Homeಕರ್ನಾಟಕ20 ವರ್ಷಗಳ ಹಿಂದೆ ಭೂಮಿ ಮಾರಿದವರು ಇಂದು ಬೀದಿ ಬಿಕಾರಿಗಳಾಗಿದ್ದಾರೆ: ವೀರಸಂಗಯ್ಯ

20 ವರ್ಷಗಳ ಹಿಂದೆ ಭೂಮಿ ಮಾರಿದವರು ಇಂದು ಬೀದಿ ಬಿಕಾರಿಗಳಾಗಿದ್ದಾರೆ: ವೀರಸಂಗಯ್ಯ

ರಾಜ್ಯದಲ್ಲಿರುವ 87 ಲಕ್ಷ ರೈತ ಕುಟುಂಬಗಳಲ್ಲಿ 69 ಲಕ್ಷ ಕುಟುಂಬಗಳು ಬಡ ರೈತರೆ ಇದ್ದಾರೆ. ಇವರನ್ನು ನಂಬಿ 4.5 ಕೋಟಿ ಜನರು ಇದ್ದಾರೆ. ಸರ್ಕಾರ ಈ ಮಸೂದೆಗಳನ್ನು ತಂದರೆ ಇವರೆಲ್ಲರೂ ನಿರುದ್ಯೋಗಿಗಳಾಗುತ್ತಾರೆ.

- Advertisement -
- Advertisement -

ಒಳ್ಳೆಯ ಬೆಲೆ ಸಿಗುತ್ತದೆ ಎಂದು ಇಪ್ಪತ್ತು ವರ್ಷಗಳ ಹಿಂದೆ ಭೂಮಿ ಕೊಟ್ಟವರು ಇಂದು ಬೀದಿ ಬಿಕಾರಿಯಾಗಿದ್ದಾರೆ. ಕೆಲವು ತಲೆ ಮಾಸಿದವರು, ರೈತರ ಬಗ್ಗೆ ತಿಳಿಯದೆ ಇರುವವರು, ಕಾರ್ಪೊರೇಟ್ ಬಂದರೆ ರೈತರ ಭೂಮಿಗೆ ಕೋಟಿಗಟ್ಟಲೆ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇವರು ಯಾರೂ ರೈತರ ಮಕ್ಕಳಲ್ಲ. ಇವರು ಪಕ್ಕಾ ಅಪ್ರಮಾಣಿಕ ಬ್ಯುಸಿನೆಸ್‌ಗೆ ಹುಟ್ಟಿದವರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ ಕಿಡಿಕಾರಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಎದುರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಐಕ್ಯ ಹೋರಾಟ ಸಮಿತಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: ಪಂಜಾಬ್‌: ರೈತರ ಪ್ರತಿಭಟನೆ ತೀವ್ರಗೊಳಿಸಲು ಬಿಜೆಪಿ ನಾಯಕರ ಮನೆ, ಕಛೇರಿ, ಮಾಲ್‌ಗಳಿಗೆ ಮುತ್ತಿಗೆ

“ದೇಶಕ್ಕೆ ಸ್ವಾತಂತ್ಯ್ರ ಬೇಡ, ಬ್ರಿಟೀಷರ ಆಡಳಿತವೆ ಇರಲಿ ಎಂದು ಹೇಳಿದವರು ದೇಶದಲ್ಲಿ ಅಧಿಕಾರ ಹಿಡಿದು ಕೂತಿದ್ದಾರೆ, ಇದು ದೇಶದ ಬಹುದೊಡ್ಡ ದುರಂತವಾಗಿದೆ. ಗಾಂಧೀಜಿಯನ್ನು ದೈಹಿಕ ಹಾಗೂ ತಾತ್ವಿಕವಾಗಿ ಕೊಂದು ಹಾಕಿರುವ ಈ ಸಮಯದಲ್ಲಿ ಕಾರ್ಮಿಕರು, ಮಹಿಳೆಯರು, ರೈತರು ಗಾಂಧಿಜಿಯ ಮಾರ್ಗದಲ್ಲಿ ಹೋರಾಟವನ್ನು ಪುನರ್‌ರೂಪಿಸುವ ಅಗತ್ಯವಿದೆ” ಎಂದು ಹೇಳಿದರು.

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕ ಕ್ಷೇತ್ರವನ್ನು ಉಳಿಸಬಾರದು ಎಂದು ಆಲೋಚಿಸಿವೆ. ಬ್ಯಾಂಕುಗಳು ಮುಚ್ಚುತ್ತಿರುವ ಈ ಸಮಯದಲ್ಲಿ ಶ್ರೀಮಂತರ ಹಣ ಬ್ಯಾಂಕುಗಳಲ್ಲಿ ಇಡಲು ಸಾಧ್ಯವಾಗದಿರುವುದರಿಂದ ರೈತರ ಭೂಮಿಯನ್ನು ಕೊಂಡುಕೊಳ್ಳುವ ಮೂಲಕ ಶ್ರೀಮಂತರ ಹಣವನ್ನು ಉಳಿಸಲು ಬೇಕಾಗಿಯೇ ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದಾರೆ” ಎಂದು ಅವರು ಆರೋಪಿಸಿದರು.

“ರಾಜ್ಯದಲ್ಲಿರುವ 87 ಲಕ್ಷ ರೈತ ಕುಟುಂಬಗಳಲ್ಲಿ 69 ಲಕ್ಷ ಕುಟುಂಬಗಳು ಬಡ ರೈತರೆ ಇದ್ದಾರೆ. ಇವರನ್ನು ನಂಬಿ 4.5 ಕೋಟಿ ಜನರು ಇದ್ದಾರೆ. ಸರ್ಕಾರ ಈ ಮಸೂದೆಗಳನ್ನು ತಂದರೆ ಇವರೆಲ್ಲರೂ ನಿರುದ್ಯೋಗಿಗಳಾಗುತ್ತಾರೆ. ಪ್ರಸ್ತುತ 168 ರೀತಿಯ ಬೆಳೆಗಳನ್ನು ರಾಜ್ಯದಲ್ಲಿ ಬೆಳೆಯುತ್ತಿದ್ದಾರೆ. ಈ ಕಾಯ್ದೆ ಬಂದರೆ ಲಾಭ ತರುವ ಏಕ ಬೆಳೆಯನ್ನು ಬೆಳೆದು ನಮ್ಮ ಆಹಾರ ಸಂಸ್ಕೃತಿಯನ್ನು ನಾಶ ಮಾಡುತ್ತಾರೆ” ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.

“ಎಪಿಎಂಸಿಯ ಸಾವಿರಾರು ಎಕರೆ ಭೂಮಿಯನ್ನು, ಕಚೇರಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿ ನುಂಗಿ ನೀರು ಕುಡಿಯಲು ಸರ್ಕಾರ ಹೊರಟಿದೆ. ಇದರಿಂದ ರೈತರಿಗೆ ಮಾರುಕಟ್ಟೆ ಇಲ್ಲದಂತೆ ಆಗುತ್ತದೆ. ಒಂದು ವೇಳೆ ಬೆಲೆ ಸಿಗುತ್ತದೆ ಎಂದು ಭಾವಿಸಿ ಭೂಮಿಯನ್ನು ಶ್ರೀಮಂತರಿಗೆ ಮಾರಿದರೆ, ಮತ್ತೆಂದೂ ರೈತರಿಗೆ ಭೂಮಿ ಸಿಗುವುದಿಲ್ಲ, ಗುಲಾಮರಾಗಿಯೆ ಇರಬೇಕಾಗುತ್ತದೆ. ಕಾರ್ಪೊರೇಟ್‌ ಶಕ್ತಿಗಳು ಕೃಷಿಯ ಕೆಲಸಕ್ಕೆ ಯಂತ್ರಗಳನ್ನು ತರುವುದರಿಂದ ಕೂಲಿ ಕೆಲಸನೂ ಸಿಗುವುದಿಲ್ಲ, ಹುಷಾರ್‌…” ಎಂದು ವೀರಸಂಗಯ್ಯ ರೈತರಿಗೆ ಎಚ್ಚರಿಸಿದರು.


ಇದನ್ನೂ ಓದಿ: ಪ್ರಧಾನಿ ಮೋದಿ ರೈತರನ್ನು ಅವಮಾನಿಸುತ್ತಿದ್ದಾರೆ; ಪ್ರಧಾನಿ ಹೇಳಿಕೆಗೆ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...