Homeಅಂತರಾಷ್ಟ್ರೀಯWhatsApp ಮೂಲಕ ಗೂಢಚರ್ಯೆ: ದಂಗುಬಡಿಸುವ ಅಪಾಯಕಾರಿ ವಿದ್ಯಮಾನ ಬಯಲು!

WhatsApp ಮೂಲಕ ಗೂಢಚರ್ಯೆ: ದಂಗುಬಡಿಸುವ ಅಪಾಯಕಾರಿ ವಿದ್ಯಮಾನ ಬಯಲು!

ಭಾರತೀಯ ಬುದ್ಧಿಜೀವಿಗಳ ವಿರುದ್ಧ ಗೂಢಚರ್ಯೆಗೆ ಇಸ್ರೇಲಿ ಸ್ಪೈವೇರ್ ಉಪಯೋಗ: ದೃಢಪಡಿಸಿದ WhatsApp!

- Advertisement -
- Advertisement -

ನಿರೂಪಣೆ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಸರಕಾರದ ವಿರುದ್ಧ ಧ್ವನಿಯೆತ್ತಿದ ಭಾರತೀಯ ಪತ್ರಕರ್ತರು, ಪ್ರಾಧ್ಯಾಪಕರು, ದಲಿತ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ಗುಪ್ತಚರ್ಯೆ ನಡೆಸಲು ಇಸ್ರೇಲಿ ಮೂಲದ ಅತ್ಯಾಧುನಿಕ ಸ್ಪೈವೇರ್ (ಗುಪ್ತಚರ ಸಾಫ್ಟ್‌ವೇರ್) ಬಳಸಲಾಗಿತ್ತು ಎಂದು ಫೇಸ್‌ಬುಕ್ ಮಾಲಕತ್ವದ ವಾಟ್ಸ್ಆಪ್ ದೃಢಪಡಿಸಿದೆ. ಮೇ 2019ರ ತನಕ ಅವರ ಮೊಬೈಲ್ ಫೋನ್‌ಗಳು ಕಣ್ಗಾವಲಲ್ಲಿದ್ದವು ಎಂದು ಅದು ಕನಿಷ್ಟ ಎರಡು ಡಜನ್ ಬಳಕೆದಾರರನ್ನು ಎಚ್ಚರಿಸಿತ್ತು.

ಭಾರತೀಯರೂ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳ 1,400ರಷ್ಟು ಬಳಕೆದಾರರ ಮೇಲೆ ಇಸ್ರೇಲಿನ ಪಿಗಾಸಸ್ (Pegasus) ಎಂಬ ಸ್ಪೈವೇರ್ ಬಳಸಿ ಅದೇ ದೇಶದ ಎನ್ಎಸ್‌ಓ ಗುಂಪು ಗುಪ್ತಚರ್ಯೆ ನಡೆಸಿತ್ತು ಎಂದು ವಾಟ್ಸ್ಆಪ್ ಸಂಸ್ಥೆಯು ಯುಎಸ್ಎಯ ಸಾನ್‌ಫ್ರಾನ್ಸಿಸ್ಕೋ ಫೆಡರಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ ಬಳಿಕ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.

ಆದರೆ, ಭಾರತದಲ್ಲಿ ಗುಪ್ತಚರ್ಯೆಗೆ ಒಳಾಗಿರುವವರ ಗುರುತು ಮತ್ತು ನಿರ್ದಿಷ್ಟ ಸಂಖ್ಯೆಯನ್ನು ಬಹಿರಂಗಪಡಿಸಲು ವಾಟ್ಸ್ಆಪ್ ನಿರಾಕರಿಸಿದೆ. ಆದರೆ, ಈ ವಿಷಯ ತನಗೆ ಗೊತ್ತಿದ್ದು, ಅವರನ್ನು ತಾನು ಈ ವಿಷಯದಲ್ಲಿ ಸಂಪರ್ಕಿಸಿ ಎಚ್ಚರಿಸಿರುವುದಾಗಿ ಅದು ಹೇಳಿದೆ. ವಾಟ್ಸ್ಆಪ್ ವಕ್ತಾರರ ಪ್ರಕಾರ ಇಂತವರ ಸಂಖ್ಯೆ ಕಡೆಗಣಿಸುವಂತದ್ದೇನಲ್ಲ.

ಡಾ. ಆನಂದ್‌ ತೇಲ್‌ತುಂಬ್ಡೆ

ಆದರೂ ಭೀಮಾ ಕೋರೆಗಾಂವ್‌ ಹೋರಾಟದ ಆರೋಪಿ ಖ್ಯಾತ ದಲಿತ ಲೇಖಕ ಡಾ. ಆನಂದ್‌ ತೇಲ್‌ತುಂಬ್ಡೆ, ವಕೀಲ ನಿಹಾಲ್‌ ಸಿಂಹ, ಅಂಕಿತ್‌ ಗ್ರೇವಾಲ್‌, ಡೇಗ್ರಿ ಪ್ರಸಾದ್‌ ಚೌಹಾಣ್, ಬುಡಕಟ್ಟು ಹೋರಾಟಗಾರ್ತಿ ಬೇಲಾ ಭಾಟಿಯಾರವರ ವಾಟ್ಸಾಪ್‌ ಸಂದೇಶಗಳನ್ನು ಗೂಢಚರ್ಯೆ ಪರಿಶೀಲಿಸಿದೆ ಎಂದು ಹೇಳಲಾಗುತ್ತಿದೆ.
 
ಪಿಗಾಸಸ್ ಕಾರ್ಯವಿಧಾನ

ಗುಪ್ತಚರ್ಯೆಗೆ ಗುರಿಯಾಗುವವರ ಮೇಲೆ ಕಣ್ಗಾವಲು ಇಡಲು ಅವರು ಒಂದು ನಿರ್ದಿಷ್ಟ ಮತ್ತು ವಿಶಿಷ್ಟವಾಗಿ ನಿರ್ಮಿಸಲಾದ ‘ಎಕ್ಸ್‌ಪ್ಲಾಯ್ಟ್ ಲಿಂಕ್’ ಮೇಲೆ ಕ್ಲಿಕ್ ಮಾಡುವಂತೆ ಪಿಗಾಸಸ್ ಅಪರೇಟರ್ ಮನವೊಲಿಸಬೇಕಾಗುತ್ತದೆ ಇಲ್ಲವೇ ವಂಚಿಸಬೇಕಾಗುತ್ತದೆ. ಒಮ್ಮೆ ಈ ಲಿಂಕ್ ಕ್ಲಿಕ್ ಮಾಡಿದರೆ, ಪಿಗಾಸಸ್ ಸ್ಪೈವೇರ್ ಗೊತ್ತಾಗದಂತೆ ಮೊಬೈಲ್ ಒಳಗೆ ಸೇರಿಕೊಳ್ಳುತ್ತದೆ. ಮೊಬೈಲ್‌ನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಮೂಲಕ ಪಿಗಾಸಸ್ ಇನ್ಸ್ಟಾಲ್ ಆಗುತ್ತದೆ. ಇದು ಗ್ರಾಹಕರಿಗೆ ಗೊತ್ತಾಗುವುದು ಬಿಡಿ, ಅದು ಅವರ ಅನುಮತಿಯನ್ನೂ ಕೇಳುವುದಿಲ್ಲ.

ಒಮ್ಮೆ ಇದು ನಡೆದ ಬಳಿಕ ಪಿಗಾಸಸ್ ತನ್ನ ಅಪರೇಟರ್ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್‌ಗಳನ್ನು (ನಿಯಂತ್ರಣ ವ್ಯವಸ್ಥೆಗಳು) ಸಂಪರ್ಕಿಸಲು ಆರಂಭಿಸುತ್ತದೆ. ಅದು ನಿಯಂತ್ರಕರ ಆದೇಶ ಪಾಲಿಸುತ್ತಾ, ಗುಪ್ತಚರ್ಯೆಗೆ ಒಳಗಾದವರ ಪಾಸ್‌ವರ್ಡ್, ಕಾಂಟ್ಯಾಕ್ಟ್ ಲಿಸ್ಟ್,  ಖಾಸಗಿ ಮಾಹಿತಿ, ಕ್ಯಾಲೆಂಡರ್ ಟಿಪ್ಪಣಿಗಳು, ಟೈಕ್ಸ್ಟ್ ಮೇಸೇಜ್‌ಗಳು, ಜನಪ್ರಿಯ ಮೆಸೇಜ್ ಸಾಫ್ಟ್ವೇರ್‌ಗಳಿಂದ ಮಾಡುವ ಕರೆಗಳು ಇತ್ಯಾದಿಗಳನ್ನು ಕಳುಹಿಸಿಕೊಡುತ್ತದೆ.

ಅಷ್ಟು ಮಾತ್ರವಲ್ಲದೆ, ಪಿಗಾಸಸ್ ಅಪರೇಟರ್ ಫೋನಿನ ಕ್ಯಾಮೆರಾ ಮತ್ತು ಮೈಕ್ರೋಫೋನನ್ನು ಆನ್ ಮಾಡಿ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸಿ ರೆಕಾರ್ಡ್ ಮಾಡಬಹುದು. ವಾಟ್ಸ್ಆಪ್ ನ್ಯಾಯಾಲಯಕ್ಕೆ ಸಲ್ಲಿಸಿದ ಇನ್ನಷ್ಟು ಮಾಹಿತಿ ದಂಗುಬಡಿಸುವಂತಿದೆ. ಇತ್ತೀಚಿನ ತಂತ್ರಜ್ಞಾನದಲ್ಲಿ ಫೋನ್ ಮಾಲಕರು ‘ಎಕ್ಸ್‌ಪ್ಲಾಯ್ಟ್ ಲಿಂಕ್’ ಮೇಲೆ ಕ್ಲಿಕ್ ಕೂಡಾ ಮಾಡಬೇಕಾಗಿಲ್ಲ. ವಾಟ್ಸ್ಆಪ್ ಮೂಲಕ ಕಳಿಸಿದ ಒಂದು ಮಿಸ್ಡ್ ವಿಡಿಯೋ ಕಾಲ್ ಮೂಲಕ ಬಲಿಪಶು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಕೂಡಾ ಈ ಸ್ಪೈವೇರನ್ನು ಫೋನಿನೊಳಗೆ ನುಗ್ಗಿಸಬಹುದು.

ಈ ರೀತಿಯ ವಂಚನೆಯು ಯುಎಸ್‌ಎ ಮತ್ತು ಕ್ಯಾಲಿಫೋರ್ನಿಯಾದ ಕಾನೂನುಗಳು, ವಾಟ್ಸ್ಆಪ್ ಸೇವಾ ಶರತ್ತುಗಳನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸ್ಆಪ್, ಇಸ್ರೇಲಿನ ಎನ್‌ಎಸ್‌ಓ ಮತ್ತು ಕ್ಯೂ ಸೈಬರ್ ಟೆಕ್ನಾಲಜಿ ಸಂಸ್ಥೆಗಳ ಮೇಲೆ ಹೂಡಿರುವ ದಾವೆಯಲ್ಲಿ ಹೇಳಿದೆ.

ಇದನ್ನು ಅಲ್ಲಗೆಳೆದಿರುವ ಎನ್ಎಸ್ಓ, ಈ ಸ್ಪೈವೇರನ್ನು ಖಾಸಗಿ ವ್ಯಕ್ತಿಗಳ ಮೇಲೆ ಗುಪ್ತಚರ್ಯೆಗಾಗಿ ವಿನ್ಯಾಸಗೊಳಿಸಲಾಗಿಲ್ಲ ಮತ್ತು ಅದು ಮಾರಾಟದ ವೇಳೆ ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮುಂತಾದವರ ವಿರುದ್ಧ ಗುಪ್ತಚರ್ಯೆಗೆ ಪರವಾನಿಗೆಯನ್ನೂ ನೀಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದೆ. ಇದು ಹೌದಾದರೆ, ಭಾರತ ಸರಕಾರ ಸಹಿತ ಅದರ ಬಳಕೆದಾರರು ಪರವಾನಿಗೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದಾಗುತ್ತದೆ.

ತಾನು ಈ ಕುರಿತು ಭಾರತದ ಗೃಹ ಕಾರ್ಯದರ್ಶಿ ಎ.ಕೆ. ಭಲ್ಲಾ ಮತ್ತು ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎ.ಪಿ. ಸಾವ್ನಿ ಅವರಿಗೆ ಮಾಡಿದ ಕರೆ, ಸಂದೇಶ, ಇ-ಮೈಲ್ ಯಾವುದಕ್ಕೂ ಪ್ರತಿಕ್ರಿಯೆ ಬಂದಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯೊಂದು ಹೇಳುತ್ತದೆ.

ಕೆನಡಾ ಮೂಲದ ಸೈಬರ್ ಭದ್ರತಾ ಗುಂಪಾದ ‘ಸಿಟಿಜನ್’ ಲ್ಯಾಬ್’ 2018ರ ಸೆಪ್ಟೆಂಬರ್‌ನಲ್ಲಿಯೇ ತನ್ನ ವರದಿಯ ಮೂಲಕ ಪಿಗಾಸಸ್ ಕುರಿತು ಎಚ್ಚರಿಕೆ ನೀಡಿತ್ತು. ಅರಬ್ ಮಾನವಹಕ್ಕು ಕಾರ್ಯಕರ್ತರ ದೂರಿನ ಬಳಿಕ ಈ ವರದಿ ಬಿಡುಗಡೆಯಾಗಿತ್ತು.

ಇನ್ನೊಂದು ವಿಷಯವೆಂದರೆ, ಎನ್‌ಎಸ್ಓ ಸಂಸ್ಥೆಯು ಸರಕಾರಗಳು ಅಲ್ಲದೆ ಬೇರೆಯವರಿಗೆ ತನ್ನ ಉತ್ಪನ್ನ ಅಥವಾ ಸೇವೆಯನ್ನು ಮಾರುವುದಿಲ್ಲ. ಇತ್ತೀಚೆಗೆ ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಷೋಗ್ಗಿಯವರನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಉಪ ರಾಯಭಾರ ಕಚೇರಿಯಲ್ಲಿ ಕೊಲೆ ಮಾಡಲಾದ ಬಳಿಕ ಈ ಸಂಸ್ಥೆಯು ಸೌದಿಯೊಂದಿಗೆ ತನ್ನ ಒಪ್ಪಂದವನ್ನು ರದ್ದುಪಡಿಸಿತ್ತು. ಖಷೋಗ್ಗಿಯ ಕೊಲೆಗೆ ಮುನ್ನ ಅವರ ಇರವನ್ನು ಪತ್ತೆಹಚ್ಚಲು ತನ್ನ ಸ್ಪೈವೇರನ್ನು ಸೌದಿ ಸರಕಾರ ಬಳಸಿತ್ತು ಎಂಬುದೇ ಇದಕ್ಕೆ ಕಾರಣ. ಸಂಸ್ಥೆಯು ಈ ಕುರಿತು ಇಷ್ಟು ಕಟ್ಟುನಿಟ್ಟಾಗಿರುವುದೇ ಹೌದಾದಲ್ಲಿ, ಮೋದಿ ಸರಕಾರವು ಸೌದಿಯಂತೆಯೇ ತನ್ನದೇ ಪ್ರಜೆಗಳ ಮೇಲೆ ಗುಪ್ತಚರ್ಯೆಗೆ ಈ ಸ್ಪೈವೇರನ್ನು ದುರುಪಯೋಗಪಡಿಸಿಕೊಂಡು ತನ್ನ ವಿರೋಧಿಗಳನ್ನು ಬಗ್ಗುಬಡಿಯುತ್ತಿದೆಯೇ ಎಂಬ ಸಂಶಯ ಏಳುತ್ತದೆ.

ಮಾಹಿತಿ: ವಿವಿಧ ಮೂಲಗಳಿಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...