Homeಚಳವಳಿರಾಜ್ಯದ ಪಾಲಿನ ಹಣ ಕೊಡದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ: ಕನ್ನಡಿಗರ ಆಕ್ರೋಶ

ರಾಜ್ಯದ ಪಾಲಿನ ಹಣ ಕೊಡದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ: ಕನ್ನಡಿಗರ ಆಕ್ರೋಶ

ಕರ ನಿರಾಕರಣೆ ಎಂದರೆ ನಾವು ಜಿಎಸ್‌ಟಿ ಬಿಲ್ ಇರುವ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ. ನಾವು ರೈತರಿಂದ ನೇರವಾಗಿ ಕೊಳ್ಳುತ್ತೇವೆ. ನೇಕಾರರಿಂದ ನೇಯ್ದ ಬಟ್ಟೆಯನ್ನು ಕೊಂಡುಕೊಳ್ಳುತ್ತೇವೆ.. ಈ ರೀತಿಯಾಗಿ ಎಲ್ಲೆಡೆ ಜಾಗೃತಿ ಮೂಡಿಸುತ್ತೇವೆ.

- Advertisement -
- Advertisement -

ಕನ್ನಡ ನಾಡಿಗೆ ನ್ಯಾಯಸಮ್ಮತವಾಗಿ ಬರಬೇಕಾದ GST ಪರಿಹಾರ, ನೆರೆ ಪರಿಹಾರ, SDRF ಹಾಗೂ NSRF ನಿಧಿ ನೀಡದೇ ಮಲತಾಯಿ ಧೋರಣೆ ತಳೆದಿರುವ ಭಾರತ ಒಕ್ಕೂಟ ಸರ್ಕಾರದ ನಡೆ ಖಂಡಿನೀಯ. ರಾಜ್ಯದ ಪಾಲಿನ GST, ನೆರೆ ಪರಿಹಾರ ಕೊಡಿ, ಇಲ್ಲದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ! ಎಂದು ಕನ್ನಡಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇಂದು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂದೆ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ರಣಧೀರರ ಪರ ಸಹಭಾಗಿತ್ವದಲ್ಲಿ ‘ಕರ ನಿರಾಕರಣೆ ಚಳವಳಿ’ ಎಂಬ ವಿನೂತನ ವಿಭಿನ್ನ ಸತ್ಯಾಗ್ರಹ ಚಳವಳಿ ಹಮ್ಮಿಕೊಳ್ಳಲಾಗಿದೆ.

ಕರ ನಿರಾಕರಣೆ ಎಂದರೆ ನಾವು ಜಿಎಸ್‌ಟಿ ಬಿಲ್ ಇರುವ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ. ನಾವು ರೈತರಿಂದ ನೇರವಾಗಿ ಕೊಳ್ಳುತ್ತೇವೆ. ನೇಕಾರರಿಂದ ನೇಯ್ದ ಬಟ್ಟೆಯನ್ನು ಕೊಂಡುಕೊಳ್ಳುತ್ತೇವೆ.. ಈ ರೀತಿಯಾಗಿ ಎಲ್ಲೆಡೆ ಜಾಗೃತಿ ಮೂಡಿಸುತ್ತೇವೆ. ಕೊನೆಗೆ ತೆರಿಗೆ ಕಟ್ಟದೇ ಪ್ರತಿರೋಧ ಒಡ್ಡುತ್ತೇವೆ ಎಂದು ಕನ್ನಡ ರಣಧೀರರ ಪಡೆಯ ಚೇತನ್ ಗೌಡ ತಿಳಿಸಿದ್ದಾರೆ.

“ದಕ್ಷಿಣದ ರಾಜ್ಯಗಳ ಮೇಲಿನ ಹಿಂದಿ ಹೇರಿಕೆ ಹಾಗೂ ಭಾಷಾತಾರತಮ್ಯ ನೀತಿಯನ್ನು ಭಾರತದ ಒಕ್ಕೂಟ ಸರ್ಕಾರವು ನಿಲ್ಲಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ಕೈಬಿಡಬೇಕು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಮತ್ತು ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ (ILP) ಜಾರಿಯಾಗಬೇಕು. ಜೊತೆಗೆ ಭೂಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ.

“ಕರ್ನಾಟಕ ರಾಜ್ಯವು ಭಾರತದ ಒಕ್ಕೂಟ ಸರ್ಕಾರಕ್ಕೆ  2014-15ರಲ್ಲಿ 60,595 ಕೋಟಿ, 2015-16ರಲ್ಲಿ 72,040ಕೋಟಿ, 2016-17 ರಲ್ಲಿ 85,920 ಕೋಟಿ, 2017-18 ರಲ್ಲಿ 98,460 ಕೋಟಿ ಮತ್ತು 2018-19 ರಲ್ಲಿ 1,19,796 ಕೋಟಿ ರೂಗಳನ್ನು ತೆರಿಗೆಯಾಗಿ ನೀಡಿದೆ. ಆದರೆ ಇಷ್ಟೊಂದು ತೆರಿಗೆ ಕಟ್ಟಿದರು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ನಮ್ಮದೇ ಹಣವನ್ನು ನಮಗೆ ಕೊಡಲು ಹಿಂಜರಿಕೆಯೇಕೆ? ಕಳೆದ ವರ್ಷಗಳಲ್ಲಿ ಸರಾಸರಿ 100 ಪ್ರತಿಶತ ಹೆಚ್ಚಿನ ತೆರಿಗೆಯನ್ನು ನೀಡಿದ್ದೇವೆ. ಇದಕ್ಕೆ ನಮಗೆ ಸಿಕ್ಕ ಉಡುಗೊರೆಯೆಂದರೆ ನಮ್ಮ ಪಾಲಿನ 11,324 ಕೋಟಿ ರೂ ಜಿಎಸ್‌ಟಿ ಪರಿಹಾರ ಹಣ ಕೊಡದೇ ಆರ್‌ಬಿಐನಿಂದ ಸಾಲ ಪಡೆಯಿರಿ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಲೈವ್ ನೋಡಿ

ಬೆಂಗಳೂರು: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಕನ್ನಡ ರಣಧೀರ ಪಡೆ ಮತ್ತು ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ "ಕರೆ ನಿರಾಕರಣೆ ಸತ್ಯಾಗ್ರಹ"

Posted by Naanu Gauri on Thursday, October 1, 2020

ಇಡೀ ಭಾರತ ಒಕ್ಕೂಟದಲ್ಲಿಯೇ 2ನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ಆದರೆ ನಮ್ಮ ಪಾಲಿನ ಹಣ ಕೇಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಗಳು ತಾವೇ ಭ್ರಷ್ಟರಾಗಿದ್ದುಕೊಂಡು ಹೈಕಮಾಂಡ್ ಎದುರು ಜೀ ಹುಜೂರ್ ಎನ್ನುತ್ತಿದ್ದಾರೆ. ಇನ್ನು ಇಲ್ಲಿಂದ ಆಯ್ಕೆಯಾದ  ಸಂಸದರು ಯಾವುದಕ್ಕೂ ಪ್ರಯೋಜನವಿಲ್ಲವೆಂದು ಹೋರಾಟಕಾರರು ಆಕ್ರೋಶ ಹೊರಹಾಕಿದ್ದಾರೆ.

ಕರ ನಿರಾಕರಣೆ ಮುಖೇನ ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪಡೆಯಲು ನಾಡಿನ ಜನತೆ ಮುಂದಾಗಬೇಕು, ಅಧಿಕಾರ ಹಣ ಲಾಲಸೆಗಳಿಗೆ ಕನ್ನಡದ ಅಸ್ಮಿತೆಯನ್ನು ಅಡಮಾನವಿಟ್ಟಿರುವ ನಾಡದ್ರೋಹಿಗಳ ವಿರುದ್ಧ ನಮ್ಮ ಹೋರಾಟ ನಿತ್ಯ ನಿರಂತರವಾಗಿರಬೇಕು. ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ನಾಡಿನ ಸರ್ಕಾರದ ಉದ್ಯಮ, ನೆಲ, ಜಲಗಳನ್ನು ಮಾರಾಟಕ್ಕಿಟ್ಟಿರುವ, ನಮಗೆ ಬರಬೇಕಾದ ಪಾಲನ್ನು ಪಡೆಯಲಾಗದೆ ನಮ್ಮ ಭೂಮಿಯನ್ನು ಮಾರುತ್ತಿರುವ ರಣಹೇಡಿ ಸರ್ಕಾರದ ನಡೆಯನ್ನು ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ರಣಧೀರರ ಪಡೆ ಜಂಟಿಯಾಗಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೋರಾಟಗಾರರು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಗುರುದೇವ್ ನಾರಾಯಣ ಕುಮಾರ್ ಮಾತನಾಡಿ “ನಮ್ಮ ನಾಡಿನ ತೆರಿಗೆ ಪಡೆಯುವ ಭಾರತ ಒಕ್ಕೂಟ ಸರ್ಕಾರ ನಮಗೆ ನೀಡಬೇಕಾದ ನ್ಯಾಯಸಮ್ಮತ ಹಣ ನೀಡದೆ, ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿರುವುದು ತೀರಾ ಖಂಡನೀಯ. ನಾಡಿನ ನೆಲ ಸಂಸ್ಕೃತಿಗೆ ಬೆಲೆ ನೀಡದೆ, ಹಿಂದಿ ಹೇರಿಕೆ ಮಾಡುತ್ತಿರುವ ನೀತಿಯನ್ನು ಖಂಡಿಸಿ, ಭಾರತ ಒಕ್ಕೂಟ ಸರ್ಕಾರ ತನ್ನ ಮಲತಾಯಿ ಧೋರಣೆ ಮುಂದುವರಿಸಿದಲ್ಲಿ ಮಗದೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾಗಲಿದೆ” ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ದೋಷಪೂರಿತ ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...