Homeಕರ್ನಾಟಕಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

ಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

- Advertisement -
- Advertisement -

– ಕೆ.ಪಿ ಸುರೇಶ್

RCEP ಬಗ್ಗೆ ಚುಟುಕು ಪ್ರಶ್ನೋತ್ತರ… 

RCEP ಎಂದರೇನು..?
ಭಾರತ, ಚೀನಾ, ಮಲೇಷಿಯಾ, ಜಪಾನ್, ಕಾಂಬೋಡಿಯಾ, ವಿಯೆಟ್ನಾಂ ಸಹಿತ ಹದಿನೈದು ದೇಶಗಳು ಸೇರಿದ ಪ್ರಾದೇಶಿಕ ಸಹಭಾಗಿತ್ವ.

ಪ್ರಸ್ತಾಪದ ಮಾತುಕತೆ ಶುರುವಾಗಿ ಎಷ್ಟು ವರ್ಷಗಳಾದವು..?
2012ರಲ್ಲಿ ಈ ಒಪ್ಪಂದದ ಸ್ಥೂಲ ಚರ್ಚೆ ಆರಂಭವಾಯಿತು. ವಿವಿಧ ಹಂತಗಳ ಮಾತುಕತೆಗಳು ಕಳೆದ ಏಳು ವರ್ಷಗಳಲ್ಲಿ ನಡೆದು ಬೆಳೆಯುತ್ತಾ ಇದೇ ನವೆಂಬರ್‌ 4ಕ್ಕೆ ಅಂತಿಮ ಸುತ್ತಿನ ಒಪ್ಪಂದದ ಸಭೆ ನಡೆಯಲಿದೆ.

ಇಷ್ಟು ವರ್ಷ ಏನಾಯಿತು..?
ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಒಪ್ಪಂದದ ಯಾವ ವಿವರಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಉಳಿದ ದೇಶಗಳು ತಮ್ಮ ತಮ್ಮ ಸಂಸತ್ತುಗಳಲ್ಲಿ ಇದರ ವಿವರಗಳನ್ನು ಪ್ರಸ್ತುತಪಡಿಸಿವೆ. ಆದರೆ ನಮ್ಮ ಸರ್ಕಾರ ಸಂಪೂರ್ಣ ರಹಸ್ಯವಾಗಿಟ್ಟಿದೆ. ಈ ಮಾತುಕತೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಷಯ ತಜ್ಞರು ಯಾರು ಎಂಬುದೂ ಸಹ ಸಾರ್ವಜನಿಕವಾಗಿಲ್ಲ.

RCEP ಒಪ್ಪಂದದ ಮುಖ್ಯ ಅಂಶಗಳೇನು..?
ಈ ಎಲ್ಲಾ ರಾಷ್ಟ್ರಗಳೂ ಒಂದೇ ದೇಶವೆಂಬಂತೆ ತಮ್ಮ ಸರಕುಗಳನ್ನು ಯಾವುದೇ ತೆರಿಗೆಗೆ ತಡೆ ಇಲ್ಲದೇ ಪರಸ್ಪರ ಮಾರಾಟ ಮಾಡುವ ಸೌಲಭ್ಯ ಹೊಂದುತ್ತಾರೆ. ಈ ರೀತಿಯ ಆರ್ಥಿಕ ವಲಯಗಳನ್ನು ಆಧುನಿಕ ವ್ಯಾಪಾರ ಸಂದರ್ಭದಲ್ಲಿ ಸೃಷ್ಟಿಸಿಕೊಳ್ಳಲಾಗುತ್ತಿದೆ.

ಉಳಿದ ಅಂಶಗಳೇನು..?
ಉಳಿದ ಯಾವ ವಿವರಗಳೂ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಸೋರಿಕೆಯಾದ ದಾಖಲೆಗಳನ್ನು ಗಮನಿಸಿದರೆ ಬೌದ್ಧಿಕ ಆಸ್ತಿ ಹಕ್ಕಿನಿಂದ ಹಿಡಿದು, ಹಲವು ಉತ್ಪನ್ನಗಳಲ್ಲಿ ಇದಕ್ಕೆ ತಡೆಯೊಡ್ಡುವ ದೇಶದಿಂದ ಪರಿಹಾರ ವಸೂಲಿ ಮಾಡುವ ಅಧಿಕಾರ ರಫ್ತು ಮಾಡುವ ಸರ್ಕಾರ ಅಥವಾ ಸಂಸ್ಥೆಗೆ ಇರುತ್ತದೆ.

ಇದರಿಂದ ನಮ್ಮ ದೇಶದ ಮೇಲಾಗುವ ಪರಿಣಾಮಗಳು ಏನು..? 
ಈಗಾಗಲೇ ಭಾರತ ವ್ಯಾಪಾರದಲ್ಲಿ ಡೆಫಿಸಿಟ್ ಹೊಂದಿದೆ. ಅದರಲ್ಲೂ ಚೀನಾ ರಾಷ್ಟ್ರವೊಂದೇ ಶೇ. 50 ರಷ್ಟು ಸರಕು ಸುರಿಯಬಹುದು. ಉಳಿದಂತೆ ಆಸ್ಟ್ರೇಲಿಯಾ, ನ್ಯೂಜಿಲಾಂಡ್‍ಗಳು ಡೈರಿ ಉತ್ಪನ್ನಗಳನ್ನು ಭಾರತಕ್ಕೆ ಸುರಿಯುವ ಸಾಧ್ಯತೆಯಿದೆ. ಸುಮಾರು ಹತ್ತು ಸಾವಿರ ವಿವಿಧ ವಸ್ತುಗಳು ಈ ಒಪ್ಪಂದದ ಅನ್ವಯ ಆಮದು- ರಫ್ತು ಆಗಲಿವೆ. ಈ ವಸ್ತುಗಳಲ್ಲಿ ಕೃಷಿ, ಹಾಲು ಉತ್ಪಾದನೆ, ಸಾಗರೋತ್ಪನ್ನಗಳು ಅಷ್ಟೇ ಅಲ್ಲ, ಔಷಧಿ ಕ್ಷೇತ್ರದ ಪಾಲೂ ಅಧಿಕವಾಗಿರಲಿದೆ. ಬೌದ್ಧಿಕ ಉತ್ಪನ್ನದ ಬೌದ್ಧಿಕ ಹಕ್ಕಿನ ವಾಯಿದೆಯನ್ನೂ ವಿಸ್ತರಿಸುವ ಹಕ್ಕು ಇದೆ.

ಯಾವ ಉತ್ಪನ್ನಗಳಿಂದ ದೇಶಕ್ಕೆ ತೊಂದರೆಯಾಗಲಿದೆ..? 
ನಿರ್ದಿಷ್ಟವಾಗಿ ಇಂಥದ್ದೇ ಉತ್ಪನ್ನಗಳಿಂದ ನಾವು ರಕ್ಷಣೆ ಪಡೆಯಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತಜ್ಞರ ಪ್ರಕಾರ 10 ಸಾವಿರ ಉತ್ಪನ್ನಗಳಲ್ಲಿ ಹೆಚ್ಚೆಂದರೆ ನೂರು ಉತ್ಪನ್ನಗಳಿಗೆ ರಕ್ಷಣೆ ನೀಡಬಹುದು. ಅಡಿಕೆ, ಮೆಣಸು ಇತ್ಯಾದಿಗೆ ತೊಂದರೆ ಇಲ್ಲ ಎನ್ನುತ್ತಾರಲ್ಲ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸದ್ಯಕ್ಕೆ ತೊಂದರೆ ಕಾಣಿಸದಿದ್ದರೂ, ಸದಸ್ಯ ರಾಷ್ಟ್ರಗಳು ನಿಯಮಗಳನ್ನು ತಿದ್ದುಪಡಿ ಮಾಡಿದಾಗ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಊಹಿಸುವುದು ಕಷ್ಟ. ಮುಖ್ಯವಾಗಿ ಯಾವ ಸರಕಿಗೂ ಆಧುನಿಕ ವ್ಯಾಪಾರ ಒಪ್ಪಂದದಲ್ಲಿ ಖಾಯಂ ರಕ್ಷಣೆ ಎಂಬುದು ಇಲ್ಲ.

ನಮಗೆ ಆಪತ್ತು ಇದೆ ಎಂದು ಏಕೆ ಭಾವಿಸಲಾಗುತ್ತಿದೆ..?
ನಮ್ಮ ಉತ್ಪನ್ನಗಳು ಸ್ಪರ್ಧಾತ್ಮಕವಾಗಿಲ್ಲ. ಗುಣಮಟ್ಟದಲ್ಲೂ, ಉತ್ಪಾದಕ ವೆಚ್ಚದಲ್ಲೂ ಎಂಬ ಆತಂಕ ಇದೆ. ಉಳಿದ ದೇಶಗಳ, ಅದರಲ್ಲೂ ಚೀನಾದ ಉತ್ಪನ್ನಗಳು, ನಮ್ಮ ಉತ್ಪನ್ನಗಳಿಗಿಂತ ಅಗ್ಗವಾಗಿ ಉತ್ಪಾದನೆಯಾಗುತ್ತವೆ. ಆದ್ದರಿಂದ ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುವ ಆತಂಕವೂ ಇದೆ.

ಸರ್ಕಾರ ಏನು ಮಾಡಬೇಕು..?
ಮುಖ್ಯವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆ ಮತ್ತು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಬಂಡವಾಳ ಹೂಡಬೇಕು. ಇದು ಮೂಲತಃ ತರಬೇತಿ , ಕೌಶಲ್ಯಗಳಿಗೆ ಸಂಬಂಧಿಸಿದ್ದಾಗಿದೆ. ಈ ರೀತಿ ದೇಶೀಯ ಉತ್ಪಾದನೆಯನ್ನು ಸನ್ನದ್ಧಗೊಳಿಸಲು ಮೊದಲು ಸಹಿ ಹಾಕಿದರೆ, ನಮ್ಮ ಉತ್ಪಾದಕರು ತೊಂದರೆಗೆ ಒಳಗಾಗುತ್ತಾರೆ.

ಸರ್ಕಾರ ಏನು ಮಾಡುತ್ತಿದೆ..?
ಕೃಷಿ ಮತ್ತಿತರ ಕ್ಷೇತ್ರಗಳು, ರಾಜ್ಯಗಳಿಗೆ ಸಂಬಂಧಿಸಿದ ಕಾರಣ ಆಯಾ ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಅಷ್ಟೇ ಅಲ್ಲ, ರೈತಾಪಿ ವರ್ಗಕ್ಕೆ ಮಾರ್ಗದರ್ಶನ ಮಾಡುವ ಬಲು ದೊಡ್ಡ ತರಬೇತುದಾರರ ಪಡೆಯನ್ನು ನಿಯೋಜಿಸಬೇಕಾಗಿದೆ. ಹಾಗೇ ಉತ್ಪಾದನಾ ಗುಣಮಟ್ಟದ ಬಗ್ಗೆ ಮಾನದಂಡಗಳನ್ನು ತಳಮಟ್ಟದವರೆಗೂ ಮನನ ಮಾಡಿಸಿ, ಉತ್ಪನ್ನವನ್ನು ಶ್ರೇಷ್ಠಗೊಳಿಸಬೇಕು. ಇದರೊಂದಿಗೆ ಒಳಸುರಿ, ಕೊಯ್ಲು ಸಾಗಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮೌಲ್ಯವರ್ಧನೆ- ಹೀಗೆ ಎಲ್ಲಾ ಆಯಾಮಗಳಲ್ಲೂ ಏಕಕಾಲಕ್ಕೆ ಸಂರಚನೆ ಸೃಷ್ಟಿಸಬೇಕು.

ಈಗಾಗಲೇ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಯಾವವು..?
ಕೃಷಿ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಘೋಷಿಸಿದ ಉಪಕ್ರಮಗಳ ಶೇ. 10ರಷ್ಟೂ ಕೆಲಸವಾಗಿಲ್ಲ. ಉದಾ: ಕೌಶಲ್ಯ ಕ್ಷೇತ್ರದಲ್ಲಿ 41 ಸ್ಕಿಲ್ ಕೌನ್ಸಿಲ್‍ಗಳನ್ನು ಘೋಷಿಸಿ, ಸುಮಾರು 5000 ಉದ್ಯೋಗ ಸಾಧ್ಯತೆಗಳನ್ನು ಗುರುತಿಸಬೇಕಿದೆ.  ಅಲ್ಪಕಾಲೀನ ತರಬೇತಿ ಮೂಲಕ ಕೌಶಲ್ಯ ತರಬೇತಿ ಪಡೆದ ಲಕ್ಷಾಂತರ ಯುವಕರನ್ನು ಸೃಷ್ಟಿಸುವ ಘೋಷಣೆ ಇದೆ. ಆದರೆ ಬಹುತೇಕ ಕೌನ್ಸಿಲ್‌ಗಳಲ್ಲಿ ಗುಣಮಟ್ಟದ ತರಬೇತಿಯೇ ಇಲ್ಲ.
ಆಹಾರ ಸಂಸ್ಕರಣೆಯಲ್ಲೂ ಅಷ್ಟೇ. ಶೇ. 10-30ರಷ್ಟು ಉತ್ಪನ್ನ ಹಾಳಾಗುತ್ತಿದೆ ಎಂದು ಸರ್ಕಾರದ ಅಧಿಕೃತ ವಿವರಗಳೇ ಹೇಳುತ್ತಿವೆ.

ಮುಖ್ಯವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರ ಈ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬೇಕಾದಷ್ಟು ಅನುದಾನ ಒದಗಿಸಿಲ್ಲ. ಈಗ ಈ ಒಪ್ಪಂದ ಎಂಬ ಪೆಡಂಭೂತ ನಮ್ಮ ದಿಡ್ಡಿ ಬಾಗಿಲಿಗೆ ಬಂದಿದೆ. ನಮ್ಮನ್ನು ಆಳುವವರ ಕೈ ತಿರುಚಿಯಾದರೂ ಇದಕ್ಕೆ ಸಹಿ ಹಾಕಿಸುವ ಶಕ್ತಿ ಚೀನಾದಿಂದ ಹಿಡಿದು ಇತರೆ ದೇಶಗಳಿಗೆ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...