ಉತ್ತರ ಪ್ರದೇಶದ ಚಾರ್ಖಾರಿ ಕ್ಷೇತ್ರದ ಬಿಜೆಪಿ ಶಾಸಕ ಬ್ರಿಜ್ ಭೂಷಣ್, ಮುಸ್ಲಿಂ ತರಕಾರಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ, ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡುವ ವೀಡಿಯೊವೊಂದು ವೈರಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಬರ್ಹಜ್‌ನ ಬಿಜೆಪಿ ಶಾಸಕ ಮುಸ್ಲಿಮರಿಂದ ತರಕಾರಿ ಖರೀದಿಸಬೆಡಿ ಎಂದು ವಿವಾದಕ್ಕೆ ಸಿಲುಕಿದ್ದರು.
“ಈ ಪ್ರದೇಶಕ್ಕೆ ಮತ್ತೆ ಬರಬೇಡ, ಇಲ್ಲದಿದ್ದರೆ ಹೊಡೆದು ಸರಿಪಡಿಸುತ್ತೇವೆ” ಎಂದು ಬ್ರಿಜ್ ಭೂಷಣ್ ರಜಪೂತ್ ಮುಸ್ಲಿಂ ತರಕಾರಿ ವ್ಯಾಪಾರಿಗೆ ಆತನ ಚಿಕ್ಕ ಮಗನ ಎದುರೇ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ತರಕಾರಿ ವ್ಯಾಪಾರಿ ತಾನು ಹಿಂದು ಎಂದು ಸುಳ್ಳು ಹೆಸರು ಹೇಳಿದ್ದಾನೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಓಡಿಸಿದ್ದಾರೆ.
BJP MLA @Brijbhushanbjp threatens Muslim vegetable vendor in front of his kid. 'बस्ती में दिख नही जाना तुम लोग, नही तोह मार मार के ठीक कर देंगे, मुसलमान होकय अपना नाम झूट बोलते हो'.
News link : https://t.co/PEM05T6S6k pic.twitter.com/PTS590pkg2— Mohammed Zubair (@zoo_bear) April 29, 2020
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಬ್ರಿಜ್ ಭೂಷಣ್, ವಿಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ನಾನೆ ಎಂದು ಒಪ್ಪಿಕೊಂಡಿದ್ದಾರೆ. “ಅವರು ಸುಳ್ಳು ಹೇಳಿದ್ದರಿಂದ ನಾನು ಖಂಡಿಸಿದೆ ಹಾಗೂ ಅವರು ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಲಿಲ್ಲ” ಎಂದು ಶಾಸಕ ಹೇಳಿದ್ದಾರೆ. ಆದರೆ ವ್ಯಾಪಾರಿಯು ತನ್ನ ಮುಖಕ್ಕೆ ಕಪ್ಪು ಮುಖವಾಡವನ್ನು ಧರಿಸಿದ್ದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
Yes, it was my video. I reprimanded him because he was lying. He said his name was Rajkumar while his name is Rehmuddin. He wasn't wearing masks&gloves. We know,16 vegetable sellers in Kanpur&1 in Lucknow tested COVID-19 positive: BJP MLA, Brij Bhushan Sharan pic.twitter.com/3Vi12bP4ZW
— ANI UP (@ANINewsUP) April 29, 2020
ಅಗತ್ಯ ಸರಕುಗಳ ಪೂರೈಕೆಯಲ್ಲಿ ತೊಡಗಿರುವವರಿಗೆ ಪಾಕಿಸ್ತಾನ ಅಥವಾ ಗುಪ್ತಚರರೊಂದಿಗೆ ಸಂಬಂಧವಿಲ್ಲ ಎಂದು ಖಚಿತಪಡಿಸಿಕೊಂಡ ನಂತರ ಸರ್ಕಾರವು ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ ಎಂದು ವಿವಾದವೆಬ್ಬಿಸಿದ ಯುಪಿ ಶಾಸಕ
ಇದನ್ನೂ ಓದಿ:`ವೈರಸ್’ ಕಾರಣಕ್ಕೆ ಹೊರಗಿಟ್ಟ ಮುಸ್ಲಿಮರನ್ನು ಬಿಟ್ಟು ನಮ್ಮೂರು ಬದುಕೀತೆ?


