ವಿಶ್ವ ಆರೋಗ್ಯ ಸಂಸ್ಥೆಯು (WHO) ಕೊನೆಗೂ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೋವ್ಯಾಕ್ಸಿನ್ ಅನ್ನು ಉತ್ಪಾದಿಸುತ್ತದೆ.
ಇದರಿಂದಾಗಿ ಭಾರತದಲ್ಲಿ ತಯಾರಾಗುವ ಕೋವ್ಯಾಕ್ಸಿನ್ ಲಸಿಕೆಯನ್ನು ಇತರ ದೇಶಗಳು ಗುರುತಿಸಲಿದ್ದು, ಇನ್ನು ಮುಂದೆ ಕೋವ್ಯಾಕ್ಸಿನ್ ಪಡೆದ ಭಾರತೀಯರು ವಿದೇಶಕ್ಕೆ ಪ್ರಯಾಣಿಸುವಾಗ ಸ್ವಯಂ ಕ್ವಾರಂಟೈನ್ ನಂತಹ ನಿರ್ಬಂಧಗಳನ್ನು ಎದುರಿಸಬೇಕಾಗಿಲ್ಲ.
? WHO has granted emergency use listing (EUL) to #COVAXIN® (developed by Bharat Biotech), adding to a growing portfolio of vaccines validated by WHO for the prevention of #COVID19. pic.twitter.com/dp2A1knGtT
— World Health Organization (WHO) (@WHO) November 3, 2021
18 ವರ್ಷದ ಮೇಲ್ಪಟ್ಟ ವಯಸ್ಕರಿಗೆ ಎರಡು ಡೋಸ್ ಕೋವ್ಯಾಕ್ಸಿನ್ ಅನ್ನು ನೀಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೋವಿಡ್ ವಿರುದ್ಧ ರಕ್ಷಣೆ ಒದಗಿಸುವಲ್ಲಿ ನಿಯಮಿತ ಮಾಪನಗಳನ್ನು ಪೂರೈಸಿದೆ ಎಂದು ಡಬ್ಲ್ಯೂಎಚ್ಒ ತಾಂತ್ರಿಕ ಸಲಹಾ ತಂಡವು ತಿಳಿಸಿದೆ. ಅದು ಕಳೆದ ವಾರ ‘ಅಂತಿಮ ಅಪಾಯ-ಪ್ರಯೋಜನ ಮೌಲ್ಯಮಾಪನ’ ನಡೆಸಲು ‘ಹೆಚ್ಚುವರಿ ಸ್ಪಷ್ಟೀಕರಣ’ಗಳನ್ನು ಕೇಳಿತ್ತು.
ಕೋವಾಕ್ಸಿನ್‌ಗೆ ಮಾನ್ಯತೆ ನೀಡದ ಕಾರಣಕ್ಕಾಗಿ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯಲು ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೋವಾಕ್ಸಿನ್‌ನ ಎರಡು ಡೋಸ್ ಪಡೆದಿರುವ ಜನರಿಗೆ ಮತ್ತೇ ‘ಕೋವಿಶೀಲ್ಡ್’ ನೀಡುವಂತೆ ಒಕ್ಕೂಟ ಸರ್ಕಾರಕ್ಕೆ ನಿರ್ದೇಶಿಸುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿತ್ತು.
ನಮ್ಮೊಂದಿಗೆ ಯಾವುದೇ ಡೇಟಾ ಇಲ್ಲ. ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆಗೆ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿರುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ (WHO) ನ ಪ್ರತಿಕ್ರಿಯೆಗಾಗಿ ನಾವು ಕಾಯೋಣ. ದೀಪಾವಳಿ ರಜೆಯ ನಂತರ ನಾವು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ಹೇಳಿತ್ತು.
ಇದನ್ನೂ ಓದಿ: ಜನರ ಜೀವದೊಂದಿಗೆ ಚೆಲ್ಲಾಟ ಆಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್


