Homeಕರೋನಾ ತಲ್ಲಣಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

- Advertisement -
- Advertisement -

ಈ ಕೊರೋನ ಭಾರತವನ್ನು ಯಾಕೆ ಇಷ್ಟು ದೀಢೀರನೆ ಇಷ್ಟೊಂದು ಭೀಕರವಾಗಿ ಆವರಿಸಿಕೊಂಡು ಬಿಟ್ಟಿತು ಅನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಒಂದಂಶ ಮಾತ್ರ ನಿಜ. ಭಾರತದ ಈ ಸಮಸ್ಯೆ ಇಂದು ವಿಶ್ವದ ಸಮಸ್ಯೆಯಾಗಿದೆ.

ವೈರಾಣು ಮೊದಲು ಪ್ರವೇಶಿಸಿದಾಗ ಭಾರತ ತೀರಾ ದಿಢೀರನೆ ಎಲ್ಲವನ್ನೂ ಮುಚ್ಚಿ ಲಾಕ್‌ಡೌನ್ ಮಾಡಿತು. ಆದರೆ, ಅಷ್ಟೇ ಬೇಗ ಮತ್ತೆ ಅದನ್ನು ತೆರವುಗೊಳಿಸಿತು. ಮಾರ್ಚ್ 2020ರಲ್ಲಿ ಕೊರೋನ ಪ್ರಕರಣಗಳು ಅಷ್ಟೊಂದು ಇಲ್ಲದಿದ್ದಾಗ, ಕೇವಲ ನಾಲ್ಕು ಗಂಟೆಯ ಸೂಚನೆ ನೀಡಿ ಲಾಕ್‌ಡೌನ್ ಘೋಷಿಸಿಬಿಟ್ಟಿತು. ಲಕ್ಷಗಟ್ಟಲೆ ಜನ ತಿನ್ನಲು ಆಹಾರವಿಲ್ಲದೆ, ಇರಲು ನೆಲೆಯಿಲ್ಲದೆ ತತ್ತರಿಸಿಹೋದರು. ಅವರಲ್ಲಿ ಬಹುತೇಕ ಜನ ವಲಸೆ ಕಾರ್ಮಿಕರು. ಆ ಸಂದರ್ಭದಲ್ಲಿ ಆರ್ಥಿಕ ವಿಪತ್ತು ಎದುರಾದಾಗ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮೊದಲೇ ಲಾಕ್‌ಡೌನ್ ತೆರವುಗೊಳಿಸಿದರು.

ಈಗ ಭಾರತದಲ್ಲಿ ಏನಾಗುತ್ತಿದೆಯೋ ಅದೇ ಅಮೇರಿಕೆಯಲ್ಲಿ ಕೊರೊನಾ ವೈರಾಣು ತೀವ್ರವಾಗಿದ್ದಾಗ ಆಗಿದ್ದು. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸಾವುಗಳು ಹೆಚ್ಚಾಗತೊಡಗಿದಾಗ, ರಾಜ್ಯಗಳು ಸುಮ್ಮನೆ ಕಣ್ಣಮುಚ್ಚಿಕೊಂಡು, ಪಿಡುಗು ತನ್ನಷ್ಟಕ್ಕೆ ಮಾಯವಾಗಿ ಬಿಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದವು. ಭಾರತದ ಮೊದಲ ಕೊರೋನಾ ಅಲೆ ಕಮ್ಮಿಯಾಯಿತು. ಅದಕ್ಕೆ ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತದಲ್ಲಿನ ರಾಜ್ಯಗಳಿಗೆ ಸಂಪನ್ಮೂಲಗಳ ಕೊರತೆಯಿದೆ. ಹಾಗಾಗಿ ರಾಜ್ಯಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಲಾಕ್‌ಡೌನ್ ಅಂದರೆ ತುಂಬಾ ಹಣ ಖರ್ಚು ಮಾಡಬೇಕಾಗುತ್ತದೆ. ಅದರಲ್ಲೂ ಬಡವರಿಗೆ ಆಗುವ ಅಪಾರ ಯಾತನೆಯನ್ನು ಕಡಮೆ ಮಾಡಬೇಕು ಅಂದುಕೊಂಡರಂತೂ ಖರ್ಚು ಹೆಚ್ಚೇ ಆಗುತ್ತದೆ. ಜೊತೆಗೆ ಕೇಂದ್ರ ಸರ್ಕಾರ ಆ ಖರ್ಚಿನ ಜವಾಬ್ದಾರಿಯನ್ನು ಹೊರುತ್ತಿಲ್ಲ. (ಭಾರತಕ್ಕೆ ಹೋಲಿಸಿದರೆ ಕಳೆದ ವರ್ಷ ಅಮೇರಿಕೆಯಲ್ಲಿ ಟ್ರಂಪ್ ಆಡಳಿತ ಹೆಚ್ಚು ಉದಾರಿಯಾಗಿತ್ತು.)

ಸ್ವಾಭಾವಿಕವಾಗಿಯೇ ರಾಜ್ಯ ಸರ್ಕಾರಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಸಾಧ್ಯವಾದಷ್ಟು ಮುಂದೂಡುತ್ತಾ ಬಂದವು. ಈ ಮಧ್ಯೆ ಪಿಡುಗು ದೇಶವಿಡೀ ವ್ಯಾಪಿಸಿಕೊಂಡಿತು. ವೈರಾಣುವಿನಲ್ಲಿ ಹಲವು ಬದಲಾವಣೆಗಳೂ ಕಾಣಿಸಿಕೊಂಡವು. ಕೇಂದ್ರ ಸರ್ಕಾರ ಯಾವುದೇ ಜವಾಬ್ದಾರಿಯನ್ನೂ ತೆಗೆದುಕೊಳ್ಳದೇ ಹೋಗಿರುವುದರಿಂದ ಹೊಸ ವೈರಾಣು ಹೇಗೆ ನಡೆದುಕೊಳ್ಳುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. “ತುಂಬಾ ತಡ ಹಾಗೂ ತುಂಬಾ ಕಡಿಮೆ” ಅನ್ನುವುದು ಪ್ರಸ್ತುತ ಪಿಡುಗಿನ ಕಥೆಯಾಗಿಬಿಟ್ಟಿದೆ.

ಸರ್ಕಾರ ಈಗ ಕ್ರಮತೆಗೆದುಕೊಳ್ಳಲು ಪ್ರಾರಂಭಿಸುತ್ತಿದೆ. ಆದರೆ ಒಂದು ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಲು ಇನ್ನೂ ಹಿಂಜರಿಯುತ್ತಿರುವಂತೆ ತೋರುತ್ತಿದೆ.
ಭಾರತಕ್ಕೆ ಇಂದು ಕೇಂದ್ರ ಸಂಯೋಜಿತ ಲಾಕ್‌ಡೌನಿನ ಅವಶ್ಯಕತೆಯಿದೆ. ಸೋಂಕು ಈಗಾಗಲೇ ಹೆಚ್ಚಿರುವ ಪ್ರದೇಶಗಳಿಗೆ (ಸೋಂಕು ಸಧ್ಯಕ್ಕೆ ಇನ್ನೂ ದೇಶದ ಶೇಕಡ 25ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ) ಮೊದಲು ಗಮನಕೊಡಬೇಕು. ನಂತರದಲ್ಲಿ ನಿಧಾನವಾಗಿ ಅವಶ್ಯಕತೆಯಿರುವ ಕಡೆಗಳಲೆಲ್ಲಾ ಕ್ರಮತೆಗೆದುಕೊಳ್ಳುತ್ತಾ ಹೋಗಬೇಕು.

ಸರ್ಕಾರ ತುಂಬಾ ನಿಧಾನವಾಗಿ ಕಾರ್ಯಪ್ರವೃತ್ತವಾಗಿದೆ. ಮತ್ತೆ ಲಾಕ್‌ಡೌನ್ ಜಾರಿಗೊಳಿಸಿದರೆ ಆರ್ಥಿಕತೆಗೆ ಏನಾಗಬಹುದು ಅದರಲ್ಲೂ ವಿಶೇಷವಾಗಿ ಬಡವರಿಗೆ ಏನಾಗಬಹುದು ಅನ್ನುವ ಆತಂಕ ಈ ನಿಧಾನಕ್ಕೆ ಒಂದು ಕಾರಣವಿರುಬಹುದು. ಲಾಕ್‌ಡೌನ್ ಘೋಷಿಸಿದ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವವರಿಗೆ ಜೀವನಕ್ಕೆ ಬೇಕಾದ ಹಣವನ್ನು ಸರ್ಕಾರ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ ಎನ್ನುವ ಭರವಸೆ ನೀಡಬೇಕು. ಸರ್ಕಾರದ ಯಾವುದೇ ಗುರುತು ಚೀಟಿ ಇದ್ದವರಿಗೂ ಈ ಸೌಲಭ್ಯ ಸಿಗಬೇಕು. ಈ ಭರವಸೆಯೊಂದಿಗೆ ಲಾಕ್‌ಡೌನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ಜೊತೆಗೆ ಈಗ ಜಿಲ್ಲೆಗಳ ನಡುವಿನ ಸಂಚಾರದ ಮೇಲೆ ಮಿತಿಯನ್ನು ಹೇರಬೇಕು.

ಲಸಿಕೆಯ ವಿಷಯದಲ್ಲೂ ಇದನ್ನೇ ಮಾಡಬೇಕು. ಕೇಂದ್ರ ಸರ್ಕಾರದ ಪ್ರಕಾರ ಯಾರೂ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು (ನಿಮಗೆ ಲಸಿಕೆ ಸಿಕ್ಕರೆ). ಆದರೆ ಅದರ ಹಣವನ್ನು ಆಯಾ ವ್ಯಕ್ತಿಗಳು ಅಥವಾ ರಾಜ್ಯ ಸರ್ಕಾರ ಭರಿಸಬೇಕು. ಇದರ ಪರಿಣಾಮ ಆಂದರೆ ಯಾರಿಗೆ ಹಣ ತೆರಲು ಸಾಧ್ಯವೋ ಅವರಿಗೆ ಲಸಿಕೆ ಸಿಗುತ್ತದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಉಳಿದವರ ಲಸಿಕೆಯ ಖರ್ಚನ್ನು ಭರಿಸಬಹುದು. ಆದರೆ ಉಳಿದ ಕಡೆ ಜನ ತಮ್ಮ ಪಾಡನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ. ಲಸಿಕೆಗಳು ಉಚಿತವಾಗಿ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಬೇಕು. ಮತ್ತು ಅದನ್ನು ಆಗುಮಾಡುವುದಕ್ಕೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತು ಮಾನವ ಸಂಪನ್ಮೂಲವನ್ನು ಮೀಸಲಿಡಬೇಕು. ಆಗ ಆತಂಕದಲ್ಲಿರುವ ದೇಶಕ್ಕೆ ಭರವಸೆ ನೀಡಿದಂತಾಗುತ್ತದೆ. ಮತ್ತು ಜಗತ್ತನ್ನು ರಕ್ಷಿಸುವುದಕ್ಕೂ ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲ ಭಾರತದಲ್ಲಿ ಹೆಚ್ಚುತ್ತಿರುವ ದುರಂತಕ್ಕೆ ಜಗತ್ತು ತುಂಬಾ ನಿಧಾನವಾಗಿ ಪ್ರತಿಕ್ರಿಯಿಸುತ್ತಿದೆ. ಲಸಿಕೆಗಳನ್ನು ಹಾಗೂ ತುರ್ತು ನೆರವನ್ನು ನೀಡುವುದಾಗಿ ಬೈಡೆನ್ ಆಡಳಿತ ಏಪ್ರಿಲ್ ಕೊನೆಯಲ್ಲಿ ಘೋಷಿಸಿತು. ಆ ವೇಳೆಗೆ ಪ್ರತಿದಿನದ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿ ಒಂದು ವಾರ ಕಳೆದಿತ್ತು. ಸಮಸ್ಯೆ ಎಷ್ಟು ಅಗಾಧವಾಗಿದೆ ಅಂದರೆ ಹೊರಗಡೆಯ ನೆರವಿನಿಂದ ಮಾಡಬಹುದಾದದ್ದು ಸಾಪೇಕ್ಷವಾಗಿ ತುಂಬಾ ಕಡಿಮೆ. ಅಂದ ಮಾತ್ರಕ್ಕೆ ಅಮೆರಿಕೆ ಹಾಗೂ ಯುರೋಪ್ ಕಳುಹಿಸುತ್ತಿರುವ ಲಸಿಕೆಗಳು, ಆಮ್ಲಜನಕ, ಹಾಗೂ ಹಣ ನಿಲ್ಲಬಾರದು. ಹಾಗೆಯೇ ಲಸಿಕೆಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳ ರಫ್ತಿನ ಮೇಲಿರುವ ನಿರ್ಬಂಧವೂ ತೆರವಾಗಬೇಕು. ಪ್ರತಿಯೊಂದು ಜೀವವೂ ಮುಖ್ಯ.

ಆದರೆ ಜಗತ್ತು ಭಾರತದ ಆಚೆಗೆ ನೋಡಬೇಕು. ಸಕಾಲದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮತ್ತೊಮ್ಮೆ ಆ ನಿಟ್ಟಿನಲ್ಲಿ ತಪ್ಪಾಗಬಾರದು. ಮೊದಲ ಅಲೆ ಬಂದಾಗ ವೈರಾಣು ಅಷ್ಟೊಂದು ಬೇಗ ಹರಡುತ್ತದೆ ಅನ್ನುವುದನ್ನು ನಾವು ಅರ್ಥಮಾಡಿಕೊಂಡಿರಲಿಲ್ಲ. ಅದನ್ನು ಈಗ ಮರೆಯಬಾರದು. ಅಮೆರಿಕೆ ಹಾಗೂ ಐರೋಪ್ಯ ದೇಶಗಳಲ್ಲಿ ಲಸಿಕೆಯ ಪ್ರಚಾರದಲ್ಲಿ ಒಳ್ಳೆಯ ಪ್ರಗತಿಯಾಗುತ್ತಿದೆ. ಆದರೆ ಉಳಿದ ದೇಶಗಳು ಅದರಿಂದ ತಮಗೆ ರಕ್ಷಣೆ ದೊರಕಿಬಿಡುತ್ತದೆ ಎನ್ನುವ ಸುಳ್ಳು ಭ್ರಮೆಯಲ್ಲಿ ನಿದ್ದೆ ಹೋಗಬಾರದು.

ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡು ಬಿ.1.617 ಮಾದರಿ, ಈಗ ದೇಶದ ಸರಹದ್ದನ್ನು ದಾಟಿ ಹರಡುತ್ತಿದೆ. ಭಾರತದಲ್ಲಿ ಲಸಿಕೆ ತೆಗೆದುಕೊಂಡ ಕೆಲವರೂ ಸೋಂಕಿಗೆ ತುತ್ತಾದಂತೆ ಕಾಣುತ್ತಿದೆ. ಪಶ್ಚಿಮದಲ್ಲಿ ಸಿಗುವ “ಉತ್ತಮ” ಲಸಿಕೆಗಳು ನಮ್ಮ ಜೀವವನ್ನು ರಕ್ಷಿಸಿಬಿಡುತ್ತದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಮುಖಂಡರುಗಳು ಹಾಗೂ ವಿಜ್ಞಾನಿಗಳು ವಿಭಿನ್ನ ವೈರಾಣುಗಳನ್ನು ಎದುರಿಸಲು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಬೂಸ್ಟರ್ ಡೋಸ್, ಹೊಸ ವ್ಯಾಕ್ಸಿನ್, ಮಾಸ್ಕ್‌ ಗಳು, ಅನ್‌ಲಾಕ್ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಇತ್ಯಾದಿ ನಿಟ್ಟಿನಲ್ಲಿ ಯೋಚಿಸಬೇಕು.

ವೈರಾಣು ಆಫ್ರಿಕಾ ಮೂಲಕ ಹರಡುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರಿಕೆ ಬೇಕು. ಅಲ್ಲಿ ಲಸಿಕೆಗಳ ಕಾರ್ಯಕ್ರಮ ಇನ್ನೂ ಸರಿಯಾಗಿ ಪ್ರಾರಂಭವೇ ಆಗಿಲ್ಲ. ಭಾರತದ ಸಧ್ಯದ ಪರಿಸ್ಥಿತಿಯಿಂದ ಅವರ ಕಷ್ಟ ಮತ್ತಷ್ಟು ಬಿಗಡಾಯಿಸಿದೆ. ಭಾರತ ತನ್ನನ್ನು ನೆಚ್ಚಿಕೊಂಡು ಬಹತೇಕ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿಬಿಟ್ಟಿದೆ.

ಇದು ಆಮ್ಲಜನಕ ಪೂರೈಕೆ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ತೀವ್ರವಾಗಿರುವ ದೇಶಗಳಲ್ಲಿ ದುರಂತವನ್ನು ಸೃಷ್ಟಿಸುತ್ತದೆ. ಅಮೇರಿಕಾ ಹಾಗೂ ಐರೋಪ್ಯ ದೇಶಗಳು ಅವಶ್ಯಕತೆ ಬಂದಾಗ ತ್ವರಿತವಾಗಿ ಕ್ರಮತೆಗೆದುಕೊಳ್ಳಲು ಸಿದ್ಧರಿರಬೇಕು. ಅಂದರೆ ಲಸಿಕೆಗಳನ್ನು ಆದಷ್ಟು ಬೇಗ ತಯಾರಿಸಿ ಸಾಗಿಸಲು ತಯಾರಿರಬೇಕು. ಅದಕ್ಕಿಂತ ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ನಿಗಾ ಹಾಗು ಪರೀಕ್ಷೆಗೆ ಕ್ರಮ ತೆಗೆದುಕೊಳ್ಳಬೇಕು. ಸಮಯಕ್ಕೆ ಆಮ್ಲಜನಕ ಮತ್ತು ಸಾಮಗ್ರಿಗಳನ್ನು ರವಾನಿಸಲು ತಯಾರಿರಬೇಕು. ಲಾಕ್‌ಡೌನಿನಲ್ಲಿ ಸಂಕಟದಲ್ಲಿರುವ ಜನರಿಗೆ ಹಣಕಾಸಿನ ನೆರವನ್ನು ನೀಡಬೇಕು.

ಅನುವಾದ: ಟಿ ಎಸ್ ವೇಣುಗೋಪಾಲ್ ಹಾಗೂ ಶೈಲಜ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...