲ್ಲದ ವರವರರಾವರನ್ನು ಯಾರಾದರೂ ಊಹಿಸಬಲ್ಲರ? ಎಷ್ಟು ಕೃಶವಾಗಿದ್ಧಾರೆ! ಎರಡು ವರ್ಷದ ಕೆಳಗೆ ಅಲುಗಾಡದೆ ಧೈರ್ಯದಿಂದ ಪೋಲಿಸರ ಜೊತೆ ನಡೆದು ಹೋಗಿಬಿಟ್ಟ ವರವರರಾವ್‌ರನ್ನು ತಿರುಗಿ ಹಾಗೇಯೇ ನೋಡುತ್ತೇವಾ?

ಬಿಡುಗಡೆಗೊಂಡು, ವಿಶ್ರಾಂತಿ ಪಡೆದರೆ ಮತ್ತೆ ಅವರನ್ನು ಅವರಲ್ಲಿ ಸ್ಥಾಪಿಸಬಹುದೆಂಬುದೇ ಅಲ್ಲವೇ ಆತ್ಮೀಯರೇ ಆಸೆ!


ಓದಿ: IIM ಅಹಮದಾಬಾದ್‍ನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ IIT ಪ್ರೊಫೆಸರ್ ಹಾಗೂ ಮೊದಲ ಕಾ‍ರ್ಪೊರೇಟ್ CEO ಆನಂದ್‌ ತೇಲ್ತುಂಬ್ಡೆ ಬಂಧನ ಸರಿಯೇ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...