Homeಮುಖಪುಟಹಳ್ಳಿಗಳ ಹಿಂದೂ ಮುಸ್ಲಿಂ ಸಹಬಾಳ್ವೆ ಏನಾಗುತ್ತಿದೆ?: ಅಲೈದೇವ್ರು ನಾಟಕ ನೋಡಿ

ಹಳ್ಳಿಗಳ ಹಿಂದೂ ಮುಸ್ಲಿಂ ಸಹಬಾಳ್ವೆ ಏನಾಗುತ್ತಿದೆ?: ಅಲೈದೇವ್ರು ನಾಟಕ ನೋಡಿ

ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ.

- Advertisement -
- Advertisement -

ಉತ್ತರ ಕರ್ನಾಟಕದ ಪ್ರಸಿದ್ದ ಅಲೈ ಕುಣಿತವನ್ನಾಧರಿಸಿದ “ಅಲೈದೇವ್ರು” ಎಂಬ ನಾಟಕವನ್ನು ಬೆಂಗಳೂರಿನ ವಿಶ್ವರಂಗ ಥಿಯೇಟರ್ ತಂಡವು ರವಿವಾರ ಸಂಜೆ 4.30ಕ್ಕೆ ಮತ್ತು 7.30ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಪ್ರದರ್ಶಿಸಲು ಮುಂದಾಗಿದೆ.

ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ 35ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ ನಡೆಯುವ ಜನಪದ ಅಲೈ ಕುಣ್ತ ಮತ್ತು ಅಲೈಪದಗಳನ್ನು ಕಲಾವಿದರು ಎರಡು ತಿಂಗಳು ಅಭ್ಯಾಸ ಮಾಡಿದ್ದಾರೆ.

ಅಲೈಹಬ್ಬ ಹಿಂದೂ ಮುಸ್ಲಿಂಮರು ಸೇರಿ ಆಚರಿಸುವ ತಲೆಮಾರುಗಳ ಸೌಹಾರ್ದದ ಹಬ್ಬ. ಜನಪದ ಲಯದ ಕುಣಿತ, ಅಹೋರಾತ್ರಿ ಹಾಡಲ್ಪಡುವ ರಿವಾಯತ್ ಪದಗಳ ಸಾಹಿತ್ಯ, ಹಲಗೆಯ ನಾದದ ಸಂಗೀತ, ಹೀಗೆ ಹಲವಾರು ಕಲೆಗಳ ಸಂಗಮವಾದ ಗ್ರಾಮೀಣ ಭಾಗದ ಶ್ರಮಿಕ ವರ್ಗದವರಿಂದ ಈ ಹಬ್ಬ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಕೆಲವು ಉತ್ತರ ಕರ್ನಾಟಕದಲ್ಲಿ ಕೆಲವು ಹಳ್ಳಿಗಳಲ್ಲಿ ಮುಸ್ಲಿಂ ಕುಟುಂಬಗಳು ಇರದಿದ್ದರೂ ಕೂಡ ಹಿಂದೂಗಳೇ ಈ ಹಬ್ಬವನ್ನು ತಿಂಗಳಾನುಗಟ್ಟಲೇ ಆಚರಿಸುತ್ತಾರೆ.

ಆದರೆ ಇತ್ತೀಚಿಗೆ ಕೆಲವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಶಾಖೆಗಳು ಹಳ್ಳಿಗಳಲ್ಲೂ ತೆರೆಯಲ್ಪಡುತ್ತಿದ್ದು, ಈ ಶಾಖೆಗಳ ನಂಜಿನ ಕರಿನೆರಳೂ ಶ್ರಾವಣ, ಸಂಕ್ರಾಂತಿ, ಅಲೈಹಬ್ಬದಂತ ಗ್ರಾಮೀಣ ಹಬ್ಬಗಳ ಮೇಲೂ ಆವರಿಸಿ ಹಬ್ಬದ ವಾತಾವರಣ ಮುರುಟುತ್ತಿದೆ. ಮೊದಲೆಲ್ಲ ಹಗಲ್ಲೆಲ್ಲ ದುಡಿದು ರಾತ್ರಿಯಾಗುತ್ತಿದ್ದಂತೆ, ಶ್ರಾವಣದ ಭಜನಾ ಮ್ಯಾಳಕ್ಕೆ, ಅಲೈಹಬ್ಬದ ಹೆಜ್ಜಿ ಕುಣ್ತದ ಅಂಗಳಕ್ಕೆ ಹೋಗುತ್ತಿದ್ದ ಹಳ್ಳಿ ಯುವಕರು ಈಗ ರಾತ್ರಿಯಾಗುತ್ತಿದ್ದಂತೆ ದಿಲ್ಲಿಯಿಂದ ಹೇರಲ್ಪಡುತ್ತಿರುವ ಏಕ ಸಂಸ್ಕೃತಿಯ ಭೈಟಕ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಥ ಪಲ್ಲಟಗೊಂಡ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಅಲೈದೇವ್ರು ನಾಟಕ ಮಾಡುತ್ತದೆ.

ಬಹುತ್ವದ ಬೇರುಗಳಿರುವ ಹಳ್ಳಿಯೊಂದರಲ್ಲಿ ರೈತರು, ದನಗಾಹಿಗಳು, ಕುರಿಗಾಹಿಗಳನ್ನು ಒಳಗೊಂಡ ಶ್ರಮಿಕವರ್ಗದ ಗುಂಪು ಈ ಅಲೈಹಬ್ಬಕ್ಕಾಗಿ ಹೆಜ್ಜಿ ಕಲಿಯತೊಡಗುತ್ತದೆ. ಓದು ಬರಹ ಗೊತ್ತಿಲ್ಲದ, ಯಾವ ಧರ್ಮದ ನಂಜನ್ನೂ ಮೈಗಂಟಿಸಿಕೊಳ್ಳದ ಜನಪದ ಸಂಸ್ಕೃತಿಯೇ ತಮ್ಮ ಧರ್ಮವೆಂದು ನಂಬಿದವರು ಇವರು. ಇನ್ನೊಂದು ಯುವಕರ ಗುಂಪು ಈ ಹಬ್ಬ ನಮ್ಮ ಧರ್ಮದವರದ್ದಲ್ಲ, ಊರಲ್ಲಿ ಸಾಬಿಗಳ ಹಬ್ಬ ಮಾಡಕ್ಕೆ ನಾವು ಅವಕಾಶ ಕೊಡಲ್ಲ ಎಂದು ಪಣ ತೊಡುತ್ತದೆ. ಅದೇ ಸಮಯದಲ್ಲಿ ಪೇಟೆಯಿಂದ ಬರುವ ಮುಸ್ಲಿಮರ ಗುಂಪು ಕೂಡ ಹನುಮಪ್ಪನ ಜಾತ್ರೆ, ದುರ್ಗವ್ವನ ಜಾತ್ರೆಯಂತೆ ಕುಣಿದು ಕುಪ್ಪಳಿಸುತ್ತಾ ಮಾಡುವ ಈ ಅಲೈಹಬ್ಬ ನಮ್ಮ ಧರ್ಮದಲ್ಲ. ನಮ್ಮ ದೇವರು ನಿರಾಕಾರ. ದಯವಿಟ್ಟು ಈ ಹಬ್ಬ ಮಾಡಬೇಡಿ ಅಂತ ಅವರೂ ವಿರೋಧಿಸುತ್ತಾರೆ. ಹೀಗೆ ಎರಡೂ ಧರ್ಮಗಳ ಮೂಲಭೂತವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿರುವ ದಿನಗಳಲ್ಲೇ ಹಿಂದೂ ಮುಸ್ಲಿಂ ಪ್ರೇಮ ಪ್ರಕರಣ, ಗೋಸಾಗಾಟ ಪ್ರಕರಣಗಳು ನಡೆದು ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಹೀಗೆ ಜನರ ಜನಪದ ಹಬ್ಬ ಮತ್ತು ಪ್ರಭುತ್ವದ ಅಸೂಕ್ಷ್ಮಗಳು ಕಲಬೆರಕೆಗೊಂಡು ಊರೆಂಬೋ ಊರು ದಿಕ್ಕುಗಾಣದೇ ಪರದಾಡುವ ವರ್ತಮಾನವನ್ನು ಈ ನಾಟಕ ಪ್ರತಿಬಿಂಬಿಸುತ್ತದೆ.

ಇಂದಿನ ಹಳ್ಳಿಗಳ ವಾಸ್ತವ ಬದುಕನ್ನು ತೆರೆದಿಡುವ ಅಲೈದೇವ್ರು ನಾಟಕ ಈ ಭಾನುವಾರ ಎರಡು ಪ್ರದರ್ಶನಗಳನ್ನು ಕಾಣುತ್ತಿದೆ. ಬುಕ್ ಮೈ ಶೋನಲ್ಲಿ ಬುಕ್ ಮಾಡಬಹುದು ಅಥವಾ ಟಿಕೆಟ್‌ಗಾಗಿ 9916863637 ಸಂಪರ್ಕಿಸಬಹುದು.


ಇದನ್ನೂ ಓದಿ: ‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ 2021 ರ "ಬಟ್ಟೆ ಚೀಲ ಹಗರಣ"ಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ...

‘ಯುದ್ಧ ಸೃಷ್ಟಿಸಿದ್ದು ನೀವೇ’: ಹಾರ್ಮುಜ್ ಅಡ್ಡಿಗೆ ಅಮೆರಿಕವನ್ನು ದೂಷಿಸಿದ ಚೀನಾ, ಟ್ರಂಪ್ ಅವರ ‘ಧೈರ್ಯದ ಕೊರತೆ’ ಹೇಳಿಕೆಗೆ ತಿರುಗೇಟು

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು "ಧೈರ್ಯ" ಹೊಂದಿಲ್ಲ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಚೀನಾ ಬಲವಾಗಿ ವಿರೋಧಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ...

ಮೂರನೇ ಅತ್ಯಾಚಾರ ಪ್ರಕರಣ: ಸ್ವ-ಘೋಷಿತ ‘ದೇವಮಾನವ’ ಖರತ್‌ಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಾಸಿಕ್ ನ್ಯಾಯಾಲಯ

ನಾಸಿಕ್: ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಸೋಮವಾರ ಏಪ್ರಿಲ್...

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...